ಇವರ ದಾರಿಯೇ ಡಿಫರೆಂಟುಕಾಡಿನ ಕತೆಗಳುವಿಂಗಡಿಸದಸೂಪರ್ ಗ್ಯಾಂಗುಸ್ಫೂರ್ತಿ ಗಾಥೆ

ದೇಶದ ಎರಡನೇ ಅತಿ ಎತ್ತರದ ಪರ್ವತ ಏರಿದ ಗಟ್ಟಿಗಿತ್ತಿಯರು

ಭಾರತ ದೇಶದ ಎರಡನೆಯ ಅತಿ ಎತ್ತರದ ಪರ್ವತವಾದ ದಟ್ಟ ಕಾನನವನ್ನು ಹೊಂದಿರುವ ನಂದಾದೇವಿ ಪರ್ವತವನ್ನು ಏರಿದ ಮೊದಲ ಮಹಿಳಾ ಭದ್ರತಾ ಸಿಬ್ಬಂದಿ ಎಂಬ ಹೆಗ್ಗಳಿಕೆಗೆ ಮೂವರು ಮಹಿಳೆಯರು ಭಾಜನರಾಗಿದ್ದಾರೆ. ಕಷ್ಟದ ಹಾದಿಯನ್ನ ಅಸಂಖ್ಯಾತ ಸವಾಲಿನೊಂದಿಗೆ ಎದುರಿಸಿ, ಅಸಾಧ್ಯವೆಂಬುದು ಯಾವುದೂ ಇಲ್ಲ ಎಂಬ ಪಾಠವನ್ನು ಈ ಗಟ್ಟಿಗಿತ್ತಿಯರು ತಿಳಿಸಿದ್ದಾರೆ.

  • ಆದಿತ್ಯ ಯಲಿಗಾರ

ಕೆಲ ದಿನಗಳ ಹಿಂದೆ ಭಾರತ ದೇಶದ ಎರಡನೆಯ ಅತಿ ಎತ್ತರದ ಪರ್ವತವಾದ ದಟ್ಟ ಕಾನನವನ್ನು ಹೊಂದಿರುವ ನಂದಾದೇವಿ ಪರ್ವತವನ್ನು ಏರಿದ ಮೊದಲ ಮಹಿಳಾ ಭದ್ರತಾ ಸಿಬ್ಬಂದಿ ಎಂಬ ಹೆಗ್ಗಳಿಕೆಗೆ ಮುವರೂ ಮಹಿಳೆಯರು ಭಾಜನರಾಗಿದ್ದಾರೆ. ಈ
ಪರ್ವತ ಸುಮಾರು 25,000 ಅಡಿಯಷ್ಟು ಎತ್ತರವಿದೆ. ಈ ಸಾಧನೆಗೆ ಭಾಜನರಾದವರು ದುರ್ಗಾ ಸತಿ, (32) ರೋಶ್ನಿ ನೇಗಿ, (25) ಮತ್ತು ಮಮತಾ ಕನ್ವಾಸಿ.(33) ಇವರು ಪರ್ವತದ 14,500 ಅಡಿ ಎತ್ತರದ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುವ ಮೂಲಕ ತಮ್ಮ ಅಮೋಘ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Nandadevi mountain Nature Trekking

ಸಂರಕ್ಷಣೆಗೆಂದು ಆಯ್ದುಕೊಂಡ ಸೇವೆ 

ಪರ್ವತದ ಕಾನನದ ಸೀಮೆಯಲ್ಲಿ ಕಂಡು ಬರುವ ಅಪರೂಪದ ಜೀವಸಂಕುಲ ಮತ್ತು ಸಸ್ಯ ಪ್ರಕಾರಗಳನ್ನು ಸಂರಕ್ಷಿಸಲು ಕಾಡನ್ನು ಗಸ್ತು ತಿರುಗುವ ಸೇವೆಯನ್ನು ಆಯ್ದುಕೊಂಡೆವು ಎಂದು ಅವರು ಹೇಳುತ್ತಾರೆ. ನಂದಾದೇವಿ ಪರ್ವತ ಶಿಖರ ಹಿಮಚಿರತೆ,
ಹಿಮಾಲಯದ ಕರಡಿಗಳು, ನೀಲಿ ಕುರಿಗಳು ಹಾಗೂ ಸಾವಿರಾರು ಔಷಧೀಯ ಗಿಡಮೂಲಿಕೆಗಳ ಆಗರವಾಗಿದೆ. “ಇಂತಹ ಅಪರೂಪದ ಪ್ರಾಣಿ ಮತ್ತು ಸಸ್ಯಗಳನ್ನು ಹೊಂದಿದ ಈ ಪರ್ವತದ ಎತ್ತರದ ಪ್ರದೇಶದಲ್ಲೂ ಕಳ್ಳ ಬೇಟೆಗಾರರ ಕಾಟ ತಪ್ಪಿದ್ದಲ್ಲ ಮತ್ತು ನಾವು ಈ ಕಾಡಿನಲ್ಲಿ ಕಾಣಸಿಗುವ ನೀರಿನ ಮೂಲಗಳನ್ನು ಸಹ ಕಾಯುತ್ತೇವೆ, ನಮ್ಮ ಪ್ರದೇಶವು ಸುರಕ್ಷಿತವಾಗಿದೆ ಎಂದು ನಾವು ಮೊದಲು ಖಚಿತಪಡಿಸಿಕೊಳ್ಳಬೇಕು.” ಎಂದು ಮಮತಾ ಅವರು ಹೇಳುತ್ತಾರೆ.

Nandadevi Mountain Nature Trekking Endangered Species  Women Power

ಎತ್ತರದ ಮೈಲಿಗಲತ್ತ ದಾಪುಗಾಲು  

ಮಹಿಳಾ ಅರಣ್ಯ ಕಾವಲುಗಾರರು 11,150 ಅಡಿ ಎತ್ತರದಲ್ಲಿರುವ ಲಾಟಾಗೆ ಹೋಗುತ್ತಿದ್ದರು,ಅವರಿಗೆ ಇನ್ನೂ ಮುಂದೆ ಹೋಗದಂತೆ ಸಲಹೆ ನೀಡಿದರು. ಆದರೆ ಗಟ್ಟಿಗಿತ್ತಿ ಮಹಿಳೆಯರು “ಈಗ ಅಲ್ಲದ್ದಿದ್ದರೆ ಯಾವಾಗ ? ದೇಶ ಮತ್ತು ಪ್ರಕೃತಿಯ ಸೇವೆಗಾಗಿ ನಿಯೋಜನೆಗೊಂಡ ನಾವು ಮತ್ತೊಂದು ಎತ್ತದರದ ಮೈಲಿಗಲ್ಲತ್ತ ಹೆಜ್ಜೆ ಇಡಲು ನಿರ್ಧರಿಸಿದೆವು.” ಎಂದು ರೋಶ್ನಿ ಹೇಳುತ್ತಾರೆ.

ರೋಶ್ನಿ ಅವರ ತಂದೆ ಉತ್ತರಾಖಂಡ ಜೋಶಿಮಠದಲ್ಲಿ ತರಕಾರಿ ಅಂಗಡಿ ಹೊಂದಿದ್ದಾರೆ. ಇವರು ನಾಲ್ಕು ಜನ ಒಡಹುಟ್ಟಿದವರಲ್ಲಿ ಮೂರನೆಯವರು ಮತ್ತು ಕಳೆದ ಐದು ವರ್ಷಗಳಿಂದ ಸೇವೆಯಲ್ಲಿದ್ದಾರೆ.

ನೀವುಇದನ್ನುಇಷ್ಟಪಡಬಹುದು: ಸಿದ್ಧಮಾದರಿಗಳನ್ನ ತೊರೆದು ಮಹಿಳಾ ಸಬಲೀಕರಣಕ್ಕೆ ಸ್ಫೂರ್ತಿಯಾದ ಚಾಲಕಿ ನ್ಯಾನ್ಸಿ

ರೋಶ್ನಿಯವರು ಸೈನಿಕನ ಪತ್ನಿಯಾದ ಮಮತಾ ಅವರೊಂದಿಗೆ ಕೈ ಜೋಡಿಸಿ ನಂದಾ ದೇವಿ ಬಯೋಸ್ಪಿಯರ್ ರಿಸರ್ವ್ ಶ್ರೇಣಿಯಅಧಿಕಾರಿ ಚೆಟ್ನಾ ಕಾಂಡ್ಪಾಲ್ ಅವರನ್ನು ಸಂಪರ್ಕಿಸಿದರು. ಅವರು ಒಪ್ಪಿದರು. ಇವರಿಗೆ ದುರ್ಗಾ ಅವರು ಜೊತೆಯಾದರು. ಮತ್ತು
ತಮ್ಮ ತರಬೇತಿಯನ್ನು ಪಡೆಯಲು ಆರಂಭಿಸಿದರು. “ಇದೊಂದು ವಿಶೇಷ ಹುದ್ದೆಯಾದ್ದರಿಂದ ಸುದೀರ್ಘ ಪ್ರವಾಸವನ್ನು ಬೇಡುತ್ತಿತ್ತು.ಈ ಪ್ರಯಾಸದ ಪ್ರವಾಸದಲ್ಲಿ ಮೂವರು ಉತ್ತಮವಾಗಿ ಕಾರ್ಯನಿರ್ವಹಿಸಿದರು.” ಎಂದು ಉತ್ತರಾಖಂಡದ ಅರಣ್ಯ ಪಡೆ
ಮುಖ್ಯಸ್ಥರಾದ ರಾಜೀವ್ ಭಾರ್ತಾರಿ ಹೇಳಿದ್ದರು.

ಶುರುವಾಯಿತು ಕಠಿಣ ಪಯಣ

ಜೂನ್ 1 ರಂದು ಅವರು ಲಾಟಾದಿಂದ ಪ್ರಾರಂಭಿಸಿ 11,800 ಅಡಿ ಎತ್ತರದ ಭೆಲ್ಟಾಕ್ಕೆ ಚಾರಣ ಮಾಡಿದರು. ನಂತರ, ಅವರು12,800 ಅಡಿ ಲತಾ ಖಾರ್ಕ್ಗೆ ಹೋದರು ನಂತರ ನಂತರ 13,800 ಅಡಿ ಎತ್ತರದ ಜಂಡಿಧಾರ ತಲುಪಿ ಕೊನೆಗೆ 14,500 ಅಡಿ
ಎತ್ತರದ ಅವರ ಚಾರಣದ ಕೊನೆಯ ಘಟ್ಟವನ್ನು ತಲುಪಿದರು.

“ಚಾರಣವು ಬಹಳ ಕಷ್ಟಕರವಾದ ಮತ್ತು ಸವಾಲಿನ ದಾರಿಯನ್ನು ಹೊಂದಿತ್ತು ಮತ್ತು ನಮ್ಮಿಂದ ದೈಹಿಕ ಮತ್ತು ಮಾನಸಿಕಶ್ರಮವನ್ನು ಬೇಡುತಿತ್ತು. ಎಂದು ಮಮತಾ ಹೇಳುತ್ತಾರೆ.’ ‘ ಒಮ್ಮೆ 8 ಕಿ.ಮೀ ದೂರದ ಚಾರಣದಲ್ಲಿ 5.5 ಕಿ.ಮೀ ಹಿಮನದಿಯಿಂದ ಕೂಡಿತ್ತು ಒಂದು ಕ್ಷಣ ಗಮನಭಂಗವಾದರೂ ಸಹ ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗುತ್ತಿತ್ತು, ನಮ್ಮ ದೇಹಗಳು ಸಿಗದಂತಹ ಭೀಕರ ಸಾವು ಘಟಿಸುತ್ತಿತ್ತು ಎಂದು ದುರ್ಗಾ ಹೇಳುತ್ತಾರೆ.”

ಇನ್ನೂ ಮುಂದುವರೆಸುತ್ತಾ “ನಾವು ಚಾರಣ ಮಾಡುವಾಗ ಹಿಮಕರಡಿ ಮತ್ತು ಹಿಮಚಿರತೆಯ ಹೆದರಿಕೆ ನಮ್ಮನ್ನು ಸದಾ ಆವರಿಸುತ್ತಿತ್ತು ಹೀಗಾಗಿ ನಾವು ಸದಾಕಾಲ ಕಳ್ಳ ಬೇಟೆಗಾರರ ಮೇಲೆ ಕಣ್ಣಿಡುತ್ತಾ ನಮ್ಮ ರಕ್ಷಣೆಯನ್ನೂ ಮಾಡಿಕೊಳ್ಳಬೇಕಾಗಿತ್ತು” ಎಂದು ಅವರು ಹೇಳುತ್ತಾರೆ.

Nandadevi Mountain Nature Trekking

ಪರಿಸರ ಸಂರಕ್ಷಣೆ  ಮೊದಲ ಆದ್ಯತೆಯಾಗಬೇಕು        

ದುರ್ಗಾ ಮತ್ತು ಮಮತಾ ಇಬ್ಬರೂ ಕಳೆದ ಹನ್ನೆರಡು ವರುಷದಿಂದ ಅರಣ್ಯ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಮಮತಾ ಅವರಿಗೆ ಎರಡು ವರುಷದ ಮಗಳಿದ್ದರೆ ದುರ್ಗಾ ಅವರಿಗೆ ಮೂವರು ಮಕ್ಕಳಿದ್ದಾರೆ.

“ಕಷ್ಟದ ಸವಾಲುಗಳಿಗೆ ಭಯಪಡದೆ ಅವುಗಳನ್ನ ಧೈರ್ಯದಿಂದ ಎದುರಿಸಿ ನಮ್ಮ ಮಕ್ಕಳಿಗೆ ಮಾದರಿಯಾಗಬೇಕು.” ಎಂದು ಮಮತಾ ಹೇಳುತ್ತಾರೆ. “ನಾವು ಮನುಷ್ಯರಾಗಿ ಪರಿಸರಕ್ಕೆ ಸದಾ ಹಾನಿ ಮಾಡಿದ್ದೇವೆ. ಈಗ ಪರಿಸ್ಥಿತಿ ಅದೆಷ್ಟೇ ಕಠಿಣವಿದ್ದರೂ ಕಾಡನ್ನ, ಪರಿಸರವನ್ನ ಸಂರಕ್ಷಿಸುವ ಕಾರ್ಯವೂ ನಮ್ಮಿಂದಲೇ ಆಗಬೇಕು” ಎಂದು ದುರ್ಗಾ ಅವರು ಸೇರಿಸುತ್ತಾರೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

           

Related Articles

Leave a Reply

Your email address will not be published. Required fields are marked *

Back to top button