ದೂರ ತೀರ ಯಾನಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದವಿಸ್ಮಯ ವಿಶ್ವಸ್ಮರಣೀಯ ಜಾಗ

ಭಾರತದಲ್ಲಿರುವ ಕತ್ತಲಲ್ಲಿ ನಕ್ಷತ್ರಗಳಂತೆ ಹೊಳೆಯುವ ಸಮುದ್ರಗಳು:

ರಾತ್ರಿ ಹೊತ್ತಿನಲ್ಲಿ ಸಮುದ್ರ ತೀರದಲ್ಲಿ ಕುಳಿತು ಅಪ್ಪಳಿಸುವ ಅಲೆಗಳನ್ನು ನೋಡುತ್ತಾ ಸಮಯ ಕಳೆಯುವುದು ಎಂದರೆ ಎಲ್ಲರಿಗೂ ಖುಷಿ. ಅಲ್ಲಿ ಬೀಸುವ ತಣ್ಣನೆಯ ಗಾಳಿ ಇನ್ನೂ ಮುದ ನೀಡುವಂತದ್ದು. ಅದರೊಂದಿಗೆ ಅಂತಹ ದಟ್ಟ ಕತ್ತಲಲ್ಲಿ ಸಮುದ್ರ ನಕ್ಷತ್ರಗಳಂತೆ ಹೊಳೆಯಲು ಪ್ರಾರಂಭಿಸಿದರಂತೂ ಸ್ವರ್ಗಕ್ಕೆ ಮೂರೇ ಗೇಣು.

ಉಜ್ವಲಾ ವಿ.ಯು

ಸಮುದ್ರ ನೀರಿನಲ್ಲಿರುವ ಡೈನೊಫ್ಲೆಗಲೆಟ್ ,ಫೈಟೊಪ್ಲಾಂಕ್ಟನ್‌ ಎನ್ನುವ ಪಾಚಿಯಂತಹ ಜೀವಿಗಳ ದೇಹದಲ್ಲಿರುವ ರಾಸಾಯನಿಕದಿಂದಾಗಿ ಸಮುದ್ರದಲ್ಲಿ ನೀಲಿ ಬಣ್ಣದ ಬೆಳಕು ಕಾಣಿಸಿಕೊಳ್ಳುತ್ತದೆ. ಇದನ್ನು ವೈಜ್ಞಾನಿಕವಾಗಿ ಬಯೋಲುಮಿನಸೆನ್ಸ್ ಪ್ರಕ್ರಿಯೆ(Bioluminescent effect) ಎಂದು ಕರೆಯಲಾಗುತ್ತದೆ.

Bioluminescent Beach

1. ಮಟ್ಟು ಸಮುದ್ರತೀರ, ಕರ್ನಾಟಕ:

ಉಡುಪಿಯ ಕಾಪು ಸಮುದ್ರತೀರದಿಂದ ಮಲ್ಪೆ ಕಡೆಗೆ ಹೋಗುವ ಮಾರ್ಗದಲ್ಲಿ ಇರುವ ಈ ಮಟ್ಟು ಸಮುದ್ರತೀರ (Mattu Beach) ಉಡುಪಿ ಜಿಲ್ಲೆಯಿಂದ ಸುಮಾರು 10 ಕಿ.ಮೀ ದೂರದಲ್ಲಿದೆ. ರಾತ್ರಿಯಲ್ಲಿ ತನ್ನ ಬಯೋಲುಮಿನೆಸೆನ್ಸ್ ವಿದ್ಯಮಾನಕ್ಕಾಗಿ ಈ ಸಮುದ್ರ ಜನಪ್ರಿಯತೆಯನ್ನು ಗಳಿಸುತ್ತಿದೆ. ಸುಮಾರು 30 ಕಿಮೀ ಉದ್ದ ಇರುವ ಈ ಕಡಲತೀರವು ಹೆಚ್ಚು ಜನಸಂದಣಿ ಇಲ್ಲದ, ಪ್ರಶಾಂತ ಸ್ಥಳವಾಗಿದೆ. ತೀರದ ಸುತ್ತಲೂ ತೆಂಗಿನಮರ ಮತ್ತು ತಾಳೆ ಮರದಿಂದ ಕೂಡಿದ್ದು,ಸೂರ್ಯಾಸ್ತದ ತಾಣ ಇದಾಗಿದೆ. ರಾತ್ರಿಯಲ್ಲಿ ನೀಲಿ ಬಣ್ಣದಿಂದ ಕಂಗೊಳಿಸುವ ಈ ಸಮುದ್ರಕ್ಕೆ ಕುಟುಂಬದೊಂದಿಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು.

2. ಜುಹು ಬೀಚ್‌, ಮುಂಬೈ:

ಮುಂಬೈ ನಗರದ ಜುಹು ಬೀಚ್‌ (Juhu Beach) ಕೂಡಾ ರಾತ್ರಿಯಲ್ಲಿ ಮಿನುಗುವ ಬಯೋಲುಮಿನಸೆನ್ಸ್ ಸಮುದ್ರವಾಗಿದೆ. ಇದು ಮಧ್ಯರಾತ್ರಿಯಲ್ಲಿಯೂ ಜನರಿಂದ ತುಂಬಿದ್ದು, ಅತ್ಯಂತ ಜನನಿಬಿಡ ಕಡಲತೀರ ಇದಾಗಿದೆ. ನಗರದ ಸಮೀಪವಿರುವ ಸಮುದ್ರತೀರ ಇದಾಗಿರುವುದರಿಂದ ಕೆಲಸದ ಒತ್ತಡದಿಂದ ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಳ್ಳಲು ಈ ಸಮುದ್ರಕ್ಕೆ ಭೇಟಿ ನೀಡುತ್ತಾರೆ.

3. ತಿರುವಾನ್ಮಿಯೂರ್‌ ಸಮುದ್ರತೀರ, ಚೆನ್ನೈ:

ತಮಿಳುನಾಡಿನ ಚೆನ್ನೈಯ ತಿರುವಾನ್ಮಿಯೂರ್‌ ಸಮುದ್ರ ತೀರವು (Thiruvanmiyur Beach, Chennai) ಬಯೋಲುಮಿನಸೆನ್ಸ್ ಪ್ರಕ್ರಿಯೆಯು ಮೊದಲು ಕಂಡುಬಂದ ಮೊದಲ ಸಮುದ್ರ ತೀರವಾಗಿದೆ. ಇದಕ್ಕಿಂತ ಮೊದಲು ಭಾರತದ ಜನರಿಗೆ ಇದರ ಕುರಿತು ಯಾವುದೇ ಮಾಹಿತಿ ಇರಲಿಲ್ಲ.

4. ಬೇತಾಳ್‌ಬಾಟಿಮ್‌ ಸಮುದ್ರತೀರ, ಗೋವಾ:

ಗೋವಾ ಬೀಚ್ ಗಳಿಗೆ ಪ್ರಸಿದ್ಧ. ಲಕ್ಷಾಂತರ ಜನ ಪ್ರವಾಸಿಗರು ಗೋವಾದ ಸಮುದ್ರ ತೀರದಲ್ಲಿ ಕಾಲ ಕಳೆಯಲು ಬರುತ್ತಾರೆ. ಗೋವಾದ ಬೇತಾಳ್‌ಬಾಟಿಮ್‌ ಕಡಲತೀರವು (Betalbatim Beach) ಗೋವಾಗೆ ಭೇಟಿ ನೀಡಿದಾಗ ನೋಡಲೇಬೇಕಾದ ಸಮುದ್ರವಾಗಿದೆ. ರಾತ್ರಿಯಲ್ಲಿ ತಂಗಾಳಿಯೊಂದಿಗೆ ಹೊಳೆಯುವ ಸಮುದ್ರದಲ್ಲಿ ಕಾಲ ಕಳೆಯುವುದು ಸುಂದರ ಅನುಭವವನ್ನು ನೀಡುತ್ತದೆ.

5. ಭಂಗಾರಂ ಬೀಚ್‌, ಲಕ್ಷದ್ವೀಪ:

ದ್ವೀಪಗಳ ಸಮುದ್ರತೀರದಲ್ಲಿ ಕಳೆಯುವುದೇ ಒಂದು ಸುಂದರ ಅನುಭವ. ಲಕ್ಷದ್ವೀಪದ ಭಂಗಾರಂ ಸಮುದ್ರ ತೀರವೂ (Bangaram Beach) ಸಹ ರಾತ್ರಿಯಲ್ಲಿ ಮಿನುಗುವ ಅದ್ಭುತ ಸಮುದ್ರ ಇದಾಗಿದೆ. ಈ ಸಮುದ್ರತೀರದಲ್ಲಿ ವಿವಿಧ ಬಗೆಯ ನೀರಿನ ಸಾಹಸಮಯ ಕ್ರೀಡೆಗಳನ್ನು ಅನುಭವಿಸಬಹುದು.

ರಾತ್ರಿಯಲ್ಲಿ ಮಿನುಗುವ ಅದ್ಭುತ ಸಮುದ್ರತೀರಗಳ ವಿವರ ಇದಾಗಿದೆ. ಈ ಹೊಳೆಯುವ ಕಡಲತೀರದಲ್ಲಿ ಯಾವುದರೂ ಒಂದನ್ನಾದರೂ ಭೇಟಿ ಮಾಡುವುದು ಖಂಡಿತವಾಗಿಯೂ ಜೀವನದ ಸುಂದರ ಅನುಭವ ನೀಡುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button