ವಿಂಗಡಿಸದಸಂಸ್ಕೃತಿ, ಪರಂಪರೆ

ಪುತ್ತೂರಿನಲ್ಲಿದೆ 800 ವರ್ಷಗಳ ಇತಿಹಾಸವಿರುವ ಪುರಾತನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯ

ಪುತ್ತೂರು ಸೀಮೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರನ ದೇವಸ್ಥಾನ ಸುಮಾರು 800ವರ್ಷಗಳ ಇತಿಹಾಸವಿರುವ ಪುರಾತನ ದೇವಾಲಯ. ಈ ದೇವಾಲಯದ ಕಲಾತ್ಮಕ ಕೆತ್ತನೆಗಳನ್ನು ವರ್ಣಿಸಲು ಪದಗಳಿಗೆ ನಿಲುಕದ್ದು. ಈ ದೇವಸ್ಥಾನದ ಆಚರಣೆಗಳು, ಸಂಪ್ರದಾಯಗಳು ಕೂಡ ವಿಶಿಷ್ಟ . ಈ ಕುರಿತಾದ ಒಂದು ಬರಹ ಇಲ್ಲಿದೆ.

ಅಕರ್ಷ ಆರಿಗ

ದಿನ ಬೆಳಗಾದರೆ ಭಕ್ತರು ಭಕ್ತಿಯಿಂದ ನೆನೆಯುವ ಪುತ್ತೂರು ಸೀಮೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರನ ದೇವಸ್ಥಾನಕ್ಕೆ 800 ವರ್ಷಗಳ ಇತಿಹಾಸ ಹಾಗೂ ಪೌರಾಣಿಕ ಹಿನ್ನೆಲೆ ಇದೆ. ದೇಗುಲದ ಕಲಾತ್ಮಕ ಕೆತ್ತನೆಗಳೂ ಅವರ್ಣನೀಯ. ನಂಬಿಕೆಯ ಶಕ್ತಿ ಅಮೋಘ. ಮಹಾಲಿಂಗೇಶ್ವರನ್ನು ಭಕ್ತಿಪೂರ್ವಕ ಪೂಜಿಸಿ ಬಂದಿರುವ ಭಕ್ತರೆಲ್ಲರೂ ಒಳಿತಿನ ಜತೆಗೆ ಅಭಿವೃದ್ಧಿ ಕಂಡಿದ್ದಾರೆ. 
ಪುತ್ತೂರು ಮಹಾಲಿಂಗೇಶ್ವರ ಕೇವಲ ಪುತ್ತೂರಿಗೆ ಮಾತ್ರವಲ್ಲ ಹತ್ತೂರಿಗೂ ಒಡೆಯ. ‌ಕಾಶಿಯನ್ನು ಬಿಟ್ಟರೆ ದೇವಾಲಯದ ಎದುರು ಸ್ಮಶಾನ ಇರುವ ಮತ್ತೊಂದು ದೇವಾಲಯವೆಂದರೆ ಅದು ಪುತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರ. ಪುತ್ತೂರಿನ ಜನರ ದೈನಂದಿನ ದಿನಚರಿ ಮಹಾಲಿಂಗೇಶ್ವರನ ನಾಮ ಸ್ಮರಣೆಯಿಲ್ಲದೆ ಪ್ರಾರಂಭವಾಗುವುದಿಲ್ಲ. ಪುತ್ತೂರಿನ ಜನರು ಜಗತ್ತಿನಲ್ಲಿ ಎಲ್ಲೇ ಇರಲಿ, ಅವರ ಮನೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಭಾವಚಿತ್ರಕ್ಕೆ ನಿತ್ಯ ಪೂಜೆ ಸಲ್ಲುತ್ತದೆ. 

putturu  Mahalingeshwara temple


ಮತ್ತೊಂದು ವಿಶೇಷತೆ ದೇವಾಲಯ ಹಿಂಭಾಗದಲ್ಲಿರುವ ಸದಾ ಹಸಿರಿನಿಂದ ಕಂಗೊಳಿಸುವ ಕೆರೆ. ದೇವಾಲಯದ ಪಶ್ಚಿಮಕ್ಕೆ ಇರುವ ಕೆರೆಯಲ್ಲಿ ಅದರ ಆಳ ಎಷ್ಟೇ ಆದರೂ ನೀರು ಸಿಗದೇ ಇದ್ದ ಸಮಯದಲ್ಲಿ, ವರುಣ ದೇವರಿಗೆ ಪೂಜೆ ಸಲ್ಲಿಸಿ ಕೆರೆಯೊಳಗೆ ಬ್ರಾಹ್ಮಣರಿಗೆ ಅನ್ನಸಂತರ್ಪಣೆ ಮಾಡಬೇಕು ಎಂದು ತಿಳಿದುಬಂತು. ಅದರಂತೆ ಸಾವಿರಾರು ಜನರಿಗೆ ಕೆರೆಯ ತಳದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಯಿತು. ಬ್ರಾಹ್ಮಣರು ಊಟ ಮಾಡುತ್ತಿದ್ದಂತೆ ಕೆರೆಯಲ್ಲಿ ನೀರು ತುಂಬತೊಡಗಿತಂತೆ.‌ ಸೇರಿದ ಜನರು ಊಟದ ಎಲೆಯನ್ನು ಹಾಗೆಯೇ ಬಿಟ್ಟು ಎದ್ದು ಹೊರಗೆ ಓಡಿದರಂತೆ. ಅವರ ಎಲೆಯಲ್ಲಿದ್ದ ಅನ್ನದ ಅಗುಳುಗಳು ಮುತ್ತುಗಳಾಗಿ ಬೆಳೆದವು ಎಂದೂ, ಮುತ್ತುಗಳು ಬೆಳೆದ ಊರು ಮುತ್ತೂರು ಎಂದಾಗಿ, ಕ್ರಮೇಣ ಜನರ ಬಾಯಲ್ಲಿ ಪುತ್ತೂರು ಎಂದಾಯಿತೆಂದು ಇಲ್ಲಿನ ಜನರು ಹೇಳುತ್ತಾರೆ.ಈ ಕ್ಷೇತ್ರದ ಮತ್ತೊಂದು ವಿಶೇಷತೆ ಮಹಾಲಿಂಗೇಶ್ವರನ ಎದುರು ಇರುವ ಮೂರುವರೆ ಕಾಲಿನ ನಂದಿ.‌ ಇದರ ಉಳಿದ ಅರ್ಧ ಕಾಲು ಕಲ್ಲಿನ ರೂಪದಲ್ಲಿ ಗದ್ದೆಯಲ್ಲಿದೆ.

Putturu

ಹಿಂದೆ ಶಿವನ ವಾಹನವಾದ ನಂದಿ, ಕ್ಷೇತ್ರದ ಗದ್ದೆಯಲ್ಲಿ ಬೆಳೆಯುತ್ತಿದ್ದ ಭತ್ತ ಪೈರುಗಳನ್ನು ರಾತ್ರಿ ವೇಳೆ ತಿನ್ನುತ್ತಿತ್ತು. ಇದರಿಂದಾಗಿ ಪೈರು ನಷ್ಟವಾಗಲು ಹೇಗಾದರೂ ಮಾಡಿ ನಂದಿಯನ್ನು ಹಿಡಿಯಬೇಕು ಎಂದು ಜನರು ನಿರ್ಧರಿಸಿದರಂತೆ. ಒಂದು ರಾತ್ರಿ ನಂದಿ ಪೈರು ತಿನ್ನುತ್ತಿರಲು ಜನರು ಅದರ ಕಾಲನ್ನು ಕಡಿದು ಬಿಟ್ಟರಂತೆ. ರಕ್ತದ ಮಡುವಲ್ಲಿ ನಂದಿ ಮಹಾಲಿಂಗೇಶ್ವರ ನ ಬಳಿ ಬಂದು ಮೊರೆ ಇಡಲು, ಮಹಾದೇವ ಆ ನಂದಿಗೆ ಕಲ್ಲಿನ ರೂಪ ಕೊಟ್ಟು ತನ್ನ ಬಳಿ ಇರಿಸಿಕೊಂಡ ಎಂಬ ಪ್ರತೀತಿ ಇಲ್ಲಿದೆ. 
ಪ್ರತಿ ವರ್ಷ ಏಪ್ರಿಲ್ 1 ರಂದು ಗೊನೆ ಕಡಿದು ಏಪ್ರಿಲ್ 10ರಂದು ಸಾಂಪ್ರದಾಯಿಕ ಧ್ವಜಾರೋಹಣ ನಡೆಯುವುದರೊಂದಿಗೆ ಪ್ರಾರಂಭವಾಗುವ ಪುತ್ತೂರು ಜಾತ್ರೆಯು 9 ದಿನಗಳ ಕಾಲ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಇಲ್ಲಿನ ಭಕ್ತವೃಂದ‌ ಜಾತ್ರೆಯ ಹತ್ತು ದಿನಗಳ ಕಾಲ ವೃತವನ್ನು ಪಾಲಿಸುತ್ತಾ ಮಹಾಲಿಂಗೇಶ್ವರನ ನಾಮವನ್ನು ಸ್ತುತಿಸುತ್ತಾರೆ. 

Shiva statue


ಪುತ್ತೂರು ಮಹಾಲಿಂಗೇಶ್ವರ ದೇಗುಲದ ಮತ್ತೊಂದು ವಿಶೇಷತೆಯೆಂದರೆ ಆನೆಗಳು ದೇವಾಲಯದ ಆವರಣಕ್ಕೆ ಎಂದಿಗೂ ಪ್ರವೇಶ ಪಡೆಯಲು ಅವಕಾಶವಿಲ್ಲ.. ಇದರ ಹಿಂದೆಯೂ ಸ್ವಾರಸ್ಯಕರ ಕಥೆಯೊಂದಿದೆ. ಒಮ್ಮೆ ಕಳ್ಳನೊಬ್ಬ ದೇವಾಲಯ ಪ್ರವೇಶಿಸಿ ಪ್ರಮುಖ ವಿಗ್ರಹವನ್ನು ಕದ್ದು ಪಾರಾಗಲೂ ಸಾಧ್ಯವಾಗದೇ ಕೊಳದೊಳಗೆ ಈ ವಿಗ್ರಹವನ್ನು ಎಸೆದಿದ್ದ. ಕೊಳದ ಆಳಕ್ಕೆ ಬಿದ್ದಿದ್ದ ಆ ವಿಗ್ರಹವನ್ನು ಮೇಲೆತ್ತಲು ಆನೆಯೊಂದನ್ನು ತರಲಾಯಿತು. ಹಗ್ಗವೊಂದನ್ನು ವಿಗ್ರಹಕ್ಕೆ ಕಟ್ಟಿ ಎಳೆಯಲಾಯಿತು. ಆದರೆ ಆನೆಯು ಮಹಾಲಿಂಗೇಶ್ವರ ವಿಗ್ರಹವನ್ನು ಗಟ್ಟಿಯಾಗಿ ಎಳೆದದ್ದು ಮಹಾಲಿಂಗೇಶ್ವರನಿಗೆ ಕೋಪ ತರಿಸಿತು. ನಂತರ ಆನೆಯು ಈ ದೇವಾಲಯಕ್ಕೆ ಶಾಪಗ್ರಸ್ತವಾಗಿದ್ದು, ಯಾವುದೇ ಆನೆ ದೇಗುಲದ ಆವರಣಕ್ಕೆ ಪ್ರವೇಶಿಸಬಾರದು ಮತ್ತು ಪ್ರವೇಶಿಸಿದರೆ ಆನೆ ಸಾವನ್ನಪುತ್ತದೆ ಎನ್ನುವುದು ಇಲ್ಲಿನ ನಂಬಿಕೆ.

ಎಲ್ಲಿದೆ? 
ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಪಟ್ಟಣ. ಇದು ಪುತ್ತೂರು ತಾಲೂಕಿನ ಪ್ರಧಾನ ಕೇಂದ್ರ. ಈ ನಗರ ಮಂಗಳೂರಿನಿಂದ ೫೨ ಕಿ.ಮೀ. ದೂರದಲ್ಲಿದೆ. ಮೈಸೂರು-ಮಂಗಳೂರು ಹೆದ್ದಾರಿಯ ನಡುವಿನ ಕರಾವಳಿ ಮತ್ತು ಪಶ್ಚಿಮ ಘಟ್ಟದ ಗುಡ್ಡಬೆಟ್ಟಗಳ ನಡುವಿದೆ. 

Mangalore

ಪುತ್ತೂರು ಮುತ್ತು 
ಒಂದು ಸಿದ್ಧಾಂತದ ಪ್ರಕಾರ, ಪುತ್ತೂರು ಹೆಸರು ಕನ್ನಡ ಭಾಷೆಯ “ಮುತ್ತು” ಮುತ್ತೂರು ಎಂದಾಗಿತ್ತು ಮತ್ತು ನಂತರ ನಿಧಾನವಾಗಿ ಇದು ತಾನಾಗಿಯೇ ಪುತ್ತೂರು ಎಂಬ ಹೆಸರಾಗಿ ಪ್ರಚಲಿತಕ್ಕೆ ಬಂದಿದೆ.ಶತಮಾನಗಳ ಹಿಂದೆ ಬರದ ಸಮಯದಲ್ಲಿ ಆರ್ಚಕರಿಗೆ ಮಹಾಲಿಂಗೇಶ್ವರ ದೇಗುಲದ ಪವಿತ್ರ ಕೊಳದಲ್ಲಿ ಅಕ್ಕಿಯು ಪ್ರಸಾದ ರೂಪದಲ್ಲಿ ದೊರಕಿತ್ತು ಮತ್ತು ಇದಕ್ಕಿದ್ದಂತೆ ಎಲ್ಲಾ ಮೂಲೆಯಿಂದ ನೀರು ಬರಲು ಆರಂಭಿಸಿ ಈ ಅಕ್ಕಿ ಮುತ್ತಾಗಿ ಪರಿವರ್ತನೆಯಾಯಿತು ಎಂಬ ನಂಬಿಕೆ ಇಲ್ಲಿದೆ.

ಕೆರೆಯಲ್ಲಿ ಮುತ್ತು 
ಎಷ್ಟು ತೋಡಿದರೂ ಕೆರೆಯಲ್ಲಿ ಜಲವು ಬಾರದೇ ಇದ್ದುದರಿಂದ ಪ್ರಾಜರಾದ ಬ್ರಾಹ್ಮಣರಿಂದ ಉಪದೇಶಿಸಲ್ಪಟ್ಟ ಪ್ರಕಾರ ಆ ಕೆರೆಯ ಸ್ಥಳದಲ್ಲಿ ವರುಣ ಯಾಗವನ್ನು ಮಾಡಿಸಿ ಸಹಸ್ರ ಜನರಿಗೆ ಬ್ರಹ್ಮ ಸಂತರ್ಪಣೆಯನ್ನು ಶಾಸ್ತ್ರ ಪ್ರಕಾರ ಮಾಡಿಸಿದನು. ಭೋಜನಾಂತ್ಯ ಸಮಯ ಸಂತುಷ್ಟರಾದ ಈ ಬ್ರಾಹ್ಮಣರೂ ಈಶ್ವರ ಸ್ತೋತ್ರ ಮಾಡುತ್ತಿರುವ ವೇಳೆಯಲ್ಲಿ ಯೆಥೆಚ್ಚವಾಗಿ ನೀರಿನ ವರತೆಗಳು ಕೆರೆಯಲ್ಲಿ ಉದ್ಭವಿಸಿತು. ಅಲ್ಲದೆ ಮಳೆಯೂ ಸುರಿಯಿತ್ತು . ನೀರಿನ ಹರಿವಿನಿಂದ ಜನರು ಕೆರೆಯ ಟಾಲಾ ಭಾಗದಿಂದ ಮೇಲೆ ಓಡಿ ಬರಬೇಕಾಯಿತು. 

ನೀವು ಇದನ್ನು ಇಷ್ಟ ಪಡಬಹುದು: ಜಾಬಾಲಿ ಮಹರ್ಷಿಯ ತಪಸ್ಸಿನ ತಾಣ ನೆಲ್ಲಿತೀರ್ಥ ಗುಹಾಲಯ

Temple wall


ಬ್ರಾಹ್ಮಣ ಸಂತರ್ಪಣೆಯ ಉಚ್ಚಿಷ್ಠದ ಅನ್ನ ಪಾತ್ರಾದಿಗಳು ಕೆರೆಯಿಂದ ತೆಗೆಯಲಿಕ್ಕಾಗದೆ ಅಲ್ಲೇ ಉಳಿಯಿತು. ಕೆಲ ಸಮಯದ ಬಳಿಕ ನೋಡುವಾಗ ಆ ಕೆರೆಯಲ್ಲಿ ಮುತ್ತಿನ ಚಿಪ್ಪುಗಳು ಮತ್ತು ಬಿರಿದ ಚಿಪ್ಪುಗಳು ತುಂಬಿಕೊಂಡಿದ್ದವು. ಇದು ಅನ್ನ ಸಂತರ್ಪಣೆಯ ಅನ್ನದ ಕಾಳುಗಳೆ ಮುತ್ತಾಗಿ ಎಲೆಗಲೆ ಚಿಪ್ಪುಗಳಾದುವೆಂದು ಇದರಿಂದಾಗಿ ಮುತ್ತು ಹುಟ್ಟಿದ ಊರು ಮುತ್ತೂರು ನಂತರ ಪುತ್ತೂರು ಎಂಬ ಹೆಸರು ಬಂತು.

ಯಾರು ಈ ನಟ್ಟೋಜರು ? 
ನಟ್ಟೋಜಿ ಅಂದರೆ ನಟ್ಟವನು ಪ್ರತಿಷ್ಠಿಸಿದವನು ಅಥವಾ ಸ್ಥಾನವನ್ನು ಕೊಟ್ಟವನು ಮೂಲ ಪುರುಷನು ಎಂಬ  ಅರ್ಥವಿದೆ ಅನಾದಿಯಲ್ಲಿ ಈ ನಟ್ಟೋಜಿ ಮನೆತನವು ಪೊಳಲಿ ಹತ್ತಿರ ಇರುವ ಚೇರ ಎಂಬಲ್ಲಿತ್ತು. ಈ ನಟ್ಟೋಜಿ ಮನೆತನದ ಮೂಲ ದೇವರು ರಾಜರಾಜೇಶ್ವರಿ ಅಮ್ಮನವರು. ಅವರ ಕುಟುಂಬದವರೇ ಪೊಳಲಿ ದೇವಾಲಯದಲ್ಲಿ ದೇವಿಯನ್ನು ಪೂಜಿಸಲು ಬಂದವರಿಗೆಲ್ಲಾ ದಾನ ಧರ್ಮ ಮಾಡುತ್ತಾ ಬಹಳ ಹೆಸರನ್ನು ಗಳಿಸಿದವರಾಗಿದ್ದರು. 

Festival


ದೇವಿಯ ಮುನಿಸು 
ದೇವಿಯ ಆರಾಧನೆಯಲ್ಲಿ ಈ ಮನೆತನದ ನಾಲ್ಕು ಮಂದಿನಟ್ಟೋಜರು ತೊಡಗಿಕೊಂಡಿದ್ದು, ಒಮ್ಮೆ ಇವರ ಮೇಲೆಯಾವುದೊ ಕಾರಣಕ್ಕೆ ಮುನಿಸು ಗೊಂಡ ದೇವಿಯು ನಾಲ್ಕುಜನರಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದ ಮೂರು ಜನ ನಟ್ಟೋಜಿ ಮನೆತನದವರು ಇಲ್ಲಿ ಇರಬಾರದೆಂದು ಪ್ರತ್ಯಕ್ಷ ಳಾಗಿ ಕಟ್ಟಪ್ಪಣೆ ಮಾಡಿದ್ದೂ, ಹೀಗಾಗಿ ಹಿರಿಯ ನಟ್ಟೋಜ ನನ್ನು ಅಲ್ಲಿಯೇ ಬಿಟ್ಟು ಉಳಿದ ಮೂರು ಮಂದಿ ನಟ್ಟೋಜರು ದೇವಿಗೆ ನಮಸ್ಕರಿಸಿ ದೇವಸ್ಥಾನದ ತೆಂಕು ಬಾಗಿಲಿನಿಂದ ದೇವಿಯ ಅಪ್ಪಣೆ ಮೇರೆಗೆ ಹೊರಬಂದು ದೇಶ ಸಂಚಾರ ಕೈಗೊಂಡರೆಂದು ತಿಳಿದುಬರುತ್ತದೆ.

ಪುತ್ತೂರಿನ ಜಾತ್ರೆಯ ಸಂಪ್ರದಾಯಗಳು 
ಪ್ರತಿ ವರ್ಷ ವಿಷು ಸಂಕ್ರಮಣದ ಸಂದರ್ಭದಲ್ಲಿ ಇಲ್ಲಿ ಉತ್ಸವ ಮೆರವಣಿಗೆಗಳು ನಡೆದು ಬಳಿಕ ಮಹಾ ರಥೋತ್ಸವ  ಜರಗುತ್ತದೆ. ನಂತರ ಪುತ್ತೂರಿನಿಂದ 9 ಮೈಲು ದೂರದಲ್ಲಿರುವ ಕುಮಾರಧಾರಾ ನದಿಗೆ ವೈಭವದಿಂದ ಶ್ರೀ ದಅವರು ಅವಕೃತ ಸ್ನಾನಕ್ಕಾಗಿ ಸಾಗುತ್ತಾರೆ. ಅಲ್ಲಿಯ ತನ್ನ ವೀರ ಕಂಕಣಗಳನ್ನು ವಿಸರ್ಜಿಸಿ ಮಂಗಲ ಸ್ನಾನ ಮಾಡುವ ಕ್ರಮವಿದೆ. ಇದರಿಂದಲೆ ಆ ಸ್ಥಳಕ್ಕೆ ವೀರಮಂಗಿಲವೆಂಬ ಹೆಸರಾಯಿತು. 


ಶ್ರೀ ಮಹಾಲಿಂಗೇಶ್ವರನು ಅಲ್ಲಿ ಮಂಗಳ ಸ್ನಾನ ಮದಿ ಶ್ರಮ ಪರಿಹರಿಸಿಕೊಂಡು ಮನಃ ಶಾಂತಿಯನ್ನು ಹೊಂದಿಕೊಂಡಿ ದುದರಿಂದ ಅಲ್ಲಿಗೆ ಶಾಂತಿಗೋಡು ಗ್ರಾಮ ಎಂಬ ಹೆಸರು ಬಂತು . ಅವಭತ ಸ್ನಾನ ಮುಗಿಸಿ ಅಲ್ಲಿಂದ ಉತ್ಸವದ ಸವಾರಿಯು ದೇವಾಲಯಕ್ಕೆ ಚಿತೈಷಿ ಧ್ವಜ ಅವರೋಹಣವಾಗುವುದು, ಮರುದಿನ ಧರ್ಮಾಧಿಕಾರಿಗಳೂ, ಭಜಕರಿಗೂ ಆಭಯಪ್ರದವಾದ ಮಂತ್ರಾಕ್ಷತೆಗಳು ಸಿಕ್ಕುವ ಶುಭ ದಿನವಾಗಿದೆ.

ಕಾಲಾಂತರದಲ್ಲಿ ದೈವಚಿತ್ರ ಪ್ರಕಾರ ಬಲ್ಲಾಳರಾಯನ ವಂಶವು ಕ್ಷೀಣವಾಗುತ್ತಾ ರಾಜನ ಸಮಸ್ಯೆಗಳು ಉಂಟಾಗಿ ರಾಜ ಕುಟುಂಬವು ಆ ಸ್ಥಳವನ್ನೇ ಬಿಟ್ಟು ಬೇರೆ ಗ್ರಾಮಗಳಿಗೆ ಹೋಗಬೇಕಾಗಿ ಬಂತು. ಆಮೇಲೆ ದೇವರ ಕಾರ್ಯ ಭಾಗದ ಸಮಸ್ತ ಅಧಿಕಾರಿಗಳೂ ನಟ್ಟೋಜಿ ವಂಶಸ್ಥರಲ್ಲಿ ನೆಲೆಗೊಂಡು ಆ ವಂಶದ ಪರಂಪರೆಯಲ್ಲಿ ಧರ್ಮಾಧಿಕಾರದಲ್ಲಿ ದೇವಸ್ಥಾನವು ಜೀರ್ಣೋದ್ಧಾರ ಮೀನ ಮಾಸದಲ್ಲಿ ದೇವಳದ ಬ್ರಹ್ಮಕಲಶ ಮಾಡಲ್ಪಟ್ಟಿತು.

Temple view

ಬಳಿಕ ದೇವಳದ ಉಪದೇವರಾಗಿರುವ ಬಾಡು ದೈವಗಳ ಸ್ಥಾನದ ನಿರ್ಮಾಣ, ಬಟ್ಟೆ ಶ್ರೀ ವಿನಾಯಕ ದೇವಸ್ಥಾನವೂ ಜೀರ್ಣೋದ್ಧಾರ ಮಾಡಲ್ಪಟ್ಟು ಬ್ರಹ್ಮಕಲಶವೂ ನಡೆಸಲಾಯಿತು.ಶ್ರೀ ಕೃಷ್ಣಯ್ಯನವರ ನಂತರ ನಟ್ಟೋಜಿ ಶಿವರಾಯರು 1916ರ ವರೆಗೆ ಇಲ್ಲಿನ ಆಡಳಿತವನ್ನು ನಡೆಸಿ ಕೊಂಡುಬಂದರು, ಆಮೇಲೆ ದೇವಳದ ಪೂಜಾದಿಗಳು ಆಡಳಿತವೂ ನಟ್ಟೋಜ ಕುಟುಂಬದ ಕೈ ತಪ್ಪಿತು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ,

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button