ದೂರ ತೀರ ಯಾನವಿಂಗಡಿಸದ

ಫೆ.5ರಿಂದ ‘ಅಶ್ವಮೇಧ’ ದಲ್ಲಿ ಊರು ತಲುಪಬಹುದು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ – KSRTC), ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಅಂಬಾರಿ ,ಪಲ್ಲಕ್ಕಿ ಯಂತಹ ಅತ್ಯಾಧುನಿಕ ಬಸ್ ಗಳು ಈಗಾಗಲೇ ರಸ್ತೆಗಿಳಿದು ಪ್ರಯಾಣ ಅರಂಭಸಿವೆ.

ಇದೀಗ ಮತ್ತೊಂದು ಬಸ್ ಸಂಚಾರ ಆರಂಭಿಸಲು ಸಿದ್ದವಾಗಿದೆ. ನಾಳೆಯಿಂದ (ಫೆ.5) ನೂತನ 100 ಅಶ್ವಮೇಧ (Ashvamedha) ಬಸ್‌ಗಳು ಕಾರ್ಯಾರಂಭ ಮಾಡಲಿವೆ.

Ksrtc

ಪಾಯಿಂಟ್‌ ಟು ಪಾಯಿಂಟ್‌ ಎಕ್ಸ್‌ಪ್ರೆಸ್‌ ಮಾದರಿಯ ನೂತನ ಕರ್ನಾಟಕ ಸಾರಿಗೆ ವಾಹನಗಳನ್ನು ಹೊಸ ವಿನ್ಯಾಸ ಹಾಗೂ ಹೊಸ ಬ್ರ್ಯಾಂಡ್‌ ‘ಅಶ್ವಮೇಧ’ (ಕ್ಲಾಸಿಕ್‌) ಪ್ರಯಾಣದ ಮರುಕಲ್ಪನೆ ಎಂಬ ಟ್ಯಾಗ್‌ಲೈನ್‌ನೊಂದಿಗೆ ಪರಿಚಯಿಸಲಾಗುತ್ತಿದೆ.

ಹಿಂದಿನ ಸಾರಿಗೆ ವಾಹನಗಳು 3.189 ಮೀಟರ್‌ ಎತ್ತರ ಹೊಂದಿದ್ದರೆ, ಹೊಸ ಮಾದರಿ ಬಸ್‌ಗಳ ಎತ್ತರ 3.42 ಮೀಟರ್‌ನಷ್ಟಿರುವುದು ವಿಶೇಷವಾಗಿದೆ.ಈ ನೂರು ಬಸ್ಸುಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಹೆಚ್ಚಿನ ಆದ್ಯತೆ ನೀಡಲಾಗಿದೆ.

ನೀವು ಇದನ್ನೂ ಇಷ್ಟ ಪಡಬಹುದು:ಕರ್ನಾಟಕದ ಮೂರು ಪಕ್ಷಿ ಸಂರಕ್ಷಿತ ಪ್ರದೇಶಗಳು ‘ರಾಮ್ಸರ್‌ ವೆಟ್‌ಲ್ಯಾಂಡ್‌’ ಪಟ್ಟಿಗೆ ಸೇರ್ಪಡೆ

Ashvamedha

12 ಪ್ಯಾನಿಕ್ ಬಟನ್, ಜಿಪಿಎಸ್(GPS), ಎರಡು ರೇರ್ ಕ್ಯಾಮರಾ ವ್ಯವಸ್ಥೆ ಮಾಡಲಾಗಿದ್ದು, ಮೊಬೈಲ್ ಫೋನ್ ಚಾರ್ಜ್ ಹಾಕಿಕೊಳ್ಳಲು ಆರು ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಇದೆ. 52 ಬಕೆಟ್ ಸೀಟು, ಬಸ್ಸು ಒಳಗೆ ಮತ್ತು ಹೊರ ಭಾಗದಲ್ಲಿ ಎಲ್ಇಡಿ ಮಾರ್ಗಫಲಕ.

ಪ್ರಯಾಣಿಕರು ಲಗೇಜ್ ಇಡಲು ದೊಡ್ಡದಾದ ಸ್ಥಳದ ವ್ಯವಸ್ಥೆ ಇದೆ ಜೊತೆಗೆ ಇವು ಸೆನ್ಸರ್‌ ಚಾಲಿತ ನ್ಯೂಮ್ಯಾಟಿಕ್ ಡೋರ್ (ಬಾಗಿಲು) ಮತ್ತು ಎಮರ್ಜೆನ್ಸಿ ಬಟನ್‌ (emergency button), ನೀರಿನ ಬಾಟಲ್ ಇಡಲು ಸಣ್ಣ ಪೌಚ್ ಅನ್ನು ಸಹ ಹೊಂದಿದೆ.

Point to point express

ಅಂಬಾರಿ ಉತ್ಸವ ಬಸ್‌, ಪಲ್ಲಕ್ಕಿ ಉತ್ಸವ ಬಸ್‌ಗಳನ್ನು ಇತ್ತೀಚಿಗೆ ಪರಿಚಯಿಸಲಾಗಿದ್ದು, ಇದೀಗ ಕೆಎಸ್‌ಆರ್‌ಟಿಸಿಯ ನೂತನ ವಿನ್ಯಾಸ ಪಾಯಿಂಟು ಟು ಪಾಯಿಂಟ್‌ ಎಕ್ಸಪ್ರೆಸ್‌ ಅಶ್ವಮೇಧ ಬಸ್‌ಗಳನ್ನು ರಸ್ತೆಗಿಳಿಸಲು ಕರ್ನಾಟಕ ಸಾರಿಗೆ ಇಲಾಖೆ ಮುಂದಾಗಿದೆ.

ಸಾರಿಗೆ ಬಸ್‌ ಪ್ರಯಾಣಿಕರಿಗಾಗಿ ಈ ಹೊಸ ವಿನ್ಯಾಸದ ಹೊಸ ಬ್ರಾಂಡ್‌ನ ಕೆಎಸ್‌ಆರ್‌ಟಿ ಬಸ್ ಆರಂಭವಾಗಲಿದೆ. ಫೆಬ್ರವರಿ 5 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button