ದೂರ ತೀರ ಯಾನವಿಂಗಡಿಸದ

ಚೀನಾದಲ್ಲಿ ಅತಿ ವೇಗದ ಮ್ಯಾಗ್ಲೆವ್ ರೈಲು ಸಂಚಾರ.. ಏನಿದರ ವಿಶೇಷತೆ..? ಈ ಲೇಖನ ಓದಿ..

ಚೀನಾ ಏರೋಸ್ಪೇಸ್ ಸೈನ್ಸ್ ಅಂಡ್ ಇಂಡಸ್ಟ್ರಿ ಕಾರ್ಪೊರೇಷನ್ (China Aerospace Science and Industry Corporation)ಗಂಟೆಗೆ 623 ಕಿಲೋಮೀಟರ್ ವೇಗದಲ್ಲಿ ಚಲಿಸುವ ಮ್ಯಾಗ್ಲೆವ್ ರೈಲನ್ನು(Maglev Train)ಯಶಸ್ವಿಯಾಗಿ ಪ್ರಾರಂಭಿಸುವುದಾಗಿ ಘೋಷಿಸಿದೆ.

ಚೀನಾವು ತನ್ನ ಹೈಸ್ಪೀಡ್ ರೈಲನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ. ಎರಡು ವರ್ಷಗಳ ಹಿಂದೆ ಚೀನಾ ಗಂಟೆಗೆ 600 ಕಿಮೀ ವೇಗದ ಮ್ಯಾಗ್ಲೆವ್ ರೈಲನ್ನು ಪ್ರಾರಂಭಿಸಿತ್ತು. ಇದೀಗ ತನ್ನ ಹಳೆಯ ರೆಕಾರ್ಡ್ ಮುರಿದು 623 ಕಿಮೀ ವೇಗದಲ್ಲಿ ಸಂಚರಿಸುವ ಹೊಸ ರೈಲನ್ನು ಪ್ರಾರಂಭಿಸಿ ಮತ್ತೊಂದು ದಾಖಲೆ ನಿರ್ಮಿಸಿದೆ.  ಹೊಚ್ಚಹೊಸ ಈ ಮ್ಯಾಗ್ಲೆವ್ ರೈಲು  ಮ್ಯಾಗ್ನೆಟಿಕ್ ಲೆವಿಟೇಶನ್(magnetism )ಹೈ ಸ್ಪೀಡ್ ರೈಲು. 

China Aerospace Science and industry Corporation

ಮ್ಯಾಗ್ನೆಟಿಕ್ ಲೆವಿಟೇಶನ್ ರೈಲು ಸಂಪೂರ್ಣವಾಗಿ ಎಲೆಕ್ಟ್ರೋ ಮ್ಯಾಗ್ನೆಟಿಕ್ ತಂತ್ರಜ್ಞಾನದ ಮೇಲೆ ಚಲಿಸುತ್ತದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ನಿರ್ವಾತ ಟ್ಯೂಬ್ ಹೆಚ್ಚಿನ ವೇಗವನ್ನು ಸಾಧಿಸಲು ಗಾಳಿಯ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರಸ್ತುತ ಗಂಟೆಗೆ 623 ಕಿ.ಮೀ ವೇಗದಲ್ಲಿ ಹೊಸ ದಾಖಲೆ ನಿರ್ಮಿಸಿರುವ ಮ್ಯಾಗ್ಲೆವ್ ರೈಲು ಶೀಘ್ರದಲ್ಲಿಯೇ 1000 ಕಿ.ಮೀ ವೇಗವನ್ನು ತಲುಪುವ ಗುರಿ ಹೊಂದಿದೆ. 

ನೀವು ಇದನ್ನೂ ಓದಬಹುದು:ಹಳಿ ಸೇರಿದ ನಮ್ಮ ಮೆಟ್ರೋ ಚಾಲಕ ರಹಿತ ರೈಲುಗಳು

 ಮ್ಯಾಗ್ಲೆವ್ ರೈಲು 2 ಕಿಲೋಮೀಟರ್ ಉದ್ದದ ಕಡಿಮೆ ಒತ್ತಡದ ಹೈಪರ್‌ಲೂಪ್‌ನಲ್ಲಿ ಗಂಟೆಗೆ 623 ಕಿಲೋಮೀಟರ್ ವೇಗದಲ್ಲಿ ಚಲಿಸಿದೆ ಎಂದು ಕಂಪನಿ ತಿಳಿಸಿದೆ. ಅತಿ ವೇಗದ ಹೈಪರ್‌ಲೂಪ್ ರೈಲು ಅತ್ಯಂತ ಕಡಿಮೆ ಒತ್ತಡದ ಟ್ಯೂಬ್‌ನಲ್ಲಿ ಪ್ರಯಾಣಿಸುವಾಗ ಒಂದು ನಿರ್ದಿಷ್ಟ ವೇಗವನ್ನು ತಲುಪಿರುವುದು ಇದೇ ಮೊದಲು. ಅಂದರೆ ಚೀನಾ ಶೀಘ್ರದಲ್ಲೇ ವಿಮಾನದ ವೇಗದಲ್ಲಿ ಚಲಿಸುವ ರೈಲನ್ನು ತಯಾರಿಸಲಿದೆ. 

Maglev Train

ಮ್ಯಾಗ್ಲೆವ್ ರೈಲು ಲಭ್ಯವಾದರೆ, ಬೀಜಿಂಗ್ ಮತ್ತು ಶಾಂಘೈ ನಡುವಿನ ಅಂತರವನ್ನು ಕೇವಲ 2 ಗಂಟೆಗಳಲ್ಲಿ ತಲುಪಬಹುದು ಎಂದು ಅಂದಾಜಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯನ್ನು ಹಂತ ಹಂತವಾಗಿ ತರುತ್ತಿರುವ ಮ್ಯಾಗ್ಲೆವ್ ರೈಲು ಯಶಸ್ವಿಯಾಗಲಿ ಎಂಬ ವಿಶ್ವಾಸವಿದೆ.

ಪ್ರಸ್ತುತ ಚೀನಾ(China) ,ಜಪಾನ್(Japan) ಮತ್ತು ದಕ್ಷಿಣ ಕೊರಿಯಾ(South coariea)ಮಾತ್ರ ಮ್ಯಾಗ್ಲೆವ್ ರೈಲುಗಳನ್ನು ನಿರ್ವಹಿಸುತ್ತಿವೆ. ಇಂತಹ ರೈಲುಗಳು ಮ್ಯಾಗ್ಲವೆ ತಂತ್ರಜ್ಞಾನದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತವೆ. ರೈಲನ್ನು ಮುಂದಕ್ಕೆ ಓಡಿಸಲು ಕಾಂತೀಯ ಬಲವನ್ನೂ ಬಳಸಲಾಗುತ್ತದೆ. ಹಾಗೆಯೇ ಈ ರೈಲು ಪಟ್ಟಾಗಳಿಲ್ಲದೆ ಸ್ವಲ್ಪ ಹೊತ್ತು ಗಾಳಿಯಲ್ಲಿ ತೇಲುತ್ತಲೂ ಸಂಚರಿಸಬಲ್ಲದು. ರೈಲಿನ ವೇಗವನ್ನು ಮತ್ತಷ್ಟು ಹೆಚ್ಚಿಸಲು ಲೋ ವ್ಯಾಕ್ಯುಮ್ (Low vaccum)ಟ್ಯೂಬ್ ನಲ್ಲಿ ಓಡಿಸಲಾಗುತ್ತಿದೆ.ಚೀ

China

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

ಷತೆ..? ಈ ಲೇಖನ ಓದಿ..

Related Articles

Leave a Reply

Your email address will not be published. Required fields are marked *

Back to top button