ದೂರ ತೀರ ಯಾನವಿಂಗಡಿಸದಸೂಪರ್ ಗ್ಯಾಂಗುಸ್ಮರಣೀಯ ಜಾಗ

ಒಂದು ದಿನ, 50 ಜನ: ಶೃಂಗೇರಿ, ಕ್ಯಾತನಮಕ್ಕಿ, ಕುಪ್ಪಳಿಗೆ ಹೋದ ಕತೆ ಕೇಳಿ

ನಮ್ಮ ಪ್ರತಿ ಪ್ರಯಾಣವು ಹೊಸ ಹೊಸ ಕಥೆಯನ್ನು ಹೇಳುತ್ತದೆ . ವಿನೂತನವಾದ ಅನುಭವವನ್ನು ನಮಗೆ ಕೊಡುತ್ತದೆ. ಕಾಲೇಜು ದಿನಗಳಲ್ಲಿ ನೇಚರ್ ಕ್ಲಬ್ ವತಿಯಿಂದ ಎರಡು ದಿನಗಳ ಟ್ರಿಪ್ ಬಗ್ಗೆ ಸುಮಂಗಲ ಭಟ್ ಸುಂದರ ಅನುಭವವನ್ನು ಹಂಚಿಕೊಂಡಿದ್ದಾರೆ. 50 ಮಂದಿಯ ತಂಡ ಹೊರನಾಡು, ಕ್ಯಾತನಮಕ್ಕಿ, ಶೃಂಗೇರಿ, ಕುಪ್ಪಳಿಗೆ ಭೇಟಿ ನೀಡಿದ  ಪಯಣದ ಕಥೆ.

  • ಆಕರ್ಷ ಅರಿಗ

50 ಮಂದಿಯ ತಂಡ ಹೊರನಾಡು, ಕ್ಯಾತನಮಕ್ಕಿ, ಶೃಂಗೇರಿ, ಕುಪ್ಪಳ್ಳಿ ಗಾನಕ್ಕೆ ಟ್ರಿಪ್ ಹೊರಟಿದ್ದರು. ಅದರಂತೆ ಪುತ್ತೂರಿಂದ ಹೊರಟು ಮೂಡಬಿದ್ರೆ 6 ಗಂಟೆಗೆ ತಿಂಡಿ ಸೇವಿಸಿ , ಸಂಸೆ, ಕಳಸ ರೂಟ್ ಆಗಿ ಹೊರನಾಡಿಗೆ ಹೋದೆವು .

ಅಲ್ಲಿನ ಗಣಪತಿ ದೇವಸ್ಥಾನವು ರಮಣೀಯವಾಗಿದ್ದು, ಹಚ್ಚಹಸಿರಿನ ತಾಣ ಹತ್ತಿರದಲ್ಲಿರುವ ಕಾಫಿ ಶಾಪಿಗೆ ಹೋಗಿ ಮಸ್ತು ಟೀ ಕುಡಿದುಕೊಂಡು, ಪ್ರಕೃತಿ ಸೌಂದರ್ಯವನ್ನು ಸವಿಯುವುದೇ ಚಂದ. ಇನ್ನು ಇಷ್ಟು ಚೆನ್ನಾಗಿರುವ ಪ್ರಕೃತಿಯೇ ನಡೆಯುವಲ್ಲಿ ಫೋಟೋ ತೆಗೆಯದಿದ್ದರೆ ಟ್ರಿಪ್ ಅದು ಅಪೂರ್ಣ .

ಹೀಗೆ ಮುಂದುವರೆದ ಕಳಸದ ಹಾದಿಯಲ್ಲಿ 12 ಗಂಟೆಗೆ ಹೊರನಾಡು ತಲುಪಿದೆವು. ಅಲ್ಲಿ ಅನ್ನಪೂರ್ಣೇಶ್ವರಿ ದೇವಸ್ಥಾನ ಪ್ರದಕ್ಷಿಣೆ ಹಾಕಿ ಹಾಗೂ ಊಟವನ್ನು ಮಾಡಿದೆವು.

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಸುತ್ತಲೂ ಬಹಳಷ್ಟು ಬೆಟ್ಟ-ಗುಡ್ಡಗಳು ಇದು ಅದರಲ್ಲೂ ಒಂದು ಕ್ಯಾತನಮಕ್ಕಿ ಪಯಣ. 3: 00 ನಂತರ ಕ್ಯಾತನಮಕ್ಕಿ ಟ್ರಿಪ್ ಶುರುವಾಯಿತು , ತಂಪನೆ ಗಾಳಿ ಹಾಗೂ ಹಚ್ಚಹಸಿರಿನ ಜಾಗ , ಸುತ್ತಲು ಪ್ರಾಣಿಗಳ ಕೇದಾಟ. ಆ ಅನುಭವವನ್ನು ಅನುಭವಿಸಿದವರು ಮಾತ್ರ ವರ್ಣಿಸಲು ಸಾಧ್ಯ.

ನಮ್ಮ ಗುಂಪಲ್ಲಿ ಐವತ್ತು ಜನ ಇದ್ದೆವು. 5 ಜಿಪ್ಸಿ ಎಲ್ಲಿ ಪಯಣ ಶುರುವಾಯಿತು. ಓಪನ್ ಜೀಪಲ್ಲಿ ಇಬ್ಬರು ಹುಡುಗರು ಮತ್ತೆ ಐದಾರು ಹುಡುಗಿಯರು. ಸಾಗುವ ದಾರಿಯನ್ನು ನೋಡಿದಾಗ ಇದು ನಿಜವಾದ ದಾರಿಯೋ ಎಂಬುದಾಗಿ ನನಗೆ ಸಂಶಯ ಮೂಡಿತು !.

Kyatanamakki Hills Chikmagaluru Horanadu Karnataka Tourism

ಅರ್ಧ ಮುಕ್ಕಾಲು ನಂತರ ನಾವು ಸೇರಬೇಕಾದ ಸ್ಥಳವನ್ನು ತಲುಪಿದೆವು ಜಾಗವನ್ನು ವರ್ಣಿಸಲು ಪದಗಳೇ ಸಿಗಲ್ಲ ಯಾಕಂದ್ರೆ ಅಷ್ಟು ಸುಂದರವಾದ ಸ್ಥಳ ಅದುವೇ ಕ್ಯಾತನಮಕ್ಕಿ .

ನಮ್ಮ ಈ ಪಯಣದಲ್ಲಿ ಸಾಗುವ ದಾರಿಗಳು ಸುಗಮವಾಗಿರಲಿಲ್ಲ. ಆದರೂ ಮಜಾ ಕೊಟ್ಟಿತ್ತು, ಓಪನ್ ಜೀಪಲ್ಲಿ ಇಬ್ಬರು ಹುಡುಗರು ಮತ್ತೆ ಐದಾರು ಹುಡುಗಿಯರು. ಈ ದಾರಿಯನ್ನು ನೋಡಿದಾಗ ನಮಗೆ ನಿಜವಾಗಲೂ ಈ ದಾರಿಯಲ್ಲಿ ಹೋಗಬಹುದು ಎಂಬ ಸಂಶಯ ನಮ್ಮ ಮನದಲ್ಲಿ ಮೂಡಿತು. ಕ್ಯಾತನಮಕ್ಕಿ ತಾಣವು ಅತ್ಯಂತ ಸುಂದರವಾದ ಜಾಗ.

ಸುಂದರ ಕ್ಯಾತನಮಕ್ಕಿ

ದೂರದಲ್ಲಿರುವ ಬೆಟ್ಟ , ಜರಿಗಳು, ಸೂರ್ಯಾಸ್ತ ಸಮಯದಲ್ಲಿ ನಾವು ಆ ಜಾಗದಲ್ಲಿ ಇದ್ದೆವು ಹಾಗಾಗಿ ಕ್ಯಾತನಮಕ್ಕಿ ಇನ್ನಷ್ಟು ಸುಂದರವಾಗಿ ಕಣ್ಣು ಕಾಣಲು ಸಾಧ್ಯವಾಯಿತು.

ತಂಪಾದ ಗಾಳಿ ಜೊತೆಗೆ ಚಲಿ. ಜಿಟಿ ಜಿಟಿ ಮಳೆ ಹನಿಯೊಂದಿಗೆ, ಹಚ್ಚ ಹಸಿರಿನ ನಡುವಿನ ಹಿಮ ಸಿಂಚನದಲ್ಲಿ, ಭುವಿ ಮತ್ತು ಆಗಸವನ್ನು ಒಂದಾಗಿಸುವ ಬಿಳಿ ಮೋಡಗಳೊಂದಿಗೆ, ಕಾಫಿಯ ಘಮವನ್ನು ಆಸ್ವಾದಿಸುತ್ತಾ ಮಲೆನಾಡಿನ ನಿಸರ್ಗ ಸೌಂದರ್ಯವನ್ನು ಎರಡು ಕಣ್ಣಲ್ಲಿ ಸವಿಯುವ ಮಜಾವೇ ವಿಭಿನ್ನವಾಗಿರುತ್ತದೆ. ರಮಣೀಯ ಸ್ಥಳದಲ್ಲಿ ಸಾಕಷ್ಟು ಸಿನಿಮಾ ಚಿತ್ರೀಕರಣ ನಡೆದಿದ್ದು, ಪ್ರವಾಸಿಗಳ ದಂಡೇ ಕ್ಯಾತನಮಕ್ಕಿಗೆ ಬರುತ್ತಾರೆ.

ನೀವುಇದನ್ನುಇಷ್ಟಪಡಬಹುದು: ಕಾಫಿ ನಾಡಿನಲ್ಲಿ ಸ್ನೇಹಿತರ ಜೊತೆಗಿನ ಪಯಣದ ಕಥೆ

ಟ್ರಿಪ್ ಮುಗಿದನಂತರ ಹೊರನಾಡಿನಲ್ಲಿ ದೇವರ ದರ್ಶನ ಮಾಡಿ ಊಟ ಮಾಡಿ . ಸ್ನೇಹಿತರೊಂದಿಗೆ ಚರ್ಚೆ, ತರ್ಲೆ, ಸುತ್ತಾಡಿ ಆಟ ಆಡುತ್ತಾ ಸಮಯ ಕಳೆದದ್ದೇ ಗೊತ್ತಾಗಿಲ್ಲ ಅಷ್ಟರಲ್ಲಿ ನಮ್ಮ ಟ್ರಿಪ್ ಕೂಡ ಮುಗಿದಿತ್ತು. ಈ ಟ್ರಿಪ್ ಮುಗಿಯುವಷ್ಟರಲ್ಲಿ ಅಧ್ಯಾಪಕರು ಕೂಡ ಚಿಕ್ಕ ಮಕ್ಕಳಂತೆ ನಮ್ಮೊಂದಿಗೆ ಬೆರೆತುಹೋಗಿದ್ದರು.

Kyatanamakki Hills Chikmagaluru Horanadu Karnataka Tourism

ಸಿರಿಮನೆ ಜಲಪಾತ

ಶೃಂಗೇರಿಯಿಂದ 12 ಕಿಲೋಮೀಟರ್ ದೂರದಲ್ಲಿರುವ ಸಿರಿಮನೆ ಜಲಪಾತ ಅದ್ಭುತವಾದ ತಾಣ. ತಂಪಿನ ಗಾಳಿ ಹಾಗೂ ಜಲಪಾತ ನೀರಿನ ಸೆಣಸಾಟ ಪ್ರೇಕ್ಷಕರಿಗೆ ರೋಮಾಂಚನಕಾರಿ ಅನುಭವವನ್ನು ಕೊಡುತ್ತಿತ್ತು. ಈ ಜಲಪಾತದಲ್ಲಿ ಆಟ ಆಡುವಾಗ ನಾವೆಲ್ಲರೂ ನಮ್ಮನ್ನು ಮರೆತು ಚಿಕ್ಕಮಕ್ಕಳಂತೆ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಆಟ ಆಡುತ್ತಿದ್ದೆವು.

Sirimane Falls Shringeri Chikmagaluru Karnataka Tourism

ಈ ಪ್ರದೇಶವು ಹೊಸ ಲೋಕವನ್ನೇ ನಮಗೆ ಸೃಷ್ಟಿಸಿತು. ನಮ್ಮ ಹೆಜ್ಜೆಗುರುತುಗಳನ್ನು ಆ ಪ್ರದೇಶದಲ್ಲಿ ಬಿಟ್ಟು ಬರಬೇಕು ಹೊರತಾಗಿ ಕಸ ಕಡ್ಡಿಯನ್ನು ಹಾಕಿ ಆ ಪ್ರದೇಶವನ್ನು ಕಲುಷಿತಗೊಳಿಸಬಾರದು. ಸ್ವಚ್ಛತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಸುಮಂಗಳ ಹಂಚಿಕೊಂಡರು.

ಶೃಂಗೇರಿ ದೇವಸ್ಥಾನ

ಅತ್ಯಂತ ರಮಣೀಯವಾಗಿರುವ ದೇವಸ್ಥಾನ. ಚಿಕ್ಕಮಗಳೂರು ಜಿಲ್ಲೆಯಲ್ಲಿದೆ, ಶೃಂಗೇರಿಯ  ಶ್ರೀ ಶಾರದಾಂಬ ದೇವಸ್ಥಾನ ಕರ್ನಾಟಕದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ತುಂಗಾ ನದಿಯ ದಡದಲ್ಲಿರುವ ಶೃಂಗೇರಿ ಶಾರದಾ ಪೀಠವು ಎರಡು ಪ್ರಮುಖ ದೇವಾಲಯಗಳನ್ನು ಮತ್ತು ಒಂದು ಡಜನ್ ಇತರ ದೇವಾಲಯಗಳನ್ನು ಹೊಂದಿದೆ.

ಹೋಗೋದು ಹೇಗೆ?

ಶೃಂಗೇರಿ ಬೆಂಗಳೂರಿನಿಂದ 320 ಕಿ.ಮೀ ಮತ್ತು ಮಂಗಳೂರಿನಿಂದ 111 ಕಿ.ಮೀ ದೂರದಲ್ಲಿದೆ. ಶಿವಮೊಗ್ಗ ಹತ್ತಿರದ ರೈಲು ನಿಲ್ದಾಣ . ಶೃಂಗೇರಿಗೆ ಬೆಂಗಳೂರಿನಿಂದ ನೇರ ಬಸ್ ಸೇವೆ ಇದೆ. ಶಿವಮೊಗ್ಗ ಮತ್ತು ಮಂಗಳೂರಿನಿಂದ ಶೃಂಗೇರಿ ತಲುಪಲು ಬಸ್ಸುಗಳು ಲಭ್ಯವಿದೆ.

Shringeri Sharadamba Temple Shringeri Chikmagaluru Karnataka Tourism

ಮೈಮರೆಯುವ ಕ್ಷಣ

ಹೊರನಾಡು ಕ್ಯಾತನಮಕ್ಕಿ ಶೃಂಗೇರಿ ಕುಪ್ಪಳ್ಳಿ ಜಾಗಗಳು ನಮ್ಮನೆ ನಾವು ಮರೆತು ಚಿಕ್ಕಮಕ್ಕಳಂತೆ ಆಟ ಆಡುತ್ತಿದ್ದೆವು. ಅಧ್ಯಾಪಕರು ಕೂಡ ವಿದ್ಯಾರ್ಥಿಗಳೊಂದಿಗೆ ತಮ್ಮನ್ನು ತಾವೇ ಮರೆತು ಚಿಕ್ಕವರಂತೆ ಆಡುತ್ತಿದ್ದರು. ಪ್ರವಾಸಕ್ಕೆ ಹೋದಾಗ ನಮ್ಮ ಮನಸ್ಸಿನಲ್ಲಿ ಮೂಡುವ ಯೋಚನೆಗಳು ಅದಂತೂ ವಿಭಿನ್ನವಾಗಿರುತ್ತದೆ

Kuppali Kuvempu mane Shivamogga Karnataka Tourism

ಪ್ರವಾಸಿಗರ ಗಮನಕ್ಕೆ

ನಾವು ಬೇರೆಯವರಿಗೆ ದೂರ ಮೊದಲು, ನಮ್ಮ ಕರ್ತವ್ಯ ನಾವು ಪಾಲಿಸಬೇಕು. ಪ್ರವಾಸ ದಾನಕೆ ಹೋದಾಗ ಎರಡು ಅಂಶವನ್ನು ಎಲ್ಲರೂ ಗಮನಿಸಲೇಬೇಕು ಮೊದಲನೇದಾಗಿ ಆ ಜಾಗಕ್ಕೆ ಹೋದಾಗ ಸ್ವಚ್ಛತೆಯನ್ನು ನಮ್ಮ ಕಾಪಾಡಿಕೊಳ್ಳಬೇಕು ಹಾಗೂ ಅಲ್ಲಿರುವ ಪ್ರಾಣಿಗಳಿಗೆ ಯಾವುದೇ ಆಹಾರವನ್ನು ನೀಡದೆ ಹಾಗೂ ರಕ್ಷಣೆ ಮಾಡಬೇಕು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button