ಕಾರು ಟೂರುವಿಂಗಡಿಸದಸೂಪರ್ ಗ್ಯಾಂಗು

ಬೈಕರ್ಸ್ ಗಳ ಸ್ವರ್ಗ ಗಜಕೇಸರಿ ಬೆಟ್ಟ ಖ್ಯಾತಿಯ ಹೊಸಹಳ್ಳಿ ಗುಡ್ಡ

ಬೈಕರ್ಸ್ ಗಳ ಸ್ವರ್ಗ ಹೊಸಹಳ್ಳಿ ಗುಡ್ಡ. ಸಕಲೇಶಪುರದಿಂದ 35ಕಿಮೀ ದೂರದಲ್ಲಿದೆ. ಹಸಿರು ಹಾಸಿದಂತೆ ಇರುವ ಖಾಲಿ ಪ್ರದೇಶ ,ಅಲ್ಲಿಂದ ಅರಂಭವಾಗುವ ಕಾಲ್ನಡಿಗೆಯ ಪಯಣ. ಮಳೆಯನ್ನು ಇಷ್ಟಪಡುವವರಿಗೆ ಅದ್ಭುತ ತಾಣ ಈ ಬೆಟ್ಟ . ಗಜಕೇಸರಿ ಬೆಟ್ಟ ಎಂದು ಕೂಡ ಕರೆಯುತ್ತಾರೆ ಈ ಹೊಸಹಳ್ಳಿ ಗುಡ್ಡಕ್ಕೆ.

ಸಿಂಧೂ ಪ್ರದೀಪ್

ಬೈಕರ್ಸ್ ಗಳ ಸ್ವರ್ಗ ಈ ಹೊಸಹಳ್ಳಿ ಗುಡ್ಡ . ಗಜಕೇಸರಿ ಬೆಟ್ಟ ಎಂದೂ ಕೂಡ ಕರೆಯುತ್ತಾರೆ. ಗಜಕೇಸರಿ ಸಿನೆಮಾ ಇದೇ ಸ್ಥಳದಲ್ಲಿ ಕೆಲವು ತಿಂಗಳುಗಳ ಕಾಲ ಚಿತ್ರೀಕರಣ ನಡೆಸಿದ್ದರಿಂದ ಈ ಹೆಸರು ಬಂದಿದೆ..

Gajakesari hills

ಬೆಂಗಳೂರಿನಿಂದ ಸುಮಾರು 253 ಕಿ ಮೀ ದೂರದಲ್ಲಿರುವ ಈ ಸ್ಥಳ ಸಮುದ್ರ ಮಟ್ಟಕ್ಕಿಂತ 2500 ಅಡಿ ಎತ್ತರದಲ್ಲಿದೆ. ಸಕಲೇಶಪುರ ದಿಂದ 35 ಕಿ ಮೀ ಇರುವ ಈ ಸ್ಥಳವನ್ನು ನಿಮ್ಮ ಖಾಸಗಿ ವಾಹನಗಳಲ್ಲಿ ತಲುಪಬಹುದು, ಕೆಲವು ದೂರ ಒಳ್ಳೆಯ ರಸ್ತೆಯಲ್ಲಿ ಪ್ರಯಾಣ ಬೆಳೆಸಿದ ನಂತರ ಆಫ್ ರೋಡ್ ಶುರುವಾಗುತ್ತದೆ.

ಈಗಿನ ಯುವಪೀಳಿಗೆಗಳಿಗೆ ಈ ಆಫ್ ರೋಡಿಂಗ್ ಎಂದರೆ ಎಲ್ಲಿಲ್ಲದ ಉತ್ಸಾಹ, ನಡೆಯಲೂ ಕಷ್ಟಕರವಾದ ರಸ್ತೆಗಳಲ್ಲಿ ತಮ್ಮ ಕಾರು ಅಥವಾ ಬೈಕ್ ಅನ್ನು ನುಗ್ಗಿಸುವುದು ಒಂಥರ ಹೆಮ್ಮೆ ಎಂದು ಹೇಳಬಹುದು..

Trekking

ಹೀಗೆ ಈ ಗುಂಡಿಗಳೆಲ್ಲ ದಾಟಿ ಸ್ವಲ್ಪ ಮುಂದೆ ಸಾಗಿದರೆ ಹಸಿರು ಹಾಸಿದಂತೆ ಇರುವ ಖಾಲಿ ಪ್ರದೇಶ ಗೋಚರವಾಗುತ್ತದೆ ಇಲ್ಲಿಂದಲೇ ನಿಮ್ಮ ಕಾಲ್ನಡಿಗೆ ಶುರುವಾಗುವುದು, ಕಾರು ಇದ್ದರೆ ಇಲ್ಲಿ ನಿಲ್ಲಿಸಿ ಮುಂದಕ್ಕೆ ಸುಮಾರು 2 ಕಿ ಮೀ ನಡೆದರೆ ಸಾಕು ಬೆಟ್ಟ ತಲುಪಬಹುದು, ಬೈಕ್ ಹಾಗೂ ಜೀಪ್ ಇದ್ದರೆ ಬೆಟ್ಟದ ತುತ್ತ ತುದಿಯ ವರೆಗೂ ಅದರಲ್ಲಿಯೇ ತಲುಪಬಹುದು.

Tourist

ಮಳೆಯನ್ನು ಇಷ್ಟಪಡುವ ನನ್ನಂತವರಿಗೆ ಇದೊಂದು ಅದ್ಭುತ ಸ್ಥಳ, ಮಳೆಗಾಲ ಮುಗಿದೊಡನೆ ಎಲ್ಲೆಲ್ಲೂ ಹಸಿರಿನ ಹೊದಿಕೆಯಿಂದ ತುಂಬಿದ ಬೆಟ್ಟವನ್ನು ನೋಡುವುದು ಇನ್ನೊಂದು ಥರ ಆಕರ್ಷಕ..ಇನ್ನು ಚಳಿಗಾಲದಲ್ಲಿ ಮಂಜಿನಿಂದ ಆವೃತವಾದ ಈ ಬೆಟ್ಟದ ಚಳಿ ಗಾಳಿ ಅನುಭವಿಸುವುದೇ ರೋಮಾಂಚಕ..

ನೀವು ಇದನ್ನು ಇಷ್ಟ ಪಡಬಹುದು:ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜೇನುಕಲ್ಲು ಗುಡ್ಡ

ಕಾಲ್ನಡಿಗೆಯಲ್ಲಿ ಕೆಲವು ದೂರ ಕ್ರಮಿಸಿದರೆ ಸುತ್ತಲೂ ಹಸಿರು ಪಶ್ಚಿಮ ಘಟ್ಟಗಳ ಸಾಲು, ದೂರಕ್ಕೆ ಕಾಣುವ ಬಿಸಲೇ ಅರಣ್ಯ ಪ್ರದೇಶ, ಇಲ್ಲೇ ಕುಳಿತುಬಿಡಬೇಕೆನ್ನುವಷ್ಟು ಅದ್ಭುತ ಈ ಸ್ಥಳ.. ಇನಲ್ಲಿಂದ ಸುಮಾರು 5 ಕಿ ಮೀ ದೂರದಲ್ಲಿರುವ ಮೂಕನಮನೆ ಜಲಪಾತಕ್ಕೂ ಭೇಟಿ ನೀಡಬಹುದು.

Greenery

ಬೆಟ್ಟದ ತುದಿಯಲ್ಲಿ ರಂಗನಾಥ ದೇವಾಲಯವಿದೆ ವರ್ಷಕೊಮ್ಮೆ ಸ್ಥಳೀಯರೆಲ್ಲರೂ ಸೇರಿ ಜಾತ್ರೆ ಉತ್ಸವ ನಡೆಸುವುದು ಇಲ್ಲಿನ ವಾಡಿಕೆ.ಬೇಸರದ ವಿಷಯವೇನೆಂದರೆ ಈ ರೀತಿಯ ಸ್ಥಳಗಳು ಯುವಪೀಳಿಗೆಗಳ ಅತಿರೇಕದ ವರ್ತನೆಗಳಿಂದ ನಶಿಸಿಹೋಗುವ ಹಂತದಲ್ಲಿದೆ.. ಎಲ್ಲೆಂದರಲ್ಲಿ ಬೈಕ್ ಹತ್ತಿಸಿ ತಮ್ಮ ಸಾಹಸ ತೋರಿಸಿ ಹಸಿರು ಹುಲ್ಲುಗಾವಲನ್ನು ಹಾಳು ಮಾಡುತ್ತಿದ್ದಾರೆ, ಸ್ಥಳೀಯರೆ ಹೇಳುವ ಪ್ರಕಾರ ವಾರಾಂತ್ಯ ಬಂದರೆ ಸಾಕು ವಾಹನಗಳ ಸಾಲು ಜೊತೆಗೆ ಎಲ್ಲೆಂದರಲ್ಲಿ ಎಸೆದು ಹೋಗುವ ಪ್ಲಾಸ್ಟಿಕ್ ಕವರ್ ಗಳು ಬಿಯರ್ ಬಾಟಲ್ ಗಳು ಸಿಗುತ್ತವೆ.

Hosahalli hills

.ಸ್ಥಳೀಯರು ದೇವರೆಂದು ಪೂಜಿಸುವ ಕಂಬಗದ ಮೇಲೆ ಪಾದರಕ್ಷೆಯನ್ನು ತೊಟ್ಟು ನಿಂತು ಅವರ ಭಕ್ತಿಗೂ ಕೂಡ ಅನಾಚಾರ ಎಸಗುತ್ತಿದ್ದಾರೆ.ಇದು ಹೀಗೆ ಮುಂದುವರಿದರೆ ಈ ಅದ್ಭುತ ಸ್ಥಳವೂ ಒಂದು ದಿನ ನಶಿಸಿಹೋಗುವ ಹಂತ ತಲುಪುವುದರಲ್ಲಿ ಆಶ್ಚರ್ಯವಿಲ್ಲ.

ಗಮನದಲ್ಲಿಡಬೇಕಾದ ವಿಷಯಗಳು

ಜೂನ್ – ಡಿಸೆಂಬರ್ ತಿಂಗಳುಗಳ ನಡುವೆ ಭೇಟಿ ನೀಡಿ.

ಸುತ್ತಮುತ್ತಲೂ ಯಾವುದೇ ಅಂಗಡಿ/ಹೋಟೆಲ್ ಇಲ್ಲ.

ಸ್ಥಳೀಯರಿಗೆ ಹಾಗೂ ಅವರ ಭಾವನೆಗಳಿಗೆ ಗೌರವ ಕೊಡಿ

ದಯವಿಟ್ಟು ಪ್ಲಾಸ್ಟಿಕ್ ಬಳಸಬೇಡಿ,

ಎಲ್ಲೆಂದರಲ್ಲಿ ಕಸವನ್ನು ಎಸೆಯಬೇಡಿ.

ಜವಾಬ್ದಾರಿಯುತ ಪ್ರವಾಸಿಗರಾಗಿ ನಡೆದುಕೊಳ್ಳಿ

Information

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ,

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button