ವಿಂಗಡಿಸದ

ಭಾರತವು ಎಪಿಎಸಿಯ ಎರಡನೇ ವಿಶ್ವಾಸಾರ್ಹ ಪ್ರಯಾಣಿಕರ ರಾಷ್ಟ್ರವಾಗಿ ಹೊರಹೊಮ್ಮಿದೆ

India emerges as APAC's second most confident travellers nation

Booking.com ತನ್ನ APAC ಟ್ರಾವೆಲ್ ಕಾನ್ಫಿಡೆನ್ಸ್ ಇಂಡೆಕ್ಸ್ (TCI) ನ 2023 ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಭಾರತವು ಎರಡನೇ ಅತ್ಯಂತ ಆತ್ಮವಿಶ್ವಾಸದ ಪ್ರಯಾಣಿಕರನ್ನು ಹೊಂದಿರುವ ದೇಶ ಎಂದು ಪರಿಗಣಿಸಲ್ಪಟ್ಟಿದೆ.

ಇಂಡೆಕ್ಸ್ ನ ಪ್ರಕಾರ, ಹಾಂಗ್ ಕಾಂಗ್, ಭಾರತ, ಚೀನಾ, ಸಿಂಗಾಪುರ ಮತ್ತು ತೈವಾನ್ ಏಷ್ಯಾ-ಪೆಸಿಫಿಕ್‌ನಲ್ಲಿ ಅತ್ಯಂತ ಆತ್ಮವಿಶ್ವಾಸದ ಪ್ರಯಾಣಿಕರನ್ನು ಹೊಂದಿರುವ ಮೊದಲ ಐದು ದೇಶಗಳಾಗಿವೆ.

ಈ ಸಮೀಕ್ಷೆಯಲ್ಲಿ ಏಷ್ಯಾ-ಪೆಸಿಫಿಕ್ (APAC) ಪ್ರಯಾಣಿಕರ ಮನಸ್ಥಿತಿ, ಆರ್ಥಿಕ ಮತ್ತು ಜಾಗತಿಕ ಅನಿಶ್ಚಿತತೆಗಳು ಅವರ ಪ್ರಯಾಣದ ನಿರ್ಧಾರಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಮೇಲೆ ಸಮಗ್ರ ಮಾಹಿತಿಯನ್ನು ಕಲೆ ಹಾಕಿ ತನ್ಮೂಲಕ ಅಂಕಗಳನ್ನು ನೀಡಲಾಗುತ್ತದೆ. ಸಮೀಕ್ಷೆ ಮಾಡಲಾದ 11 APAC ಮಾರುಕಟ್ಟೆಗಳಲ್ಲಿ, ಹಾಂಗ್ ಕಾಂಗ್‌ ಮೊದಲನೇ ಸ್ಥಾನದಲ್ಲಿದ್ದು, ಭಾರತವು ಎರಡನೇ ಅತ್ಯಂತ ಆತ್ಮವಿಶ್ವಾಸದ ಪ್ರಯಾಣಿಕರನ್ನು ಹೊಂದಿರುವ ದೇಶವಾಗಿ ಹೊರಹೊಮ್ಮಿದೆ, ಚೀನಾ, ಸಿಂಗಾಪುರ್ ಮತ್ತು ತೈವಾನ್ ನಂತರದ ಸ್ಥಾನಗಳನ್ನು ಪಡೆದಿವೆ.

ಸಮೀಕ್ಷೆಗೆ ಪರಿಗಣಿಸಿದ ಅಂಶಗಳು:

ಜಾಗತಿಕ ಸವಾಲುಗಳಾದ ಹಣದುಬ್ಬರ, ರಾಜಕೀಯ ಅಸ್ಥಿರತೆ, ಹವಾಮಾನ ಬದಲಾವಣೆ ಮತ್ತು ಪೂರೈಕೆ ಸರಪಳಿ ಅಡಚಣೆಗಳ ಹೊರತಾಗಿಯೂ ಸಹ, ಭಾರತದಲ್ಲಿ 86% ರಷ್ಟು ಪ್ರಯಾಣಿಕರು, ಮುಂದಿನ ತಮ್ಮ ಪ್ರಯಾಣದ ಯೋಜನೆಯ ಕುರಿತು ಆಶಾವಾದಿಗಳಾಗಿದ್ದಾರೆ. ಹಾಗೇ 61% ರಷ್ಟು ಪ್ರಯಾಣಿಕರು ವರ್ಷದೊಳಗೆ ತಮ್ಮ ಪ್ರವಾಸ ಯೋಜನೆಯನ್ನು ಮುಂದೂಡುವ ಉದ್ದೇಶವನ್ನು ವ್ಯಕ್ತಪಡಿಸುವುದಿಲ್ಲ. ಭಾರತೀಯ ಪ್ರಯಾಣಿಕರು ಜೀವನವನ್ನು ಸಂಪೂರ್ಣವಾಗಿ ಜೀವಿಸಲು ಬಯಸುತ್ತಿದ್ದಾರೆ.

ಭಾರತೀಯ ಪ್ರವಾಸಿಗರ ನಡವಳಿಕೆ:

ಇನ್ನು ಹೆಚ್ಚು ಗಮನಾರ್ಹವಾದ ವಿಷಯವೆಂದರೆ, ಭಾರತೀಯ ಪ್ರಯಾಣಿಕರು ಪ್ರವಾಸವನ್ನು ಯೋಚಿಸುವಾಗ ಅರ್ಧಕ್ಕಿಂತ ಹೆಚ್ಚು (57%) ಮಂದಿ ಯೋಜಿತ ಪ್ರವಾಸವನ್ನು ಬಯಸುತ್ತಾರೆ ಮತ್ತು ಪ್ರವಾಸದ ವಸತಿ, ಚಟುವಟಿಕೆಗಳು ಮತ್ತು ಊಟವನ್ನು ಮುಂಗಡವಾಗಿ ಬುಕಿಂಗ್ ಮಾಡುತ್ತಾರೆ. ವಿವಿಧ ಸ್ಥಳಗಳಿಗೆ ಭೇಟಿ ನೀಡುವಾಗಲೂ ಸಹ 60% ರಷ್ಟು ಪ್ರಯಾಣಿಕರು ಭಾರತೀಯ ಆಹಾರವನ್ನು ಪಡೆಯಲು ಬಯಸುತ್ತಾರೆ.

43% ಭಾರತೀಯರು ವಿದೇಶಿ ಪ್ರಯಾಣಕ್ಕಿಂತ ಹೆಚ್ಚು ತಮ್ಮದೇ ದೇಶದ ಸ್ಥಳಗಳನ್ನು ಅನ್ವೇಷಿಸಲು ಬಯಸುತ್ತಾರೆ. ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು (71%) ಉತ್ತರ ಭಾರತಕ್ಕೆ ಪ್ರಯಾಣಿಸಲು, 60% ದಕ್ಷಿಣ ಭಾರತ, 41% ಪಶ್ಚಿಮ ಭಾರತ, 37% ಈಶಾನ್ಯ ಭಾರತ, 16% ಪೂರ್ವ ಭಾರತ ಮತ್ತು 13% ಜನರು ಮಧ್ಯ ಭಾರತವನ್ನು ಆರಿಸಿಕೊಂಡರು ಎಂದು ವರದಿ ದಾಖಲಾಗಿದೆ.

ಪ್ರಯಾಣಕ್ಕೆ ಪ್ರೇರಣೆ:

5 ರಲ್ಲಿ 3 ಎಪಿಎಸಿ ಪ್ರಯಾಣಿಕರಿಗೆ, ಪ್ರಯಾಣಿಸಲು ಅವರ ಪ್ರಮುಖ ಪ್ರೇರಣೆ ಎಂದರೆ ವಿಶ್ರಾಂತಿ, ಜೀವನೋತ್ಸಾಹ ಮತ್ತು ದೈನಂದಿನ ಜೀವನದ ಅವ್ಯವಸ್ಥೆಯಿಂದ ಪಾರಾಗುವುದು. ಆದಾಗ್ಯೂ, ಭಾರತೀಯ ಪ್ರಯಾಣಿಕರ ವಿಷಯಕ್ಕೆ ಬಂದಾಗ, ವಿಶ್ರಾಂತಿ ರಜೆಯ (57%) ಜೊತೆಗೆ, ಇತರ ಪ್ರಯಾಣ ಪ್ರೇರಕಗಳೆಂದರೆ, ತಮ್ಮ ಪ್ರಯಾಣದ ಸ್ಥಳಗಳ ಬಗ್ಗೆ ಮಾಹಿತಿಯನ್ನು ಪಡೆಯುವುದು(34%) ಮತ್ತು ಸ್ಥಳೀಯ ಸಂಸ್ಕೃತಿಯ (26%) ಮೇಲಿನ ಒಲವು ಕಾರಣ ಎನ್ನಲಾಗಿದೆ.

ಪ್ರಯಾಣದ ಸವಾಲುಗಳು:

ವಿವಿಧ ಸ್ಥಳಗಳಿಗೆ ಪ್ರಯಾಣಿಸುವ ಹಂಬಲವಿದ್ದರೂ, ಭಾರತದಲ್ಲಿ ಮತ್ತು APAC ನಾದ್ಯಂತ ಪ್ರಯಾಣಿಕರು ಎದುರಿಸುತ್ತಿರುವ ಕೆಲವು ಪ್ರಯಾಣದ ಸವಾಲುಗಳೆಂದರೆ

1. 39% ಭಾರತೀಯ ಪ್ರಯಾಣಿಕರು ಪ್ರವಾಸವನ್ನು ಯೋಜಿಸುವಾಗ ತಮ್ಮ ಕೆಲಸಗಳಿಗೆ ರಜೆ ಹಾಕುವುದನ್ನು ಪ್ರಮುಖ ಸವಾಲುಗಳಲ್ಲಿ ಒಂದಾಗಿ ಪರಿಗಣಿಸುತ್ತಾರೆ (ಹಾಂಗ್ ಕಾಂಗ್ 37%, ಸಿಂಗಾಪುರ್ 35%)

2. 34% ಜನರು ತಮ್ಮ ಪ್ರಯಾಣವನ್ನು ಕೈಗೊಳ್ಳಲು ಆಯ್ಕೆ ಮಾಡುವಾಗ ಹಣಕಾಸಿನ ಮೇಲೆ ಹೆಚ್ಚು ಕಾಳಜಿಯನ್ನು ಹೊಂದಿದ್ದಾರೆ (ಥೈಲ್ಯಾಂಡ್ 57%, ನ್ಯೂಜಿಲೆಂಡ್ 55%)

3. ವಿದೇಶಕ್ಕೆ ಪ್ರಯಾಣಿಸಲು ಬಯಸುವ 32% ಭಾರತೀಯ ಪ್ರಯಾಣಿಕರು ದುಬಾರಿ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುವ ವೀಸಾ ಪ್ರಕ್ರಿಯೆಗಳ ಬಗ್ಗೆ ಕಾಳಜಿಯನ್ನು ಹೊಂದಿದ್ದಾರೆ.

4. ಪರಿಸರದ ಸಮಸ್ಯೆಗಳ ಕುರಿತು ಸಹ ಕಾಳಜಿಯನ್ನು ಹೊಂದಿದ್ದಾರೆ.

ಆದ್ಯತೆಯ ಪ್ರಯಾಣದ ಅನುಭವಗಳಿಗೆ ಸಂಬಂಧಿಸಿದಂತೆ, ಭಾರತೀಯರು ಪ್ರಕೃತಿಯೊಂದಿಗೆ ಒಂದಾಗಲು ಮತ್ತು ರಮಣೀಯ ತಾಣಗಳನ್ನು ಅನ್ವೇಷಿಸಲು ಇಷ್ಟಪಡುತ್ತಾರೆ.

Booking.com ನ ಭಾರತ, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಇಂಡೋನೇಷ್ಯಾ ಮ್ಯಾನೇಜರ್ ಸಂತೋಷ್ ಕುಮಾರ್ ಅವರು ಮಾತಾಡುತ್ತಾ ” ಸಮೀಕ್ಷೆಯು ಜಾಗತಿಕ ಮತ್ತು ಆರ್ಥಿಕ ಅಡೆತಡೆಗಳ ಹೊರತಾಗಿಯೂ, ಪ್ರಯಾಣಿಕರಲ್ಲಿ ಸಕಾರಾತ್ಮಕತೆ ಮತ್ತು ಉತ್ಸಾಹದ ಚಾಲ್ತಿಯಲ್ಲಿದೆ ಎಂದು ಸ್ಪಷ್ಟವಾಗಿ ತೋರಿಸಿದೆ. ಭಾರತವನ್ನು ಪ್ರವಾಸೋದ್ಯಮದಲ್ಲಿ ಅಗ್ರ ಮೂರು ದೇಶಗಳಲ್ಲಿ ಇರಿಸುವ ಗುರಿಯನ್ನು ಹೊಂದಿದ್ದು, ಭಾರತೀಯ ಪ್ರಯಾಣಿಕರು ಸಹ ಸುಸ್ಥಿರ ಪ್ರಯಾಣಕ್ಕೆ ಆದ್ಯತೆ ನೀಡಲು ಹೆಚ್ಚು ಉತ್ಸುಕರಾಗಿದ್ದಾರೆ. ನಮ್ಮ ಪ್ರಯಾಣ ವಿಶ್ವಾಸ ಸೂಚ್ಯಂಕ 2023 ರ ಪ್ರಕಾರ, ಕೆಲವು ಸ್ಥೂಲ ಆರ್ಥಿಕ ಅಡೆ-ತಡೆ ಮತ್ತು COVID-19 ನಿರ್ಬಂಧಗಳ ಹೊರತಾಗಿಯೂ, APAC ಪ್ರಯಾಣಿಕರ ಸಾಹಸದ ಮನೋಭಾವ ಮತ್ತು ಜೀವನಪರ್ಯಂತ ಪ್ರಯಾಣದ ನೆನಪುಗಳನ್ನು ದೃಢವಾಗಿ ಉಳಿಯುವಂತೆ ಮಾಡಬೇಕೆಂಬ ಉತ್ಸಾಹ ಎಂದೂ ಕಡಿಮೆಯಾಗಿಲ್ಲ. ಜನರಲ್ಲಿರುವ ಪ್ರಯಾಣಿಸುವ ಉತ್ಸಾಹದಿಂದಾಗಿಯೇ ಮುಂಬರುವ ವರ್ಷಗಳಲ್ಲಿ ಪ್ರಯಾಣ ಕ್ಷೇತ್ರವು ಅಭಿವೃದ್ಧಿ ಹೊಂದುತ್ತದೆ ಎಂದು ನಾವು ನಂಬುತ್ತೇವೆ.”ಎಂದು ಹೇಳಿದರು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button