Moreಮ್ಯಾಜಿಕ್ ತಾಣಗಳುವಿಂಗಡಿಸದ

ಅಂತರಾಷ್ಟ್ರೀಯ ಸಂತೋಷ ದಿನ 2024; ಭಾರತದ ಅತ್ಯಂತ ಸಂತೋಷದ ರಾಜ್ಯ ಯಾವುದು ಗೊತ್ತಾ?

ನಾಳೆ (March 20) ಅಂತರಾಷ್ಟ್ರೀಯ ಸಂತೋಷದ ದಿನ (International Happiness Day 2024) ಸಂತೋಷವು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.

ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಪರಿಸ್ಥಿತಿ, ಕುಟುಂಬದಲ್ಲಿ ಹೊಂದಾಣಿಕೆ, ಉದ್ಯೋಗ ಹೀಗೆ ಹಲವು ಅಂಶಗಳು ಸಂತೋಷವನ್ನು ಆಧರಿಸುತ್ತದೆ.

ಮನುಷ್ಯನ ಸಂತೋಷದ ಪರಿಸ್ಥಿತಿಗಳು ಅವನಿರುವ ದೇಶ, ರಾಜ್ಯ ಅಂತಿಮವಾಗಿ ಗ್ರಾಮದ ಮೇಲೆ ಪರಿಣಾಮ ಬೀರುತ್ತದೆ. ಈ ಪರಿಣಾಮವನ್ನು ನಿರ್ಧರಿಸುವ ಕಾರಣದಿಂದಲೇ ಕೆಲವು ಸಮೀಕ್ಷೆಗಳು ನಡೆಯುತ್ತವೆ.

ಹೀಗೆ ನಡೆದ ಸಮೀಕ್ಷೆಯಲ್ಲಿ ಜಗತ್ತಿನ ಅತ್ಯಂತ ಸಂತೋಷದ ದೇಶ (Happiest country) , ದೇಶದ ಅತ್ಯಂತ ಸಂತೋಷದ ರಾಜ್ಯಗಳನ್ನು (Happiest State) ನಿರ್ಧರಿಸಲಾಗುತ್ತದೆ.

2023 ರಲ್ಲಿ ಗುರುಗ್ರಾಮ್‌ನ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ತಂತ್ರಗಾರಿಕೆಯ ಪ್ರಾಧ್ಯಾಪಕ ರಾಜೇಶ್ ಕೆ ಪಿಲ್ಲಾನಿಯಾ ಅವರು ಇಂತಹ ಸಮೀಕ್ಷೆಯನ್ನು ನಡೆಸಿ ಭಾರತದ ಅತ್ಯಂತ ಸಂತೋಷದ ರಾಜ್ಯ ಯಾವುದೆಂದು ಬಹಿರಂಗ ಪಡಿಸಿದರು.

ಅವರ ಸಮೀಕ್ಷೆಯ ಪ್ರಕಾರ, ಭಾರತದ ಅತ್ಯಂತ ಸಂತೋಷದ ರಾಜ್ಯ ದೆಹಲಿ, ಮುಂಬೈ, ಉತ್ತರ ಪ್ರದೇಶ, ಕರ್ನಾಟಕ ಯಾವುದು ಅಲ್ಲ, ಬದಲಾಗಿ ಈಶಾನ್ಯದ “ಮಿಜೋರಾಂ” (Mizoram).

ಅವರ ಈ ಅಧ್ಯಯನದಲ್ಲಿ, ಅವರು ಈ ಸ್ಥಳವನ್ನು ಅತ್ಯಂತ ಸಂತೋಷದಾಯಕ ಎಂದು ಗುರುತಿಸಲು ಬಳಸಿದ ಕೆಲವು ಪ್ರೇರಕ ಅಂಶವಾಗಿರುವ ಹಲವಾರು ಅಂಶಗಳನ್ನು ಹಂಚಿಕೊಂಡಿದ್ದಾರೆ.

ಹಲವು ಅಂಶಗಳು ಈ ರಾಜ್ಯವನ್ನು ಸಂತೋಷದ ರಾಜ್ಯದ ಪಟ್ಟಿಗೆ ಸೇರಿಸಿದೆ. ಈ ಸಂತೋಷದ ಹಿಂದೆ ಹಲವಾರು ಕಾರಣಗಳಿವೆ.

ರಾಜೇಶ್ ಕೆ ಪಿಲ್ಲಾನಿಯಾ ಅವರು ಮುಖ್ಯವಾಗಿ, ಆರು ಅಂಶಗಳನ್ನು ಪರಿಶೀಲಿಸುವ ಮೂಲಕ ಇದನ್ನು ಬಹಿರಂಗ ಪಡಿಸಿದ್ದಾರೆ.

ಕೆಲಸ-ಸಂಬಂಧಿತ ಸಮಸ್ಯೆಗಳು, ಕೌಟುಂಬಿಕ ಸಂಬಂಧಗಳು, ಸಾಮಾಜಿಕ ಸಮಸ್ಯೆಗಳು ಮತ್ತು ಲೋಕೋಪಕಾರ, ಸಂತೋಷ, ಧರ್ಮ ಮತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ COVID-19 ನ ಪರಿಣಾಮಗಳನ್ನು ಆಧರಿಸಿ ಮಿಜೋರಾಂ ಭಾರತದ ಅತ್ಯಂತ ಸಂತೋಷದ ರಾಜ್ಯ ಎಂದು ತಿಳಿಸಲಾಗಿದೆ.

ಇದಲ್ಲದೇ, ಇನ್ನೂ ಕೆಲವು ಅಂಶಗಳು ಮಿಜೋರಾಂ ಅನ್ನು ಅತ್ಯಂತ ಸಂತೋಷದ ರಾಜ್ಯವಾಗಿಸಿದೆ.

1.ಸಾಕ್ಷರತೆ: (Literacy rate)

ವರದಿಗಳ ಪ್ರಕಾರ, ರಾಜ್ಯವು 100% ಸಾಕ್ಷರತೆಯನ್ನು ಯಶಸ್ವಿಯಾಗಿ ಸಾಧಿಸಿರುವ ಭಾರತದ ಎರಡನೇ ರಾಜ್ಯ ಇದಾಗಿದೆ.

ಇಲ್ಲಿನ ವಿದ್ಯಾರ್ಥಿಗಳು ಸವಾಲಿನ ಪರಿಸ್ಥಿತಿಗಳಲ್ಲಿಯೂ ಸಹ ತಮ್ಮ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಅಭಿವೃದ್ಧಿಗೊಳಿಸುವಲ್ಲಿ ಬದ್ಧರಾಗಿದ್ದಾರೆ.

2.ಅಭಿವೃದ್ಧಿ: (Development)

ಉದಾಹರಣೆಗೆ ಮಿಜೋರಾಂನ ಲಾಂಗ್ಟ್ಲೈ ಜಿಲ್ಲೆಯು ಒಂದು ಕಾಲದಲ್ಲಿ ರಾಜ್ಯದ ಅತ್ಯಂತ ಹಿಂದುಳಿದ ಮತ್ತು ವಿಪತ್ತು ಪೀಡಿತ ಪ್ರದೇಶವಾಗಿತ್ತು.

ಆದರೆ ಈಗ ಇದು ಅಭಿವೃದ್ಧಿ ಹೊಂದಿದ್ದು, ‘ಕಾನ್ ಸಿಕುಲ್, ಕಾನ್ ಹುವಾನ್’ (ನನ್ನ ಶಾಲೆ, ನನ್ನ ಫಾರ್ಮ್) ಪರಿಕಲ್ಪನೆಗೆ ಹೆಸರುವಾಸಿಯಾಗಿದೆ.

3.ಲಿಂಗ ಸಮಾನತೆ ಮತ್ತು ಉತ್ಸಾಹಿ ಯುವಜನತೆ: (Gender equality and Motivated Youths)

ಲ್ಯಾಂಡ್ ಆಫ್ ಮಿಜೋಸ್ ಎಂದೂ ಕರೆಯಲ್ಪಡುವ ಮಿಜೋರಾಂ ರಾಜ್ಯವು ಅತಿ ಹೆಚ್ಚು ಯುವ ಪೀಳಿಗೆಯನ್ನು ಹೊಂದಿದ್ದು, ಉತ್ಸಾಹಿ ತರುಣ ತರುಣಿಯರನ್ನು ಹೊಂದಿದೆ.

ಮಿಜೋ ಸಮುದಾಯದ ಯುವಕರು ತಮ್ಮ ಲಿಂಗವನ್ನು ಲೆಕ್ಕಿಸದೆ, ಚಿಕ್ಕ ವಯಸ್ಸಿನಿಂದಲೇ ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯಲು ಒಲವು ತೋರುತ್ತಾರೆ.

4. ಕಡಿಮೆ ಸಾಮಾಜಿಕ ಒತ್ತಡ: (Less Societal pressure)

Eben-ezer Boarding School- ಈ ಶಾಲೆಯ ಪ್ರಕಾರ, ಮಿಜೋರಾಂನ ಸಾಮಾಜಿಕ ಮೂಲಸೌಕರ್ಯವು ಮಕ್ಕಳ ಸಂತೋಷಕ್ಕೆ ಕಾರಣವಾಗಿದೆ.

ಜಾತಿರಹಿತ ಸಮಾಜವನ್ನು ಮಿಜೋರಾಂ ಹೊಂದಿದೆ. ಶೈಕ್ಷಣಿಕ ಯಶಸ್ಸು ಮತ್ತು ಬೇರೆ ಯಾವುದಕ್ಕೂ ಈ ಪ್ರದೇಶದಲ್ಲಿ ಪೋಷಕರ ಒತ್ತಡವು ತುಲನಾತ್ಮಕವಾಗಿ ಕಡಿಮೆಯಾಗಿದೆ.

ಇವುಗಳ ಜೊತೆಗೆ, ಮಿಜೋರಾಂ ನೈಸರ್ಗಿಕ ಸೌಂದರ್ಯಕ್ಕೆ ಸಹ ಹೆಸರುವಾಸಿಯಾಗಿದೆ. ಇಲ್ಲಿರುವ ಪ್ರಶಾಂತ ಸರೋವರಗಳು, ಪರ್ವತಗಳು ಹಾಗೂ ಹಚ್ಚ ಹಸಿರಿನ ನೈಸರ್ಗಿಕ ತಾಣಗಳು ಪ್ರವಾಸಿಗರ ಒತ್ತಡವನ್ನು ಸಹಜವಾಗಿ ಕಡಿಮೆ ಮಾಡುವಳ್ಳಿ ಸಹಕಾರಿಯಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button