ವಿಂಗಡಿಸದಸಂಸ್ಕೃತಿ, ಪರಂಪರೆ

ವಾರಣಾಸಿಗೆ ಹೋದವರು ಸಾರನಾಥಕ್ಕೂ ಹೋಗಿ ಬನ್ನಿ.

ವಾರಣಾಸಿ,(Varanasi )ಈ ಜಾಗವನ್ನು ಜೀವನದಲ್ಲಿ ಒಮ್ಮೆಯಾದರೂ ಕಣ್ತುಂಬಿಕೊಳ್ಳಬೇಕು ಅಂತ ಆಸೆ ಪಡುವ ಅದೆಷ್ಟೋ ಮಂದಿಯಿದ್ದಾರೆ. ಹೆಚ್ಚಿನವರು ವಾರಣಾಸಿ ಕಾಣಲು ಹೋದಾಗ ಸಾರನಾಥವನ್ನೂ (Sarnath)ನೋಡಿ ಬರುತ್ತಾರೆ.

ಸಾರನಾಥ ವಾರಣಾಸಿಯಿಂದ ಹತ್ತು ಕಿಲೋಮೀಟರ್‌ಗಳ ದೂರದಲ್ಲಿದೆ. ಪ್ರಪಂಚದ ಪವಿತ್ರ ಬೌದ್ಧ ಸ್ಥಳಗಳಲ್ಲಿ (Buddhist Pilgrimage) ಇದು ಕೂಡ ಒಂದು.

ಇದು ಉತ್ತಮ ಕಲಿಕೆಯ ಕೇಂದ್ರ, ತೀರ್ಥಯಾತ್ರೆಯ ಸ್ಥಳ. ಸನ್ಯಾಸಿಗಳು ಮತ್ತು ವಿದ್ವಾಂಸರಿಗೆ ವಿಹಾರವೂ ಹೌದು. ವಾರಣಾಸಿಯ ಗಿರಿಜಾಘರ್‌ (Girijaghar )ಚೌಕದಿಂದ 15 ಕಿ.ಮೀ. ದೂರದಲ್ಲಿ ಉತ್ತರಪ್ರದೇಶದ ಗಂಗಾ(Ganga), ವರುಣ(Varuna ) ನದಿಗಳ ಸಂಗಮದ ಬಳಿ ಸಾರನಾಥವಿದೆ. ಕಾಶಿ (Kaashi )ನೋಡಲು ಹೋದವರು ಒಮ್ಮೆ ಸಾರನಾಥವನ್ನು ನೋಡಲು ಹೋಗದಿದ್ದರೆ ನಿಮ್ಮ ಪ್ರವಾಸವೇ ಅಪೂರ್ಣದಂತೆ.

Varanasi

ಸಾರಂಗನಾಥ (saranganatha )ಪದದ ಸಂಕ್ಷಿಪ್ತ ರೂಪ ಸಾರನಾಥ ಎಂದು ಹೇಳಲಾಗುತ್ತದೆ. ಸಾರನಾಥದಲ್ಲಿರುವ ಪುರಾತತ್ವ ಶಾಸ್ತ್ರದ ಸಂಕೀರ್ಣದ ಪಕ್ಕದಲ್ಲಿ ಇರುವ ಜಿಂಕೆ ಉದ್ಯಾನದಲ್ಲಿ ಗೌತಮ ಬುದ್ಧನು(Gautam Buddha) ಮೊದಲ ಧರ್ಮೊಪದೇಶವನ್ನು ನೀಡಿದನೆಂದು ನಂಬಲಾಗಿದೆ. ಬುದ್ಧನ ಮೊದಲ ಬೋಧನೆಯನ್ನು ಧರ್ಮಚಕ್ರ ಪ್ರವರ್ತನ ಸೂತ್ರ ಎಂದು ಕರೆಯಲಾಗುತ್ತದೆ. ವಾರಣಾಸಿ ಅಥವಾ ಬನಾರಸ್‌ (Banaras) ಸಮೀಪ ಕಾರಣದಿಂದ ಬುದ್ಧನು ಸಾರನಾಥವನ್ನು ಆರಿಸಿಕೊಂಡನೆಂದು ಇತಿಹಾಸದಲ್ಲಿ ಉಲ್ಲೇಖಗೊಂಡಿದೆ.

Saranatha

. ನೀವು ಇದನ್ನು ಇಷ್ಟ ಪಡಬಹುದು:ಹರಿದ್ವಾರ ರಸ್ತೆಗಳ ತುಂಬಾ ಪೌರಾಣಿಕ ಗ್ರಾಫಿಟಿ: ಮಹಾ ಕುಂಭಮೇಳಕ್ಕೆ ಪೂರ್ಣ ಕುಂಭ ಸ್ವಾಗತ

ನಾಲ್ಕು ಪ್ರಮುಖ ಬೌದ್ಧ ಯಾತ್ರಾ ಸ್ಥಳಗಳಲ್ಲಿ ಇದೂ ಮಹತ್ವವಾದದ್ದು. ಇಲ್ಲಿ ಕಂಡುಬರುವುದು ಹೆಚ್ಚಿನದಾಗಿ ಚಕ್ರವರ್ತಿ ಅಶೋಕನ (Ashoka)ಕಾಲದ ಸ್ಮಾರಕಗಳು. ಕಳಿಂಗ ಯುದ್ಧದ ನಂತರ ಸಾಮ್ರಾಟ ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿ, ಆ ಪ್ರಭಾವದಿಂದ ಸಾರನಾಥದಲ್ಲಿ ಅನೇಕ ಸ್ಮಾರಕಗಳನ್ನು ನಿರ್ಮಿಸಲು ಪ್ರಾರಂಭಿಸಿದನು. ಅದರಲ್ಲಿ ಏಕಶಿಲೆಯ ರೇಲಿಂಗ್‌ನ ಕಿರೀಟವನ್ನು ಹೊಂದಿದ ಧರ್ಮ ರಾಜಿಕ ಸ್ತೂಪವೂ ಒಂದು.

North east

ಬುದ್ಧನ ಧರ್ಮೊಪದೇಶದ ಬಗ್ಗೆ ಅರಿಯುವು­ದರಿಂದ ಹಿಡಿದು ಹಿಂದಿನ ಕಾಲದ ಶಿಲ್ಪಗಳನ್ನು ಕಣ್ತುಂಬಿ­ ಕೊಳ್ಳುವುದು ಇಲ್ಲಿನ ಸ್ಮರಣೀಯ ಅನುಭವ. ಇಲ್ಲಿ ಅನೇಕ ದೇವಸ್ಥಾನಗಳು, ಹಳೆಯ ಮಠಗಳು ಮತ್ತು ಭವ್ಯವಾದ ಕಟ್ಟಡಗಳು ನೋಡುಗರ ಗಮನ ಸೆಳೆಯುವಂತಿವೆ.

Goutham Buddha

ಸಾರನಾಥ , ವಾರಣಾಸಿಯಿಂದ 10 ಕಿ.ಮೀ. ದೂರದಲ್ಲಿ.ದೆ ಯಾವುದೇ ರೀತಿಯ ಸಾರಿಗೆಯನ್ನು ಬಳಸಿಕೊಂಡು ಅಲ್ಲಿಗೆ ತಲುಪಬಹುದು. ವಾರಣಾಸಿ­ ಯಿಂದ ಆಟೊ, ಕ್ಯಾಬ್‌ಗಳು ದೊರಕುತ್ತವೆ. ವಾರಣಾಸಿಯ ಲಾಲ್‌ ಬಹದ್ದೂರ್‌ ಶಾಸ್ತ್ರಿ ವಿಮಾನ ನಿಲ್ದಾಣವು ಸಾರನಾಥಕ್ಕೆ 20-25 ಕಿ.ಮೀ. ದೂರವಿದೆ. ರೈಲ್ವೇ ಸ್ಟೇಷನ್‌ ಕೂಡ ಇದೆ. ಸಾರನಾಥಕ್ಕೂ ರೈಲ್ವೆ ನಿಲ್ದಾಣವಿದೆ. ವಾರಣಾಸಿ ಕ್ಯಾಂಟ್‌ ರೈಲು ನಿಲ್ದಾಣವು 6 ಕಿ.ಮೀ., ದೀನ್‌ ದಯಾಳ್‌ ಉಪಾಧ್ಯಾಯ ಜಂಕ್ಷನ್‌ ನಿಂದ 17 ಕಿ.ಮೀ. , ಬನಾರಸ್‌ ನಿಲ್ದಾಣದಿಂದ 14 ಕಿ.ಮೀ. ದೂರದಲ್ಲಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button