ರಾಮನ ಪ್ರಾಣ ಪ್ರತಿಷ್ಠಾಪನೆಗೆ ಗಗನದಲ್ಲೂ ಸಂಭ್ರಮ
ಅಯೋಧ್ಯೆಯ ರಾಮಮಂದಿರದಲ್ಲಿ (Ram Mandir) ಬಾಲರಾಮನ ಪ್ರಾಣಪ್ರತಿಷ್ಠೆಗೆ (Prana Pratishtha) ದಿನಗಣನೆ ಆರಂಭವಾಗಿದೆ. ಈ ಸಮಯದಲ್ಲಿ ಕೋಟ್ಯಂತರ ಶ್ರೀರಾಮನ ಭಕ್ತರು ದೇಶ ವಿದೇಶಗಳ ನೆಲದಲ್ಲಿ ನಾನಾ ರೀತಿಯಲ್ಲಿ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ.
ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು(Non Resident India)ವಿಶೇಷವಾಗಿ ತಮ್ಮ ಭಕ್ತಿ ಪ್ರದರ್ಶನವನ್ನು ಮಾಡಿದ್ದಾರೆ. 13,000 ಅಡಿ ಎತ್ತರದಿಂದ ರಾಮ ಮಂದಿರದ ಬ್ಯಾನರ್ ಹಿಡಿದು ಸ್ಕೈ ಡೈವಿಂಗ್ ಮಾಡುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ.ನಮೋ ಸ್ಕೈಡೈವರ್ಸ್ (Namo Sky Drivers)ಎಂಬ ನಾಲ್ವರ ತಂಡ ಈ ಸಾಹಸ ಮಾಡಿದ್ದಾರೆ.
ನೀವು ಇದನ್ನು ಇಷ್ಟ ಪಡಬಹುದು:ಅಯೋಧ್ಯೆಗೆ ಕನ್ನಡಿಗ ಕೆತ್ತಿದ ವಿಗ್ರಹ ಆಯ್ಕೆ. ವಿಶೇಷತೆಗಳೇನು ಗೊತ್ತಾ..?
ವಿಜಯಪುರದ ರಾಮನ ಪರಮ ಭಕ್ತರಾದ ಉದ್ಯಮಿ ರಾಜಶೇಖರ ಮುತ್ತಿನಪೆಂಡಿಮಠ ಜೊತೆ ಇವರ ಸ್ನೇಹಿತರಾದ ಬೆಂಗಳೂರಿನ (Bangalore )ರಾಹುಲ್ ಡಾಕ್ರೆ, ಅನುಭವ ಅಗರವಾಲ್ ಹಾಗೂ ಮಹಾರಾಷ್ಟ್ರದ (Maharashtra)ಹಿಮಾನಶೂ ಸಾಬಳೆ ಸಾಥ್ ನೀಡಿದ್ದಾರೆ.ನಮೋ ಸ್ಕೈ ಡೈವರ್ಸ್ ರಾಮನ ಭಕ್ತರ ಹೆಸರಿನಲ್ಲಿ ಗುಂಪು ರಚಿಸಿಕೊಂಡ ನಾಲ್ಕು ಜನ ಯುವಕರು ವಿಭಿನ್ನವಾಗಿ ಭಕ್ತಿ ಸಮರ್ಪಣೆ ಮಾಡಿದ್ದಾರೆ. ಬ್ಯಾಂಕಾಕ್ ಗೆ ತೆರಳಿರುವ ವಿಜಯಪುರದ (Vijayapur )ಉದ್ಯಮಿ ರಾಜಶೇಖರ ಮುತ್ತಿನಪೆಂಡಿಮಠ ನೇತ್ರತ್ವದಲ್ಲಿ ತಂಡ ಈ ರೀತಿ ರಾಮಭಕ್ತಿಯ ಜೊತೆಗೆ ಅಭಿಮಾನ ಮೆರೆದಿದ್ದಾರೆ.
ಕೈಯ್ಯಲ್ಲಿ ಜೈ ಶ್ರೀರಾಮ (Jai shree ram)ಎಂದು ಬರೆದಿರುವ ಮತ್ತು ರಾಮ ಮಂದಿರದ ಫೋಟೋ ಇರುವ ಬ್ಯಾನರ್ ಹಿಡಿದು ಸ್ಕೈ ಡೈವಿಂಗ್ (Sky Diving)ಮೂಲಕ 13 ಸಾವಿರ ಅಡಿಯ ಮೇಲಿನಿಂದ ಜೈ ಶ್ರೀ ರಾಮ್ ಎಂದು ಧುಮುಕಿದ್ದಾರೆ. ಬ್ಯಾಂಕಾಕಿನ ಖೋಯಾಯ್ ಎಂಬ ಪ್ರದೇಶದಿಂದ ಸ್ಕೈ ಡೈವಿಂಗ್ ಮಾಡಿದ್ದಾರೆ. ರಾಮ ಮಂದಿರ ಫೋಟೊ, ಮೋದಿ ಭಾವಚಿತ್ರ ಹಾಗೂ ಜೈ ಶ್ರೀ ರಾಮ ಎಂದು ಬರೆದಿರುವ ಫಲಕ ಹಿಡಿದು ಇವರು ಸ್ಕೈ ಡೈವಿಂಗ್ ಮಾಡಿದ್ದಾರೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.