ಕಾಡಿನ ಕತೆಗಳುವಿಂಗಡಿಸದ

ಪಶ್ಚಿಮ ಘಟ್ಟ ಪ್ರದೇಶದಲ್ಲಿ 33 ವರ್ಷಗಳ ನಂತರ ಕಂಡು ಬಂದ ಹೊಸ ಚಿಟ್ಟೆಯ ಪ್ರಭೇದ

ತಮಿಳುನಾಡಿನ ಶ್ರೀವಿಲ್ಲಿಪುತ್ತೂರ್ ಮೇಗಮಲೈ ಹುಲಿ ಸಂರಕ್ಷಿತ ಪ್ರದೇಶದ (Srivilliputhur Megamalai Tiger Reserve) ಮೇಗಮಲೈ ವಿಭಾಗದಲ್ಲಿ ಜನವರಿ 13 ರಂದು, ಹೊಸ ಬೆಳ್ಳಿ ರೇಖೆಯ ಚಿಟ್ಟೆಯನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ.

ಇದು 33 ವರ್ಷಗಳ ನಂತರ ಪಶ್ಚಿಮ ಘಟ್ಟಗಳಲ್ಲಿ ಕಂಡು ಬಂದ ಮೊದಲ ಚಿಟ್ಟೆ ಜಾತಿಯ ಆವಿಷ್ಕಾರವಾಗಿದೆ. ಈ ಹೊಸ ಪ್ರಭೇದಕ್ಕೆ ‘ಸಿಗರಿಟಿಸ್ ಮೇಘಮಲೈಯೆನ್ಸಿಸ್’ (Cigaritis meghamalaiensis) ಎಂಬ ಹೆಸರಿಡಲಾಗಿದೆ. ಇದು ಮೇಘಮಲೈ ಪ್ರದೇಶದ ಹೆಸರನ್ನೇ ಸೂಚಿಸುತ್ತದೆ.

Cigaritis meghamalaiensis – New species of butterfly

IAS ಅಧಿಕಾರಿ ಸುಪ್ರಿಯಾ ಸಾಹು ಅವರು X ಖಾತೆಯಲ್ಲಿ ಈ ಅಪರೂಪದ ಚಿಟ್ಟೆ ಜಾತಿಯ ಚಿತ್ರವನ್ನು ಹಂಚಿಕೊಂಡಿದ್ದು. 33 ವರ್ಷಗಳ ನಂತರ ಪಶ್ಚಿಮ ಘಟ್ಟಗಳಲ್ಲಿ ಹೊಸ ಜಾತಿಯ ಚಿಟ್ಟೆಯನ್ನು ಕಂಡುಹಿಡಿಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತೇಣಿ ಮೂಲದ ವನಂ ಎಂಬ ಎನ್‌ಜಿಒಗೆ ಸೇರಿದಡಾ. ಕಾಲೇಶ್ ಸದಾಶಿವಂ, ತಿರುರು ರಾಮಸಾಮಿ ಕಾಮಯ್ಯ ಮತ್ತು ಡಾ.ಸಿ.ಪಿ.ರಾಜ್‌ಕುಮಾರ್ ಅವರು ಈ ಪ್ರಭೇದವನ್ನು ಕಂಡು ಹಿಡಿದಿದ್ದಾರೆ.

ಈ ಆವಿಷ್ಕಾರದಿಂದಾಗಿ, 40 ಸ್ಥಳೀಯ ಪಶ್ಚಿಮ ಘಟ್ಟಗಳ ಚಿಟ್ಟೆ ಪ್ರಭೇದಗಳನ್ನು ಸೇರಿ, ಒಟ್ಟು ಚಿಟ್ಟೆ ಪ್ರಭೇದಗಳ ಸಂಖ್ಯೆಯು 337 ಕ್ಕೆ ಏರಿದೆ ಎಂದು ಅವರು ಹೇಳಿದ್ದಾರೆ.

Megamalai Forest

ಭಾನುವಾರ ದಿ ಹಿಂದೂ ಜೊತೆ ಮಾತನಾಡಿದ ವನಂ ನ ಸಂಶೋಧಕರಾದ ಡಾ. ಸಿ.ಪಿ. ರಾಜಕುಮಾರ ಅವರು, ಈ ಜಾತಿಯ ಸಾಮಾನ್ಯ ಹೆಸರು ‘ಕ್ಲೌಡ್-ಫಾರೆಸ್ಟ್ ಸಿಲ್ವರ್‌ಲೈನ್’. ENTOMON ನಿಯತಕಾಲಿಕದ ಪ್ರಸ್ತುತ ಸಂಚಿಕೆಯಲ್ಲಿ ಈ ಜಾತಿಗಳ ಕುರಿತು ವಿವರಿಸಲಾಗಿದೆ ಎಂದು ಅವರು ಹೇಳಿದರು.

ವಯಸ್ಕ ಚಿಟ್ಟೆಯ ಮುಂಭಾಗದ ರೆಕ್ಕೆಯ ಕೆಳಭಾಗದಲ್ಲಿರುವ ಡಿಸ್ಕಲ್ ಹಾಗೂ ನಂತರದ ಡಿಸ್ಕಲ್ ಬ್ಯಾಂಡ್‌ಗಳು ಸಂಯೋಜಿತವಾಗಿದ್ದು,ಕೋಸ್ಟಾದಲ್ಲಿ ಅವುಗಳ ಮೂಲದಿಂದ ಸಮಾನಾಂತರವಾಗಿದೆ.

ಭಾರತ ಮತ್ತು ಶ್ರೀಲಂಕಾದಲ್ಲಿ ಕಂಡುಬರುವ ಎಲ್ಲಾ ಸಿಗರಿಟಿಸ್‌ಗಳಿಂದ (Cigaritis) ಈ ಹೊಸ ಪ್ರಭೇದಗಳು ಭಿನ್ನವಾಗಿದೆ ಎಂದು ಪ್ರಮುಖ ಸಂಶೋಧಕರಾದ ಕಾಲೇಶ್ ಸದಾಶಿವನ್ ಅವರು ವಿವರಿಸಿದರು.

Megamalai Forest

IAS ಅಧಿಕಾರಿ ಸುಪ್ರಿಯಾ ಸಾಹು ಅವರು X ಖಾತೆಯಲ್ಲಿ ಈ ವಿಶಿಷ್ಟ ಚಿಟ್ಟೆಯನ್ನು ಹಂಚಿಕೊಂಡಾಗಿನಿಂದ ಜನರಿಂದ ಉತ್ತಮ ಪ್ರತಿಕ್ರಿಯೆ ಹೊರ ಬರುತ್ತಿದ್ದು, ಹಲವಾರು ಲೈಕ್ ಗಳು ಮತ್ತು ರೀಟ್ವೀಟ್‌ಗಳನ್ನು ಈ ಫೋಟೋ ಪಡೆದುಕೊಂಡಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button