ವಿಂಗಡಿಸದಸ್ಮರಣೀಯ ಜಾಗ

ಭಾರತೀಯ ರೈಲ್ವೇಯಿಂದ ಅಯೋಧ್ಯಾ- ರಾಮೇಶ್ವರಂ ಪ್ರವಾಸ ಪ್ಯಾಕೇಜ್ ಘೋಷಣೆ; ಇಲ್ಲಿದೆ ವಿವರ

ಅಯೋಧ್ಯೆಯ ರಾಮ ಮಂದಿರದಲ್ಲಿ ಜ.22 ಕ್ಕೆ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮ ನಡೆಯಲಿದೆ. ಅಯೋಧ್ಯಾ ರಾಮನನ್ನು ನೋಡಲು ಜನರು ಕಾತುರರಾಗಿದ್ದಾರೆ. ಈಗಾಗಲೇ ವಿಮಾನ, ವಿಶೇಷ ರೈಲುಗಳು, ವಂದೇ ಭಾರತ್ ರೈಲು, ಅಮೃತ್ ಭಾರತ್ ರೈಲುಗಳ ಸೌಲಭ್ಯಗಳನ್ನು ಜನರ ಅನುಕೂಲಕ್ಕಾಗಿ ಆರಂಭಿಸಲಾಗಿದೆ.

ಇದೇ ಸಂದರ್ಭದಲ್ಲಿ ಭಾರತೀಯ ರೈಲ್ವೆ ಮತ್ತೆ ಇನ್ನೊಂದು ಶುಭ ಸುದ್ದಿಯನ್ನು ಹೊತ್ತು ತಂದಿದೆ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ವಿಶೇಷ ರಾಮಾಯಣ ಸರ್ಕ್ಯೂಟ್ ರೈಲನ್ನು (Circuit Train) ಆರಂಭಿಸಿದೆ.

ಈ ಪ್ರವಾಸ ಪ್ಯಾಕೇಜ್ ನ ಮೂಲಕ ಯಾತ್ರಾರ್ಥಿಗಳು ಅಯೋಧ್ಯೆಯಿಂದ ರಾಮೇಶ್ವರಂವರೆಗಿನ ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ಏಳು-ರಾತ್ರಿ, ಎಂಟು-ದಿನಗಳ ಪ್ಯಾಕೇಜ್ ಇದಾಗಿದ್ದು, ಅಯೋಧ್ಯೆ ಕ್ಯಾಂಟ್‌ನಿಂದ ಪ್ರಾರಂಭವಾಗಿ ತಿರುಚಿರಾಪಳ್ಳಿ, ಮಧುರೈ ಮೂಲಕ ರಾಮೇಶ್ವರಂನಲ್ಲಿ ಕೊನೆಗೊಳ್ಳುತ್ತದೆ.

ಅಯೋಧ್ಯಾ ಕ್ಯಾಂಟ್ – ತಿರುಚಿರಾಪಳ್ಳಿಲಿ-ಮಧುರೈ-ರಾಮೇಶ್ವರಂ-ಅಯೋಧ್ಯಕ್ಯಾಂಟ್ ( ಪ್ಯಾಕೇಜ್ ಕೋಡ್:NLR027) ಈ ರೈಲು 10-ಜನವರಿ-24 ಮುಂಬರುವ ಪ್ರಯಾಣದ ದಿನಾಂಕವನ್ನು ಹೊಂದಿದೆ. ಪ್ರತಿ ಬುಧವಾರ ಇದು ಆರಂಭಗೊಳ್ಳುತ್ತದೆ. ಎಂಟು ದಿನಗಳ ಈ ಪ್ಯಾಕೇಜ್ ದಿನಕ್ಕೆ ಸುಮಾರು 2000 ರೂ. ದರವನ್ನು ಹೊಂದಿದೆ.

ಟ್ರಿಪಲ್ ಆಕ್ಯುಪೆನ್ಸಿ ಆಧಾರದ ಮೇಲೆ ಈ ಪ್ಯಾಕೇಜ್‌ನ ಆರಂಭಿಕ ಬೆಲೆ ರೂ 16,735, ಡಬಲ್ ಆಕ್ಯುಪೆನ್ಸಿ ಆಧಾರದ ಮೇಲೆ ರೂ 20,035, ಸಿಂಗಲ್ ಆಕ್ಯುಪೆನ್ಸಿ ಆಧಾರದ ಮೇಲೆ ರೂ 32,255/- ದರವನ್ನು ಹೊಂದಿದ್ದು, ಮಗುವಿನೊಂದಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಹಾಸಿಗೆ ಅವಶ್ಯಕತೆ ಆಧಾರದ ಮೇಲೆ ಬೆಲೆ ವ್ಯತ್ಯಾಸವಾಗುತ್ತದೆ.

ಈ ರೈಲು ಅಯೋಧ್ಯೆಯಿಂದ ಆರಂಭವಾಗಿ ದಕ್ಷಿಣ ಭಾರತದ ಪ್ರಾಚೀನ ದೇವಾಲಯವಾದ ತಿರುಚಿರಾಪಳ್ಳಿಗೆ (Tiruchinappalli) ಪ್ರಯಾಣಿಸಲಿದೆ. ನಂತರ ಐತಿಹಾಸಿಕ ಹಿಂದೂ ದೇವಾಲಯ ರಂಗನಾಥಸ್ವಾಮಿಗೆ ಹೆಸರುವಾಸಿಯಾದ ಕಾವೇರಿ ಮತ್ತು ಕೊಲ್ಲಿಡಂ ನದಿಗಳಿಂದ ಆವೃತವಾಗಿರುವ ಶ್ರೀರಂಗಂ ದ್ವೀಪಕ್ಕೆ ಕರೆದೊಯ್ಯುತ್ತದೆ.

ತರುವಾಯ, ಶಿವನಿಗೆ ಸಮರ್ಪಿತವಾದ ಜಂಬುಕೇಶ್ವರ-ಅಖಿಲಾಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಲಾಗುತ್ತದೆ. ನಂತರ ರೈಲು ಮಧುರೈನಲ್ಲಿರುವ (Madurai) ಮೀನಾಕ್ಷಿ ಅಮ್ಮನ್ ದೇವಸ್ಥಾನ ಮತ್ತು ಪಂಬನ್ ದ್ವೀಪದಲ್ಲಿರುವ ರಾಮೇಶ್ವರಂಗೆ (Rameshwaram) ಭೇಟಿ ನೀಡುವುದರೊಂದಿಗೆ ಮುಕ್ತಾಯವಾಗುತ್ತದೆ.

ಈ ಪ್ರವಾಸ ಪ್ಯಾಕೇಜ್‌ ಗೆ ( Ayodhya-Rameshwaram tour package) ಪ್ರಯಾಣ ಮಾಡಲು ಬಯಸುವ ಯಾತ್ರಿಕರು IRCTC Tourism ವೆಬ್ ಸೈಟ್ ನ ಮೂಲಕ ಕಾಯ್ದಿರಿಸಿಕೊಳ್ಳಬೇಕು. ಕಾಯ್ದಿರಿಸಿಕೊಂಡಿರುವ ಯಾತ್ರಿಕರು ರೈಲು ಹೊರಡುವ ಮೊದಲು ಕನಿಷ್ಠ 30 ನಿಮಿಷದ ಮೊದಲು ಬೋರ್ಡಿಂಗ್/ಡಿ ಬೋರ್ಡಿಂಗ್ ಸ್ಟೇಷನ್‌ಗಳನ್ನು ತಲುಪಬೇಕು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button