Moreವಿಂಗಡಿಸದ

ಯುರೋಪ್ ಪ್ರವಾಸವನ್ನು ಯೋಜಿಸುತ್ತಿದ್ದೀರಾ? ನಿಮ್ಮ ಷೆಂಗೆನ್ ವೀಸಾ ಹೆಚ್ಚು ವೆಚ್ಚ ನೀಡಲಿದೆ.

ಷೆಂಗೆನ್ ವೀಸಾ ಮೂಲ ವೆಚ್ಚದಲ್ಲಿ ಮುಂಬರುವ ಏರಿಕೆಯಿಂದಾಗಿ, ಷೆಂಗೆನ್ ಪ್ರದೇಶಕ್ಕೆ ಭೇಟಿ ನೀಡಲು ಯೋಜಿಸುವ ಪ್ರಯಾಣಿಕರು ಪ್ರಯಾಣ ವೆಚ್ಚದಲ್ಲಿ ಗಣನೀಯ ಹೆಚ್ಚಳವನ್ನು ಎದುರಿಸಬೇಕಾಗುತ್ತದೆ.

ಇತ್ತೀಚಿನ ವರದಿಗಳ ಪ್ರಕಾರ, ಯುರೋಪಿಯನ್ ಕಮಿಷನ್ (European Commission) 2024 ರಲ್ಲಿ ಷೆಂಗೆನ್ ವೀಸಾಗಳಿಗೆ ಮೂಲ ಶುಲ್ಕವನ್ನು ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಇದರಿಂದಾಗಿ ಯುರೋಪ್ ಪ್ರವಾಸ ದುಬಾರಿಯಾಗಲಿದೆ.

ಪ್ರತಿ ಮೂರು ವರ್ಷಗಳಿಗೊಮ್ಮೆ ಷೆಂಗೆನ್ ವೀಸಾ ಶುಲ್ಕವನ್ನು ಪರಿಷ್ಕರಿಸುವ ಘಟಕವು ರೀಡ್‌ಮಿಷನ್‌ನಲ್ಲಿ ಸಾಕಷ್ಟು ಸಹಕಾರವನ್ನು ಪ್ರದರ್ಶಿಸುವ ದೇಶಗಳಿಗೆ ಶುಲ್ಕದಲ್ಲಿ ಹೆಚ್ಚಳವನ್ನು ಮಾಡುತ್ತದೆ.

ಇದು ಷೆಂಗೆನ್ ಸದಸ್ಯ ರಾಷ್ಟ್ರಗಳಿಂದ ಹೊರಹಾಕಲ್ಪಟ್ಟ ವ್ಯಕ್ತಿಗಳ ಮರು-ಪ್ರವೇಶವನ್ನು ಸ್ವೀಕರಿಸುವ ರಾಷ್ಟ್ರಗಳನ್ನು ಒಳಗೊಂಡಿರುತ್ತದೆ. ಇದು ಕೆಲವು ಪ್ರಯಾಣಿಕರಿಗೆ ಹೆಚ್ಚುವರಿ ಆರ್ಥಿಕ ಹೊರೆಯನ್ನು ಏರಿಸುತ್ತದೆ.

“ಷೆಂಗೆನ್ ವೀಸಾ” (Schengen Visa) 27 ಯುರೋಪಿಯನ್ ರಾಷ್ಟ್ರಗಳನ್ನು ಒಳಗೊಂಡಿರುವ “ಷೆಂಗೆನ್ ಪ್ರದೇಶದೊಳಗೆ ಮುಕ್ತವಾಗಿ ಪ್ರವೇಶಿಸಲು ಮತ್ತು ಪ್ರಯಾಣಿಸಲು ಅನುಮತಿಸುವ ಒಂದು ಪರವಾನಿಯಾಗಿದೆ.

ಪ್ರವಾಸೋದ್ಯಮ ಅಥವಾ ವ್ಯಾಪಾರ ಉದ್ದೇಶದಿಂದ 180 ದಿನಗಳ ಅವಧಿಯಲ್ಲಿ 90 ದಿನಗಳ ಅಲ್ಪಾವಧಿ ಕಾಲ ಉಳಿಯಲು ಇದು ಅನುವು ಮಾಡಿಕೊಡುತ್ತದೆ.

ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಭಾರತ, ಚೀನಾ ಸೇರಿದಂತೆ ಯುರೋಪಿಯನ್ ಯೂನಿಯನ್ ಅಲ್ಲದ ಸದಸ್ಯ ರಾಷ್ಟ್ರಗಳ ನಾಗರಿಕರಿಗೆ ಷೆಂಗೆನ್ ವೀಸಾಗಳನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ.

ಬ್ರಿಟನ್, ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಆಸ್ಟ್ರೇಲಿಯಾದ ನಾಗರಿಕರಿಗೆ ಷೆಂಗೆನ್ ವೀಸಾ ಅವಶ್ಯಕತೆಗಳಿಂದ ವಿನಾಯಿತಿ ನೀಡಲಾಗಿದೆ.

ಪ್ರಸ್ತುತ ಯೋಜನೆಯು ಅನುಮೋದನೆಗೊಂಡರೆ, ಷೆಂಗೆನ್ ವೀಸಾವನ್ನು ಪಡೆಯುವ ವೆಚ್ಚವು 12.5% ​​ರಷ್ಟು ಹೆಚ್ಚಾಗುತ್ತದೆ.ಇದು ವಯಸ್ಕ ಮತ್ತು ಮಕ್ಕಳ ಶುಲ್ಕಗಳ ಮೇಲೆ ಪರಿಣಾಮ ಬೀರಲಿದೆ.

ಪ್ರಸ್ತುತ ವಯಸ್ಕರಿಗೆ € 80 ಮತ್ತು ಮಕ್ಕಳಿಗೆ € 40 ಇದ್ದು, ಮುಂದೆ ಇದು ವಯಸ್ಕರಿಗೆ € 90 ಮತ್ತು ಮಕ್ಕಳಿಗೆ € 45 ಆಗಲಿದೆ.ದೇಶಗಳು ನಾಗರಿಕರ ಮರುಪಾವತಿಗೆ ಸಹಕರಿಸಲು ವಿಫಲವಾದ ಸಂದರ್ಭಗಳಲ್ಲಿ, ಮಕ್ಕಳ ವೀಸಾ ಶುಲ್ಕವನ್ನು €120 ರಿಂದ €135 ಕ್ಕೆ ಏರಿಸಲು ಮತ್ತು ವಯಸ್ಕರಿಗೆ €160 ರಿಂದ €180 ಕ್ಕೆ ಏರುತ್ತದೆ.

ಯುರೋಪಿಯನ್ ಕಮಿಷನ್ ಫೆಬ್ರವರಿ 2 ರಂದು ಪರಿಷ್ಕೃತ ಷೆಂಗೆನ್ ವೀಸಾ ಶುಲ್ಕದ ಕರಡನ್ನು ಪ್ರಸ್ತುತಪಡಿಸಿತು. ಪ್ರಸ್ತಾವನೆಯು ಮಾರ್ಚ್ 1 ರವರೆಗೆ ಸಮಾಲೋಚನೆಗೆ ಮುಕ್ತವಾಗಿದೆ.

ಈ ಆಯೋಗವು ಇದನ್ನು ಅಳವಡಿಸಿಕೊಳ್ಳಬಹುದು ಮತ್ತು ಯುರೋಪಿಯನ್ ಒಕ್ಕೂಟದ ಅಧಿಕೃತ ಜರ್ನಲ್ ಅಲ್ಲಿ ಪ್ರಕಟಣೆಗೊಂಡ 20 ದಿನಗಳ ನಂತರ ಜಾರಿಗೆ ಬರುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button