Moreವಿಂಗಡಿಸದಸಂಸ್ಕೃತಿ, ಪರಂಪರೆ

ಬಾಹುಬಲಿ ಮಹಾಮಜ್ಜನಕ್ಕೆ ಸಜ್ಜಾಗುತ್ತಿದೆ ವೇಣೂರು

ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಬೆಳ್ತಂಗಡಿ ತಾಲೂಕಿನ ವೇಣೂರು ಭಗವಾನ್ ಬಾಹುಬಲಿಗೆ ಮಹಾಮಜ್ಜನಕ್ಕೆ ದಿನಗಣನೆ ಆರಂಭವಾಗಿದೆ.

ಫೆಬ್ರವರಿ 22ರಿಂದ ಮಾರ್ಚ್ 1ವರೆಗೆ ಬಾಹುಬಲಿಗೆ ಮಹಾಮಸ್ತಕಾಭಿಷೇಕ ವೈಭವ ನಡೆಯಲಿದ್ದು, ಸಕಲ ತಯಾರಿಗಳು ನಡೆಯುತ್ತಿದೆ.

ವೇಣೂರೆಂಬ (Venur) ಪುಟ್ಟ ಗ್ರಾಮ ಮಹಾಮಸ್ತಕಾಭಿಷೇಕದ ಸಂಭ್ರಮದಲ್ಲಿ ಮುಳಿಗೇಳಲು ಸಿದ್ಧವಾಗಿದ್ದು, 1604 ರಲ್ಲಿ ಕಲ್ಕುಡ ಕೆತ್ತಿದ ಬಾಹುಬಲಿ ಎಂಬ ಪ್ರಖ್ಯಾತಿಗೆ ವೇಣೂರಿನ ಬಾಹುಬಲಿ ಭಾಜನವಾಗಿದೆ.

35 ಅಡಿ ಎತ್ತರದ ಬಾಹುಬಲಿಗೆ ಎಳನೀರು, ಕಬ್ಬಿನ ಹಾಲು, ಹಾಲು, ಅಕ್ಕಿಹಿಟ್ಟು, ಕಷಾಯ, ಶ್ರೀಗಂಧ, ರಕ್ತ ಚಂದನ, ಅಷ್ಟಗಂಧ, ಕೇಸರಿ, ಅರಶಿನ, ಸುವರ್ಣ ರತ್ನ, ಸೇರಿದಂತೆ ಪುಷ್ಪವೃಷ್ಠಿಯ ಮಹಾಮಜ್ಜನ ನಡೆಯಲಿದೆ.

ಮಹಾಮಸ್ತಕಾಭಿಷೇಕದ (Mahamastakabhisheka) ಕೊನೆಯ ದಿನ ಬಾಹುಬಲಿಗೆ 1008 ಕಳಶಗಳ ಅಭಿಷೇಕ ನಡೆಯಲಿದೆ.ವಿಶೇಷ ಎಂಬಂತೆ ಬಾಹುಬಲಿಗೆ ಶುದ್ಧ ಕಾಶ್ಮೀರ ಕೇಸರಿಯಿಂದ ಅಭಿಷೇಕ ನಡೆಯಲಿದೆ.

ತುಮಕೂರು ಮೂಲಕ ಎನ್ ಬಿ ಶ್ರೇಯಾಂಶ್ ಕುಮಾರ್ ಅವರ ಕುಟುಂಬ ಈ ಸೇವೆಯನ್ನು ಮಾಡಲಿದೆ.

ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಬಾಹುಬಲಿಗೆ ಅಭಿಷೇಕ ಮಾಡಲು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಅಟ್ಟಿಗೆಯನ್ನು ಮಾಡಲಾಗುತ್ತಿದೆ.

ಈ ಅಟ್ಟಣಿಗೆಯಲ್ಲಿ 600 ಜನ ನಿಲ್ಲಬಹುದಾದ ಸಾಮರ್ಥ್ಯವನ್ನು ಹೊಂದಿದೆ.ಈ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಪ್ರತಿದಿನ ನಲ್ವತ್ತು ಸಾವಿರ ಜನರು ಭಾಗವಹಿಸುವ ನೀರಿಕ್ಷೆಗಳಿವೆ.

ಗಣ್ಯರು ಆಗಮನಕ್ಕಾಗಿ ಹೆಲಿಪ್ಯಾಡ್ (Helipad) ನಿರ್ಮಾಣವೂ ನಡೆದಿದೆ. ಭಕ್ತಾದಿಗಳಿಗಾಗಿ ಜೈನ ಸಂಪ್ರದಾಯದ ತಿನಿಸುಗಳನ್ನು ನೀಡಲಾಗುತ್ತದೆ. ಸುಮಾರು ನಾಲ್ಕು ಸಾವಿರ ಕಾರುಗಳು ನಿಲ್ಲಬಹುದಾದ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಮಹಾಮಸ್ತಕಾಭಿಷೇಕ್ಕಾಗಿ ಎರಡು ವೇದಿಕೆಗಳ ನಿರ್ಮಾಣ ಮಾಡಲಾಗುತ್ತಿದ್ದು, ಒಂದು ವೇದಿಕೆಯಲ್ಲಿ ವಸ್ತು ಪ್ರದರ್ಶನ ನಡೆಯಲಿದೆ.

ಈಗಾಗಲೇ ಪಾಸ್‍ಗಳ ಹಂಚಿಕೆ ಮಾಡಲಾಗುತ್ತಿದ್ದು, ಪಾಸ್ ಇದ್ದವರಿಗೆ ಪ್ರತ್ಯೇಕ ಗ್ಯಾಲರಿ, ಸಾರ್ವಜನಿಕರಿಗೆ ಧರ್ಮದರ್ಶನ ಗ್ಯಾಲರಿ ಮಾಡಲಾಗುತ್ತಿದೆ.

ನಂದಿನಿ ನದಿಯ ತಟದಲ್ಲಿ ಪ್ರಸನ್ನಚಿತ್ತನಾಗಿ ನಿಂತಿರುವ ಭಗವಾನ್ ಬಾಹುಬಲಿಗೆ (Bhagavan Bahubali) 12 ವರ್ಷಗಳ ಬಳಿಕ ಮಹಾಮಸ್ತಾಭಿಷೇಕ ನಡೆಯಲಿದೆ.

ವೇಣೂರಿನ ಬೆಟ್ಟದ ಮೇಲೆ ವಿರಾಜಮಾನಗೊಂಡಿರುವ ತ್ಯಾಗವೀರ ಬಾಹುಬಲಿ ಸ್ವಾಮಿಯ ಭವ್ಯ ಮೂತಿ೯ಯನ್ನು 1604ರಲ್ಲಿ ಅಜಿಲ ಅರಸರು ಸಮಾಜದ ಸವ೯ ಧಮೀ೯ಯರ ಸಹಾಯ-ಸಹಕಾರಗಳಿಂದ ಪ್ರತಿಷ್ಠಾಪಿಸಿದ್ದು, 420 ವಷ೯ಗಳಲ್ಲಿ ಹಲವಾರು ಬಾರಿ ಮಹಾಮಸ್ತಕಾಬಿಷೇಕಗಳು ನೆರವೇರಿರುವ ಬಗ್ಗೆ ದಾಖಲೆಗಳಿವೆ.

12 ವಷ೯ಗಳ ಹಿಂದೆ ಅಂದರೆ 2012ರಲ್ಲಿ ವೇಣೂರಿನಲ್ಲಿ ಮಹಾಮಸ್ತಕಾಭಿಷೇಕ ವೈಭವದಿಂದ ನೆರವೇರಿತು.

ಇದೀಗ ಸರಿಯಾಗಿ ಮತ್ತೆ 12 ವಷ೯ಗಳ (12 Years) ಬಳಿಕ 2024ರಲ್ಲಿ ಮಹಾಮಸ್ತಕಾಭಿಷೇಕಕ್ಕಾಗಿ ಕ್ಷೇತ್ರ ಇಡೀ ಜೈನ ಸಮಾಜದೊಂದಿಗೆ (Jain) ಸಜ್ಜಾಗುತ್ತಿದೆ. ಇದು ಸಮಾಜದ ಧಾಮಿ೯ಕ ಜಾಗೃತಿಯನ್ನೂ, ಮೌಲ್ಯಗಳ ಬಗೆಗಿನ ಶೃದ್ಧೆಯನ್ನು ಸೂಚಿಸುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button