ಬೆರಗಿನ ಪಯಣಿಗರುವಿಂಗಡಿಸದ

ಕರ್ನಾಟಕದ ಮುನ್ನಾರ್ ಕೆಳಗೂರು ಟೀ ಎಸ್ಟೇಟ್: ಕೆಳಗೂರು ಟೀ ಪಾಯಿಂಟಿಗೆ ಈ ಬರಹ ಅರ್ಪಣೆ

#ವಿಶ್ವ ಚಹಾ ದಿನ ವಿಶೇಷ (World Tea Day 2021)

ಪ್ರವಾಸ ಮತ್ತು ಚಹಾಗೆ ಅವಿನಾಭಾವ ಸಂಬಂಧ. ನನ್ನ ಅಪ್ಪ- ಅಮ್ಮ ಕಾಫಿ ನಾಡಲ್ಲಿದ್ದರೂ ನಾನು ಕಾಫಿ ಕುಡಿಯುವುದಿಲ್ಲ. ಅಷ್ಟರ ಮಟ್ಟಿಗೆ ನಾನು ಚಹಾ ಪ್ರೇಮಿ. ಅದರಲ್ಲೂ ಕೆಳಗೂರು ಟೀ ಎಸ್ಟೇಟು ಅಂದ್ರೆ ನಂಗೆ ತುಂಬಾ ಇಷ್ಟ. ವಿಶ್ವ ಚಹಾ ದಿನಕ್ಕೆ ಈ ಬರಹ ಅರ್ಪಣೆ.  

–  ರೂಪಲ್ ಶೆಟ್ಟಿ

ಟ್ರಾವೆಲ್ ಮಾಡುವುದು ಯಾರಿಗೆ ತಾನೇ ಇಷ್ಟ ಆಗಲ್ಲ. ಎಲ್ಲರಿಗೂ ಒಂದು ಫೇವರೆಟ್ ಡೆಸ್ಟಿನೇಷನ್ ಅಂತ ಇದ್ದೇ ಇರುತ್ತದೆ. ನನಗೆ ನನ್ನ ಅಪ್ಪ, ಅಮ್ಮ ಇರುವ ಊರೇ ತುಂಬಾ ಇಷ್ಟ.

Kelaguru Tea Estate International Tea Day Travel Nature

ಎಲ್ಲರೂ ಚಿಕ್ಕವರಿದ್ದಾಗ ಯಾವಾಗ ರಜೆ ಸಿಗುತ್ತೆ, ಯಾವಾಗ ಅಜ್ಜಿ ಮನೆಗೆ ಹೋಗುತ್ತೇವೆ ಅಂತ ಕಾಯುತ್ತಿರುತ್ತಾರೆ. ಆದರೆ ನಾನು ಮಾತ್ರ ಯಾವಾಗ ನನ್ನ ಅಪ್ಪ ಅಮ್ಮನ ಮನೆಗೆ ಹೋಗುತ್ತೇನೆ ಅಂತ ಕಾಯುತ್ತಿದ್ದೆ. ಅವರು ಇರುವುದು ಚಿಕ್ಕಮಗಳೂರಿನ(Chikmagalur) ಕೂವೆ(Coove) ಎಂಬ ಚಿಕ್ಕ ಊರಿನ ದೊಡ್ಡ ಕಾಫಿತೋಟದಲ್ಲಿ.

ಉಜಿರೆಯಲ್ಲಿ ಅಜ್ಜಿ ಮನೆಯಲ್ಲಿ ಇದ್ದ ನನಗೆ ಚಿಕ್ಕಮಗಳೂರಿಗೆ ಹೋಗುವುದೇ ಒಂದು ರೋಮಾಂಚಕ ಅನುಭವ. ಅಪ್ಪ – ಅಮ್ಮನ ಮೀಟ್ ಆಗುತ್ತೇನೆ ಎಂಬ ಖುಷಿ ಒಂದು ಕಡೆಯಾದರೆ ದಾರಿ ಮಧ್ಯೆ ಚಾರ್ಮಾಡಿ(Charmady) ಘಾಟಿನ ಸೊಗಡನ್ನು ನೋಡಿಕೊಂಡು ಹೋಗುವ ಖುಷಿ ಇನ್ನೊಂದು ಕಡೆ. ಮಳೆಗಾಲದಲ್ಲಂತೂ ಚಾರ್ಮಾಡಿಯ ನೋಡುವ ಮಜಾನೇ ಬೇರೆ.

ನೀವು ಇದನ್ನು ಇಷ್ಟಪಡಬಹುದು:ಸೊಗಸಾದ ಟೀ ಎಂಬ ರೂಪಕ ಅಲಂಕಾರ: ವಿಶ್ವ ಚಹಾ ದಿನ ನಿಮಿತ್ತ ಜೋಗಿಯವರ ವಿಶೇಷ ಬರಹ

Kelaguru Tea Estate International Tea Day Travel Nature

ಕೆಳಗೂರು ಟೀ ಎಸ್ಟೇಟ್

ಕೊಟ್ಟಿಗೆಹಾರದಿಂದ(Kottigehara) ಮನೆಗೆ ಹೋಗುವ ದಾರಿಯಲ್ಲಿ ಕೆಳಗೂರು ಎಂಬ ಟೀ ಎಸ್ಟೇಟ್ ಇದೆ. ಆ ಎಸ್ಟೇಟ್ ಯಾವತ್ತಿದ್ರೂ ನನ್ನ ಫೇವರಿಟ್ ಡೆಸ್ಟಿನೇಷನ್.

ನೀವು ಕಾಶೀನಾಥ್ ಅಭಿನಯದ, ಉಪೇಂದ್ರ ನಿರ್ದೇಶನದ ಶ್ ಸಿನಿಮಾ ನೋಡಿದ್ದರೆ ನೀವು ಈ ಕೆಳಗೂರು ಟೀ ಎಸ್ಟೇಟ್ ನೋಡಿಯೇ ಇರುತ್ತೀರಿ. ಆ ಸಿನಿಮಾದ ಬಹುತೇಕ ಚಿತ್ರೀಕರಣ ನಡೆದಿದ್ದು ಈ ಟೀ ಎಸ್ಟೇಟಿನಲ್ಲಿಯೇ. ಬಹುತೇಕರು ಚಾರ್ಮಾಡಿ ಘಾಟ್ ಇಷ್ಟ ಪಡುವವರು ಈ ಕೆಳಗೂರು ಟೀ ಪಾಯಿಂಟನ್ನು ಕೂಡ ಇಷ್ಟ ಪಡುತ್ತಾರೆ.

Kelaguru Tea Estate International Tea Day Travel Nature

ಕಳಸಕ್ಕೆ ಹೋಗುವವರು ಈ ಕೆಳಗೂರು ಮರೆಯಲು ಸಾಧ್ಯವೇ ಇಲ್ಲ. ಇನ್ನು ಮಳೆಗಾಲದ ಸಂಜೆಯಲ್ಲಿ ಈ ಕೆಳಗೂರಲ್ಲಿ ಟೀ ಕುಡಿಯುವ ಸಂತೋಷವೇ ಬೇರೆ, ಅದನ್ನು ವಿವರಿಸುವುದು ಕಷ್ಟ.  

ಇನ್ನು ನನಗಂತೂ ಯಾವಾಗ ಆ ಕಡೆಗೆ ಹೋದರೂ ಕೆಳಗೂರು ಟೀ ಎಸ್ಟೇಟ್ ಗೆ ಹೋಗಿ ಒಂದು ಫೋಟೋ ತೆಗೆಯದಿದ್ದರೆ ಸಮಾಧಾನ ಆಗಲ್ಲ. ಯಾರೇ ನನ್ ಫ್ರೆಂಡ್ ಬಂದರೂ ಅಲ್ಲಿಗೆ ಹೋಗಿ ಒಂದು ಪೋಟೋ ತೆಗೆದೇ ತೆಗೆಯುತ್ತೇನೆ. ಅಲ್ಲಿ ತೆಗೆದ ಫೋಟೋಗಳಿವೆ, ನೂರಾರು ನೆನಪುಗಳಿವೆ, ಆ ಎಸ್ಟೇಟಿನಲ್ಲಿ ಜೀವ ಇದೆ. ಅಷ್ಟರ ಮಟ್ಟಿಗೆ ಆ ಕೆಳಗೂರು ಎಸ್ಟೇಟು ನನ್ನ ಜೀವನದಲ್ಲಿ ಸೇರಿಕೊಂಡಿದೆ.

Kelaguru Tea Estate International Tea Day Travel Nature

ದೇವರಾಣೆ, ಆ ಟೀ ಎಸ್ಟೇಟ್ ಯಾರದ್ದು ಅಂತ ಗೊತ್ತಿಲ್ಲ. ಆದರೆ ಎಲ್ಲಾ ಟೂರಿಸ್ಟ್ ಗಳು ಕೆಳಗೂರಿನಲ್ಲಿ ಒಂದು ಸ್ಟಾಪ್ ಕೊಟ್ಟು ಆ ಟೀ ಎಸ್ಟೇಟ್‌ನಲ್ಲಿ ಫೋಟೋ ತೆಗೆಯುವುದು ರೂಢಿ.

ನನ್ನ ಪ್ರಕಾರ ಅದು ನಮ್ಮ ಕರ್ನಾಟಕದ(Karnataka) ಮುನ್ನಾರ್.(Munnar) ಈಗಂತೂ ಆ ಎಸ್ಟೇಟ್ ಕೆಳಗೂರು ಫೋಟೋ ಪಾಯಿಂಟ್ ಅಂತಾನೇ ಫೇಮಸ್. ಯಾವತ್ತಾದ್ರೂ ನೀವು ಕೆಳಗೂರಿನ ಕಡೆ ಹೋದರೆ ಎಸ್ಟೇಟಲ್ಲಿ ಫೋಟೋ ತೆಗೆಯುವುದನ್ನು ಮಾತ್ರ ಮರೀಬೇಡಿ. ಆಮೇಲಿಂದ ಕೆಳಗೂರು ನಿಮ್ಮ ಜೊತೆ ನೆನಪಲ್ಲಿ ಉಳಿಯುತ್ತದೆ.

Kelaguru Tea Estate International Tea Day Travel Nature

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

2 Comments

  1. Beautiful…… ಒಂದು ಕ್ಷಣ ಟೀ ಕಪ್, ಕೈ ಅಲ್ಲಿ ಕ್ಯಾಮೆರಾ, ಕಣ್ಣು ತುಂಬಾ ಜಾಸ್ತಿ ಕೆಳಗೆರೆ ಎಸ್ಟೇಟ್ ಕಂಡಿದ್ ಹಾಗೆ….

Leave a Reply

Your email address will not be published. Required fields are marked *

Back to top button