ಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವ

ಹೆಪ್ಪುಗಟ್ಟಿದೆ ನಯಾಗರ: ಮಂತ್ರಮುಗ್ಧಗೊಳಿಸುವ ದೃಶ್ಯಗಳನ್ನು ನೋಡಿ

ಅಮೆರಿಕಾಗೆ ಹೋದವರಲ್ಲಿ ಬಹುತೇಕರು ನಯಾಗರ ನೋಡಿಯೇ ಬರುತ್ತಾರೆ. ಅಂಥಾ ಜನಮೆಚ್ಚಿದ ನಯಾಗರ ಈಗ ಹೆಪ್ಪುಗಟ್ಟಿದೆ. ಹಾಗೆ ಹೆಪ್ಪುಗಟ್ಟಿರುವುದು ಇದು ಮೊದಲ ಸಲ ಏನಲ್ಲ. ಹೆಪ್ಪುಗಟ್ಟಿರುವ ನದಿ ಮತ್ತು ಜಲಪಾತದ ಕುರಿತ ಪೂರ್ತಿ ವಿವರ ಇಲ್ಲಿದೆ.

  • ಸುವರ್ಣಲಕ್ಷ್ಮಿ

ನಯಾಗರ ನದಿ ಹೆಪ್ಪುಗಟ್ಟಿದೆ, ಅಕ್ಷರಶಃ ಫ್ರೀಜ್ ಆಗಿದೆ. ಈ ನಯಾಗರ ಎಂಬ ಸಣ್ಣ  ನದಿ ಅಮೆರಿಕ ಸಂಯುಕ್ತ ಸಂಸ್ಥಾನ ಹಾಗೂ ಕೆನಡಾ ದೇಶಗಳ ಗಡಿಗಳ ನಡುವೆ ಇದೆ. ಅಮೆರಿಕದ ಈರಿ ಹಾಗೂ ಕೆನಡದ ಅಂಟೇರಿಯೋ ಸರೋವರಗಳ ನಡುವೆ ಇರುವ ಈ ನಯಾಗರ ನದಿ ಈರಿ ಹಾಗೂ ಅಂಟೇರಿಯೋ ಸರೋವರಗಳು ಸುರಿಸುವ ನೀರಿನ ಜಲಪಾತದೊಂದಿಗೆ ಸೇರಿ ಈ ಅದ್ಭುತ ಮೂರು ಜಲಪಾತಗಳನ್ನು ಸೃಷ್ಟಿ ಸಿದೆ.

Twitter

1. ಅಮೆರಿಕನ್ ಜಲಪಾತ 

2. ಬ್ರೈಲ್ ಜಲಪಾತ 

3. ಕೆನಡಿಯನ್ ಜಲಪಾತ ಅಥವಾ ಕುದುರೆ ಲಾಳವನ್ನು ಹೋಲುವ ಜಲಪಾತ 

ನೀವು ಇದನ್ನು ಇಷ್ಟಪಡಬಹುದು: 12 ದೇಶ ಸುತ್ತಿರುವ, ಕ್ಯಾನ್ಸರ್ ಗೆದ್ದಿರುವ ಜೀವನೋತ್ಸಾಹಿ ಭಾರತಿ ಬಿವಿ ಕತೆ ಎಲ್ಲರಿಗೂ ಸ್ಫೂರ್ತಿ

Twitter

ಈ ಮೂರೂ ಜಲಪಾತಗಳು ಒಟ್ಟಿಗೆ ಸೇರಿ ನಯಾಗರ ಜಲಪಾತ ಎಂದು ಕರೆಯಲ್ಪಡುತ್ತದೆ ಹಾಗೂ ಇದು ವಿಶ್ವದ ಅತೀ ವಿಶಾಲ ಜಲಪಾತ ಎನ್ನಿಸಿಕೊಂಡಿದೆ.

ಜಲಪಾತಗಳ ಸಮೂಹವಾಗಿ ಕುದುರೆ ಲಾಳಾಕಾರದಲ್ಲಿ ರಭಸದಿಂದ ಧುಮ್ಮಿಕ್ಕುವ ನೀರು ಹಾಲಿನ ಕಡಲಿನಂತೆ ವಿಶಾಲ ಅಪಾರ ಜಲರಾಶಿ   ನಿರಂತರವಾಗಿ ಭೋರ್ಗರೆಯುತ್ತಾ ಕಿವಿ ಕಿವುಡಾಗುವಂತೆ ಶಬ್ದ ಮಾಡುತ್ತಾ ಹರಿಯುವ ಪರಿ ಎಲ್ಲರನ್ನೂ ಮಂತ್ರಮುಗ್ದಗೊಳಿಸುತ್ತದೆ. 

ಮೇ ತಿಂಗಳನಲ್ಲಿ ಉತ್ತರ ಅಮೆರಿಕಾ ಹಾಗೂ ಕೆನಡ ಎರಡೂ ಕಡೆಯಿಂದ ವೀಕ್ಷಿಸಲು ಬಹಳ ನಯನ ಮನೋಹರವಾಗಿರುತ್ತದೆ. ನೀಲಿ ಬಣ್ಣದ ರೈನ್ ಕೋಟ್ ಧರಿಸಿ ಪ್ರವಾಸಿಗರು ಬೋಟ್ ಯಾನ ಕೈಗೊಳ್ಳುತ್ತಾ ಜಲಪಾತದ ತುಂತುರು ಹನಿಗಳಿಂದ ಪುಳಕಗೊಳ್ಳುತ್ತಾರೆ. ಪ್ರತಿವರ್ಷ ಲಕ್ಷಾಂತರ ಜನ ಭೇಟಿ ನೀಡುವ ಈ ನಯಾಗರ ಜಲಪಾತದ ಬಳಿ ಪ್ರವಾಸಿಗಳಿಗೆ ವಿವಿಧ ಆಕರ್ಷಣೆಗಳ ಇವೆ.

Frozen Niagara Falls
Twitter

1. ವಿದ್ಯುತ್ ನಿರ್ಮಾಣ ನಿಗಮ

2. ಅಕ್ವೇರಿಯಂ 

3. ಕಲಾ ಉದ್ಯಾನ

4. ವಸ್ತು ಪ್ರದರ್ಶನ ದೇರ್ ಡೆವಿಲ್

5. ಹೆಲಿಕ್ಯಾಪ್ಟರ್ ನಲ್ಲಿ ಜಲಪಾತಕ್ಕೆ ಹತ್ತಿರ ಕರೆದೊಯ್ಯುವ ಟ್ರಿಪ್

6. ನಯಾಗರ ಕೋಟೆ 

7. ಜೆಟ್ ಬೋಟಿನಲ್ಲಿ ಜಲಪಾತಕ್ಕೆ ಅತೀ ಹತ್ತಿರದ ಪ್ರಯಾಣ  

ರಾತ್ರಿ ಹೊತ್ತು ಜಲಪಾತದ ಅಂದ ಹೆಚ್ಚಿಸಲು ವಿವಿಧ ರೀತಿಯ ವಿದ್ಯುದ್ದೀಪಗಳನ್ನು ಅಳವಡಿಸಿದ್ದಾರೆ.

Twitter

ರಾತ್ರಿ ಸಮಯದಲ್ಲಿ ನಯಾಗರ ಜಲಪಾತದ ವೀಕ್ಷಣೆ ಕಣ್ಣಿಗೆ ಹಬ್ಬ ಆಗ ಜಲಪಾತ ಚೆಲುವು ದ್ವಿಗುಣಿಸುತ್ತದೆ.

ಇಂತಹ ನಯಾಗರ ಈಗ ಅಕ್ಷರ ಸಹ ಹೆಪ್ಪುಗಟ್ಟಿದೆ, ಫ್ರೀಜ್ ಆಗಿಬಿಟ್ಟಿದೆ. ಈ ರೀತಿ ಫ್ರೀಜ್ ಆಗಿರುವುದು ಇದೇ ಮೊದಲಲ್ಲ. 1848ರಲ್ಲಿ ಮೊದಲಿಗೆ ಫ್ರೀಜ್ ಆಯಿತೆಂದು ಇತಿಹಾಸ ನಂತರ 1902, 1906, 1911, 1932, 2014, 2017, 2018 ಈ ಇಸವಿಗಳಲ್ಲೂ ಫ್ರೀಜ್ ಆಗಿತ್ತು. ಉಷ್ಣಾಂಶ ಬಹಳ ಕಡಿಮೆ ಆದಾಗ ಈ ರೀತಿ ಫ್ರೀಜ್ ಆಗುತ್ತದೆ. ಪ್ರಸ್ತುತ ನಯಾಗರ ಬಳಿ -19 ಡಿಗ್ರಿ ಇರುವುದೇ ಈಗ ಫ್ರೀಜ್ ಅಗಲು ಕಾರಣ. ಇಂತಹ ದುರ್ಲಭ ವಾತಾವರಣದಲ್ಲೂ ಪ್ರವಾಸಿಗರು ಅಲ್ಲಿ ಕವಿದಿರುವ ದಟ್ಟ ಮೋಡಗಳನ್ನು, ನೀರಿನ ಹನಿಗಳ ಕಾರಣದಿಂದ ಉಂಟಾದ ಕಾಮನಬಿಲ್ಲು ವೀಕ್ಷಿಸಲು ಭೇಟಿ ನೀಡುತ್ತಾರೆ. ಕೆಲವು ಸಾಹಸಿಗಳು ಫ್ರೀಜ್ ಆಗಿರುವ ಮಂಜಿನ ಮೇಲೆ ಬೆಟ್ಟ ಹತ್ತುವ ಸಾಹಸ ಸಹ ಮಾಡುತ್ತಾರೆ. ನೀವು ಯಾವತ್ತಾದರೂ ಅಮೆರಿಕಾಗೆ ಹೋದರೆ ಈ ನಯಾಗರ ನೋಡುವುದನ್ನು ಮರೆಯಬೇಡಿ. ನಯಾಗರ ನೋಡಲೆಂದೇ ಅಮೆರಿಕಾಗೆ ಹೋದರೂ ಆದೀತು.

Twitter

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button