Moreಕಾಡಿನ ಕತೆಗಳುವಿಂಗಡಿಸದ

ಅತಿ ದೊಡ್ಡ ಅರಣ್ಯ ಪ್ರದೇಶವನ್ನು ಹೊಂದಿರುವ ಭಾರತದ ಟಾಪ್ 10 ರಾಜ್ಯಗಳಿವು;

ಭಾರತವು ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳಲ್ಲಿನ (Western Ghats) ಉಷ್ಣವಲಯದ ಮಳೆಕಾಡುಗಳಿಂದ (Rain Forests) ಹಿಡಿದು ಮಧ್ಯಪ್ರದೇಶದ ಪತನಶೀಲ ಕಾಡುಗಳು (Deciduous forest) ಮತ್ತು ಕರಾವಳಿಯ ಅನನ್ಯ ಮಾಂಗ್ರೋವ್ ಕಾಡುಗಳವರೆಗೆ (mangrove forests) ವೈವಿಧ್ಯಮಯ ಕಾಡುಗಳಿಗೆ ಹೆಸರಾಗಿದೆ.

ಈ ವೈವಿಧ್ಯಮಯ ಕಾಡುಗಳು ಹಲವಾರು ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೆ ನೆಲೆಯಾಗಿದೆ. ಇದು ಭಾರತದ ಪರಿಸರ ವ್ಯವಸ್ಥೆಯ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತದೆ.

ಕೆಲವು ಭಾರತೀಯ ರಾಜ್ಯಗಳು ತಮ್ಮ ಗಮನಾರ್ಹವಾದ ಅರಣ್ಯ ವಿಸ್ತರಣೆಯಿಂದಾಗಿ (Extensive forest cover) ಗಮನ ಸೆಳೆಯುತ್ತವೆ.

ಪ್ರವಾಸಿಗರಿಗೆ ಪರಿಸರ ಪ್ರವಾಸೋದ್ಯಮದಲ್ಲಿ ತಲ್ಲೀನಗೊಳಿಸುವ ಅನುಭವಗಳನ್ನು ನೀಡುತ್ತವೆ. ವಿಸ್ತಾರವಾದ ಅರಣ್ಯ ಪ್ರದೇಶವನ್ನು ಹೊಂದಿರುವ ಕೆಲವು ರಾಜ್ಯಗಳ ಕುರುತು ಮಾಹಿತಿ ಇಲ್ಲಿದೆ.

1.ಮಧ್ಯಪ್ರದೇಶ: (Madhya Pradesh)

ಅತಿ ದೊಡ್ಡ ಅರಣ್ಯ ಪ್ರದೇಶವನ್ನು ಹೊಂದಿರುವ (Largest expanse of forest) ಭಾರತದ ರಾಜ್ಯ “ಮಧ್ಯಪ್ರದೇಶ”. ಇದು ಒಟ್ಟು 94,689 ಚದರ ಕಿ.ಮೀ ಅರಣ್ಯ ಪ್ರದೇಶವನ್ನು ಒಳಗೊಂಡಿದೆ.

ರಾಜ್ಯದ ಒಟ್ಟಾರೆ ಭೌಗೋಳಿಕ ವಿಸ್ತಾರದ 30.7% ರಷ್ಟು ಅರಣ್ಯ ವ್ಯಾಪಿಸಿದೆ. ಉಷ್ಣವಲಯದ ತೇವಾಂಶವುಳ್ಳ ಪತನಶೀಲ ಕಾಡುಗಳಿಂದ, ಉಷ್ಣವಲಯದ ಒಣ ಪತನಶೀಲ ಮತ್ತು ಉಪೋಷ್ಣವಲಯದ ಬೆಟ್ಟದ ಕಾಡುಗಳವರೆಗೆ ಸಮೃದ್ಧ ವೈವಿಧ್ಯಮಯ ಕಾಡುಗಳನ್ನು ಹೊಂದಿರುವ ರಾಜ್ಯ ಇದು.

2.ಅರುಣಾಚಲ ಪ್ರದೇಶ: (Arunachal Pradesh)

ಸುಮಾರು 83,743 ಚದರ ಕಿಲೋಮೀಟರ್ ಅರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯ.

ಈ ಪ್ರದೇಶವು ಉಷ್ಣವಲಯದ ಮಳೆಕಾಡುಗಳಿಂದ (Tropical rainforests ) ಹಿಡಿದು ಉಪಲ್ಪೈನ್ ಕಾಡುಗಳವರೆಗೆ ವ್ಯಾಪಕ ಶ್ರೇಣಿಯ ಕಾಡುಗಳನ್ನು ಹೊಂದಿದೆ.

3. ಮಹಾರಾಷ್ಟ್ರ: (Maharashtra)

ಒಟ್ಟು 61,907.08 ಚದರ ಕಿಮೀ ವಿಸ್ತಾರವಾದ ಅರಣ್ಯವನ್ನು ಹೊಂದಿರುವ ಮಹಾರಾಷ್ಟ್ರವು ಉಷ್ಣವಲಯದ ಪತನಶೀಲ ಕಾಡುಗಳಿಂದ ಹಿಡಿದು ಮುಳ್ಳಿನ ಕಾಡುಗಳು ಮತ್ತು ಕರಾವಳಿಯಲ್ಲಿ ಆವರಿಸಿರುವ ಮ್ಯಾಂಗ್ರೋವ್ ಕಾಡುಗಳವರೆಗೆ ಸಮೃದ್ಧವಾದ ಅರಣ್ಯ ಪರಿಸರ ವ್ಯವಸ್ಥೆಗಳನ್ನು ಪ್ರದರ್ಶಿಸುವ ರಾಜ್ಯವಾಗಿದೆ.

ಪಶ್ಚಿಮ ಘಟ್ಟಗಳು ಅಥವಾ ಸಹ್ಯಾದ್ರಿಗಳು (Sahyadris) ಈ ರಾಜ್ಯಕ್ಕೆ ಗಮನಾರ್ಹ ಕೊಡುಗೆ ನೀಡುತ್ತದೆ.

4.ಒಡಿಶಾ: (Odisha)

ಒಡಿಶಾವು 61,204.17 ಚದರ ಕಿ.ಮೀ ವಿಸ್ತಾರವಾದ ವಿಶಾಲವಾದ ಅರಣ್ಯ ಪ್ರದೇಶಗಳನ್ನು ಹೊಂದಿದೆ.

ಇದು ಉಷ್ಣವಲಯದ ತೇವಾಂಶವುಳ್ಳ ಎಲೆಯುದುರುವ ಕಾಡುಗಳು, ಒಣ ಎಲೆಯುದುರುವ ಕಾಡುಗಳು, ಕರಾವಳಿ ಮ್ಯಾಂಗ್ರೋವ್ ಕಾಡುಗಳಿಗೆ ನೆಲೆಯಾಗಿದೆ.

5. ಛತ್ತೀಸ್‌ಗಢ: (Chhattisgarh)

ಛತ್ತೀಸ್‌ಗಢವು ಉಷ್ಣವಲಯದ ತೇವಾಂಶವುಳ್ಳ ಪತನಶೀಲ ಕಾಡುಗಳು ಮತ್ತು ಒಣ ಎಲೆಯುದುರುವ ಕಾಡುಗಳನ್ನು ಒಳಗೊಂಡಂತೆ ಸುಮಾರು 59,772 ಚದರ ಕಿಮೀ ಪ್ರದೇಶವನ್ನು ಅರಣ್ಯ ಪ್ರದೇಶವನ್ನು ದಾಖಲಿಸಲಾಗಿದೆ.

6. ಕರ್ನಾಟಕ: (Karnataka)

ಕರ್ನಾಟಕವು ಐದು ಹುಲಿ ಸಂರಕ್ಷಿತ ಪ್ರದೇಶಗಳು (Tiger Reserve Areas), 30 ವನ್ಯಜೀವಿ ಅಭಯಾರಣ್ಯಗಳು (Wildlife Sanctuaries), 15 ಸಂರಕ್ಷಣಾ ಮೀಸಲುಗಳು ಮತ್ತು 1 ಸಮುದಾಯ ಮೀಸಲು ಪ್ರದೇಶಗಳಿಗೆ ನೆಲೆಯಾಗಿದ್ದು, 43,382 ಚದರ ಕಿಮೀ ಒಟ್ಟು ದಾಖಲಾದ ಅರಣ್ಯ ಪ್ರದೇಶವನ್ನು ಹೊಂದಿದೆ.

ಕರ್ನಾಟಕದ ಕಾಡುಗಳು ಯಾವಾಗಲೂ ವನ್ಯಜೀವಿಗಳು ಮತ್ತು ಪ್ರಕೃತಿ ಉತ್ಸಾಹಿಗಳನ್ನು ಆಕರ್ಷಿಸುತ್ತವೆ.

7. ಆಂಧ್ರಪ್ರದೇಶ: (Andhra Pradesh)

ಅಂದಾಜು 37,258 ಚದರ ಕಿ.ಮೀ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಉಷ್ಣವಲಯದ ಒಣ ಎಲೆಯುದುರುವ ಕಾಡುಗಳು, ತೇವಾಂಶವುಳ್ಳ ಎಲೆಯುದುರುವ ಕಾಡುಗಳು ಮತ್ತು ಅದರ ಕರಾವಳಿಯುದ್ದಕ್ಕೂ ಮ್ಯಾಂಗ್ರೋವ್ ಕಾಡುಗಳನ್ನು ಹೊಂದಿರುವ ರಾಜ್ಯ ಆಂಧ್ರಪ್ರದೇಶ.

8. ಅಸ್ಸಾಂ: (Assam)

ಅಸ್ಸಾಂನ ಒಟ್ಟು ದಾಖಲಾದ ಅರಣ್ಯ ಪ್ರದೇ 26,832 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದೆ.

ಕಾಜಿರಂಗ, ಮಾನಸ್ ಮತ್ತು ದೇಹಿಂಗ್ ಪಟ್ಕೈ ಕಾಡುಗಳು ಅತ್ಯಂತ ವಿಶಿಷ್ಟ ಕಾಡುಗಳು.

ಅದರಲ್ಲೂ ಜೋರ್ಹತ್‌ನಲ್ಲಿರುವ ಮೊಲೈ ಅರಣ್ಯ (Molai forest in Jorhat), ಇದು ವಿಶ್ವದ ಅತಿದೊಡ್ಡ ಏಕಾಂಗಿ ಮಾನವ ನಿರ್ಮಿತ ಅರಣ್ಯವಾಗಿದೆ (World’s largest single-handedly man-made forest)

9. ಜಾರ್ಖಂಡ್: (Jharkhand)

ಜಾರ್ಖಂಡ್ ಎಂದರೆ “ಅರಣ್ಯಗಳಿಂದ ಆವೃತವಾದ ಭೂಮಿ”.

ಏಷ್ಯಾದ ಅತಿದೊಡ್ಡ ಸಾಲ್ ಅರಣ್ಯ (Largest Sal forest in Asia) ಜಮ್ಶೆದ್ ಪುರದ ಸರಂದಾ ಅರಣ್ಯಕ್ಕೆ (Jamshedpur’s Saranda forest) ಈ ರಾಜ್ಯ ನೆಲೆಯಾಗಿದೆ. ಒಟ್ಟು 23,605 ಚ.ಕಿ.ಮೀ ಅರಣ್ಯ ಪ್ರದೇಶವನ್ನು ಹೊಂದಿದೆ.

10. ತಮಿಳುನಾಡು: (Tamilnadu)

ನೀಲಗಿರಿ ಶ್ರೇಣಿಗೆ (Nilgiri range) ಹೆಸರಾಗಿರುವ ಈ ರಾಜ್ಯವು 22,877 ಚದರ ಕಿಲೋಮೀಟರ್ ಅರಣ್ಯ ಪ್ರದೇಶವನ್ನು ಹೊಂದಿದೆ.

ರಾಜ್ಯದ ಒಟ್ಟು ಭೌಗೋಳಿಕ ಪ್ರದೇಶದ 17.59% ಅರಣ್ಯವನ್ನು ಹೊಂದಿರುವ ರಾಜ್ಯ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button