ಇವರ ದಾರಿಯೇ ಡಿಫರೆಂಟುಏಕಾಂಗಿ ಸಂಚಾರಿಬೆರಗಿನ ಪಯಣಿಗರುವಿಂಗಡಿಸದ

1 ವರ್ಷ 5 ತಿಂಗಳಲ್ಲಿ ಜಗತ್ತಿನ ಎಲ್ಲಾ 196 ದೇಶಗಳನ್ನು ಸುತ್ತಿದ ಪ್ರಥಮ ಮಹಿಳೆ ಖ್ಯಾಸಿ ಡೆ ಪೆಕೊಲ್: ಅಮೆರಿಕಾ ಮೂಲದ ಮಹಿಳೆಯ ಮಾದರಿ ಸಾಹಸಗಾಥೆ

ಪ್ರಯಾಣ ಎಲ್ಲರಿಗೂ ಇಷ್ಟ ಆದರೆ ಅದೇ ಗುರಿಯಾದಾಗ ಅದನ್ನು ಸಾಧಿಸುವುದು ಬಹುತೇಕರಿಗೆ ಕಷ್ಟ. ಖ್ಯಾಸಿ ಎಂಬ ಮಹಿಳೆ ತಮ್ಮ ಪ್ರವಾಸದ ಗುರಿಯನ್ನು ಮುಟ್ಟುವ ಜೊತೆಗೆ ಗಿನ್ನಿಸ್ ದಾಖಲೆಯನ್ನೆ ಸೃಷ್ಟಿಸಿದರು. ಅದು ಹೇಗೆ ಎಂದು ತಿಳಿಯಲು ಕುತೂಹಲ ಇದ್ದರೆ ಈ ಆರ್ಟಿಕಲ್ ಅನ್ನು ಪೂರ್ತಿಯಾಗಿ ಓದಿ.

  • ಪದ್ಮರೇಖಾ. ಕೆ. ಭಟ್, ಚಟ್ನಳ್ಳಿ

ಜಗತ್ತು ಬಹಳ ದೊಡ್ಡದು, ಅದನ್ನು ಪೂರ್ಣವಾಗಿ ನೋಡಲು ಹಲವರಿಗೆ ಕುತೂಹಲ ಇದ್ದರೂ ಆತ್ಮವಿಶ್ವಾಸ ಇರುವುದಿಲ್ಲ. ಆದರೆ ಮನುಷ್ಯನಿಗೆ ಯಾವುದು ಅಸಾಧ್ಯವಲ್ಲ ಎನ್ನುವುದು ಅಕ್ಷರಶಃ ಸತ್ಯ ಎಂಬುದನ್ನು ಅಮೇರಿಕಾ ಮೂಲದ ಓರ್ವ ಮಹಿಳೆ ಇಡೀ ವಿಶ್ವಕ್ಕೆ ಸಾರಿದ್ದಾರೆ.

ಮಹಿಳೆಯರು ಎಂದರೆ ಮನೆ, ಉಪಚಾರ, ಕೆಲಸಕ್ಕೆ ಮಾತ್ರ ಸೀಮಿತ ಎನ್ನುವ ಮಾತು ಹೊಸದೇನಲ್ಲ. ಒಬ್ಬರೆ ಪ್ರಯಾಣ ಅಥವಾ ಪ್ರವಾಸ ಮಾಡುವುದು ಎಂದರೆ ಮಹಿಳೆಗೆ ಅಸಾಧ್ಯ ಎಂಬ ಮೂಢನಂಬಿಕೆ ಜನರಲ್ಲಿ ಇದ್ದೇ ಇದೆ. ಆದರೆ ಇದನ್ನೆಲ್ಲಾ ಮೀರಿ ತನ್ನ ವಿಶಿಷ್ಟ ಸಾಧನೆಯಿಂದ ಜನರ ಗಮನ ಸೆಳೆದಿದ್ದಾರೆ.

ಪ್ರತೀ ದೇಶಗಳಿಗೆ ಭೇಟಿ ನೀಡಿದ ಖ್ಯಾತಿ

ಖ್ಯಾಸಿ ಡೆ ಪೆಕೊಲ್ (Cassie De Pecol) ಅಮೇರಿಕಾದ ಕ್ಯಾಲಿಫೋರ್ನಿಯಾದವರಾಗಿದ್ದು ಎರಡು ಗಿನ್ನಿಸ್ ದಾಖಲೆಗಳನ್ನು ಮಾಡಿದ್ದಾರೆ. ಇವರು ಪ್ರಪಂಚದಲ್ಲಿರುವ ಪ್ರತಿ ದೇಶಗಳಿಗೆ ಭೇಟಿ ನೀಡಿದ ಪ್ರಥಮ ಮಹಿಳೆ ಹಾಗೂ ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರಪಂಚದಲ್ಲಿರುವ ಪ್ರತಿ ದೇಶಗಳಿಗೆ ಭೇಟಿ ನೀಡಿದ ಮಹಿಳೆಯಾಗಿದ್ದಾರೆ.

Cassie De Pecol Traveller First women to travel most number of countries

ಈ ಪ್ರಯಾಣ ಕೈಗೊಳ್ಳುವ ಮೊದಲು “ಮಹಿಳೆಯಾಗಿ ಒಬ್ಬಳೆ ಪ್ರಯಾಣ ಮಾಡುವುದು ಸೂಕ್ತ ಅಲ್ಲ,  ಕಷ್ಟಗಳನ್ನು ಎದುರಿಸುವುದು ಸುಲಭವಲ್ಲ” ಎಂದು ಸುಮಾರು ಮಂದಿ ಹೇಳಿದ್ದರು. ಆದರೆ ಇಂದು ಖ್ಯಾಸಿ ಆ ಮಾತುಗಳಿಗೆ ಹೆದರದೆ ಬೇರೆ ದೇಶಗಳೊಟ್ಟಿಗೆ ಉತ್ತರ ಕೊರಿಯಾ, ಆಫ್ಘಾನಿಸ್ತಾನದಂತಹ ಪ್ರಯಾಣಕ್ಕೆ ಸೂಕ್ತ ಅಲ್ಲದ ದೇಶಗಳನ್ನು ಸುತ್ತಿ ಬಂದಿದ್ದಾರೆ.

ನೀವುಇದನ್ನುಇಷ್ಟಪಡಬಹುದು: ಕಾರು, ಒಡವೆ ನೀಡದ ಖುಷಿ ಪ್ರವಾಸ ಕೊಡುತ್ತದೆ: 14 ದೇಶಗಳನ್ನು ಸುತ್ತಿರುವ ಸಾಹಸಿ ಆರ್ ಜೆ ಸ್ಮಿತಾ

 “ನಾನು ಒಬ್ಬಳೇ ಪ್ರತಿಯೊಂದು ದೇಶಕ್ಕೂ ಪ್ರಯಾಣ ಮಾಡಿ, ನನ್ನದೇ ಆದ ಅನುಭವ ಹಾಗೂ ಜ್ಞಾನವನ್ನು ಸಂಪಾದಿಸುವುದು ನನ್ನ ಆಶಯ ಆಗಿತ್ತು‌. ಈ ಪ್ರಯತ್ನದಲ್ಲಿ ನಾನು ಗೆದ್ದರೆ ಎಷ್ಟೋ ಮಹಿಳೆಯರಿಗೆ ನನ್ನ ಕಾರ್ಯ ಸ್ಫೂರ್ತಿಯಾಗುತ್ತದೆ” ಎನ್ನುತ್ತಾರೆ ಖ್ಯಾಸಿ. ಒಂದು ದಿನ ತನ್ನ ಹೆದರಿಕೆಗಳನ್ನೆಲ್ಲಾ ಹಿಮ್ಮೆಟ್ಟಿ ತಮ್ಮ ಕನಸಿನ ಪಯಣವನ್ನು ಶುರು ಮಾಡಿದ ಮಹಿಳೆ ಇಂದು ಹಿಂದೆ ಯಾರು ಮಾಡದ ಸಾಧನೆಯನ್ನು ಮಾಡಿದ್ದಾರೆ.

ಮೂರು ವರ್ಷಗಳ ಪ್ಲಾನ್

ಸುಮಾರು ಮೂರು ವರ್ಷಗಳ ಕಾಲ ಈ ಪ್ರವಾಸದ ಯೋಜನೆಯನ್ನು ಖ್ಯಾಸಿ ಮಾಡಿದ್ದರು. ಇವರ ಈ ಯೋಜನೆ ಗಿನ್ನಿಸ್ ದಾಖಲೆಯಾಗಿ ಪರಿಗಣಿಸಲು ಕೆಲವು ಸೂಚನೆಗಳು ಹಾಗೂ ಮಿತಿಗಳನ್ನು ಹಾಕಲಾಗಿತ್ತು. ಅದೇನೆಂದರೆ, 14 ದಿನಗಳನ್ನು ಮೀರಿ ಖ್ಯಾಸಿ ಒಂದು ದೇಶದಲ್ಲಿ ಉಳಿಯುವಂತಿಲ್ಲ, ಆ ದೇಶಗಳಲ್ಲಿ ಸ್ವತಃ ವಾಹನ ಚಲಾಯಿಸುವಂತಿಲ್ಲ, ಎಲ್ಲೇ ಹೋದರು ಪ್ರಯಾಣದ ಎಲ್ಲಾ ದಾಖಲೆಗಳನ್ನು ಹೊಂದಿರಬೇಕು.

Guinness World Recorder Guinness World Records

ಈ ಪ್ರವಾಸದ ಯೋಜನೆಯನ್ನು ಕೇಳಿದರೆ ಹಲವರಲ್ಲಿ ಇದಕ್ಕೆಲ್ಲಾ ಎಷ್ಟು ಖರ್ಚಾಗಿರಬಹುದು ಎಂಬ ಪ್ರಶ್ನೆ ಮೂಡುತ್ತದೆ. ಆಶ್ಚರ್ಯ ಏನೆಂದರೆ ಖ್ಯಾಸಿ ಸ್ವತಃ ಖರ್ಚು ಮಾಡಿದ್ದು ಕೇವಲ ಹತ್ತು ಸಾವಿರ ಡಾಲರ್ ಗಳು ಮಾತ್ರ ಇನ್ನು ಉಳಿದ ಎಲ್ಲಾ ಹಣ ಪ್ರಾಯೋಜಕರಿಂದ ಸಂಗ್ರಹಿಸಲಾಗಿತ್ತು.

ತಮ್ಮ ಹತ್ತಿರ ಇದ್ದಷ್ಟು ಹಣವನ್ನು ತೆಗೆದುಕೊಂಡು ತಮ್ಮ ಪ್ರವಾಸ ಶುರು ಮಾಡಿದ ಖ್ಯಾಸಿ ಒಟ್ಟು 196 ದೇಶಗಳಗೆ ಭೇಟಿ ನೀಡಿದ್ದಾರೆ.

ಎಕ್ಸ್ ಪೆಡಿಷನ್ 196

ಈ ದಿಟ್ಟ ಮಹಿಳೆ ತಮ್ಮ ಪ್ರವಾಸದಲ್ಲಿ ಕೆಲವು ಸವಾಲುಗಳನ್ನು ಎದುರಿಸಿದ್ದರು, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆದಷ್ಟು ತಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆ ಸದಾ ಸಂಪರ್ಕದಲ್ಲಿದ್ದರು. ಈ ಪ್ರಯಾಣದ ಉದ್ದಕ್ಕೂ ಜನರಲ್ಲಿರುವ ದಯೆ, ಕರುಣೆ, ಪ್ರೀತಿ ಇವುಗಳನ್ನು ಬಿಟ್ಟು ದೊಡ್ಡ ಅಪಾಯ ಯಾವುದು ಇವರಿಗೆ ಎದುರಾಗಲಿಲ್ಲ. ಖ್ಯಾಸಿ ಎಷ್ಟೋ ದೇಶಗಳ ಅಧಿಕಾರಿಗಳು, ಮೇಯರ್ ಗಳು ಹಾಗೂ ಸ್ಪೇನ್ ನ ಮಹಾರಾಜರನ್ನು ಭೇಟಿಯಾಗಿದ್ದಾರೆ.

Cassie De Pecol Traveller First women to travel most number of countrie Guinness World Recorder

ಈ ಪ್ರಯಾಣದಿಂದ ದೊರೆತ ಅನುಭವಗಳನ್ನು ಕೂಡಿ ಇಡಲು ಹಾಗೂ ಹಲವರೊಂದಿಗೆ ಹಂಚಿಕೊಳ್ಳಲು ಖ್ಯಾಸಿ ‘ಎಕ್ಸ್ ಪೆಡಿಷನ್ 196’ (Expedition 196) ಎನ್ನುವ ಪುಸ್ತಕವನ್ನು ಬರೆದಿದ್ದಾರೆ.

ಒಟ್ಟು ಒಂದು ವರ್ಷ ಐದು ತಿಂಗಳಲ್ಲಿ ಇಡೀ ಪ್ರಪಂಚ ಪರ್ಯಟನೆ ಮಾಡಿ ಹೊಸ ದಾಖಲೆ ಬರೆದ ಇವರ ಕಥೆ ನಮ್ಮಂಥ ಎಷ್ಟೋ ಮಹಿಳೆಯರಿಗೆ ಸ್ಫೂರ್ತಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button