ವಿಂಗಡಿಸದ

ನವರಾತ್ರಿಯ ಮೊದಲ ದಿನ “ಶೈಲಪುತ್ರಿ”ಯ ಆರಾಧನೆ:

ಆಶ್ವಯುಜ ಮಾಸದ ಶುಕ್ಲ ಪಾಡ್ಯಮಿಯಿಂದ ದಶಮಿಯವರೆಗೂ ಒಂಭತ್ತು ದಿನಗಳ ಕಾಲ ಆಚರಿಸಲ್ಪಡುವ ಹಬ್ಬವೇ “ನವರಾತ್ರಿ”. ಒಂಭತ್ತು ದಿನವೂ ನವದುರ್ಗೆಯರ ಒಂದೊಂದು ಅವತಾರಗಳನ್ನು ಪೂಜಿಸಲಾಗುತ್ತದೆ. ಹಾಗೇ ಇಂದು ನವರಾತ್ರಿಯ ಮೊದಲ ದಿನ ಪೂಜಿಸುವ ಶಕ್ತಿ ದೇವತೆ “ಶೈಲಪುತ್ರಿ”.

• ಉಜ್ವಲಾ ವಿ ಯು

ಶೈಲ ಎಂದರೆ ಪರ್ವತ. “ಶೈಲಪುತ್ರಿ” ಪರ್ವತ ರಾಜನ ಮಗಳು ಎಂಬರ್ಥವನ್ನು ನೀಡುತ್ತದೆ. ದಕ್ಷನ ಮಗಳಾದ ಸತಿಯು ತಂದೆಯ ಅಹಂಕಾರವನ್ನು ಮತ್ತು ತನ್ನ ಪತಿ ಶಿವನಿಗೆ ಅವಮಾನವನ್ನು ಕಂಡು ಕೋಪಗೊಂಡು, ಅಗ್ನಿಗೆ ಆಹುತಿಯಾಗುತ್ತಾಳೆ. ಇದೇ ಸತಿ ಮುಂದೆ ಪರ್ವತ ರಾಜನ ಮಗಳಾಗಿ “ಶೈಲಪುತ್ರಿ”ಯಾಗಿ ಮತ್ತೇ ಶಿವನನ್ನು ವರಿಸುತ್ತಾಳೆ.

ಶೈಲಪುತ್ರಿಯ ವಾಹನ ವೃಷಭ. ಆಕೆಯು ಎಡಗೈಯಲ್ಲಿ ಕಮಲ, ಬಲಗೈಯಲ್ಲಿ ತ್ರಿಶೂಲವನ್ನು ಹಿಡಿದಿರುತ್ತಾಳೆ.ಶ್ವೇತ ವಸ್ತ್ರಧಾರಿಯಾಗಿರುವ ಶೈಲ ಪುತ್ರಿಯು ಮಲ್ಲಿಗೆ ಹೂವನ್ನು ಇಷ್ಟ ಪಡುವವಳು. ಭೌತಿಕ ವಸ್ತುಗಳ ಮೇಲಿನ ವ್ಯಾಮೋಹ ತ್ಯಾಗವನ್ನು ಮಾಡಿ ಆತ್ಮಜ್ಞಾನವನ್ನು ಪಡೆಯಲು ಪ್ರವೃತ್ತವಾಗುವವಳೇ “ಶೈಲಪುತ್ರಿ”. ಅವಳು ಶ್ವೇತ ವಸ್ತ್ರಧಾರಿಣಿಯಾಗಿ ಶಾಂತಿಯುತವಾದ ನಡವಳಿಕೆಯನ್ನು ಬೆಳೆಸಿಕೊಳ್ಳಲು ಪ್ರೇರಣೆ ನೀಡುವ ಸಂಕೇತವಾಗಿದ್ದಾಳೆ.

Navaratri Day 1: Shailaputri

ಉಪನಿಷತ್ತಿನ ಪ್ರಕಾರ, ಶೈಲಪುತ್ರಿಯು ಮನೋಭಾವನೆಯನ್ನು ನಿಯಂತ್ರಿಸುವವಳು. ಶೈಲಪುತ್ರಿಯು ಮೂಲಧಾರ ಚಕ್ರದಲ್ಲಿ ಯೋಗಿನಿಯಾಗಿ ನೆಲೆಗೊಂಡಿದ್ದು, ಕುಂಡಲಿನಿ ಶಕ್ತಿಯ ಜಾಗೃತಿಗೆ ಕಾರಣಳಾಗಿದ್ದಾಳೆ.

ನವರಾತ್ರಿ ಪೂಜೆಯ ಸಂದರ್ಭದಲ್ಲಿ, ಮೊದಲ ದಿನ ಆಧ್ಯಾತ್ಮ ಸಾಧಕರು ಮೂಲಧಾರ ಚಕ್ರದ ಗಮನವಿಟ್ಟು, ಶೈಲಪುತ್ರಿಯನ್ನು ಆರಾಧಿಸುತ್ತಾರೆ.ಶೈಲಪುತ್ರಿ(Shailaputri)ಯ ಆರಾಧನೆಯಿಂದ ಸಾಧಕನಿಗೆ ಬಲ, ಶೌರ್ಯ ಮತ್ತು ಇಂದ್ರಿಯ ನಿಗ್ರಹ ಶಕ್ತಿಯು ಲಭಿಸುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button