ಮ್ಯಾಜಿಕ್ ತಾಣಗಳುವಿಂಗಡಿಸದಸಂಸ್ಕೃತಿ, ಪರಂಪರೆ

ಮುರುಡೇಶ್ವರದಲ್ಲಿದೆ ಜಗತ್ತಿನ ಎರಡನೇ ಅತೀ ಎತ್ತರದ ಶಿವನ ಮೂರ್ತಿ

ಮುರುಡೇಶ್ವರ ಕರ್ನಾಟಕದ ಪ್ರಸಿದ್ಧ ಶಿವನ ದೇವಾಲಯಗಳಲ್ಲಿ ಒಂದು. ಜಗತ್ತಿನ ಎರಡನೇ ಅತೀ ಎತ್ತರದ ಶಿವನ ಪ್ರತಿಮೆ ಇಲ್ಲಿದೆ. ಸದಾ ಪ್ರವಾಸಿಗರನ್ನು ಆಕರ್ಷಿಸುವ ಈ ದೇವಾಲಯ ಕರ್ನಾಟಕದ ಹೆಮ್ಮೆ. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪ್ರಸಿದ್ದ ಶಿವನ ದೇವಾಲಯದ ಕುರಿತಾದ ಬರಹವಿದು.

# ಮಹಾ ಶಿವರಾತ್ರಿ ವಿಶೇಷ

ನವ್ಯಶ್ರೀ ಶೆಟ್ಟಿ

ಮುರುಡೇಶ್ವರ ಸದಾ ಪ್ರವಾಸಿಗರಿಂದ ತುಂಬಿ ತುಳುಕುವ ಜಾಗ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನಲ್ಲಿ ಮುರುಡೇಶ್ವರ ಕ್ಷೇತ್ರವಿದೆ. ಎತ್ತರದ ಶಿವನ ಮೂರ್ತಿ,ದೇವಾಲಯ ಮನಸ್ಸಿಗೆ ಶಾಂತಿ ನೀಡಿದರೆ ಪಕ್ಕದ ಬೀಚ್ ನಿಮ್ಮ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ನೇಪಾಳದ ಕೈಲಾಸನಾಥ ಮಹಾದೇವ ಪ್ರತಿಮೆ ಜಗತ್ತಿನ ಅತಿ ಎತ್ತರದ ಶಿವ ಪ್ರತಿಮೆ. ಈ ಪಟ್ಟಿಯಲ್ಲಿ ಮುರುಡೇಶ್ವರ ಶಿವನ ಪ್ರತಿಮೆಗೆ ಎರಡನೇ ಸ್ಥಾನ. ಇದು ಸರಿ ಸುಮಾರು 123 ಅಡಿ ಎತ್ತರವನ್ನು ಹೊಂದಿದೆ.

Murudeshwara

ಈ ಶಿವನ ದೇವಾಲಯದ ರಾಜ ಗೋಪುರ ಇಲ್ಲಿನ ಇನ್ನೊಂದು ಆಕರ್ಷಣೆ. ರಾಜ ಗೋಪುರ 20 ಮಹಡಿಗಳನ್ನು ಹೊಂದಿದೆ. ಭಕ್ತರು ಲಿಫ್ಟ್ ಮೂಲಕ ಗೋಪುರದ ಮೇಲ್ಭಾಗ ತಲುಪಬಹುದು. ಕೊನೆಯ ಮಹಡಿಯಲ್ಲಿ ನಿಂತು ನೋಡಿದರೆ ಮುರುಡೇಶ್ವರದ ಸಂಪೂರ್ಣ ಚಿತ್ರಣ ನೀವೂ ನೀಡಬಹುದು.ಈ ದೇವಾಲಯಕ್ಕೂ ಒಂದು ಐತಿಹ್ಯ ಕಥೆಯಿದೆ. ಗಣೇಶನು ಬ್ರಾಹ್ಮಣ ಹುಡುಗನ ಅವತಾರದಲ್ಲಿದ್ದಾಗ ರಾವಣನ ಬೇಡಿಕೆಯಂತೆ ಆತ್ಮಲಿಂಗವನ್ನು ಕೆಳಗಿಟ್ಟ ಜಾಗವಿದು.

ನೀವು ಇದನ್ನು ಇಷ್ಟ ಪಡಬಹುದು:ದೂರದ ಮುರುಡೇಶ್ವರಕ್ಕೆ ನನ್ನ ಮೊದಲ ರೈಲು ಪ್ರಯಾಣ

Shiva

ಈ ದೇವಾಲಯ ಇರುವುದು ಕಂಡುಕಾ ಬೆಟ್ಟದ ಮೇಲೆ. ಇದೊಂದು ಪರ್ಯಾಯ ದ್ವೀಪ . ಈ ಬೆಟ್ಟದ ಮೂರು ದಿಕ್ಕಿನಿಂದ ಅರಬ್ಬೀ ಸಮುದ್ರ ಆವರಿಸಿದೆ. ಮುರುಡೇಶ್ವರದ ರಚನೆ ರಾಮಯಣ ಕಾಲವನ್ನು ನೆನಪಿಸುತ್ತದೆ. ದೇವಾಲಯದ ಗುಹೆಗಳಲ್ಲಿ ರಾಮಾಯಣ ದೃಶ್ಯವನ್ನು ಗೋಡೆಗಳ ಮೇಲಿನ ಚಿತ್ರಗಳಲ್ಲಿ ನಾವು ನೋಡಬಹುದು. ಶಿವನ ದೈತ್ಯ ಪ್ರತಿಮೆ ಅನಾವರಣ ನಿರ್ಮಿಸಲು ಅಂದಾಜು 2 ವರ್ಷಗಳಷ್ಟು ಅವಧಿ ಬೇಕಾಗಿತ್ತು.

Rajagopura

ಶಿವನ ಪ್ರತಿಮೆ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಬೀಳುವುದರಿಂದ ಸದಾ ಹೊಳೆಯುತ್ತಿರುತ್ತದೆ ಶಿವನ ಪ್ರತಿಮೆ. ಹೆಚ್ಚಾಗಿ ಇಲ್ಲಿಗೆ ಪ್ರವಾಸಿಗರು ರೈಲಿನ ಮೂಲಕ ಆಗಮಿಸುತ್ತಾರೆ. ದೇವಸ್ಥಾನದ ಅನತಿ ದೂರದಲ್ಲಿಯೇ ರೈಲ್ವೆ ಸ್ಟೇಷನ್ ಇದೆ . ಹೆದ್ದಾರಿಯ ಹತ್ತಿರದಲ್ಲಿ ಮುರುಡೇಶ್ವರ ದೇವಾಲಯ ಇರುವುದು ವಾಹನಗಳ ಸಮಸ್ಯೆಯಿಲ್ಲ. ನೀವು ಇಲ್ಲಿ ತನಕ ಮುರುಡೇಶ್ವರ ಶಿವನ ದೇವಾಲಯ ನೋಡಿಲ್ಲವಾದರೆ ಒಮ್ಮೆ ಭೇಟಿ ನೀಡಿ . ಚೆಂದದ ಶಿವನ ಮೂರ್ತಿ ಕಣ್ತುಂಬಿಕೊಳ್ಳಿ.

Shiva temple

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button