ದೂರ ತೀರ ಯಾನಮ್ಯಾಜಿಕ್ ತಾಣಗಳುವಿಂಗಡಿಸದ

ಏರ್ ಇಂಡಿಯಾ ಕಂಪನಿಯ ದೇಶದ ಮೊದಲ ಏರ್‌ಬಸ್‌ ವಿಮಾನ ಸೇವೆ ಬೆಂಗಳೂರಿನಿಂದ ಆರಂಭವಾಗಲಿದೆ

ಇತ್ತೀಚಿಗೆ ಏರ್ ಇಂಡಿಯಾ ಕಂಪನಿಯು (Air India) ಹೊಸ ಯೋಜನೆಗಳ ಮೂಲಕ ಸುದ್ದಿಯಾಗುತ್ತಲೇ ಇದೆ. ಈಗ ಇದು ತನ್ನ ಮೊದಲ ಏರ್ ಬಸ್ ಯನ್ನು ಪ್ರಾರಂಭಿಸುವ ಮೂಲಕ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.

ಈ ಕಂಪನಿಯ ಮೊದಲ ಏರ್‌ಬಸ್‌ ಎ350 (Airbus A350) ವಿಮಾನ ಸೇವೆ ಇದೇ ಜನವರಿ 22ರಿಂದ ಆರಂಭವಾಗಲಿದೆ. ಹಾಗಾದರೆ ಯಾವಲ್ಲ ಮಾರ್ಗಗಳಲ್ಲಿ ಈ ಹೊಸ ಸೇವೆ ಇರಲಿದೆ ಇಲ್ಲಿದೆ ಮಾಹಿತಿ.

ಬೆಂಗಳೂರನ್ನು ಅಯೋಧ್ಯೆಗೆ ಸಂಪರ್ಕಿಸುವ ನೇರ ವಿಮಾನಗಳನ್ನು ಘೋಷಿಸಿದ ಕೆಲವೇ ದಿನಗಳಲ್ಲಿ, ಏರ್ ಇಂಡಿಯಾ ತನ್ನ ಹೊಚ್ಚ ಹೊಸ ಏರ್‌ಬಸ್ 350 ವಿಮಾನಗಳೊಂದಿಗೆ ದೇಶೀಯ ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

ಜನವರಿ 22ರಿಂದ ಬೆಂಗಳೂರು ಮತ್ತು ಮುಂಬೈ ನಡುವೆ ಆರಂಭ ಆಗಲಿರುವ ಏರ್‌ಬಸ್‌ ಎ350 ವಿಮಾನ ಸೇವೆಯು ಮೂರು ವರ್ಗದ ಕ್ಯಾಬಿನ್‌ ಹೊಂದಿದ್ದು, ಒಟ್ಟು 316 ಸೀಟುಗಳನ್ನು ಹೊಂದಿದೆ. 24 ಬ್ಯುಸಿನೆಸ್‌ ಕ್ಲಾಸ್‌, 24 ಪ್ರೀಮಿಯಂ ಎಕಾನಮಿ ಮತ್ತು 264 ಎಕಾನಮಿ ದರ್ಜೆಯ ಸೀಟುಗಳನ್ನು ಒಳಗೊಂಡಿರುತ್ತದೆ.

ದೇಶೀಯ ಮಾರ್ಗದಲ್ಲಿ ಏರ್‌ಬಸ್‌ನ ಮೊದಲ ವಾಣಿಜ್ಯ ಸಂಚಾರ ಸೇವೆಯ ಆರಂಭಕ್ಕೆ ಸಿದ್ಧತೆಯು ಪೂರ್ಣಗೊಂಡಿದ್ದು, ಎಲ್ಲಾ ಸಿಬ್ಬಂದಿಗೂ ಸೂಕ್ತ ತರಬೇತಿ ನೀಡಲಾಗಿದೆ ಎಂದು ಕಂಪನಿಯು ತಿಳಿಸಿದೆ. ಫ್ರಾನ್ಸ್‌ನ ಏರ್‌ಬಸ್‌ ಕಂಪನಿಯು ಇದನ್ನು ನಿರ್ಮಿಸಿದ್ದು, ಈ ವಿಮಾನವು ಡಿಸೆಂಬರ್‌ 23ರಂದು ನವದೆಹಲಿಯಲ್ಲಿ ಲ್ಯಾಂಡ್‌ ಆಗಿತ್ತು.

ಏರ್‌ಬಸ್ 350 ಅದರ ಸೌಕರ್ಯ ಮತ್ತು ಉನ್ನತ-ಮಟ್ಟದ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ. ಆರಂಭದಲ್ಲಿ, ಇದು ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್ ಮತ್ತು ಮುಂಬೈ ಅನ್ನು ಸಂಪರ್ಕಿಸಲು ಸಿದ್ಧವಾಗಿದ್ದು, ಇದಕ್ಕಾಗಿ ಏರ್‌ಲೈನ್‌ನಿಂದ ಬುಕಿಂಗ್ ತೆರೆಯಲಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button