ವಿಂಗಡಿಸದ

ಅ.21.2023; ನವರಾತ್ರಿಯ ಏಳನೇ ದಿನ “ಕಾಳರಾತ್ರಿ”ಯ ಆರಾಧನೆ

ಆಶ್ವಯುಜ ಮಾಸದ ಶುಕ್ಲಪಕ್ಷದ ಸಪ್ತಮಿ ದುರ್ಗಾ ದೇವಿಯ ಅವತಾರವಾದ “ಕಾಳರಾತ್ರಿ” ಯನ್ನು ಆರಾಧಿಸಲಾಗುತ್ತದೆ. ಕಾಳರಾತ್ರಿಯ ಹಿನ್ನಲೆ ಮತ್ತು ವೈಶಿಷ್ಟ್ಯತೆ ಹಾಗೂ ಮೈಸೂರು ದಸರಾ 2023 ಕಾರ್ಯಕ್ರಮಗಳ ಕುರಿತಾದ ಲೇಖನ.

ಉಜ್ವಲಾ ವಿ.ಯು.

ಕಾಳರಾತ್ರಿಯ ವೈಶಿಷ್ಟ್ಯತೆ:

ನವರಾತ್ರಿ ಹಬ್ಬದ 7ನೇ ದಿನವನ್ನು ದುರ್ಗಾ ದೇವಿಯ ಭಯಾನಕ ರೂಪವಾದ ತಾಯಿ ಕಾಳರಾತ್ರಿಗೆ ಸಮರ್ಪಿಸಲಾಗಿದೆ. ಈಕೆ ದುಷ್ಟರನ್ನು ಸಂಹರಿಸಲೆಂದೇ ಅವತರಿಸಿದ ದುರ್ಗೆಯ ರೂಪ.

ಕಾಳರಾತ್ರಿ ರೂಪವು ಮೂರು ಕಣ್ಣುಗಳನ್ನು ಹೊಂದಿದ್ದು, ತಲೆ ಕೂದಲನ್ನು ಹರಡಿಕೊಂಡಿರುತ್ತಾಳೆ. ಕೊರಳಲ್ಲಿ ರುಂಡಗಳ ಮಾಲೆಯನ್ನು ಧರಿಸಿರುತ್ತಾಳೆ. ಕತ್ತೆ ಇವಳ ವಾಹನ. ದೇವಿಯ ಇಡೀ ದೇಹ ದಟ್ಟ ಕಪ್ಪು ಬಣ್ಣದಿಂದ ಕೂಡಿರುವುದರಿಂದಲೇ ಇವಳನ್ನು ಕಾಳರಾತ್ರಿ ಕರೆಯಲಾಗುತ್ತದೆ. ಈಕೆಯ ರೂಪವೇ ಭಯಾನಕ.

Navaratri 7th Day: Kalaratri

ಆದರೆ ಒಳ್ಳೆಯವರಿಗೆ ಇವಳು ಶುಭಪ್ರದಳು. ಈಕೆ ಭಕ್ತರ ಭಯ ಮತ್ತು ರೋಗಗಳನ್ನು ನಾಶಪಡಿಸುವವಳು. ಇದರೊಂದಿಗೆ ದೆವ್ವ, ಮಾಟಮಂತ್ರ, ಅಕಾಲಿಕ ಮರಣ, ರೋಗ, ದುಃಖ ಇತ್ಯಾದಿ ಎಲ್ಲಾ ರೀತಿಯ ಸಮಸ್ಯೆಗಳಿಂದಲೂ ಈಕೆಯ ಪೂಜೆಯಿಂದ ಮುಕ್ತಿ ಪಡೆದುಕೊಳ್ಳಬಹುದು ಎಂದು ನಂಬಲಾಗಿದೆ.

ದೈತ್ಯ, ದಾನವ, ಭೂತ, ಪ್ರೇತ ಮುಂತಾದ ಋಣಾತ್ಮಕ ಶಕ್ತಿಗಳಿಗೆ ಇವಳು ಮರಣ ಭಯವನ್ನು ನೀಡುವವಳು. ಧಾರ್ಮಿಕ ನಂಬಿಕೆಗಳ ಪ್ರಕಾರ, ಕಾಳರಾತ್ರಿ ದೇವಿಯನ್ನು ಪೂಜಿಸುವುದರಿಂದ ಒಬ್ಬರು ಎಲ್ಲಾ ಆಧ್ಯಾತ್ಮಿಕ ಸಾಧನೆಗಳನ್ನು ಸಾಧಿಸುತ್ತಾರೆ. ತಂತ್ರ ಮಂತ್ರದ ಸಾಧಕರು ವಿಶೇಷವಾಗಿ ತಾಯಿ ಕಾಳರಾತ್ರಿಯನ್ನು ಪೂಜಿಸುತ್ತಾರೆ.

ಮೈಸೂರಿನ ಅರಮನೆ ಮೈದಾನದಲ್ಲಿ ಇಂದಿನ ಕಾರ್ಯಕ್ರಮಗಳು:

ಅಕ್ಟೋಬರ್ 21 ರಂದು ಶನಿವಾರ ವಿವಿಧ ವೇದಿಕೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

Mysore Dasara 2023

ಅರಮನೆ ವೇದಿಕೆಯಲ್ಲಿ ಇಂದು ಶನಿವಾರ ಸಂಜೆ 6 ಗಂಟೆಯಿಂದ ವಿದ್ವಾನ್ ಡಾ.ಸಿ.ಎ.ಶ್ರೀಧರ್ ಅವರಿಂದ ಕರ್ನಾಟಕ ಶಾಸ್ತ್ರೀಯ ವೇಣುವಾದನ, ನಂತರ ಚೌಡಿಕೆ ಪದಗಳು ಖ್ಯಾತಿಯ ಶಿಲ್ಪಾ ಮುಡಜಿ ಅವರಿಂದ ಮರೆತ ಮಣ್ಣಿನ ಹಾಡುಗಳು (ಉತ್ತರ ಕರ್ನಾಟಕದ ಹಾಡುಗಳು). ರಾತ್ರಿ 7.30ರಿಂದ 8.30ರ ತನಕ ಮೈಸೂರು ಪಂಡಿತ್ ರಾಜೀವ್ ತಾರಾನಾಥ್ ಅವರಿಂದ ಸರೋದ್ ವಾದನ, ವಿದ್ವಾನ್ ರಾಜೇಶ್ ವೈದ್ಯ ಮತ್ತು ವಿದ್ವಾನ್ ಯು ರಾಜೇಶ್ ಅವರಿಂದ ವೀಣಾ – ಮ್ಯಾಂಡೋಲಿನ್ ಜುಗಲ್‌ಬಂದಿ ಫ್ಯೂಷನ್ ಕಾರ್ಯಕ್ರಮಗಳು ನಡೆಯುತ್ತಿವೆ.

ಜಗನ್ಮೋಹನ ಅರಮನೆ ಇಂದು ಸಂಜೆ 6ರಿಂದ 6.45ರ ತನಕ ಮಂಡ್ಯ ಕೆ.ಆರ್.ಪೇಟೆಯ ಎ.ಎಂ.ಗೋವಿಂದರಾಜು ಅವರಿಂದ ನಾದಸ್ವರ, ನಂತರ ದಕ್ಷಿಣ ಕನ್ನಡ ಭರತಾಂಜಲಿ ತಂಡದಿಂದ ಭರತನಾಟ್ಯ. ನಂತರ ತುಮಕೂರು ಡಾ.ಲಕ್ಷ್ಮಣದಾಸ್ ಅವರಿಂದ ಹರಿಕಥೆ, ಡಾ.ತುಳಸಿ ರಾಮಚಂದ್ರ ಅವರಿಂದ ನೃತ್ಯರೂಪಕ ಕಾರ್ಯಕ್ರಮಗಳು ನಡೆಯುತ್ತಿವೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button