Moreವಿಂಗಡಿಸದ

ಭಾರತೀಯರು ಅತಿ ಹೆಚ್ಚು ಭೇಟಿ ನೀಡಲು ಬಯಸುವ ತಾಣ ಯಾವುದು ಗೊತ್ತಾ? ಇಲ್ಲಿದೆ ಟಾಪ್ 15 ಲಿಸ್ಟ್

ಇತ್ತೀಚಿಗೆ ಕೋವಿಡ್-19 ನಂತರ ಜನರು ಪ್ರಯಾಣವನ್ನು ತುಸು ಹೆಚ್ಚಾಗಿ ಇಷ್ಟ ಪಡಲು ಶುರು ಮಾಡಿದ್ದಾರೆ. ಭಾರತೀಯರು ತಮ್ಮ ಸ್ಥಳೀಯ ತಾಣಗಳಿಗೆ ಮಾತ್ರವಲ್ಲ ವಿದೇಶಗಳಿಗೂ ಪ್ರಯಾಣ ಯೋಜಿಸಲು ಆರಂಭಿಸಿದ್ದಾರೆ.

ಈ ನಡುವೆ UK ಮೂಲದ ಟಿಕೆಟ್ ಬುಕಿಂಗ್ ವೇದಿಕೆ Wowtickets.com ಸಮೀಕ್ಷೆಯೊಂದರ ಫಲಿತಾಂಶವನ್ನು ಬಿಡುಗಡೆ ಮಾಡಿದ್ದು, ಇದು ಭಾರತೀಯರು ಅತಿ ಹೆಚ್ಚು ಭೇಟಿ ನೀಡಲು ಬಯಸುವ ತಾಣಗಳ (Favorite travel destinations) ಮಾಹಿತಿ ನೀಡಿದೆ.

ಈ ಸಮೀಕ್ಷೆಯ ಪ್ರಕಾರ,ಬೆಂಗಳೂರು, ಹೈದರಾಬಾದ್ ಮತ್ತು ಕೋಲ್ಕತ್ತಾದ ಜೊತೆಗೆ ದೆಹಲಿ ಮತ್ತು ಮುಂಬೈ ವಿಶ್ವದ ಟಾಪ್ 50 ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಸ್ಥಾನ ಪಡೆದಿದೆ.

“ಗೋವಾ” (Goa) ಅತಿ ಹೆಚ್ಚು ಭೇಟಿ ನೀಡಿದ ತಾಣಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದರ ನಂತರ ಶ್ರೀನಗರ (Srinagar) ಸ್ಥಾನ ಪಡೆದಿದೆ. ಇವುಗಳಲ್ಲದೇ, ಪುಣೆ, ಪಾಟ್ನಾದಂತಹ ನಗರಗಳಿಗೂ ಜನರು ಹೆಚ್ಚಾಗಿ ಭೇಟಿ ನೀಡುತ್ತಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಇವುಗಳಲ್ಲಿ ಇತ್ತೀಚಿಗೆ ವಾರಾಣಾಸಿಗೂ (Varanasi) ಜನರು ಭೇಟಿ ನೀಡಲು ಬಯಸುತ್ತಿದ್ದು, ಭಾರತದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮ ಪ್ರವೃತ್ತಿಯು ಬೆಳೆಯುತ್ತಿರುವುದನ್ನು ಕಾಣಬಹುದು.

ಸಮೀಕ್ಷೆಯ ಪ್ರಕಾರ, ಟಾಪ್ 15 ಅತಿ ಹೆಚ್ಚು ಹುಡುಕಲಾದ ತಾಣಗಳ ಪಟ್ಟಿ ಇಲ್ಲಿದೆ: (Top 15 Most Searched Travel Destinations)

ಗೋವಾ, ದೆಹಲಿ, ಮುಂಬೈ, ಬೆಂಗಳೂರು, ಶ್ರೀನಗರ, ಪುಣೆ, ಪಾಟ್ನಾ, ಕೋಲ್ಕತ್ತಾ, ಲೇಹ್, ಚೆನ್ನೈ, ಅಹಮದಾಬಾದ್, ಲಕ್ನೋ, ವಾರಣಾಸಿ, ಗುವಾಹಟಿ, ಬಾಗ್ದೋಗ್ರಾ.

ಒಟ್ಟು 3.6 ಕೋಟಿಗಳು ಬಾರಿ ಜನರು ಈ ತಾಣಗಳ ಕುರಿತು ಹುಡುಕಾಟ ನಡೆಸಿದ್ದಾರೆ.

ಸಮೀಕ್ಷೆಯಲ್ಲಿ, ನಗರವಾರು ಪ್ರಯಾಣಿಕರು ಪ್ರವಾಸ ಮಾಡಲು ಬಯಸುವ ತಾಣಗಳ ಪಟ್ಟಿಯನ್ನು ಸಹ ಬಿಡುಗಡೆಯಾಗಿದೆ. ಅವುಗಳ ಮಾಹಿತಿ ಇಲ್ಲಿದೆ.

ಮುಂಬೈ (Mumbai) ಪ್ರಯಾಣಿಕರು ಪ್ರವಾಸ ಮಾಡಲು ಬಯಸುವ ಟಾಪ್ 15 ತಾಣಗಳು:

ಗೋವಾ, ದೆಹಲಿ, ಬೆಂಗಳೂರು, ಶ್ರೀನಗರ, ಚೆನ್ನೈ, ಚಂಡೀಗಢ, ಕೋಲ್ಕತ್ತಾ, ಜೈಪುರ, ಲಕ್ನೋ, ವಾರಣಾಸಿ, ಕೊಚ್ಚಿ, ಅಹಮದಾಬಾದ್, ಡೆಹ್ರಾ ಡನ್, ಪಾಟ್ನಾ ಮತ್ತು ಹೈದರಾಬಾದ್.

ದೆಹಲಿ (Delhi) ಜನರು ಪ್ರಯಾಣ ಮಾಡಲು ಬಯಸುವ ಟಾಪ್ 15 ತಾಣಗಳು:

ಗೋವಾ, ಮುಂಬೈ, ಬೆಂಗಳೂರು, ಶ್ರೀನಗರ, ಪುಣೆ, ಪಾಟ್ನಾ, ಕೋಲ್ಕತ್ತಾ, ಲೇಹ್, ಹೈದರಾಬಾದ್, ಅಹಮದಾಬಾದ್, ಚೆನ್ನೈ, ಗುವಾಹಟಿ, ಬಾಗ್ದೋಗ್ರಾ, ಕೊಚ್ಚಿ, ಭುವನೇಶ್ವರ.

ಬೆಂಗಳೂರಿನ (Bengaluru) ಪ್ರವಾಸಿಗರು ಪ್ರಯಾಣಿಸಲು ಬಯಸುವ ಟಾಪ್ 15 ತಾಣಗಳು:

ದೆಹಲಿ, ಮುಂಬೈ, ಗೋವಾ, ಕೋಲ್ಕತ್ತಾ, ಪುಣೆ, ಲಕ್ನೋ, ಪಾಟ್ನಾ, ಅಹಮದಾಬಾದ್, ರಾಂಚಿ, ಹೈದರಾಬಾದ್, ಜೈಪುರ, ಕೊಚ್ಚಿ, ಭುವನೇಶ್ವರ, ಬಾಗ್ದೋಗ್ರಾ, ಗುವಾಹಟಿ.

ಚೆನ್ನೈ (Chennai) ಪ್ರಯಾಣಿಕರು ದೇಶದಾದ್ಯಂತ ಪ್ರವಾಸ ಮಾಡಲು ಹುಡುಕಿರುವ ಟಾಪ್ 15 ತಾಣಗಳು:

ದೆಹಲಿ, ಮುಂಬೈ, ಬೆಂಗಳೂರು, ಪೋರ್ಟ್, ಬ್ಲೇರ್, ಗೋವಾ, ಕೋಲ್ಕತ್ತಾ, ಹೈದರಾಬಾದ್, ಅಹಮದಾಬಾದ್, ಕೊಯಮತ್ತೂರು, ಪುಣೆ, ಕೊಚ್ಚಿ, ಗುವಾಹಟಿ, ಮಧುರೈ, ಪಾಟ್ನಾ, ಶ್ರೀನಗರ.

ಕೋಲ್ಕತ್ತಾ (Kolkata) ಪ್ರಯಾಣಿಕರು ಹುಡುಕಿರುವ ಟಾಪ್ 15 ತಾಣಗಳು:

ದೆಹಲಿ, ಬೆಂಗಳೂರು, ಮುಂಬೈ, ಪುಣೆ, ಗುವಾಹಟಿ, ಬಾಗ್ಡೋಗ್ರಾ, ಪೋರ್ಟ್‌ಬ್ಲೇರ್, ಗೋವಾ, ಹೈದರಾಬಾದ್, ಚೆನ್ನೈ, ಶ್ರೀನಗರ, ಅಹಮದಾಬಾದ್, ಅಗರ್ತಲಾ, ಜೈಪುರ, ಭುವನೇಶ್ವರ

Wowtickets.com ನ ನಿರ್ದೇಶಕ ಮತ್ತು ಸಿಇಒ ಡಿಮಿಟ್ರಿಜಸ್ ಕೊನೊವಾಲೋವಾಸ್ ಅವರ ಪ್ರಕಾರ “2023 ರ ವೇಳೆಗೆ ಜಾಗತಿಕ ಪ್ರವಾಸೋದ್ಯಮ ಮಾರುಕಟ್ಟೆಯು $16.9 ಟ್ರಿಲಿಯನ್ ಮೌಲ್ಯವನ್ನು ತಲುಪಲಿದೆ ಎಂದು ಮುನ್ಸೂಚನೆಗಳು ಸೂಚಿಸುತ್ತವೆ, ಈ ನಿಟ್ಟಿನಲ್ಲಿ ಭಾರತದ ಪ್ರವಾಸೋದ್ಯಮ ಕ್ಷೇತ್ರವು ಗಣನೀಯ ಕೊಡುಗೆಯನ್ನು ನೀಡುತ್ತಿದೆ.” ಎಂದಿದ್ದಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button