ಕೇರಳದಲ್ಲಿ ಅರಳಿ ನಿಂತ 12 ವರ್ಷಕೊಮ್ಮೆ ಅರಳುವ ಅಪರೂಪದ ನೀಲಕುರಿಂಜಿ ಹೂವು

ಭಾರತದ ಪಶ್ಚಿಮ ಘಟ್ಟಗಳಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಅರಳುವ ನೀಲಕುರಿಂಜಿ ಹೂವು. ಇದೀಗ ಕೇರಳದ ಇಡುಕ್ಕಿಯ ಸಂತಾನಪುರಂ ಪಶ್ಚಿಮ ಘಟ್ಟಗಳ ಶ್ರೇಣಿ ಪ್ರಕೃತಿಯ ವೈಶಿಷ್ಟ್ಯಕ್ಕೆ ಸಾಕ್ಷಿಯಾಗಿ ಜನರ ಕಣ್ಮನ ಸೆಳೆಯುತ್ತಿದೆ.
- ನವ್ಯಶ್ರೀ ಶೆಟ್ಟಿ
ದೇವರ ಸ್ವಂತ ನಾಡು ಕೇರಳ ಹಲವು ಕಾರಣಗಳಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಾ ಇರುತ್ತದೆ ದ್ವೀಪಗಳು , ಬೆಟ್ಟಗಳು,ಎಸ್ಟೇಟ್ ಗಳಿಂದ ಕೇರಳ ಪ್ರವಾಸಿಗರಿಗೆ ನೆಚ್ಚಿನ ಜಾಗವಾಗಿದೆ. ಪ್ರವಾಸಿಗರನ್ನು ಸದಾ ಆಕರ್ಷಿಸುವ ಕೇರಳ ಇದೀಗ ಪ್ರಕೃತಿ ವೈಶಿಷ್ಟ್ಯದಿಂದ ಜನರ ಕಣ್ಮನ ಸೆಳೆಯುತ್ತಿದೆ.
ಕೇರಳದಲ್ಲಿ ನೀಲಕುರಿಂಜಿಯ ಸೌಂದರ್ಯ
ಕೇರಳದಲ್ಲಿ ಇದೀಗ ನೀಲಕುರಿಂಜಿ ಹೂವುಗಳ ಸುದ್ದಿಯೇ ಸದ್ದು ಮಾಡುತ್ತಿದೆ. ಕೇರಳದ ಪಶ್ಚಿಮ ಘಟ್ಟಗಳಲ್ಲಿ ನೀಲಕುರಿಂಜಿ ಹೂವು ಅರಳಿ ನಿಂತಿದೆ . ನೀಲಕುರಿಂಜಿಯ ಸೌಂದರ್ಯ ಹಾಗೂ ಸುವಾಸನೆಗೆ ಪ್ರವಾಸಿಗರು ಫಿದಾ ಆಗಿದ್ದಾರೆ. ಪಶ್ಚಿಮ ಘಟ್ಟದ ಬೆಟ್ಟಗಳ ಶ್ರೇಣಿಯಲ್ಲಿ ಅರಳಿನಿಂತ ಈ ನೀಲಕುರಿಂಜಿ ಹೂವು ಸದ್ಯ ಎಲ್ಲರ ಕಣ್ಮನ ಸೆಳೆಯುತ್ತಿದೆ. ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ಅಪರೂಪದ ಹೂವು ಸದ್ಯ ಕೇರಳದ ಇಡುಕ್ಕಿಯ ಬೆಟ್ಟಗಳ ನಡುವಿನ 12 ಎಕರೆ ಪ್ರದೇಶದಲ್ಲಿ ಕಂಡುಬಂದಿದೆ.

ದೇವರನಾಡಿನಲ್ಲಿ ಕಂಡು ಬಂದಿರುವ ಈ ಅಪರೂಪದ ಹೂವು ಸಂತಾನಪುರಂ ಪಟ್ಟಣದ ಪಶ್ಚಿಮ ಘಟ್ಟಗಳ ಶಾಲೊಮ್ ಶ್ರೇಣಿಯ ನಡುವೆ ಅರಳಿ ನಿಂತಿದೆ.
ಭಾರತದಲ್ಲಿ ಕಂಡು ಬರುವ ಅಪರೂಪದ ನೀಲಕುರಿಂಜಿ
ನೀಲಕುರಿಂಜಿ ಭಾರತದಲ್ಲಿ ಮಾತ್ರ ಕಂಡು ಬರುವಂತಹ ಅಪರೂಪದ ಹೂವು. ಇನ್ನೊಂದು ವಿಶೇಷತೆಯೆಂದರೆ ಭಾರತದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹೊರತುಪಡಿಸಿ ಬೇರೆಲ್ಲೂ ನೀವು ಈ ಹೂವಿನ ಸೊಬಗು ನೋಡಲು ಸಾಧ್ಯವಿಲ್ಲ. ಕೇರಳ ರಾಜ್ಯದಲ್ಲಿ ಸುಮಾರು 43 ಬಗ್ಗೆಯ ನೀಲಕುರಿಂಜಿ ಹೂವುಗಳನ್ನು ನೀವು ನೋಡಬಹುದು.
12 ವರ್ಷಕ್ಕೊಮ್ಮೆ ಹೂ ಬಿಡುವ ನೀಲಕುರಿಂಜಿ ಅಪರೂಪದ ಸಸ್ಯ ಸಂಪತ್ತಿನಲ್ಲಿ ಒಂದು.
ಮೂವತ್ತರಿಂದ ಅರವತ್ತು ಸೆಂಟಿ ಮೀಟರ್ ಗಳಷ್ಟು ಉದ್ದವಾಗಿ ನೀಲಕುರಿಂಜಿ ಹೂವು ಬೆಳೆಯುತ್ತದೆ.
ದೇವರ ನಾಡು ಈ ಪ್ರಕೃತಿಯ ವಿಸ್ಮಯಕ್ಕೆ ಸಾಕ್ಷಿ ಆಗುತ್ತಿರುವುದು ಇದೇ ಮೊದಲಲ್ಲ . 2018ರಲ್ಲಿ ಕೇರಳದ ಮುನ್ನಾರ್ ಪ್ರದೇಶದ ಅಣ್ಣಾಮಲೈ ಪರ್ವತ ಶ್ರೇಣಿಯ ಎರವಿಕೂಲಮ್ (Eravikulam) ನ್ಯಾಷನಲ್ ಪಾರ್ಕ್ ನೀಲಕುರಿಂಜಿ ಸೌಂದರ್ಯಕ್ಕೆ ಸಾಕ್ಷಿಯಾಗಿತ್ತು.
ನೀವುಇದನ್ನುಇಷ್ಟಪಡಬಹುದು: ಪ್ರವಾಸಿಗರ ಪ್ರವೇಶಕ್ಕೆ ಮುಕ್ತವೆಂದ ಉತ್ತರಾಖಂಡದ ಸುಂದರ ವ್ಯಾಲಿ ಆಫ್ ಫ್ಲವರ್ಸ್ ಉದ್ಯಾನವನ

ಪ್ರವಾಸಿಗರಿಗೆ ನಿರಾಸೆ
ಮನುಷ್ಯ ತನ್ನ ಕೆಲಸಗಳನ್ನು ಸರಿಯಾಗಿ ನಿರ್ವಹಿಸದೇ ಇರಬಹುದು, ಆದರೆ ಪ್ರಕೃತಿ ತನ್ನ ಕರ್ತವ್ಯವನ್ನು ಚಾಚು ತಪ್ಪದೇ ಪಾಲಿಸುತ್ತದೆ ಎನ್ನುವುದಕ್ಕೆ ಇಂತಹ ವಿಸ್ಮಯಗಳೇ ಸಾಕ್ಷಿ. ಅರಳಿ ನಿಂತಿರುವ ನೀಲಕುರಿಂಜಿ ಹೂವು ಸಹಜವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ ಕೇರಳ ರಾಜ್ಯದಲ್ಲಿ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆ , ನೀಲಕುರಿಂಜಿಯ ಸೌಂದರ್ಯವನ್ನು ಸವಿಯಬೇಕು ಅನ್ನುವ ಆಸೆಯಿರುವ ಪ್ರವಾಸಿಗರಿಗೆ ನಿರಾಸೆ ಎದುರಾಗಿದೆ
ಹೆಚ್ಚುತ್ತಿರುವ ವೈರಸ್ ಪ್ರಕರಣಗಳಿಂದ ನೀಲಿ ನೀಲ ಕುರಿಂಜಿಯ ಸೌಂದರ್ಯ ಸವಿಯಲು ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಪ್ರಕೃತಿಯ ವಿಸ್ಮಯ ಸವಿಯಬೇಕು ಅಂದುಕೊಂಡ ನಿಸರ್ಗ ಪ್ರೇಮಿಗಳಿಗೆ ಬೇಸರದ ಸಂಗತಿ. ಆದರೆ ಸಾಮಾಜಿಕ ಜಾಲ ತಾಣಗಳಲ್ಲಿ ನೀಲಕುರಿಂಜಿಯ ಸೌಂದರ್ಯಕ್ಕೆ ಜನ ಫಿದಾ ಆಗಿದ್ದಾರೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ