ವಂಡರ್ ಬಾಕ್ಸ್ವಿಂಗಡಿಸದ

ಒಡಿಶಾ ರಾಜ್ಯದಲ್ಲಿನ ಹೆಚ್ಚೇನೂ ಪ್ರಸಿದ್ಧವಲ್ಲದ ಮೂರು ಜಾಗಗಳಿವು.

ಭಾರತದ ಆಗ್ನೇಯ ತೀರದಲ್ಲಿರುವ ರಾಜ್ಯ ಒಡಿಶಾ. ಮಹಾಭಾರತದ ಕಾಲದಲ್ಲಿ “ಕಳಿಂಗ” ಎಂದು ಪ್ರಖ್ಯಾತವಾದ ಒಡಿಶಾ ವಿಸ್ತೀರ್ಣದಲ್ಲಿ ಭಾರತದ ಒಂಬತ್ತನೆಯ ಅತಿ ದೊಡ್ಡ ರಾಜ್ಯ. ಭಾಷೆ,ನೃತ್ಯ ಕಲೆ ,ವಾಸ್ತುಶಿಲ್ಪ, ಹೀಗೆ ಮುಂತಾದ ವಿಷಯಗಳಲ್ಲಿ ವಿಭಿನ್ನತೆಯನ್ನು ಹೊಂದಿದ್ದು, ಕೆಲವೊಂದು ಪ್ರವಾಸಿತಾಣಗಳನ್ನು ಕೂಡ ಅದರ ಇತಿಹಾಸದ ಜೊತೆ ಹೊತ್ತುಕೊಂಡು ನಿಂತಿದೆ. ಅಂತಹ ಕೆಲ ಸ್ಥಳಗಳನ್ನು ಕುರಿತಾದ ಮಾಹಿತಿ ಇಲ್ಲಿದೆ.

ಮಹಾಲಕ್ಷ್ಮೀ ದೇವಾಡಿಗ

ಒಡಿಶಾ ರಾಜ್ಯದಲ್ಲಿನ ಕೆಲವು ಅನ್ವೇಷಿಸದ ಜಾಗಗಳು

ಪೊಟಗಡ ಕೋಟೆ, ಗಂಜಾಂ

ಪೋತಗಡ ಕೋಟೆಯನ್ನು 247 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಪೊಟಗಡ ಕೋಟೆಯ ನಿರ್ಮಾಣವು ಗಂಜಾಂನ ಮೊದಲ ನಿವಾಸಿಯಾದ ಎಡ್ವರ್ಡ್ ಕಾಸ್ಟ್‌ಫೋರ್ಡ್ ಅಡಿಯಲ್ಲಿ ಆರಂಭವಾಯಿತು. ನಕ್ಷತ್ರಾಕಾರದ ಕೋಟೆಯು ವಿಶಾಲವಾದ ಮತ್ತು ಆಳವಾದ ಕಂದಕದಿಂದ ಆವೃತವಾಗಿದೆ. ಕೋಟೆಯು ಈ ಹಿಂದೆ ಆಡಳಿತಾತ್ಮಕ ಪ್ರಧಾನ ಕಚೇರಿಯಾಗಿತ್ತು.
ಪೋಟಗಡವು ಮುಸ್ಲಿಂ ಮತ್ತು ಫ್ರೆಂಚ್ ಆಡಳಿತಗಾರರ ಇತಿಹಾಸ , ಮನೆಗಳು, ಪ್ರವೇಶ ದ್ವಾರ ಮತ್ತು ಇತರ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Potagade fort

ಚೌಸತ್ ಯೋಗಿನಿ ದೇವಸ್ಥಾನ, ಹಿರಾಪುರ

ಭಾರತೀಯ ಸಂಸತ್ತಿನ ವಿನ್ಯಾಸವನ್ನು ಪ್ರೇರೇಪಿಸಿದ ದೇವಾಲಯಗಳು ಚೌಸತ್ ಯೋಗಿನಿ ಮಂದಿರ ಒಂದು. ಚೌಸತ್ ಯೋಗಿನಿ ದೇವಸ್ಥಾನ, ಭುವನೇಶ್ವರದಿಂದ ಕೇವಲ 20 ಕಿಮೀ ಪೂರ್ವದಲ್ಲಿ ಮಹಾಮಾಯ ಪುಷ್ಕರಿಣಿ ಕೊಳದ ಜೊತೆಗೆ ಭತ್ತದ ಗದ್ದೆಗಳ ನಡುವೆ ಇದೆ. ಹೀರಾಪುರ ಗ್ರಾಮದ ಹತ್ತಿರ ದೇವಸ್ಥಾನವು ವೃತ್ತಾಕಾರದಲ್ಲಿದೆ, ತೆರೆದ ಛಾವಣಿ ಹೊಂದಿದೆ. ಇದನ್ನು ಕ್ರಿಸ್ತಶಕ 9 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ . ತೆರೆದ ಗಾಳಿಯ ರಚನೆಯು ದೇವಾಲಯದ ಒಂದು ವಿಶಿಷ್ಟ. ಯೋಗಿನಿ ದೇವಾಲಯದ ಒಂದು ವಿಶಿಷ್ಟ ಲಕ್ಷಣವೆಂದರೆ ಒಡಿಶಾದ ಇತರ ದೇವಾಲಯಗಳಂತೆ, ಇವುಗಳಲ್ಲಿ ಕೆತ್ತನೆಗಳನ್ನು ಕಾಣುವುದಿಲ್ಲ. ಯೋಗಿನಿಯರು ಸ್ತ್ರೀ ಶಕ್ತಿಯ ಒಂದು ರೂಪ.

ನೀವು ಇದನ್ನು ಇಷ್ಟಪಡಬಹುದು: ಭಾರತದ 5 ಪ್ರಸಿದ್ಧ ತಾಣಗಳಿಗೆ ಪರ್ಯಾಯವಾಗಿ ನೀವು ಈ ಜಾಗಗಳನ್ನು ನೋಡಬಹುದು

Chowsath yogini temple

ಟೆನ್ಸಾ ಹಿಲ್, ಸುಂದರ್‌ಗಡ್

ಟೆನ್ಸಾ ಒಡಿಶಾದ ಸುಂದರ್‌ಗಡ್ ಜಿಲ್ಲೆಯಲ್ಲಿರುವ ಒಂದು ನೈಸರ್ಗಿಕ ಗಿರಿಧಾಮವಾಗಿದೆ. ಸಮುದ್ರ ಮಟ್ಟದಿಂದ 3780 ಮೀಟರ್ ಎತ್ತರದಲ್ಲಿ ನೆಲೆಸಿರುವ ಟೆನ್ಸಾ ದಟ್ಟವಾದ ಅರಣ್ಯ ಮತ್ತು ಪ್ರಕೃತಿಗೆ ಅದ್ಭುತವಾದ ನೋಟವನ್ನು ಒದಗಿಸುತ್ತದೆ. ಭಾರತದ ಅನೇಕ ಪುರಾತನ ಕಥೆಗಳನ್ನು ನೋಡುವ ಶಾಂತಿ ಸ್ತೂಪವು ಒಂದು ಪ್ರಮುಖ ಆಕರ್ಷಣೆಯಾಗಿದೆ. ಪ್ರವಾಸಿ ಆಕರ್ಷಣೆಗಳೆಂದರೆ ಖಂಡಧಾರ್ ಜಲಪಾತ ಮತ್ತು ಒಂದೆರಡು ನೈಸರ್ಗಿಕ ನೀರಿನ ಬುಗ್ಗೆಗಳು. ಟೆನ್ಸಾ ಹೆಚ್ಚಿನ ಎತ್ತರದಲ್ಲಿರುವುದರಿಂದ ಇದು ಅದ್ಭುತವಾದ ನೈಸರ್ಗಿಕ ನೋಟಗಳನ್ನು ನೀಡುತ್ತದೆ, ಅದಕ್ಕಾಗಿಯೇ ಇದು ಜನರನ್ನು ಆಕರ್ಷಿಸುತ್ತದೆ.

ಇದು ಅತಿ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಸ್ಥಳವಾಗಿದೆ. ರೂರ್ಕೆಲಾದಿಂದ ಬಾರ್ಸುವಾನ್‌ಗೆ ಪ್ರತಿದಿನ ಕೇವಲ ಒಂದು ಪ್ಯಾಸೆಂಜರ್ ರೈಲನ್ನು ಒದಗಿಸುತ್ತದೆ. ಬಸ್ ಸೇವೆಗಳು ಪ್ರತಿದಿನವೂ ಲಭ್ಯವಿವೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ 

Related Articles

Leave a Reply

Your email address will not be published. Required fields are marked *

Back to top button