53ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಏರಿದ ಸಂಗೀತಾ ಬಹಲ್: ಸಾಧನೆಗೆ ವಯಸ್ಸಿನ ಹಂಗಿಲ್ಲ
ಸಣ್ಣ ವಯಸ್ಸಿಗೆ ಜೀವನದಲ್ಲಿ ಖಿನ್ನತೆಗೊಳಗಾಗಿ ಮುಖ ಚಿಕ್ಕದು ಮಾಡಿಕೊಂಡು ಓಡಾಡುವವರ ಮಧ್ಯೆ ಕೆಲವರಿರುತ್ತಾರೆ, ವಯಸ್ಸಿನ ಹಂಗಿಗೆ ಒಳಗಾಗದವರು. ಅಂಥವರಲ್ಲಿ ಒಬ್ಬರು ಸಂಗೀತಾ ಬಹಲ್. ಮೂಲತಃ ಜಮ್ಮು ಕಾಶ್ಮೀರದವರು. ತನ್ನ 53ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಹತ್ತಿ ಅತಿ ಎತ್ತರದ ಬೆಟ್ಟವೇರಿದ ಅತಿ ಹಿರಿಯ ಮಹಿಳೆ ಎಂದು ಕರೆಸಿಕೊಂಡ ಸಂಗೀತಾ ಅವರ ಸ್ಫೂರ್ತಿಕತೆ.
- ನವ್ಯಶ್ರೀ ಶೆಟ್ಟಿ
ಸಂಗೀತಾ ಬಹಲ್ ಮೌಂಟ್ ಎವರೆಸ್ಟ್ ಏರಿದ ಮಹಿಳೆ. ತನ್ನ 53ನೇ ವಯಸ್ಸಿನಲ್ಲಿ ಏಷ್ಯಾದ ಅತ್ಯುನ್ನತ ಶಿಖರವೇರಿದ ಮಹಿಳೆ. ಸೌಂದರ್ಯ ಸ್ಪರ್ಧೆಯಲ್ಲಿ ಸಾಧನೆ ಮಾಡಿ ನಂತರ ಗಗನ ಸಖಿಯಾಗಿ ನಂತರ ಅವರ ಪಯಣ ಹೊರಟಿದ್ದು ಶಿಖರಗಳತ್ತ. ತನ್ನ ಅಡ್ವೆಂಚರ್ ಲೈಫ್ ನಲ್ಲಿ ಖುಷಿ ಕಾಣುವ ಸಂಗೀತಾ ಎಲ್ಲಾ ಅಡೆತಡೆಗಳನ್ನು ದಾಟಿ ತನ್ನದೇ ಪುಟ್ಟ ಪ್ರಪಂಚವನ್ನು ಸೃಷ್ಟಿಸಿ ಕೊಂಡಿದ್ದಾರೆ. ಪತಿಯ ಬೆಂಬಲ, ಮಾರ್ಗದರ್ಶನ ಸಂಗೀತ ಅವರನ್ನು ಚಾರಣ ದಿಕ್ಕಿನತ್ತ ಪಯಣಿಸುವಂತೆ ಮಾಡಿತು.
ಸಂಗೀತಾ ಅವರ ಮೊದಲ ಶಿಖರದ ಪಯಣ ಆರಂಭವಾಗಿದ್ದು 2011ರಲ್ಲಿ. ಕಿಲಿಮಂಜಾರೋ(kilimanjari) ಶಿಖರ ಸಂಗೀತಾ ಅವರು ಶಿಖರ ಹತ್ತುವ ಕನಸಿಗೆ ಮೊದಲ ಹಾದಿ. ಬಳಿಕ ಬರೋಬ್ಬರಿ ಏಳು ಶಿಖರಗಳನ್ನು ಹತ್ತಿದ್ದಾರೆ ಈಕೆ. ಎಲ್ಬ್ರಸ್(mt. Elbrus), ವಿಲ್ಸನ್ (mt.Vinson), ಅಕಾಂಗುವ(mt.acongua), ಕೊಸಿಯಸ್ಕೊ(mt.kosiousko) ಏರಿರುವ ಸಂಗೀತಾ 2018ರಲ್ಲಿ ಮೌಂಟ್ ಎವರೆಸ್ಟ್ ತುತ್ತ ತುದಿ ಮುಟ್ಟಿದ್ದಾರೆ
ನೀವು ಇದನ್ನು ಇಷ್ಟಪಡಬಹುದು: 12 ದೇಶ ಸುತ್ತಿರುವ, ಕ್ಯಾನ್ಸರ್ ಗೆದ್ದಿರುವ ಜೀವನೋತ್ಸಾಹಿ ಭಾರತಿ ಬಿವಿ ಕತೆ ಎಲ್ಲರಿಗೂ ಸ್ಫೂರ್ತಿ
ಪತಿ ಜೊತೆಗೂಡಿ ಶಿಖರ ಹತ್ತಲು ಆರಂಭಿಸಿದ ಸಂಗೀತಾ ಅದಕ್ಕಾಗಿ ಸಾಕಷ್ಟು ತರಬೇತಿಗಳನ್ನು ಪಡೆದುಕೊಂಡಿದ್ದಾರೆ. ತರಬೇತಿ ಪಡೆದುಕೊಳ್ಳುತ್ತಾ ಸುನೀತಾ ಅವರಲ್ಲಿ ಸಾಧಿಸುವ ಹಂಬಲ ಮತ್ತಷ್ಟು ಹೆಚ್ಚಿಸಿತು.
ಮೌಂಟ್ ಎವರೆಸ್ಟ್ ಏರಿದ ಅತಿ ಹಿರಿಯ ಮಹಿಳೆ
2018ರಲ್ಲಿ ಮೌಂಟ್ ಎವರೆಸ್ಟ್ ಏರಿದ ಸಂಗೀತಾ ಈ ಸಾಧನೆ ಮಾಡಿದ ಮೊದಲ ಕಾಶ್ಮೀರಿ ಮಹಿಳೆ ಎಂದೆನಿಸಿ ಕೊಂಡಿದ್ದಾರೆ. ಈ ಸಾಧನೆ ಮಾಡಿದ ಅತ್ಯಂತ ಹಿರಿಯ ಮಹಿಳೆ. ತನ್ನ 53ನೆಯ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಏರಿದ ಮಹಿಳೆ ಸಂಗೀತ ಬಹಲ್.
1985ರಲ್ಲಿ ಮಿಸ್ ಇಂಡಿಯಾದ ಫೈನಲಿಸ್ಟ್ ಸ್ಪರ್ಧಿ ಯಾಗಿದ್ದರು. ಇದು ಸಂಗೀತ ಅವರನ್ನು ಮತ್ತಷ್ಟು ಹೊರಗಿನ ಪ್ರಪಂಚಕ್ಕೆ ತೆರೆದುಕೊಳ್ಳುವ ಹಾಗೆ ಮಾಡಿತು. ಅಲ್ಲಿಂದ ಸಂಗೀತ ಅವರು ಹೆಜ್ಜೆ ಇರಿಸಿದ್ದು ಗಗನಸಖಿ ಕ್ಷೇತ್ರಕ್ಕೆ. ಗಗನಸಖಿಯಾಗಿ ವಿವಿಧ ವಿಮಾನ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು. ಅದರಲ್ಲಿ ಕುವೈತ್ ಏರ್ ವೇಸ್ (kuwaith airways) ಪ್ರಮುಖ. ಆ ಸಂಸ್ಥೆಯಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದರು ಸಂಗೀತಾ.
ಕುವೈತ್ ಏರ್ ಸಂಸ್ಥೆಯ cabin crew memberನಲ್ಲಿ ಡೈರೆಕ್ಟರ್ ಹುದ್ದೆ ಸಂಗೀತ ಅವರ ಬದುಕನ್ನೇ ಬದಲಾಯಿಸಿತು. ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀ ಪುರುಷರ ಅಸಮಾನತೆಗಳ ನಡುವೆ ಬೆಳೆದವರು ಸಂಗೀತಾ. ಇಂದು ಅವರ ಸಾಧನೆಯೇ ಎಲ್ಲರಿಗೂ ಉತ್ತರ. ಆರಂಭದಲ್ಲಿ ಇವರ ಉಡುಗೆ ಬಗ್ಗೆ ಅಪಹಾಸ್ಯ ಮಾಡುತ್ತಿದ್ದರು. ಅವರೆಲ್ಲರಿಗೂ ಇಂದು ದಿಟ್ಟ ಉತ್ತರವಾಗಿ ನಿಂತಿದ್ದಾರೆ ಸಂಗೀತಾ.
ಕಂಪನಿ ಆರಂಭಿಸಿ ಗೆದ್ದಾಕೆ
ತನ್ನ ಉದ್ಯೋಗ ಕ್ಷೇತ್ರದ ನಿವೃತ್ತಿಯ ಸನಿಹದಲ್ಲಿ ತನ್ನದೇ ಹೊಸ ಇಮೇಜ್ ಕನ್ಸಲ್ಟಿಂಗ್ ಕಂಪನಿ (image consulting company)ಸ್ಥಾಪಿಸಿದರು. ಅದು ಭಾರತದ ಮೊಟ್ಟ ಮೊದಲ ಇಮೇಜ್ ಕನ್ಸಲ್ಟಿಂಗ್ ಕಂಪನಿ. ಸಂಗೀತ ಅವರ ಕಂಪನಿ 13 ವರ್ಷಗಳ ಯಶಸ್ಸು ಪಡೆದು ಮುನ್ನುಗುತ್ತಿದೆ. ಎಲ್ಲರೂ ತಮ್ಮ ಮಾನಸಿಕ ಅಡೆತಡೆಗಳನ್ನು ದಾಟಿ ಮುನ್ನುಗ್ಗಬೇಕು. ಪ್ರತಿಯೊಬ್ಬರೂ ಮೌಂಟ್ ಎವರೆಸ್ಟ್ ಏರಬೇಕು ಅನ್ನುವುದು ಸಂಗೀತ ಅವರ ಹಂಬಲ.
ಸಂಗೀತ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟವರು. ಇಂದಿಗೂ ತಮ್ಮ ಪ್ಯಾಶನ್ ಆದ ಟ್ರೆಕ್ಕಿಂಗ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಕೆಲಸದ ನಡುವೆ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ.
ಸೌಂದರ್ಯ ಸ್ಪರ್ಧೆಗಳಲ್ಲಿ ಜನರು ತಮ್ಮ ಪ್ರತಿಭೆಗಳನ್ನು ತೋರಿಸುವಂತೆ ಆಗಬೇಕು. ವೃತ್ತಿ ಬದುಕಿನ ಜೊತೆಗೆ ಹೊರಾಂಗಣ ಕೆಲವು ಚಟುವಟಿಕೆಗಳು ಮನಸಿಗೆ ಮುದ ನೀಡುತ್ತದೆ ಎನ್ನುತ್ತಾರೆ ಸಂಗೀತಾ ಬಹಲ್ .
ಸಂಗೀತಾ ಅವರು ಚಾರಣ, ಕನಸಿನ ಕಂಪನಿ, ಕೆಲಸದಲ್ಲಿ ಕೆಲವೊಮ್ಮೆ ಎದುರಾಗುವ ಲಿಂಗ ತಾರತಮ್ಯ ಎಲ್ಲವುದರ ಅಡೆತಡೆಗಳನ್ನು ದಾಟಿ ತಮ್ಮ ದಾರಿಯಲ್ಲಿ ಮುಂದೆ ಸಾಗುತ್ತಿದ್ದಾರೆ. ಎಲ್ಲರಿಗೂ ಮಾದರಿಯಾಗಿದ್ದಾರೆ.
ನಾವೆಲ್ಲ ಸಾಮಾನ್ಯವಾಗಿ ಸ್ವಲ್ಪ ಹೊತ್ತು ನಡೆದರೆ ಸುಸ್ತು ಎನ್ನುತ್ತೇವೆ. ಅವುಗಳ ನಡುವೆ ಟ್ರೆಕ್ಕಿಂಗ್ ಸುಲಭದ ಮಾತಲ್ಲ. ತಮ್ಮ 53ನೇ ವಯಸ್ಸಿನಲ್ಲಿ ಕೂಡ ಛಲ ಬಿಡದೆ ಸದಾ ಹೊಸ ಹುರುಪಿನಿಂದ ಶಿಖರ ಏರುವ ಸಂಗೀತ ಬಹಲ್ ಹಲವು ಮಹಿಳೆಯರಿಗೆ ಸ್ಫೂರ್ತಿ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ.
ಬನ್ನಿ ಜೊತೆಯಾಗಿ