ವಂಡರ್ ಬಾಕ್ಸ್ವಿಂಗಡಿಸದಸಂಸ್ಕೃತಿ, ಪರಂಪರೆ

ಅರಮನೆ ನಗರಿಯಲ್ಲಿ ಡಿಮ್ಯಾಂಡ್ ಹೆಚ್ಚಿಸಿಕೊಂಡ ಡಬಲ್ ಡೆಕ್ಕರ್ ಬಸ್

ಅರಮನೆ ನಗರಿ ಮೈಸೂರು ದಸರಾದ ಸಂಭ್ರಮದಲ್ಲಿದೆ. ಮಧುವಣಗಿತ್ತಿಯಂತೆ ಅರಮನೆ ನಗರಿಯ ಬೀದಿಗಳು ಸಿದ್ಧಗೊಂಡಿದೆ. ಸಾಂಸ್ಕೃತಿಕ ಕಾರ್ಯಕ್ರಮ ,ಪೂಜಾ ವಿಧಾನ , ಜಗಮಗಿಸುವ ದೀಪ ಎಲ್ಲವೂ ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳು. ನಾಡ ಹಬ್ಬ ದಸರಾ ಸಂಭ್ರಮದಲ್ಲಿ ಅರಮನೆ ನಗರಿಯಲ್ಲಿ ಡಬಲ್ ಡೆಕ್ಕರ್ ಬಸ್ ಸದ್ದಿಲ್ಲದೆ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ನವ್ಯಶ್ರೀ ಶೆಟ್ಟಿ

ಕೊರೋನಾ ಕಾರಣದಿಂದ ಅರಮನೆ ನಗರಿಯಲ್ಲಿ ದಸರಾ ಸರಳ ಹಾಗೂ ಸಿಮೀತ ಜನಸಂಖ್ಯೆ ನಡುವೆ ನಡೆಯುತ್ತಿದೆ. ದಸರಾ ಹಿನ್ನಲೆಯಲ್ಲಿ ಜಗ ಮಗಿಸುತ್ತಿರುವ ಮೈಸೂರು ಬೀದಿಗಳಿಗೆ ಮತ್ತಷ್ಟು ಮೆರಗು ನೀಡುತ್ತಿದೆ ಡಬಲ್ ಡೆಕ್ಕರ್ ಬಸ್. ಲಂಡನ್ ಮಾದರಿಯ ಈ ಡಬಲ್ ಡೆಕ್ಕರ್ ಬಸ್ ಗೆ ಬೇಡಿಕೆ ಹೆಚ್ಚಾಗಿದೆ.

Double decker

ಬಸ್ ಒಳಗೆ ಹಾಗೂ ಅದರ ಮೇಲೆ ತೆರೆದ ಆಸನಗಳನ್ನು ಈ ಬಸ್ ಒಳಗೊಂಡಿದೆ. ಮೇಲೆ ತೆರೆದ ಅಸನ ವ್ಯವಸ್ಥೆ ಇರುವುದರಿಂದ ಪ್ರವಾಸಿಗರು ಕುಳಿತುಕೊಂಡೆ ನಗರದ ದರ್ಶನ ಮಾಡಬಹುದು. ಮಳೆ ಬಂದರೆ ಆಸನದ ಒಳಗಡೆ ಕೂಡ ಕುಳಿತು ರಕ್ಷಣೆ ಮಾಡಿಕೊಳ್ಳಬಹುದು.

ಪ್ರತಿ ಪ್ರವಾಸಿಗರಿಗೆ 250ರೂ ದರ

ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುವ ಮೈಸೂರು ದಸರಾವನ್ನು ಡಬಲ್ ಡೆಕ್ಕರ್ ನಲ್ಲಿ ಕಣ್ತುಂಬಿಕೊಳ್ಳಲು ಪ್ರವಾಸಿಗರು ಕಾತುರರಾಗಿದ್ದಾರೆ. ಪ್ರತಿ ಸವಾರರಿಗೆ 250ರೂ ದರ ನಿಗದಿ ಮಾಡಲಾಗಿದೆ. ಮೈಸೂರು ನಗರದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಡಬಲ್ ಡೆಕ್ಕರ್ ಬಸ್ ಗೆ ಚಾಲನೆ ನೀಡಲಾಗಿತ್ತು. ಆದರೆ ದಸರಾ ಸಮಯದಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ಕೆಲ ಪ್ರವಾಸಿಗರು ಟಿಕೆಟ್ ಸಿಗದೆ ನಿರಾಶೆಯಿಂದ ವಾಪಸ್ಸಾಗುತ್ತಿದ್ದಾರೆ.

Ambari bus

ಸಂಜೆಗೆ ಡಿಮ್ಯಾಂಡ್ ಹೆಚ್ಚು

ಬೆಳಗ್ಗಿನ ಸಮಯದಲ್ಲಿ ಡಬ್ಬಲ್ ಡೆಕ್ಕರ್ ಅಂಬಾರಿಗೆ ಬೆರಳೆಣಿಕೆಯಷ್ಟು ಪ್ರವಾಸಿಗರು ಮಾತ್ರ ಬರುತ್ತಾರೆ. ಸೀಟ್ ಭರ್ತಿಯಾದರೆ ಮಾತ್ರ ಬಸ್ ಸಂಚರಿಸುತ್ತದೆ. ಆದರೆ, ಸಂಜೆ ಹೊತ್ತಿನಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗುತ್ತದೆ. ಡಬಲ್ ಡೆಕ್ಕರ್ ಬಸ್ ಮೈಸೂರಿನ ಮಯೂರ ಹೊಯ್ಸಳ ಹೋಟೆಲ್ ಬಳಿ ಪ್ರತಿ ಬಾರಿ ಸಂಚಾರ ಆರಂಭಿಸುತ್ತದೆ. ನಾಲ್ಕು ಬಸ್ ಗಳು ಸಂಜೆ 6.15,8.15, 9.30ಗೆ ಮೂರು ರೈಡ್ ಹೋಗುತ್ತದೆ.

ನೀವು ಇದನ್ನು ಇಷ್ಟ ಪಡುಬಹುದು: ನೀವಿನ್ನು ಡಬಲ್ ಡೆಕ್ಕರ್ ಅಂಬಾರಿಯಲ್ಲಿ ಮೈಸೂರು ಸುತ್ತಬಹುದು

Ambari

ಈ ಬಸ್ ನ ಮೇಲ್ಭಾಗದಲ್ಲಿ 21ಅಸನಗಳಿದ್ದು ಸಂಜೆ ವೇಳೆಗೆ ಎಲ್ಲಾ ಅಸನಗಳು ಭರ್ತಿಯಾಗುತ್ತದೆ.ದಸರಾಗೆ ಮುನ್ನ ಅಂಬಾರಿ ಆರಂಭವಾದರೂ ಕೂಡ ಅಷ್ಟೇನೂ ಸ್ಪಂದನೆ ಇರಲಿಲ್ಲ. ಈಗ ದಸರಾ ಹಿನ್ನೆಲೆಯಲ್ಲಿ ಪ್ರವಾಸಿಗರು ದೀಪಾಲಂಕಾರ ನೋಡಲು ಹೆಚ್ಚಿನ ಜನ ಡಬಲ್ ಡೆಕ್ಕರ್ ಅಂಬಾರಿ ನೋಡಲು ಧಾವಿಸುತ್ತಿದ್ದಾರೆ.

ಡಬಲ್ ಡೆಕ್ಕರ್ ರೂಟ್

ಡಬಲ್ ಡೆಕ್ಕರ್ ಬಸ್ ಮಯೂರ ಹೊಯ್ಸಳದಿಂದ ಆರಂಭವಾಗಿ ಸಂಚಾರ ಜಿಲ್ಲಾಧಿಕಾರಿ ಕಚೇರಿ, ಕುಕ್ಕರಹಳ್ಳಿ ಕೆರೆ, ಮೈಸೂರು ವಿಶ್ವ ವಿದ್ಯಾಲಯ, ರಾಮಸ್ವಾಮಿ ವೃತ್ತ, ಸಂಸ್ಕೃತ ಪಾಠ ಶಾಲೆ, ಕೆ. ಆರ್. ಸರ್ಕಲ್, ದೊಡ್ಡ ಗಡಿಯಾರ, ಅರಮನೆ ದಕ್ಷಿಣ ದ್ವಾರ, ಹಾರ್ಡಿಂಜ್ ಸರ್ಕಲ್, ಮೃಗಾಲಯ, ಕಾರಂಜಿ ಕೆರೆ, ಗೌರ್ಮೆಂಟ್ ಗೆಸ್ಟ್ ಹೌಸ್, ಸಂತ ಫಿಲೋಮಿನಾ ಚರ್ಚ್, ಬನ್ನಿ ಮಂಟಪ, ಆಯುರ್ವೇದ ಆಸ್ಪ ಸರ್ಕಲ್, ರೈಲ್ವೆ ನಿಲ್ದಾಣದಿಂದ ಮತ್ತೆ ಹೋಟೆಲ್ ಮಯೂರ ತಲುಪಲಿದೆ.

Double decker service

ಕೊರೊನಾ ಆತಂಕದಿಂದ ದಸರಾ ಆಚರಣೆ ಸರಳವಾದರೂ ನಗರಕ್ಕೆ ಬರುವ ಪ್ರವಾಸಿಗರಿಗೆ ಈ ಬಸ್‌ಗಳು ವಿಶೇಷ ಆಕರ್ಷಣೆಯಾಗಲಿವೆ. ಡಬ್ಬಲ್ ಡೆಕ್ಕರ್‌ಗಳಲ್ಲಿ ನಗರವನ್ನು ಸುತ್ತು ಹೊಡೆದು ಪಾರಂಪರಿಕ ಹಾಗೂ ಐತಿಹಾಸಿ ತಾಣಗಳನ್ನು ವೀಕ್ಷಿಸುವ ಅವಕಾಶ ಲಭ್ಯವಾಗಲಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ 

Related Articles

Leave a Reply

Your email address will not be published. Required fields are marked *

Back to top button