ದೂರ ತೀರ ಯಾನಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದ

ಪಶ್ಚಿಮ ಬಂಗಾಳದ ದಿಘಾ ಕಡಲತೀರದಲ್ಲಿ ಸಂಚಾರ ಆರಂಭಿಸಲಿದೆ ಕ್ರೀಕ್ ಕ್ರೂಸ್:

ಪಶ್ಚಿಮ ಬಂಗಾಳವು ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಿಂದ, ಪುರ್ಬಾ ಮೇದಿನಿಪುರ್ ಜಿಲ್ಲೆಯ ಪ್ರಸಿದ್ಧ ದಿಘಾ ಕಡಲತೀರದಲ್ಲಿ ಕ್ರೀಕ್ ಕ್ರೂಸ್ ಗಳನ್ನು ಪ್ರವಾಸಿಗರಿಗಾಗಿ ತೆರೆಯುವ ಯೋಜನೆಯನ್ನು ರೂಪಿಸಿದೆ.

• ಉಜ್ವಲಾ ವಿ.ಯು.

ಪಶ್ಚಿಮ ಬಂಗಾಳದ ಜನಪ್ರಿಯ ಹಬ್ಬವಾದ ನವರಾತ್ರಿಯ ದುರ್ಗಾ ಪೂಜೆ (Durga Pooja West Bengal) ದಿನದಂದು ದಿಘಾದಲ್ಲಿ ಈ ಕ್ರೂಸ್ ಗಳ ಸಂಚಾರವು ಆರಂಭಗೊಳ್ಳುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ, ಬಂಗಾಳಕೊಲ್ಲಿಯ ಸಮುದ್ರದ ನೀರು ಒರಟಾಗಿರದ ಕಾರಣ ತೊರೆಗಳು ಇದಕ್ಕೆ ಸೂಕ್ತವಾಗಿರುವುದರಿಂದ ಕ್ರೂಸ್ ಸೇವೆ ಆರಂಭಿಸುವ ಯೋಜನೆ ಮಾಡಲಾಗಿದೆ.

Creek Cruise coming soon to Digha Beach, West Bengal

ಈ ಕ್ರೀಕ್ ಕ್ರೂಸ್ (Creek Cruise) ಸಂಚಾರವು ಒಂದು ಗಂಟೆಗಳ ಕಾಲ ಇರುತ್ತದೆ. ಸಂಚಾರವು ಓಲ್ಡ್‌ ದಿಘಾದಿಂದ ಕೇವಲ 4 ಕಿಮೀ ದೂರದಲ್ಲಿರುವ ನಾಯಕಲಿ ದೇವಸ್ಥಾನದಿಂದ ಪ್ರಾರಂಭವಾಗಿ ಒಳನಾಡಿನ ಕಡೆಗೆ ಸಾಗುತ್ತದೆ.

ವರದಿಗಳ ಪ್ರಕಾರ, ಕ್ರೀಕ್‌ ಕ್ರೂಸ್‌ ದಿನಕ್ಕೆ ಎರಡು ಬಾರಿ ಸಂಚಾರ ಮಾಡುತ್ತದೆ. ಪ್ರವಾಸಿಗರ ಪ್ರತಿಕ್ರಿಯೆಯ ಆಧಾರದ ಮೇಲೆ ಸಂಚಾರದ ಸಮಯವನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು.

ಕ್ರೀಕ್ ಕ್ರೂಸ್ ಒಂದು ಸಲಕ್ಕೆ ಸುಮಾರು 80 ಜನರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ನೂತನ ಕ್ರೀಕ್ ಕ್ರೂಸ್ ಸೇವೆಯು ದಿಘಾ ಕಡಲತೀರದಲ್ಲಿ ಪ್ರವಾಸೋದ್ಯಮವನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆ ಹೊಂದಿದೆ.

Creek Cruise

ಸಂಚಾರ ಆರಂಭವಾಗುವ ನಾಯಕಲಿ ದೇವಸ್ಥಾನದ ಬಳಿಯ ಜೆಟ್ಟಿ ಪಾಯಿಂಟ್‌ನಲ್ಲಿ ಈಗಾಗಲೇ ಸಕಲ ಸಿದ್ಧತೆಗಳು ಆರಂಭವಾಗಿದೆ. ಇಲ್ಲಿ ಮುಂದಿನ ದಿನಗಳಲ್ಲಿ, ಹಬ್ಬಗಳು ಮತ್ತು ಹೊಸ ವರ್ಷದ ಸಂದರ್ಭದಲ್ಲಿ ವಿಶೇಷ ಮನರಂಜನೆಗಳ ವ್ಯವಸ್ಥೆಯನ್ನು ಕಲ್ಪಿಸುವ ಯೋಜನೆ ಮಾಡಲಾಗಿದೆ.

ದಿಘಾ, ಪಶ್ಚಿಮ ಬಂಗಾಳ (West Bengal)ದ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಕೋಲ್ಕತ್ತಾ ಮತ್ತು ಒಡಿಶಾದಿಂದ ವಾರಾಂತ್ಯದಲ್ಲಿ ಭೇಟಿ ನೀಡಬಹುದಾದ ಸುಂದರ ಪ್ರಶಾಂತ ತಾಣ ದಿಘಾ ಕಡಲತೀರ. ಇತರ ನಗರಗಳೊಂದಿಗೂ ಸಹ ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ಉತ್ತಮ ಸಂಪರ್ಕವನ್ನು ಇದು ಹೊಂದಿರುವುದರಿಂದ ಅತ್ಯಂತ ಜನನಿಬಿಡ ಕಡಲತೀರ ಇದಾಗಿದೆ.

ಇನ್ನು ಮುಂದೆ ಕ್ರೀಕ್ ಕ್ರೂಸ್ ಆರಂಭಗೊಳ್ಳುವುದರಿಂದ ದಿಘಾ ಇನ್ನಷ್ಟು ಪ್ರಸಿದ್ಧಿ ಹೊಂದಲಿದೆ. ಈ ಕ್ರೂಸ್ ಮೂಲಕ ದಿಘಾದ ಅದ್ಭುತ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button