Moreಬೆರಗಿನ ಪಯಣಿಗರುವಿಂಗಡಿಸದ

ಸೊಕ್ಕಿದ್ರೆ ಯಾಣಕ್ಕೆ ಹೋಗು, ರೊಕ್ಕ ಇದ್ರೆ ಗೋಕರ್ಣಕ್ಕೆ ಹೋಗು; ಪವಿತ್ರಾ ಕೆ. ಎಂ. ಬರೆದ ಯಾಣ ಸುತ್ತಿದ ಕಥೆ

Yana Caves Trip Experience: ಬೇಸಿಗೆ ರಜೆಯ (Summer Vacation) ಸಮಯವದು. ಬಹುಷಃ ನಾನು ಆಗ 5 ನೆಯ ತರಗತಿಯನ್ನು ಮುಗಿಸಿದ್ದೆ. ಆ ಸಮಯದಲ್ಲಿ ಅತ್ತೆ ಮನೆಗೆ ಉಳಿಯಲು ಹೋಗಿದ್ದೆ.

ಅಲ್ಲಿ ಅಕ್ಕ ಅಣ್ಣಂದಿರು ಸೇರಿ ಪ್ರವಾಸಕ್ಕೆ ಹೋಗುವ ತಯಾರಿಯಲ್ಲಿದ್ದರು ಆದರೆ ಎಲ್ಲಿಗೆ ಹೋಗುವುದು ಎಂಬುವುದು ಯಾರಿಗೂ ತಿಳಿಯದು.

ಕೆ. ಎಂ. ಪವಿತ್ರಾ, ಮುರ್ಡೇಶ್ವರ

ಇದ್ದಕ್ಕಿದಂತೆ ನಾನು ಪಠ್ಯದಲ್ಲಿ ಓದಿದ್ದು ನೆನಪಾಗಿ “ಸೊಕ್ಕಿದ್ರೆ ಯಾಣಕ್ಕೆ (Yana) ಹೋಗು ರೊಕ್ಕ ಇದ್ರೆ ಗೋಕರ್ಣಕ್ಕೆ (Gokarna) ಹೋಗು” ಎಂಬುದನ್ನು ಹೇಳಿದೆ.

ಆಗ ಎಲ್ಲರೂ ಸೇರಿ ಉತ್ತರ ಕನ್ನಡ (Uttara Kannada) ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಐತಿಹಾಸಿಕ ಸ್ಥಳವಾದ ಯಾಣಕ್ಕೆ ಹೊರಡಲು (Yana Trip) ತಯಾರಾದರು.

ಮಾರನೇ ದಿನ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಎಲ್ಲರೂ ಹೊರೆಟೆವು.

ದಾರಿಯ ಮದ್ಯದಲ್ಲಿ ಕುಮಟಾದ ಪಾಂಡುರಂಗ ಹೋಟೆಲಿನಲ್ಲಿ ತಿಂಡಿ ತಿಂದು ಕುಮಟಾ (Kumta) ಮತ್ತು ಶಿರಸಿ (Sirsi) ಮಾರ್ಗದಲ್ಲಿ ನಮ್ಮ ಪಯಣವನ್ನು ಬೆಳೆಸಿದೆವು.

ಸುಮಾರು 10 ಗಂಟೆಯ ಹಾಗೆ ಯಾಣಕ್ಕೆ ತಲುಪಿದೆವು. ವಾಹನ ನಿಲ್ಲಿಸಿದ ಸ್ಥಳದಿಂದ ಕಾಲುದಾರಿಯಲ್ಲಿ ಹೋದೆವು ಕೆಲವು ಕಡೆ ಮೆಟ್ಟಿಲು ಹತ್ತಿ ಹೋಗಬೇಕಿತ್ತು,

ಹೋಗುವಾಗ ಮೋಹಿನಿ ಶಿಖರ (Mohini Shikhara) ಮತ್ತು ಸಣ್ಣ ಪುಟ್ಟ ದೇವಾಲಯಗಳು ಸಿಗುತ್ತದೆ.

ದಾರಿಯ ಮದ್ಯದಲ್ಲಿ ಪರಿಚಯವಾದ ಪ್ರವಾಸಿಗರ ಬಳಿ ಮಾತನಾಡುತ್ತ ದಾರಿ ಕಳೆದದ್ದು ಗೊತ್ತೇ ಆಗಲಿಲ್ಲ. ಅಂತೂ ಇಂತೂ ಭೈರವೇಶ್ವರ ಶಿಖರವನ್ನು (Bhairaveshwara Shikhara) ತಲುಪಿದೆವು.

ನಂತರ ಭೈರವೇಶ್ವರ ಶಿಖರದ ಅಡಿಯಲ್ಲಿ ಇರುವ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿದೆವು..

ಹಾಗೆಯೇ ಅಲ್ಲಿನ ಅರ್ಚಕರ ಬಳಿ ಆ ಸ್ಥಳದ ದಂತ ಕತೆಯನ್ನು ಕೇಳಿದಾಗ ಅವರು ಹಿಂದೂ ಪುರಾಣವು ಈ ಸ್ಥಳವನ್ನು ಅಸುರ ಅಥವಾ ರಾಕ್ಷಸ ರಾಜ ಭಸ್ಮಾಸುರನ ಜೀವನದಲ್ಲಿ ನಡೆದ ಘಟನೆಯನ್ನು ಹೋಲುತ್ತದೆ.

ಭಸ್ಮಾಸುರನು ತನ್ನ ಕಠೋರ ತಪಸ್ಸಿನಿಂದ ಶಿವನಿಂದ ಯಾರ ತಲೆಯ ಮೇಲೆ ತಾನು ಕೈಯನ್ನು ಇಡುತ್ತೇನೆಯೋ, ಅವರು ಸುಟ್ಟು ಬೂದಿಯಾಗುವಂತೆ (ಭಸ್ಮ) ವರವನ್ನು ಪಡೆದುಕೊಂಡಿರುತ್ತಾನೆ.

ತನ್ನ ಶಕ್ತಿಯನ್ನು ಪರೀಕ್ಷಿಸುವ ಸಲುವಾಗಿ, ಭಸ್ಮಾಸುರನು ತನ್ನ ಪೋಷಕನಾದ ಭಗವಾನ್ ಶಿವನ ತಲೆಯ ಮೇಲೆ ತನ್ನ ಕೈಗಳನ್ನು ಇಡಲು ಬಯಸಿದನು ಎಂದು ಹೇಳಲಾಗುತ್ತದೆ.

ಅವನು ಶಿವನನ್ನು ಬೆನ್ನಟ್ಟಿದನು, ಅದು ಶಿವನನ್ನು ವಿಚಲಿತಗೊಳಿಸಿತು.

ಭಸ್ಮಾಸುರನನ್ನು ತನ್ನ ಸೌಂದರ್ಯದಿಂದ ಆಕರ್ಷಿಸಿದ ಮೋಹಿನಿ ಎಂಬ ಸುಂದರ ಹುಡುಗಿಯ ರೂಪವನ್ನು ಅಳವಡಿಸಿಕೊಂಡ ವಿಷ್ಣುವು ಶಿವನಿಗೆ ಸಹಾಯ ಮಾಡಲು ತನ್ನನ್ನು ತಾನು ಬದಲಾಯಿಸಿಕೊಂಡನು.

ಭಸ್ಮಸುರನು ಮೋಹಿನಿಯಿಂದ ಸಾಕಷ್ಟು ವ್ಯಾಮೋಹಕ್ಕೊಳಗಾದನು ಮತ್ತು ಅವಳು ನೃತ್ಯ ಸ್ಪರ್ಧೆಗೆ ನೀಡಿದ ಸವಾಲಿಗೆ ಒಪ್ಪಿಕೊಂಡಳು.

ನೃತ್ಯ ಸ್ಪರ್ಧೆಯ ಸಮಯದಲ್ಲಿ, ಮೋಹಿನಿ ಜಾಣತನದಿಂದ ತಲೆಯ ಮೇಲೆ ಕೈಯಿಟ್ಟು ನೃತ್ಯ ಭಾಂಗ್ (“ಭಂಗಿ”) ಪ್ರದರ್ಶಿಸಿದರು.

ಈ ಕೃತ್ಯದ ಗುರುತ್ವಾಕರ್ಷಣೆಯನ್ನು ಅರಿತುಕೊಳ್ಳದೆ, ರಾಕ್ಷಸ ರಾಜನು ತನ್ನ ತಲೆಯ ಮೇಲೆ ತನ್ನ ಕೈಯನ್ನು ಇಟ್ಟು ತನ್ನ ಕೈಗಳ ಬೆಂಕಿಯಿಂದ ನಾಶವಾದನು, ಅವನು ಬೂದಿಯಾಗಿ ಮಾರ್ಪಟ್ಟನು.

ಈ ಕೃತ್ಯದ ಸಮಯದಲ್ಲಿ ಹೊರಹೊಮ್ಮಿದ ಬೆಂಕಿಯು ಯಾಣ ಪ್ರದೇಶದಲ್ಲಿ ಸುಣ್ಣದ ಕಲ್ಲುಗಳ ರಚನೆಗಳು ಕಪ್ಪಾಗುವಷ್ಟು ತೀವ್ರವಾಗಿದೆ ಎಂದು ನಂಬಲಾಗಿದೆ. ಈ ಘಟನೆಗಾಗಿ ಎರಡು ಬೆಟ್ಟಗಳನ್ನು ಹೆಸರಿಸಲಾಗಿದೆ.

ಎತ್ತರದ ಶಿಖರವು ಭೈರವೇಶ್ವರ ಶಿಖರ (“ಶಿವನ ಬೆಟ್ಟ”), ಮತ್ತು ಚಿಕ್ಕ ಶಿಖರ, ಮೋಹಿನಿ ಶಿಖರ (“ಮೋಹಿನಿಯ ಬೆಟ್ಟ”) ಅಲ್ಲಿ ಪಾರ್ವತಿ ದೇವಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ.

ಹತ್ತಿರದಲ್ಲಿ ಇನ್ನೂ ಹಲವಾರು ಸಣ್ಣ ಗುಹೆಗಳಿವೆ. ಸಮೀಪದಲ್ಲಿ ಗಣೇಶನ ದೇವಸ್ಥಾನವೂ ಇದೆ.

ಇಷ್ಟೆಲ್ಲ ವಿಷಯವನ್ನು ತಿಳಿದುಕೊಂಡು, ಅಲ್ಲಿನ ಪೃಕೃತಿಗೆ ಮನಸೋತು ಸ್ವಲ್ಪ ಸಮಯವನ್ನು ಕಳೆದು ನಂತರ ಮೆಟ್ಟಿಲುಗಳನ್ನು ಇಳಿದು ಸೊಕ್ಕಿದ್ರೆ ಯಾಣಕ್ಕೆ (Yana Caves) ಹೋಗು ಎಂಬ ಮಾತನ್ನು ನಿಜವಾಗಿಸಿ ಸುಸ್ತಾಗಿ ಎಲ್ಲರೂ ಬಂದು ಮುಂದಿನ ಪಯಣವನ್ನು ಹತ್ತಿರವಿದ್ದ ಮಿರ್ಜಾನ್ ಕೋಟೆಯ ಕಡೆ ಹೊರೆಟೆವು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button