Moreಕಾಡಿನ ಕತೆಗಳುವಿಂಗಡಿಸದಸೂಪರ್ ಗ್ಯಾಂಗು

ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದ “ಚಿರತೆ ಗಾಮಿನಿ”; ಚಿರತೆ ಸಂಖ್ಯೆ 26 ಕ್ಕೆ ಏರಿಕೆ

ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ, 5 ವರ್ಷದ ಚಿರತೆ ಭಾನುವಾರ (ಮಾ.10) ಮಧ್ಯಪ್ರದೇಶದ (Madhya Pradesh) ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಐದು ಮರಿಗಳಿಗೆ (Five Cheetah cubs) ಜನ್ಮ ನೀಡಿದೆ.

ಪ್ರಸ್ತುತ ದೇಶದಲ್ಲಿ ಚಿರತೆ (Cheetah) ಸಂಖ್ಯೆ 26 ಕ್ಕೆ ಏರಿದೆ ಎಂದು ಕೇಂದ್ರ ಸಚಿವ ಭೂಪೇಂದರ್ ಯಾದವ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, “ ಹೈ ಫೈ, ಕುನೋ, ದಕ್ಷಿಣ ಆಫ್ರಿಕಾದ (South Africa) ತ್ಸ್ವಾಲು ಕಲಹರಿ ಮೀಸಲು ಪ್ರದೇಶದಿಂದ (Tswalu Kalahari Reserve) ತಂದಿದ್ದರು.

ಸುಮಾರು 5 ವರ್ಷ ವಯಸ್ಸಿನ ಹೆಣ್ಣು ಚಿರತೆ ಗಾಮಿನಿ (Cheetah Gamini) ಇಂದು 5 ಮರಿಗಳಿಗೆ ಜನ್ಮ ನೀಡಿದೆ. ಪ್ರಸ್ತುತ ಭಾರತದಲ್ಲಿ ಜನಿಸಿದ ಚಿರತೆಗಳ ಸಂಖ್ಯೆ 13 ಕ್ಕೆ ಏರಿದೆ” ಎಂಬ ಮಾಹಿತಿ ನೀಡಿದ್ದಾರೆ.

ಚಿರತೆ ಗಾಮಿನಿ ಭಾರತಕ್ಕೆ ಕರೆತಂದ ನಾಲ್ಕನೇ ಚಿರತೆ ಮತ್ತು ದಕ್ಷಿಣ ಆಫ್ರಿಕಾದಿಂದ ತಂದ ಮೊದಲ ಚಿರತೆ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷ ಮಾರ್ಚ್ ನಲ್ಲಿ ನಮೀಬಿಯಾದಿಂದ ತಂದ ಚಿರತೆ ಜ್ವಾಲಾ (Cheetah Jwala) (ನಮೀಬಿಯಾದ ಹೆಸರು ಸಿಯಾಯಾ) ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು.

ಆದರೆ ದುರದೃಷ್ಟವಶಾತ್ ಅದರಲ್ಲಿ ಒಂದು ಮಾತ್ರ ಉಳಿದಿತ್ತು. ಮತ್ತೆ ಚಿರತೆ ಜ್ವಾಲಾ ಈ ವರ್ಷವೂ ಜನವರಿಯಲ್ಲಿ ಎರಡನೇ ಬಾರಿ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದಳು.

ಅದರ ನಂತರ ಚಿರತೆ ಆಶಾ (Cheetah Asha) ಸಹ ಮೂರು ಮರಿಗಳಿಗೆ ಜನ್ಮ ನೀಡಿದ್ದಳು.

ಕುನೋ ಉದ್ಯಾನವನದ ಅರಣ್ಯಾಧಿಕಾರಿಗಳು, ಪಶು ವೈದ್ಯರು, ಹಾಗೂ ರಕ್ಷಣಾ ಸಿಬ್ಬಂದಿ ತಂಡವು ಚಿರತೆಗಳಿಗೆ ಒತ್ತಡ ರಹಿತ ವಾತಾವರಣ ಒದಗಿಸುತ್ತಿದ್ದು, ಇದು ಚಿರತೆಗಳ ಜನಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.

1952 ರಲ್ಲಿ ಭಾರತದಲ್ಲಿ ಚಿರತೆಗಳು ಅಳಿವಿನಂಚಿನಲ್ಲಿವೆ ಎಂದು ಘೋಷಿಸಲಾಗಿತ್ತು. 2022 ರ ಸೆಪ್ಟೆಂಬರ್ 17 ರಲ್ಲಿ ನಮೀಬಿಯಾದಿಂದ (Namibia) ಭಾರತಕ್ಕೆ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು.

ನಂತರ ಈ ಚಿರತೆಗಳನ್ನು ಪ್ರಧಾನಿ ಮೋದಿ (Narendra Modi) ಈ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು.

ಫೆಬ್ರುವರಿ 2023ರಲ್ಲಿ, ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚಿರತೆಗಳನ್ನು ತರಲಾಯಿತು. ಚಿರತೆ ಗಾಮಿನಿಯೂ ಸಹ ಆಫ್ರಿಕಾದಿಂದ ತಂದ ಚಿರತೆಯ ಗುಂಪಿಗೆ ಸೇರಿದವಳು.

2023 ರಿಂದ ಇಲ್ಲಿಯವರೆಗೆ ಒಟ್ಟು 10 ಚಿರತೆಗಳು ಸಾವಿನ್ನಪ್ಪಿದ್ದರೂ, ಪ್ರಸ್ತುತ ಮೂರು ತಿಂಗಳಿನಲ್ಲಿಯೇ, 12 ಮರಿಗಳು ಜನನವಾಗಿವೆ ಎಂದು ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಈ ವರ್ಷದಿಂದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚಿರತೆ ಸಫಾರಿ (Cheetah Safari) ಆರಂಭಿಸುವ ಬಗ್ಗೆಯೂ ಅಧಿಕಾರಿಗಳು ಸುಳಿವು ನೀಡಿದ್ದಾರೆ.

ಅಧಿಕಾರಿಗಳ ಪ್ರಕಾರ, ಪ್ರಸ್ತುತ ಕೆಎನ್‌ಪಿಯಲ್ಲಿ (KNP) ಏಳು ಹೆಣ್ಣು, ಆರು ಗಂಡು ಮತ್ತು 13 ಮರಿಗಳನ್ನು ಒಳಗೊಂಡಂತೆ 26 ಚಿರತೆಗಳಿವೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button