ದೂರ ತೀರ ಯಾನಬೆರಗಿನ ಪಯಣಿಗರುವಂಡರ್ ಬಾಕ್ಸ್ವಿಂಗಡಿಸದಸ್ಫೂರ್ತಿ ಗಾಥೆ

ನಾಲ್ಕು ಖಂಡಗಳ ಅತಿ ಎತ್ತರದ ಶಿಖರಗಳನ್ನೇರಿ ದೇಶದ ಧ್ವಜ ನೆಟ್ಟ ಕನ್ನಡ ನಾಡಿನ ಹೆಮ್ಮೆಯ ದೇಶಪ್ರೇಮಿ ನಂದಿತಾ ನಾಗನಗೌಡರ್

ಈ ಹುಡುಗಿಗೆ ಏಳು ಖಂಡಗಳ ಎತ್ತರದ ಶಿಖರದಲ್ಲಿ ತ್ರಿವರ್ಣ ದ್ವಜ ಹಾರಿಸುವ ಕನಸು. ತನ್ನ ಕನಸು ಈಡೇರಿಸಿಕೊಳ್ಳಲು ಇನ್ನೇನು 3 ಮೆಟ್ಟಿಲು ಬಾಕಿ. 2016ರಲ್ಲೇ ಮೌಂಟ್ ಎವರೇಸ್ಟ್ ಏರಿದ ಈಕೆ ಈಗಾಗಲೇ ನಾಲ್ಕು ಖಂಡಗಳ ಅತಿ ಎತ್ತರದ ಶಿಖರಗಳಲ್ಲಿ ದೇಶದ ಧ್ವಜ ನೆಟ್ಟ ಹೆಮ್ಮೆಯ ಕನ್ನಡತಿ. ಈ ಸಾಧನೆ ಮಾಡಿದ ಮೊದಲ ಕನ್ನಡ ಹುಡುಗಿ. ಎಷ್ಟೇ ಕಷ್ಟವಾದರೂ ಇನ್ನು ಮೂರು ಖಂಡಗಳ ಅತಿ ಎತ್ತರದ ಪರ್ವತಗಳನ್ನು ಏರುವುದು ನಿಶ್ಚಿತ ಎನ್ನುವ ಹಠ ತೊಟ್ಟಿರುವ ಅಪ್ಪಟ ದೇಶಪ್ರೇಮಿ ಹುಬ್ಬಳ್ಳಿ ಹುಡುಗಿ ಹೆಸರು ನಂದಿತಾ ನಾಗನಗೌಡರ್. ಪರ್ವತ ದಿನಕ್ಕೆ ಶುಭಾಶಯ ಕೋರುತ್ತಲೇ ಸಾಧಕಿಯ ಕತೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಒಪ್ಪಿಸಿಕೊಳ್ಳಿ.

  • ನವ್ಯಶ್ರಿ ಶೆಟ್ಟಿ  

ಸತತ ಪರಿಶ್ರಮ ಶ್ರಮದ ಮೂಲಕ ಇತರ ಹೆಣ್ಣು ಮಕ್ಕಳಿಗೆ ಮಾದರಿ ಈಕೆ. ಎಷ್ಟೇ ಸವಾಲುಗಳು ಎದುರಾದರೂ ಛಲ ಬಿಡದೆ ಮುನ್ನುಗ್ಗುವ ಈ ದಿಟ್ಟೆ, ಕನಸು ಕಾಣುವ ಕೋಟ್ಯಂತರ ಹೆಣ್ಣು ಮಕ್ಕಳಿಗೆ ಸ್ಫೂರ್ತಿ. ಪರ್ವತಾರೋಹಣದ ಬಗ್ಗೆ ಬೆಟ್ಟದಷ್ಟು ಕನಸು ಕಂಡಿರುವ ಛಲಧಂಕಮಲ್ಲೆ ಈ ಕನ್ನಡತಿ. ಹೆಸರು ನಂದಿತಾ ನಾಗನಗೌಡರ್.

ಪ್ರತಿ ಹೆಣ್ಣಿಗೆ ಆಕಾಶದೆತ್ತರಕ್ಕೆ ಹಾರಬೇಕು, ಬೆಟ್ಟ ಗಿರಿ ಶಿಖರವೇರಬೇಕು, ಹೊಸ ಹೊಸ ಸ್ಥಳ ನೋಡಬೇಕು ಹೀಗೆ ಹತ್ತಾರು ಆಸೆಗಳು ಇರುತ್ತೆ. ಆದರೆ ಹಲವರಿಗೆ ಅದು ಸಾಧ್ಯವಾಗಲ್ಲ. ಹಿಂಜರಿಕೆ, ಭಯ, ವೈಯಕ್ತಿಕ ಸಮಸ್ಯೆಯಿಂದ ಎಲ್ಲಾ ಕನಸುಗಳು ಅವರಲ್ಲೇ ಅಡಗಿ ಕುಳಿತಿರುತ್ತದೆ. ಅಂತಹವರ ನಡುವೆ ವಿಭಿನ್ನವಾಗಿ ನಿಲ್ಲುತ್ತಾರೆ ಹುಬ್ಬಳ್ಳಿ ಹುಡುಗಿ ನಂದಿತಾ.

ನಂದಿತಾ ಇಂಗ್ಲೆಂಡ್ (England)ನಲ್ಲಿ ಎಂ. ಬಿ .ಎ ಪದವಿ ಪಡೆದವರು. ಕೈ ತುಂಬಾ ಸಂಬಳ ಬರುವ ಉತ್ತಮ ಉದ್ಯೋಗದಲ್ಲಿದ್ದರು. ಎತ್ತರದ ಪ್ರದೇಶದ ಮೇಲಿನ ಪ್ರೀತಿ ಪರ್ವತಾರೋಹಿಯನ್ನಾಗಿ ಮಾಡಿತು. ಫುಲ್ ಟೈಮ್ ಕೆಲಸಕ್ಕೆ ಗುಡ್ ಬೈ ಹೇಳಿ ಪಾರ್ಟ್ ಟೈಂ ಕೆಲಸದ ಜೊತೆಗೆ ತನ್ನ ಕನಸಿನ ಹಾದಿಯಲ್ಲಿ ಸಾಗತೊಡಗಿದರು.

ಪರ್ವತಾರೋಹಣ ಅನ್ನುವುದು ಅಷ್ಟು ಸುಲಭವಲ್ಲ. ಅದಕ್ಕೆ ಸರಿಯಾದ ಟ್ರೈನಿಂಗ್(training)  ಪಡೆದುಕೊಳ್ಳಬೇಕು. ಸಂಬಂಧಪಟ್ಟವರಿಂದ ಅನುಮತಿ ಅಗತ್ಯ. ಎಲ್ಲಾ ತಯಾರಿಗಳನ್ನು ಮಾಡಿಕೊಂಡು ಸನ್ನದ್ದರಾಗಬೇಕು. ಶಿಖರವನ್ನೇರುವ ಹಾದಿಯಲ್ಲಿ ಸವಾಲುಗಳು ಎದುರಾಗುತ್ತದೆ. ಅದನ್ನೆಲ್ಲ ದಾಟಿ ಮುನ್ನುಗ್ಗಬೇಕು. ಆವಾಗ ಮಾತ್ರ ಶಿಖರದ ತುತ್ತ ತುದಿಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಸಾಧ್ಯವಾಗುತ್ತದೆ. ಪರ್ವತ ಏರುವ ನಾವು ಮೊದಲು ಮಾನಸಿಕವಾಗಿ ಶಕ್ತಿಶಾಲಿ ಆಗಿರಬೇಕು. ಪರ್ವತಾರೋಹಣ ಸಮಯದಲ್ಲಿ ಹಲವು ದಿನಗಳ ಕಾಲ ಮನೆಯಿಂದ ದೂರವಿರಬೇಕು. ಕೆಲವು ಸಮಯದಲ್ಲಿ ಮನೆಯವರ ಜೊತೆ ಸಂಭಾಷಣೆ ಕೂಡ

ಸಾಧ್ಯವಾಗುವುದಿಲ್ಲ. ಈ ವೇಳೆ ಅಳು, ದುಃಖ ಒಮ್ಮೆಲೇ ಬರುತ್ತದೆ. ಆದರೆ ದೇಶಕೊಸ್ಕರ ತ್ಯಾಗ ಮಾಡುತ್ತಿದ್ದೇನೆ ಎನ್ನುವುದು ಸಮಾಧಾನ ನೀಡುತ್ತದೆ. ಶಿಖರವನ್ನೇರುವ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಕೆಲವೊಮ್ಮೆ ವೈಯುಕ್ತಿಕ ಹಾಗೂ ಆರೋಗ್ಯ ಸಮಸ್ಯೆ ಎದುರಾಗುತ್ತದೆ.ಆದರೆ ದೇಶದ ಮೇಲಿನ ಪ್ರೀತಿ ಎಲ್ಲಾ ಸಮಸ್ಯೆ, ನೋವುಗಳನ್ನು ಮರೆಸುತ್ತದೆ ಎನ್ನುವ ನಂದಿತಾ ಮಾತು ಕೇಳಿದರೆ ಹೆಮ್ಮೆ.ಯಾಗುತ್ತದೆ.

ಇದು ಸಾಹಸದ ಜೊತೆಗೆ ಜೀವನದ ಪ್ರಶ್ನೆಯೂ ಹೌದು. ಇಲ್ಲಿ ಸೋಲು ಗೆಲುವಿನ ಪ್ರಶ್ನೆಗಳಿಗಿಂತ ಜೀವ, ಜೀವನವನ್ನೇ ಪಣಕ್ಕಿಡಬೇಕಾಗುತ್ತದೆ. ಸ್ವಲ್ಪ ಯಮಾರಿದರೂ ಜೀವಕ್ಕೆ ಕುತ್ತು ಬರುತ್ತದೆ. ಏಪ್ರಿಲ್ ಮೇ ತಿಂಗಳು ಶಿಖರವೇರಲು ಸೂಕ್ತ ಸಮಯ. ಉಳಿದ ದಿನಗಳಲ್ಲಿ ಅದಕ್ಕೆಂದೇ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು ಅನ್ನುವುದು ನಂದಿತಾ ಕಿವಿಮಾತು.

ಕಾಲಿನಲ್ಲಿ 5. ಕೆಜಿ ತೂಕದ ಶೂ.(shoe) ಬೆನ್ನಿನ ಮೇಲೆ ಅತಿ ಭಾರದ ಬ್ಯಾಗ್.(bag) ಜೊತೆಗೆ ಎತ್ತರಕ್ಕೆ ಹೋದಂತೆ ತಾಪಮಾನ ಕಡಿಮೆ. ಅದಕ್ಕೆ ಹೊಂದಿಕೆ ಆಗುವ ಆಹಾರವನ್ನು ಮಾತ್ರ ಸೇವಿಸಬೇಕು. ದಿನಕ್ಕೆ 8-9 ಗಂಟೆಗಳ ಕಾಲ ಪರ್ವತ ಏರಬೇಕು. ಇವೆಲ್ಲ ಒಂದು ರೀತಿಯಲ್ಲಿ ಸಾಹಸವೇ ಸರಿ.

ಆರಂಭದಲ್ಲಿ ಮಗಳ ಸಾಹಸಕ್ಕೆ ಅಮ್ಮನ ಒಪ್ಪಿಗೆ ಇರಲಿಲ್ಲ. ಅವರಲ್ಲಿ ಒಂದು ಅಳುಕಿತ್ತು. ಮಗಳ ಮನವೊಲಿಕೆ ನಂತರ ಬೆಂಬಲ ನೀಡಿದರು. ಇಂದು ನಂದಿತಾ ಸಾಧನೆಗೆ ತಾಯಿ ಖುಷಿಯಾಗಿದ್ದಾರೆ. ಪ್ರತಿ ಬಾರಿ ಮಗಳು ಶಿಖರ ಹತ್ತಲು ಹೋಗುವಾಗ ದೇಶದ ದ್ವಜ ಹಾರಿಸಿ ಬಾ ಎಂದು ಆಶೀರ್ವಾದ ಮಾಡುತ್ತಾರೆ. ಮೌಂಟೇನ್ ಹುಡುಗಿ(mountaiun girl) ಸಾಹಸವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಗುರುತಿಸಿವೆ. ASEAN ಸಂಸ್ಥೆ ಕೂಡ ಬೆಂಬಲವಾಗಿದೆ.

ನಂದಿತಾ ಅವರಿಗೆ ಸ್ನೇಹಿತರೊಡಗೂಡಿ ಟ್ರೆಕ್ಕಿಂಗ್(trekking) ಇಷ್ಟ.ಎತ್ತರ ಪ್ರದೇಶಗಳ ಮೇಲಿನ ಪ್ರೀತಿ ಇಂದು ಈ ಮಟ್ಟಕ್ಕೆ ತಲುಪುವಂತೆ ಮಾಡಿದೆ. “ಅಟಲ್ ಬಿಹಾರಿ ವಾಜಪೇಯಿ ಇನ್ಸ್ಟಿಟ್ಯೂಟ್ ಆಫ್ ಮೌಂಟೇನೇರಿಂಗ್”(atal bihari vajpayee mountaineering institute)  ಸಂಸ್ಥೆಯಲ್ಲಿ ವೃತ್ತಿಪರ ತರಬೇತಿ ಪಡೆದುಕೊಂಡು ಈ ಸಾಹಸದಲ್ಲಿ ಮುನ್ನುಗುತ್ತಿದ್ದಾರೆ.  ಸಾಹಸಕ್ಕೆ ಇಳಿಯಲು ತನಗೆ ವ್ಯಕ್ತಿಗಳ ಸ್ಫೂರ್ತಿಗಿಂತ ಎತ್ತರವೇ ಸ್ಫೂರ್ತಿ ಎನ್ನುತ್ತಾರೆ ನಂದಿತಾ.

2016ರಲ್ಲಿ ಮೊದಲ ಬಾರಿ ಮೌಂಟ್ ಎವರೆಸ್ಟ್ ಏರಿದ್ದರು. ಅಲ್ಲಿಂದ ಆರಂಭವಾಗಿ ಇಲ್ಲಿಯ ತನಕ ನಂದಿತಾ, ಏಷ್ಯಾ ಸೇರಿದಂತೆ 4 ಖಂಡಗಳ ಅತಿ ಎತ್ತರದ ಶಿಖರಗಳಲ್ಲಿ ರಾಷ್ಟ್ರ ದ್ವಜ ಹಾರಿಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ಕನ್ನಡತಿ ಈಕೆ. ಇವರ ಕನಸು ಈಡೇರಿಸಿಕೊಳ್ಳಲು ಇನ್ನೂ 3 ಶಿಖರಗಳಷ್ಟೇ ಬಾಕಿ.

ದೇಶಗಳ ಮಧ್ಯ ಸಂಬಂಧಗಳ ಅಭಿವೃದ್ದಿಯನ್ನು ಈ ಸಾಹಸ ಕ್ರೀಡೆಯ ಮುಖಾಂತರ ಮಾಡುತ್ತಾರೆ.

ಪರ್ವತಾರೋಹಣ ನಮಗೆ ಹೆಮ್ಮೆಯ ಪ್ರಶ್ನೆ. ಭಾರತ ದ್ವಜವನ್ನು ಅತಿ ಎತ್ತರದ ಶಿಖರಗಳಲ್ಲಿ ಹಾರಿಸುವುದು ಖುಷಿ ಕೊಡುತ್ತದೆ. ನಾವು ಪರ್ವತಾರೋಹಣವನ್ನು ಪ್ಯಾಷನ್ ಅಂತ ಮಾಡಲ್ಲ. ಅದು ದೇಶಕ್ಕೆ ನಮ್ಮಿಂದ ಆಗುವ ಕೊಡುಗೆ ಎನ್ನುವ ಉದ್ದೇಶಕ್ಕಾಗಿ ಮಾಡುತ್ತೇವೆ. ಎತ್ತರದ ಶಿಖರಗಲ್ಲಿ ದೇಶ ದ್ವಜ ಹಾರಿಸುವುದು ನೋಡುವುದೇ ಪುಳಕ ಎನ್ನುತ್ತಾರೆ ಅಪ್ಪಟ ದೇಶ ಪ್ರೇಮಿ ನಂದಿತಾ.

ಹಣಕಾಸಿನ ವಿಷಯದಲ್ಲಿ ಅಥವಾ ಇನ್ಯಾವುದೇ ವಿಷಯದಲ್ಲಿ ಯಾರಿಗೂ ಹೊರೆಯಾಗದೆ ಸತತ ಪರಿಶ್ರಮದ ಮೂಲಕ ಸಾಧನೆ ಮಾಡುತ್ತಿರುವ ಮೌಂಟೇನ್ ಹುಡುಗಿ ನಂದಿತಾ ಇತರರಿಗೂ ಮಾದರಿ. “ಜೀವನದಲ್ಲಿ ನಮ್ಮಿಂದ  ಆಗಲ್ಲ ಎನ್ನುವುದಕ್ಕೆ ನೆಪಗಳು ಬಹಳ ಸುಲಭವಾಗಿ ಸಿಗುತ್ತದೆ. ಆದರೆ ಮಾಡಬೇಕು ಎನ್ನುವ ಛಲವಿದ್ದಾಗ ಕಾರಣಗಳು, ನೆಪಗಳು ನಮಗೆ ಕಾಣಿಸುವುದಿಲ್ಲ. ಇನ್ನಾರದೋ ಪ್ರೋತ್ಸಾಹ , ಸಹಾಯ ಬಯಸಿ ಮುಂದೆ ಹೋಗಬಾರದು. ನಮ್ಮಲ್ಲಿ ಛಲವೊಂದಿದ್ದರೆ ಹಾದಿ ನಮ್ಮೆದುರು ತಾನಾಗಿಯೇ ತೆರೆದುಕೊಳ್ಳುತ್ತದೆ” ಎನ್ನುತ್ತಾರೆ ನಂದಿತಾ.

ಕನ್ನಡ ನೆಲದಲ್ಲಿ ಹುಟ್ಟಿದ ಹುಡುಗಿ, ಇಂದು ಏಳು ಖಂಡಗಳ ಉನ್ನತ ಶಿಖರಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಕನಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ. ಟ್ರೆಕ್ಕಿಂಗ್ ವೇಳೆ ಹುಟ್ಟಿಕೊಂಡ ಕುತೂಹಲ ಇಂದು ದೊಡ್ಡ ಪರ್ವತಾರೋಹಿಯನ್ನಾಗಿ ಮಾಡಿದೆ. ನಂದಿತಾ ಅವರ ಯಶೋಗಾಥೆ, ಕನಸು ಕಂಡು ಅದನ್ನು ಈಡೇಸಿರಿಕೊಳ್ಳಲು ಸಾಧ್ಯವಾಗದೇ ಇರುವ ಅದೆಷ್ಟೋ ಜನರಿಗೆ ಸ್ಫೂರ್ತಿ ಆಗಬಹುದು.

ನಂದಿತಾ ನಾಗನಗೌಡರ್ ಅವರ ಶ್ರಮದ ಸಾಧನೆ ಇತರೇ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿ ಅವರ ಒಳಗಡೆ ಮಾತ್ರ ಹುದುಗಿರುವ ಆಸೆ ಎನ್ನುವ ಬೀಜ ಮೊಳಕೆ ಒಡೆದು ಹೆಮ್ಮರವಾಗಿ ಬೆಳೆದು ಅವರು ಕೂಡ ಸಾಧನೆ ಶಿಖರ ಏರುವಂತಾಗಬಹುದು.

ದೇಶದ ಕೀರ್ತಿ ಜಗದೆತ್ತರಕ್ಕೆ ಹಾರಿಸಬೇಕು ಎನ್ನುವ ಕನಸು ಕಂಡಿರುವ ಮೌಂಟೇನ್ ಹುಡುಗಿಗೆ ನಮ್ಮ ಶುಭ ಹಾರೈಕೆ.

Related Articles

Leave a Reply

Your email address will not be published. Required fields are marked *

Back to top button