ದೂರ ತೀರ ಯಾನಮೋಟಾರ್ ಸೈಕಲ್ ಡೈರಿವಂಡರ್ ಬಾಕ್ಸ್ವಿಂಗಡಿಸದ

ಮಹಿಳೆಯರ ಒಂಟಿ ಪ್ರವಾಸಕ್ಕೆ ಸುರಕ್ಷಿತ ಈ ದೇಶಗಳು

ಹೆಣ್ಣು ಮಕ್ಕಳಿಗೂ ಪ್ರವಾಸ ಮಾಡುವ ಆಸೆಯಿರುತ್ತದೆ. ಆದ್ರೆ ಹಲವು ಕಾರಣಗಳಿಗೆ ಅದು ಮರೀಚಿಕೆಯಾಗಿಯೇ ಉಳಿದಿರುತ್ತದೆ. ಹೆಣ್ಣು ಮಕ್ಕಳ ಪ್ರವಾಸಕ್ಕೆ ಅಡೆತಡೆಯಿರುವ ಕಾರಣಗಳಲ್ಲಿ ಮೊಟ್ಟ ಮೊದಲ ಮತ್ತು ಪ್ರಮುಖವಾದ ಕಾರಣವಂದ್ರೆ ಆಕೆಯ ಸೇಫ್ಟಿ ಪ್ರಶ್ನೆ.

ಹೌದು ಹೆಣ್ಣುಮಕ್ಕಳಿಗೆ ಪ್ರವಾಸವನ್ನು ಮಾಡುವ ಸಂದರ್ಭದಲ್ಲಿ ಆಕೆ ಸುರಕ್ಷಿತ ಆಗಿರ್ತಾಳಾ ಅನ್ನೋ ಬಗ್ಗೆ ಆಕೆಯ ಆಪ್ತರೂ ಸ್ವತಃ ಅವಳಲ್ಲಿಯೂ ಮೂಡುವುದು ಸಹಜ, ಅದರಲ್ಲೂ ಒಂಟಿ ಪಯಣ ಅದರಲ್ಲೂ ಹೊರ ದೇಶ ಪ್ರವಾಸ ಅಂದ್ರೆ ಆ ಭಯ ತುಸು ಹೆಚ್ಚೇ ಜಾಸ್ತಿ.

ಆದ್ರೆ ಅಂತಹವರಿಗಾಗಿ ಇವತ್ತಿನ ಲೇಖನದಲ್ಲಿ ನಾವು ಮಹಿಳೆಯರ ಒಂಟಿ ಪ್ರವಾಸಕ್ಕೆ ಅತಿ ಸುರಕ್ಷಿತ ಅಂತಲೇ ಕರೆಸಿಕೊಳ್ಳುವ ವಿದೇಶಗಳ ಬಗ್ಗೆ ಮಾಹಿತಿ ನೀಡುತ್ತೇವೆ.ಎಂಬುದನ್ನು ಇಲ್ಲಿ ತಿಳಿಯಿರಿ.

ಸ್ವೀಡನ್ (Sweden)

ಒಂಟಿಯಾಗಿ ಪ್ರಯಾಣಿಸುವ ಹುಡುಗಿಯರಿಗೆ ಸ್ವಿಡನ್‌ ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಇಲ್ಲಿ ನೀವು ಸ್ಟಾಕ್‌ಹೋಮ್, ಗೋಥೆನ್‌ಬರ್ಗ್, ಮಾಲ್ಮೋ, ಉಪ್ಸಲಾ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು.

ಅತಿ ಹೆಚ್ಚು ಮಹಿಳಾ ಸಂಸದರನ್ನು ಹೊಂದಿರುವ ಕೆಲವು ದೇಶಗಳಿವೆ. ಅವುಗಳಲ್ಲಿ ಮೊದಲ ಹೆಸರು ಸ್ವೀಡನ್‌ ಎಂದು ಕೇಳಿ ಬಂದಿದೆ. ಇಲ್ಲಿ ಶೇಕಡಾ 46 ರಷ್ಟು ಮಹಿಳೆಯರು ಸಂಸತ್ತಿನಲ್ಲಿದ್ದಾರೆ ಎಂದರೆ ನೀವು ನಂಬಲೇಬೇಕು.

ನಾರ್ವೆ (Narve)

ನಾರ್ವೆ ಯುರೋಪಿನ ಸ್ಕ್ಯಾಂಡಿನೇವಿಯನ್ ಪ್ರದೇಶದಲ್ಲಿನ ಒಂದು ಸುಂದರ ದೇಶವಾಗಿದೆ. ಇಲ್ಲಿ ನೀವು ಸುಂದರವಾದ ಹಿಮನದಿಗಳು, ದಟ್ಟವಾದ ಕಾಡುಗಳು, ಆರ್ಕ್ಟಿಕ್ ವೃತ್ತ ಮತ್ತು ಸಾಗರಗಳ ಜೊತೆಗೆ ನದಿಗಳು ಮತ್ತು ಸರೋವರಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳನ್ನು ನೋಡಬಹುದು. ಏಕಾಂಗಿಯಾಗಿ ಮಹಿಳೆಯರು ಪ್ರವಾಸ ಮಾಡಲು ನಾರ್ವೆ ಸುರಕ್ಷಿತ ಎಂದು ಪರಿಗಣಿಸಲಾಗಿದೆ.

ದಕ್ಷಿಣ ಆಫ್ರಿಕಾ ( South Africa)

ಆಫ್ರಿಕನ್ ದೇಶಗಳು ಸಹ ಭೇಟಿ ನೀಡಲು ತುಂಬಾ ಒಳ್ಳೆಯದು. ಇಲ್ಲಿ ಮಹಿಳೆಯರ ಸುರಕ್ಷತೆಗೆ ಸಂಪೂರ್ಣ ಕಾಳಜಿ ವಹಿಸಲಾಗಿದೆ ಎಂದು ನೀವು ಊಹಿಸಬಹುದು.

ಅಲ್ಲದೆ, ಇಲ್ಲಿ ಭೇಟಿ ನೀಡಲು ಅನೇಕ ಅದ್ಭುತ ವನ್ಯಜೀವಿ ಅಭಯಾರಣ್ಯಗಳಿವೆ. ಮರುಭೂಮಿಗಳು, ಉದ್ಯಾನವನಗಳು ಇತ್ಯಾದಿಗಳಿವೆ.

ಆಸ್ಟ್ರೇಲಿಯಾ ( Australia)

ಆಸ್ಟ್ರೇಲಿಯಾವನ್ನು ದ್ವೀಪಗಳು, ಮುಖ್ಯಭೂಮಿ, ಮರುಭೂಮಿ ಮತ್ತು ದಟ್ಟವಾದ ಕಾಡುಗಳಿಂದ ಅಲಂಕರಿಸಲಾಗಿದೆ.

ಇಲ್ಲಿನ ನಗರಗಳು ತುಂಬಾ ಸುಂದರವಾಗಿದ್ದು, ಅದ್ಭುತವಾಗಿ ಕಾಣುತ್ತವೆ. 38 ಪ್ರತಿಶತ ಮಹಿಳೆಯರು ಆಸ್ಟ್ರೇಲಿಯಾದಲ್ಲಿ ಸಂಸದರಾಗಿದ್ದಾರೆ. ಅಲ್ಲದೆ ಮಹಿಳೆಯರು ನಿರ್ಭಯವಾಗಿ ದೇಶವನ್ನು ಸುತ್ತಬಹುದು.

ಫ್ರಾನ್ಸ್ ( France)

ಈ ಸ್ಥಳವು ಭೇಟಿ ನೀಡಲು ಅತ್ಯುತ್ತಮ ಸ್ಥಳವಾಗಿದೆ. ಫ್ರಾನ್ಸ್ ನ ಅತ್ಯಂತ ರೋಮ್ಯಾಂಟಿಕ್‌ ಸ್ಥಳ ಪ್ಯಾರಿಸ್ ನಗರ ವಿಶ್ವವಿಖ್ಯಾತವಾಗಿದೆ.

ಐಫೆಲ್ ಟವರ್, ಫ್ರೆಂಚ್ ರಿವೇರಿಯಾ, ಡಾರ್ಡೋಗ್ನೆ, ಮಾಂಟ್ ಸೇಂಟ್-ಮೈಕೆಲ್ ಮುಂತಾದ ಸ್ಥಳಗಳು ಇಲ್ಲಿ ನೆಲೆಗೊಂಡಿವೆ. ಇಲ್ಲಿ ಮಹಿಳೆಯರು ಮುಕ್ತವಾಗಿ ಪ್ರಯಾಣಿಸಬಹುದು.

ಸಿಂಗಾಪುರ ( Singapore)

ಸಿಂಗಾಪುರ, ಕೊಂಚ ದುಬಾರಿ ದೇಶಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಇಲ್ಲಿಗೆ ಮಹಿಳೆಯರು ಏಕಾಂಗಿಯಾಗಿ ಪ್ರಯಾಣಿಸಬಹುದಾಗಿದೆ. ದೇಶವು ಆಧುನಿಕ ನಗರದೃಶ್ಯ ಮತ್ತು ಸ್ವಚ್ಛತೆಯೊಂದಿಗೆ, ಅದರ ಸುರಕ್ಷತೆಗೆ ಹೆಸರುವಾಸಿಯಾಗಿದೆ.

ಪ್ರಯಾಣಿಕರು ವೈವಿಧ್ಯಮಯ ನೆರೆಹೊರೆಗಳನ್ನು ಅನ್ವೇಷಿಸಬಹುದು, ರುಚಿಕರವಾದ ಪಾಕಪದ್ಧತಿಯಲ್ಲಿ ಪಾಲ್ಗೊಳ್ಳಬಹುದು. ಇಲ್ಲಿ ನೋಡಬಹುದಾದ ಸಾಕಷ್ಟು ಪ್ರವಾಸಿ ಆಕರ್ಷಣೆಗಳು ಇವೆ.

ನೆದರ್ಲ್ಯಾಂಡ್ಸ್( Nederland)

ನೆದರ್ಲ್ಯಾಂಡ್ಸ್ ಅನ್ನು ಸೈಕ್ಲಿಂಗ್-ಸ್ನೇಹಿ ಎಂದು ಕರೆಯಲಾಗುತ್ತದೆ. ಸುಂದರವಾದ ಕಾಲುವೆಗಳು ಮತ್ತು ಪ್ರಗತಿಪರ ಮನಸ್ಥಿತಿಯನ್ನು ಹೊಂದಿದೆ.

ಆಂಸ್ಟರ್‌ಡ್ಯಾಮ್, ಅದರ ರೋಮಾಂಚಕ ಸಂಸ್ಕೃತಿಯೊಂದಿಗೆ, ಒಂಟಿ ಮಹಿಳಾ ಪ್ರಯಾಣಿಕರಿಗೆ ವಿಶೇಷವಾಗಿ ಸುರಕ್ಷಿತವಾಗಿದೆ. ನೆದರ್ಲ್ಯಾಂಡ್ಸ್ ತನ್ನ ಅದ್ಭುತವಾದ ಪ್ರವಾಸಿ ಆಕರ್ಷಣೆಗಳಿಂದ ವಿಶ್ವದ ಜನರನ್ನು ತನ್ನತ್ತ ಸೆಳೆಯುತ್ತದೆ.

ಸ್ವಿಟ್ಜರ್ಲೆಂಡ್ (Switzerland)

ಭೂಲೋಕದ ಸ್ವರ್ಗದಂತ ವಾತಾವರಣವನ್ನು ಹೊಂದಿರುವ ಸ್ವಿಟ್ಜರ್ಲೆಂಡ್ ತನ್ನ ಅಸಾಧಾರಣ ಆಲ್ಪೈನ್ ಭೂದೃಶ್ಯಗಳು ಮತ್ತು ಆಕರ್ಷಕ ಪಟ್ಟಣಗಳಿಗೆ ಹೆಸರುವಾಸಿಯಾಗಿದೆ. ಪ್ರಶಾಂತ ವಾತಾವರಣವು ಮಹಿಳಾ ಪ್ರಯಾಣಿಕರಿಗೆ ಪರಿಪೂರ್ಣವಾಗಿಸುತ್ತದೆ.

ಜಪಾನ್‌ (Japan)

ಜಪಾನ್‌ ದೇಶ ಸೋಲೋ ಟ್ರಿಪ್‌ಗೆ ಪರ್ಫೇಕ್ಟ್‌ ಆಗಿದೆ. ಏಕವ್ಯಕ್ತಿ ಮಹಿಳಾ ಪ್ರಯಾಣಿಕರಿಗೆ ಅನನ್ಯ ಮತ್ತು ಸುರಕ್ಷಿತ ಅನುಭವವನ್ನು ನೀಡುತ್ತದೆ.

ಟೋಕಿಯೋ ಮತ್ತು ಕ್ಯೋಟೋದಂತಹ ನಗರಗಳು ಅತ್ಯುತ್ತಮ ಸಾರ್ವಜನಿಕ ಸಾರಿಗೆ, ಕಡಿಮೆ ಅಪರಾಧ ದರಗಳು ಹೊಂದಿವೆ. ಉತ್ತಮವಾಗಿ ನಿರ್ವಹಿಸಲ್ಪಟ್ಟ ಸಾರ್ವಜನಿಕ ಸ್ಥಳಗಳು, ಇಲ್ಲಿನ ಪ್ರೇಕ್ಷಣೀಯ ಸ್ಥಳಗಳು ಬೆರಗುಗೊಳಿಸುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button