ವಿಂಗಡಿಸದಸಂಸ್ಕೃತಿ, ಪರಂಪರೆ

ಈ ತಿಂಗಳ ಅಂತ್ಯಕ್ಕೆ ಬೆಂಗಳೂರಿನ ಈ ರೈಲು ರೆಸ್ಟೋರೆಂಟ್ ಓಪನ್

ರೈಲು(Train) ಪ್ರಯಾಣ ಒಂಥರ ಚೆಂದ.. ಅದರಲ್ಲಿಯೂ ರೈಲಿನಲ್ಲಿ ಪ್ರಯಾಣಿಸುತ್ತಾ ಕಾಫಿ,ಟೀ ಹೀರುತ್ತಾ .. ತಿಂಡಿ ತಿನ್ನುತ್ತಾ ನಿಮ್ಮ ಪ್ರವಾಸ ಸಾಗುತ್ತಿದ್ದರೆ ಅದರ ಅನುಭವ ಕಲ್ಪನೆಗೂ ನಿಲುಕದ್ದು. ಇದರ ಜೊತೆಗೆ ರೈಲು ನಿಲ್ದಾಣಗಳಲ್ಲಿ ರೆಸ್ಟೋರೆಂಟ್(Restaurant )ಇದ್ರೆ ಅದು ಸುದೀರ್ಘ ಪ್ರಯಾಣವನ್ನು ಕೈಗೊಳ್ಳುವ ಪ್ರವಾಸಿಗರಿಗೆ ತುಂಬಾನೆ ಪ್ರಯೋಜನಕಾರಿ.

ಇತ್ತೀಚಿಗಷ್ಟೇ ರೈಲ್ವೆ ಇಲಾಖೆ ಬೆಂಗಳೂರಿನ(Bangalore )ಜನತೆಗೆ ಸಿಹಿ ಸುದ್ದಿಯೊಂದನ್ನು ನೀಡಿತ್ತು. ರೈಲ್ವೆ ಆವರಣದಲ್ಲಿಯೇ ರೆಸ್ಟೋರೆಂಟ್ ತೆರೆಯುವುದಕ್ಕೆ ಹೇಳಿತ್ತು. ಆದ್ರೆ ನಾನಾ ಕಾರಣಗಳಿಂದ ಅದು ವಿಳಂಬವಾಗಿತ್ತು. ಆದ್ರೆ ಇದೀಗ ಬೆಂಗಳೂರಿನ ಈ ರೈಲ್ವೆ ರೆಸ್ಟೋರೆಂಟ್‌ಗೆ ಕಾಲ ಕೂಡಿ ಬಂದಿದೆ.ಕಳೆದ ವರ್ಷದ ಅಕ್ಟೋಬರ್‌ನಲ್ಲಿಯೇ(October )ರೈಲ್ವೆ ರೆಸ್ಟೋರೆಂಟ್ ಓಪನ್ ಆಗಬೇಕಿತ್ತು. ಆದ್ರೆ ಸುಮಾರು ೬ ತಿಂಗಳ ವಿಳಂಬದ ಬಳಿಕ ಈ ತಿಂಗಳ ಅಂತ್ಯಕ್ಕೆ ರೆಸ್ಟೋರೆಂಟ್ ಪ್ರಾರಂಭಿಸುವುದಕ್ಕೆ ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ(Indian Railways).

Banglore

ಬೆಂಗಳೂರಿನ ಎರಡು ಕಡೆಯಲ್ಲಿ ರೈಲು ರೆಸ್ಟೋರೆಂಟ್ ಪ್ರಾರಂಭವಾಗಲಿದೆ. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ(Krantiveera Sangoli Rayanna Railway station)ಮತ್ತು ಸರ್. ಎಂ ವಿಶ್ವೇಶ್ವರಯ್ಯ ಟರ್ಮಿನಲ್ ರೈಲು(S.M.Vishwehwaray Terminal Railway)ನಿಲ್ದಾಣಗಳ ಪ್ರವೇಶ ದ್ವಾರದಲ್ಲಿ(Railway Station Entrance) ರೈಲು ಹಳಿಗಳ ಮೇಲೆ ಈ ರೈಲು ರೆಸ್ಟೋರೆಂಟ್ ಶುರು ಮಾಡಲಾಗುತ್ತದೆ.

ಈಗಾಗಲೇ ನಮ್ಮ ರಾಜ್ಯ ದ ಹುಬ್ಬಳ್ಳಿ(Hubbali )ರೈಲು ನಿಲ್ದಾಣದಲ್ಲಿ ಮಾಡಿರುವ ರೈಲು ರೆಸ್ಟೋರೆಂಟ್ ಯಶಸ್ವಿಯಾಗಿದೆ. ಅದೇ ಹುಮ್ಮಸ್ಸಿನಲ್ಲಿಯೇ ಬೆಂಗಳೂರಿನ ಎರಡು ಕಡೆಗಳಲ್ಳಿ ರೆಸ್ಟೋರೆಂಟ್ ತೆರೆಯುವುದಕ್ಕೆ ರೈಲ್ವೆ ಇಲಾಖೆಯು ಮುಂದಾಗಿತ್ತು. ಹಳೆಯ ರೈಲು ಕೋಚ್‌ಗಳನ್ನು ಸುಂದರವಾದ ರೆಸ್ಟೋರೆಂಟ್‌ಗಳನ್ನಾಗಿ ಪರಿವರ್ತಿಸಲಾಗಿದೆ. ಇದರಲ್ಲಿ ೪೦ ಜನರು ಕುಳಿತುಕೊಳ್ಳಬಹುದು. ಒಳಾಂಗಣವನ್ನು ಗ್ರಾಹಕರಿಗೆ ಆಕರ್ಷಿಸುವಂತೆ ಮಾಡಲಾಗಿದೆ. ದಿನದ ೨೪ ಗಂಟೆಯೂ ಈ ರೆಸ್ಟೋರೆಂಟ್ ಓಪನ್ ಇರಲಿದ್ದು ಸಂಪೂರ್ಣ ಹವಾನಿಯಂತ್ರಿತವಾಗಿರಲಿದೆ(AC).

Railway Station

ಬೆಂಗಳೂರಿನ ಕ್ರಾಂತಿ ವೀರ ಸಂಗೊಳ್ಳಿ ರೈಲ್ವೆ ನಿಲ್ದಾಣದಿಂಲದಲೇ ಅಂದಾಜು ೨ಲಕ್ಷದಷ್ಟು ಜನರು ಓಡಾಟವನ್ನು ನಡೆಸುತ್ತಾರೆ. ಹೀಗಾಗಿ ಅಲ್ಲಿ ರೆಸ್ಟೋರೆಂಟ್ ಓಪನ್ ಆದ್ರೆ ಭರಪೂರಾದಾಯ ಬರುವ ನಿರೀಕ್ಷೆಯಿದೆ.ಈಗಾಗಲೇ ಈ ರೆಸ್ಟೋರೆಂಟ್‌ಗಳ ಗುತ್ತಿಗೆಯನ್ನು ಕೂಡ ಎರಡು ಕಂಪೆನಿಗಳು ಪಡೆದುಕೊಂಡಿವೆ. ಇದು ಸಸ್ಯಹಾರಿ ರೆಸ್ಟೋರೆಂಟ್(Veg Resturant) ಆಗಿರಲಿದ್ದು, ದಕ್ಷಿಣ(South) ಹಾಗೂ ಉತ್ತರ(North) ಭಾರತೀಯ ಶೈಲಿಯ ಆಹಾರಗಳನ್ನು ಇಲ್ಲಿ ಪೂರೈಸಲಾಗುತ್ತದೆ.

ಹುಬ್ಬಳ್ಳಿ , ಚೆನ್ನೈ(Chennai), ಹೈದರಬಾದ್(Hyderabad), ವಿಜಯವಾಡ(Vijayawada),ಭೋಪಾಲ್(Bhopal), ಮುಂಬೈ(Mumbai), ನಾಗಪುರ(Nagpura),ಲಕ್ನೋ(Lucknow )ಮತ್ತು ಕೊಲ್ಕತ್ತಾದಂತಹ(Calcutta )ನಗರಗಳಲ್ಲಿ ಈ ರೈಲು ರೆಸ್ಟೋರೆಂಟ್‌ಗಳಿವೆ. ಬೆಂಗಳೂರಿಗರು ಈ ತಿಂಗಳ ಕೊನೆಯಲ್ಲಿ ಈ ವಿಶಿಷ್ಟ ಅನುಭವವನ್ನು ಪಡೆಯಬಹುದು.

Railway station

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button