ದೂರ ತೀರ ಯಾನನಡಿಗೆ ನಮ್ಮ ಖುಷಿಗೆವಂಡರ್ ಬಾಕ್ಸ್ವಿಂಗಡಿಸದ

ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ರಷ್ಯಾಗೆ ಪ್ರವಾಸ ಹೋಗುವ ಅಪೂರ್ವ ಅವಕಾಶ: ನಿಮ್ಮ ಸೀಟು ಬುಕ್ ಮಾಡ್ತೀರ?

ಇಡೀ ಪ್ರಪಂಚವೇ ಕೋವಿಡ್ 19 ಮಹಾಮಾರಿಯಿಂದ ಬೆಚ್ಚಿದೆ, ಅದನ್ನು ನಿಯಂತ್ರಣಕ್ಕೆ ತರಲೆಂದು ವ್ಯಾಕ್ಸಿನ್ ಪರಿಚಯಿಸಿದ ಮೇಲೆ ಜನರಲ್ಲಿ ಆತಂಕ ಕಡಿಮೆಯಾಗುತ್ತಿರುವುದನ್ನು ನಾವು ಕಾಣಬಹುದು. ಆದರೆ ಇಂತಹ ಸಮಯದಲ್ಲೂ ಇಲ್ಲೊಂದು ವಿಶಿಷ್ಟವಾದ ವಿಷಯ ಬಹು ಜನರ ಹುಬ್ಬೇರಿಸಿದೆ. ಅದೇನೆಂದರೆ “ಕೋವಿಡ್ ವ್ಯಾಕ್ಸಿನ್ ಟೂರಿಸಂ”.  ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಆರ್ಟಿಕಲ್ ಅನ್ನು ಪೂರ್ತಿಯಾಗಿ ಓದಿ.

  • ಪದ್ಮರೇಖಾ. ಕೆ. ಭಟ್, ಚಟ್ನಳ್ಳಿ

ನಮ್ಮಲ್ಲಿ ಬಹಳಷ್ಟು ಮಂದಿಗೆ ಪ್ರವಾಸ ಅಥವಾ ಟೂರಿಸಂ ಎಂದರೆ ತುಂಬಾ ಇಷ್ಟದ ಹವ್ಯಾಸ. ಆದರೆ ಕೊರೋನ ಎಂಬ ಮಹಾಮಾರಿ ಬರೀ ಜನಜೀವನ ಅಸ್ತವ್ಯಸ್ತ ಮಾಡಿದ್ದಲ್ಲದೇ ಪ್ರವಾಸಿಗರಿಗೂ ಕಡಿವಾಣವನ್ನು ಬಿಗಿದಿದೆ.

ಕೋವಿಡ್ ಬಂದಾಗಿನಿಂದ ಸುಮಾರು ಮಂದಿ ತಮ್ಮ ಪ್ರವಾಸದ ಯೋಜನೆಗಳನ್ನು ಕೈಬಿಟ್ಟು ಮನೆಯಲ್ಲಿ ಕೂತಿದ್ದಾರೆ. ಆದರೆ ಪ್ರವಾಸ ಪ್ರೇಮಿಗಳಿಗೆ ಇಲ್ಲೊಂದು ಸಿಹಿ ಸುದ್ದಿಯಿದೆ. ಇದುವೇ ‘ಕೊವಿಡ್ ವ್ಯಾಕ್ಸಿನ್ ಟೂರಿಸಂ’. ಈ ಪ್ಯಾಕೇಜ್ ನ ವಿಶೇಷತೆ ಏನೆಂದರೆ ಪ್ರವಾಸದ ಜೊತೆಗೆ ಕೋವಿಡ್ 19 ಲಸಿಕೆಯನ್ನು ಸಹ ಕೊಡಲಾಗುತ್ತದೆ.

ಹೌದು. ಭಾರತದಿಂದ ರಷ್ಯಾ ದೇಶಕ್ಕೆ ಇರುವ ಈ ಪ್ರವಾಸದಲ್ಲಿ ರಷ್ಯಾ ದೇಶದ ಅತ್ಯಂತ ಪರಿಣಾಮಕಾರಿ ಎನ್ನಲಾದ ಸ್ಪುಟ್ನಿಕ್ V ಲಸಿಕೆಯನ್ನು ಪ್ರವಾಸಿಗರಿಗೆ ಒದಗಿಸಲಾಗುವುದು. ಯೂರೋಪಿನ ಇತರ ದೇಶಗಳಿಗೆ ಹೋಲಿಸಿದರೆ ರಷ್ಯಾ ಪ್ರವಾಸ ಅಗ್ಗ ಅಥವಾ ಕಡಿಮೆ ಖರ್ಚಿನಲ್ಲಿ ಆಗುತ್ತದೆ. ಈಗಾಗಲೇ ಈ ಪ್ಯಾಕೇಜ್ ನ ಬಗ್ಗೆ ಬಹಳ ಜನರು ಉತ್ಸಾಹಿತರಾಗಿದ್ದಾರೆಂದು, ಟ್ರಾವೆಲ್ ಏಜೆಂಟ್ಸ್ ಗಳಿಂದ ತಿಳಿದು ಬಂದಿದೆ.

ವರ್ಷದ ಈ ಸಮಯದಲ್ಲಿ ಹೆಚ್ಚು ಮದುವೆ ಸಮಾರಂಭಗಳು ನಡೆಯುವ ಕಾರಣ ನವ ಜೋಡಿಗಳಿಗೆ ಹನಿಮೂನ್ ಆಚರಿಸಲು ಇದು ಉತ್ತಮ ಆಯ್ಕೆ ಎನ್ನುವುದು ಟ್ರಾವೆಲ್ ಏಜೆಂಟ್ಸ್ ಗಳ ಅಭಿಪ್ರಾಯ. ಈಗಾಗಲೇ ದೆಹಲಿ ಹಾಗೂ ಕೋಲ್ಕತಾದ ಏಜೆಂಟ್ಸ್ ಗಳು  ಪ್ಯಾಕೇಜ್ ಪ್ಲಾನ್ ಗಳನ್ನು ರಚಿಸುವ ಕೆಲಸವನ್ನು ಶುರು ಮಾಡಿದ್ದಾರೆ.

ಅನಿಲ್ ಪಂಜಾಬಿ, ( ಅಧ್ಯಕ್ಷ, ಟ್ರಾವೆಲ್ ಏಜೆಂಟ್ಸ್ ಫೆಡರೇಷನ್ ಇಂಡಿಯಾ) ರವರು ಈಗಾಗಲೇ ರಷ್ಯನ್ ಅಧಿಕಾರಿಗಳ ಹಾಗೂ ಏಜೆಂಟ್ಸ್ ಗಳ ಜೊತೆಗೆ, ಪ್ರವಾಸಿಗರಿಗೆ ಪ್ರವಾಸದ ಜೊತೆಗೆ ಕೋವಿಡ್ 19 ಲಸಿಕೆಯನ್ನು ಕೊಡುವ ಬಗ್ಗೆ ಮಾತನಾಡಿದ್ದಾರೆ.

ನೀವು ಇದನ್ನು ಇಷ್ಟಪಡಬಹುದು: ವಿದೇಶ ಪ್ರಯಾಣ ಮಾಡುತ್ತಿದ್ದೀರಾ? ನಿಮ್ಮ RT-PCR ವರದಿಯಲ್ಲಿ QR code ಇದ್ಯಾ ಚೆಕ್ ಮಾಡಿ

ಹಾಗೂ ರಷ್ಯಾ ದೇಶದ ಲಸಿಕೆಯು ಬಹಳಷ್ಟು ಪರಿಣಾಮಕಾರಿಯಾಗಿರುವ ಹಿನ್ನೆಲೆಯಲ್ಲಿ ಮೇ 15 ರ ನಂತರ ಅಲ್ಲಿನ ವಾಸಿಗಳು ಮಾಸ್ಕ್ ಅನ್ನು ಹಾಕಲೇಬೇಕಾದ ಅವಶ್ಯಕತೆ ಇಲ್ಲ ಎಂಬುದನ್ನು ಉಲ್ಲೇಖಿಸಿದ್ದಾರೆ.

ಕೋವಿಡ್ ವ್ಯಾಕ್ಸಿನ್ ಟೂರಿಸಂ ಈ ಪ್ಯಾಕೇಜ್ನಲ್ಲಿ ಏನೆಲ್ಲಾ ಸೌಲಭ್ಯ ಇದೆ?

ಸದ್ಯದ ಯೋಜನೆಯ ಪ್ರಕಾರ ಈ ಪ್ಯಾಕೇಜ್ ಭಾರತದಿಂದ ರಷ್ಯಾ ದೇಶಕ್ಕೆ  24 ದಿನಗಳ ಪ್ರವಾಸವಾಗಿದೆ. 20 ದಿನ ಮಾಸ್ಕೋ ಹಾಗೂ 4 ದಿನ ಸೈಂಟ್ ಪೀಟರ್ಸ್ ಬರ್ಗ್ ನ 3 ಸ್ಟಾರ್ ಹೋಟೆಲ್ ಗಳಲ್ಲಿ ವಸತಿ ವ್ಯವಸ್ಥೆ ಇರಲಿದೆ. 

ಈ ಪ್ಯಾಕೇಜ್ ನಲ್ಲಿ ಒಬ್ಬರಿಗೆ ಅಂದಾಜು 2.2-2.4 ಲಕ್ಷ ರೂಪಾಯಿ ವೆಚ್ಚ ಬೀಳಬಹುದು. ಪ್ರವಾಸಿ ತಾಣಗಳ ವೀಕ್ಷಣೆ, ಪ್ರವಾಸದ ಮಾರ್ಗದರ್ಶನ ಹಾಗೂ ಕೋವಿದ್ ಲಸಿಕೆ ಈ ಪ್ಯಾಕೇಜ್ನಲ್ಲಿ ದೊರೆಯಲಿದೆ.

ಪ್ರವಾಸಿಗರಿಗೆ ಕೆಲವು ಸೂಚನೆಗಳು:-

ಈ ಪ್ಯಾಕೇಜ್ ಅನ್ನು ತೆಗೆದುಕೊಳ್ಳುವ ಪ್ರವಾಸಿಗರು ಹೊರಡುವ ಮುನ್ನ RT-PCR ಪರೀಕ್ಷೆಯನ್ನು ಮಾಡಿಸಿರಬೇಕು. ಇದನ್ನು ಹೊರತುಪಡಿಸಿ ರಷ್ಯಾಕ್ಕೆ ಹೋದ ನಂತರ 14 ದಿನದ ಕ್ವಾರಂಟೈನ್ ಇರುವುದಿಲ್ಲ. ಹಾಗೂ 24 ದಿನಗಳ ಅವಧಿಯಲ್ಲೇ ಲಸಿಕೆಯ ಎರಡು ಡೋಸ್ ಅನ್ನು ಕೊಡಲಾಗುವುದು.

ಹೆಸರು, ಉದ್ದೇಶ ಮತ್ತು ಯೋಚನೆ ಎಲ್ಲದರಲ್ಲೂ ವಿಭಿನ್ನವಾಗಿರುವ ಈ ಪ್ಯಾಕೇಜ್ ಪ್ರವಾಸ ಲೋಕದಲ್ಲಿ ಒಂದು ಹೊಸ ಪ್ರಯೋಗವಾಗಿದೆ. ಇದು ಸಧ್ಯದಲ್ಲೇ ಚಾಲ್ತಿಯಾಗಲಿದ್ದು ಇದರ ಫಲಿತಾಂಶವನ್ನು ನೋಡಲು ಹಲವರಿಗೆ ಕುತೂಹಲ ಮೂಡಿಸಿದೆ.

ಇದರ ಜೊತೆಗೆ ಇನ್ನೊಂದು ಆಕರ್ಷಣೆ ಎಂದರೆ ಇನ್ನು ಭಾರತದಲ್ಲೂ ಸ್ಪುಟ್ನಿಕ್ V ಲಸಿಕೆಯನ್ನು ಕೊಡುವ ಸೌಲಭ್ಯ ಬರಲಿದೆ. ಪ್ರವಾಸ ಪ್ರೇಮಿಗಳೇ, ತಡ ಮಾಡದೆ ಆದಷ್ಟು ಬೇಗ ಈ ಪ್ಯಾಕೇಜ್ ಅನ್ನು ತೆಗೆದುಕೊಳ್ಳಿ ಹಾಗೂ ಹೊಸ ಅನುಭವವನ್ನು ಆನಂದಿಸಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button