ಕಾಡಿನ ಕತೆಗಳುನಡಿಗೆ ನಮ್ಮ ಖುಷಿಗೆವಿಂಗಡಿಸದಸೂಪರ್ ಗ್ಯಾಂಗು

ನರಹರಿ ಪರ್ವತಕ್ಕೊಂದು ಅನಿರೀಕ್ಷಿತ ಪಯಣ ..!

ದಿನಗಟ್ಟಲೆ ಕುಳಿತು, ಕಲೆ ಹಾಕಿ, ನೂರಾರು ಪ್ಲ್ಯಾನುಗಳೊಂದಿಗೆ ಬೆಳೆಸುವ ಪಯಣಕ್ಕಿಂತ, ಅನಿರೀಕ್ಷಿತವಾಗಿ, ಕುಳಿತ ಕಡೆಯಿಂದ ಎದ್ದು ಹೊರಡುವ ಪಯಣ ನೆನಪಿನಲ್ಲಿ ಉಳಿದುಬಿಡುತ್ತದೆ. ಅಂತಹದ್ದೇ ಆತ್ಮೀಯರೊಂದಿಗೆ ಬೆಳೆಸಿದ ಅನಿರೀಕ್ಷಿತ ಪಯಣ ಕಥೆ ಹೇಳಿದ್ದಾರೆ ಆಕರ್ಷ.

  • ಆಕರ್ಷ ಆರಿಗ

ಕಾಲೇಜು ಲೈಫಲ್ಲಿ ಟ್ರಿಪ್ ಹೋಗುವ ಕನಸು ಎಲ್ಲರಿಗೂ ಇರುತ್ತದೆ. ಆದರೇ ಹಲವು ಕಾರಣಗಳೊಂದಿಗೆ ಪ್ರತಿ ಬಾರಿಯೂ ಅವಕಾಶ ತಪ್ಪಿ ಹೋಗಿತ್ತು. ಹೀಗೆ ಅನಿರೀಕ್ಷಿತ ಪಯಣವೆ ಯಾವತ್ತೂ ಕೂಡ ತುಂಬಾಾ ಸ್ಪೆಷಲ್ ಇರುತ್ತದೆ. 

ಕೆಲವೊಂದು ಪಯಣಗಳು ವರ್ಣಿಸಲು ಸಾಧ್ಯವಿಲ್ಲ ಏಕೆಂದರೆ ಅದೆಷ್ಟರ ಮಟ್ಟಿಗೆ ವಿಶೇಷತೆಯನ್ನು ಹೊಂದಿದೆ. ಹೀಗೆ ಒಂದು ದಿನ ಸ್ನೇಹಿತರೆಲ್ಲರೂ ಬರ್ಡೆ ಸೆಲೆಬ್ರೇಶನ್ ಯೋಚನೆ ಹಾಕುತ್ತಿದ್ದೆವು, ಅಕ್ಟೋಬರ್ 6  ರಂದ ಸ್ನೇಹಿತೆಯ ಮನೆಗೆ ಹೋಗಿ ಅವಳಿಗೆ ಗೊತ್ತಿಲ್ಲದೇನೆ ಅವಳ ಹುಟ್ಟುಹಬ್ಬವನ್ನು ಆಚರಿಸಬೇಕೆಂಬುದು ನಮ್ಮ ಯೋಜನೆಯಾಗಿತ್ತು.

Shree Narahari Parvatha Sadashiva Temple Bantwal Dakshina Kannada Trekking Friends trip

ಯೋಜನೆ ಮಾಡಿದ ಹಾಗೆ ಎಲ್ಲವೂ ನಡೆಯಿತು. ಅವಳ ಮನೆಯಲ್ಲಿ ಊಟ ಮಾಡಿಕೊಂಡು, ಎಲ್ಲರೂ ಹರಟೆ ಹೊಡೆಯುತ್ತಾ, ಜಗಳ ಆಡುತ್ತ, ಹಾಗೆ ಹತ್ತಿರದಲ್ಲಿ ಇರುವ ನರಹರಿ ಪರ್ವತಕ್ಕೆ ಹೋಗೋಣ ಎಂಬ ಯೋಚನೆ ಮೂಡಿತು ನಮ್ಮಲ್ಲಿ. 11 ಜನರ ಪಯಣ ನರಹರಿ ಪರ್ವತ ಅತ್ತಕಡೆ ಸಾಗಿತ್ತು.

ನರಹರಿ ಪರ್ವತ ಹತ್ತುವಾಗ ಇದ್ದ ಶಕ್ತಿಎಲ್ಲ ಖಾಲಿಯಾಗಿ ಮೆಟ್ಟಿಲಲ್ಲಿ ಕೂತುಕೊಂಡು ಸೆಲ್ಫಿ ತೆಗೆಯುತ್ತಾ , ಹಾಗೂ ಮಾತನಾಡುತ್ತಾ ಮುಂದೆ ಸಾಗಿದೆವು. ಸುಮಾರು ಎರಡುವರೆಗೆ ಆ ಸುಂದರ ಸ್ಥಳ ತಲುಪಿದೆವು, ಕಂಪನಿಯ ಗಾಳಿ ,ಸುತ್ತಲಿನ ಚಿಲಿಪಿಲಿ ಹಕ್ಕಿಯ ಕಲರವ, ಗುರು ಗುಟ್ಟುಕೊಂಡು ನೋಡುವ ಮಂಗಗಳು. ದೇವರ ಸನ್ನಿಧಿಯನ್ನು ಪ್ರದಕ್ಷಿಣೆ ಹಾಕಿ, ಹೀಗೆ ಮಾತಾಡುತ್ತ ಸ್ನೇಹಿತರೊಂದಿಗೆ ಕ್ಯಾಮೆರದಲ್ಲಿ ಆ ಕ್ಷಣಗಳನ್ನು ಸೆರೆ ಹಿಡಿಯಲು ಆರಂಭಿಸಿದೆವು

Shree Narahari Parvatha Sadashiva Temple Bantwal Dakshina Kannada Trekking Friends trip


ನಾನು ಕಂಡ ಒಂದು ವಿಶೇಷತೆಯೇನೆಂದರೆ ಸಾಮಾನ್ಯವಾಗಿ ಮನುಷ್ಯ ಮಂಗನ ಹಾಗೆ ಆಡುತ್ತಾರೆ ಎಂಬ ಮಾತು ಕೇಳಿದ್ದೆ ನೋಡಿದೆ ಸಹ , ಆದರೆ ಅಲ್ಲಿದ್ದ ಜನಗಳು ಮಂಗನೊಂದಿಗೂ ಸೆಲ್ಫಿ ತೆಗೆಯುತ್ತ ಕಾಲ ಕಲಿತಿದ್ದರು. ನಮ್ಮ ಸಂತೋಷಕ್ಕೆ ಪ್ರವಾಸ ಹೋಗುತ್ತೇವೆ, ಆ ಸಂತೋಷದಲ್ಲಿ ಅಲ್ಲಿ ಕಸ ಹಾಕಿ, ಆ ಜಾಗವನ್ನ ಕಲುಷಿತ ಮಾಡುತ್ತೇವೆ.

ಮಧ್ಯಾಹ್ನದ ಹೊತ್ತಲ್ಲಿ ನಾವಲ್ಲಿ ಕೂತುಕೊಂಡು ಒಂದಿಷ್ಟು ತರ್ಲೆ ಆಟ ಆಡಿ, ಅಷ್ಟರಲ್ಲಿ ಜನಸಾಗರ ಬರಲಾರಂಭಿಸಿತು. ಪ್ರಶಾಂತವಾದ ಸ್ಥಳ ಸಂತೆಯ ಗೂಡಾಯಿತು. ಅಷ್ಟರಲ್ಲೇ ಮನೆ ನೆನಪಾಯಿತು.

ಟ್ರಿಪ್ ಅಂದ ಮೇಲೆ ಕ್ಯಾಮರ ಅನ್ನೊ ಸಹಪಾಠಿ ನಮ್ಮ ಜೊತೆಗೆ ಇದ್ದೇ ಇರುತ್ತದೆ. ಒಬ್ಬ ಫೋಟೊಗ್ರಾಫರ್ ಪ್ರತಿಯೊಂದು ಗುಂಪಿನಲ್ಲಿಯೂ ಇರುತ್ತಾನೆ. ನಮ್ಮೆಲ್ಲರ ಫೋಟೋವನ್ನು ಬಹಳ ಅಂದವಾಗಿ ತೆಗೆದು ಕೊನೆಗೆ ತನ್ನ ಫೋಟೋ ತೆಗೆಯಲು ಯಾರೂ ಇಲ್ಲ ಅಂತ ನಿರಾಸೆಗೊಳ್ಳುವವರು. ಆದರೆ ಅಂತ ಘಟನೇ ನಮ್ಮಲ್ಲಿ ನಡೆಯಲಿಲ್ಲ.

ನೀವುಇದನ್ನುಇಷ್ಟಪಡಬಹುದು: ನಿಸರ್ಗದ ಮಡಿಲಲ್ಲಿ ಹೀಗೊಂದು ಯಾನ

ನಮ್ಮ ಸ್ನೇಹಿತರ ಗುಂಪಲ್ಲಿ ಬರೇ ನಾಲ್ಕೇ ಮಂದಿ ಹುಡುಗಿರೆಂದರೆ 10 ಮಂದಿ ಹುಡುಗರ ಸಮಾನವಾಗಿದೆ. ಹೀಗೆ ಸಮಯ ಹೋಗಿದ್ದೆ ಗೊತ್ತಾಗಿಲ್ಲ. ನರಹರಿ ಪರ್ವತ ಇಳಿಯುತ್ತ ಸಾಕಷ್ಟು ಮಂಗಗಳ ಗುಂಪು ನೋಡಲು ಸಿಕ್ಕಿತು. ಸ್ನೇಹಿತರು ” ನೋಡಲ್ಲಿ ನಿನ್ನ ಕುಟುಂಬದವರನ್ನು ಕರೆದುಕೊಂಡು ಬಂದಿದೆ” ಅಂತ ಹೇಳಿ ತಮಾಷೆ ಮಾಡ್ತಿದ್ದೆ. ಅದಿಕ್ಕೆ ಸರಿಯಾಗಿ ಮಂಗಗಳು ಕೂಡ ಪ್ರತಿಕ್ರಿಯೆ ನೀಡಿದ್ದು.

Shree Narahari Parvatha Sadashiva Temple Bantwal Dakshina Kannada Trekking Friends trip


ಪ್ರಾಣಿಗಳೊಂದಿಗೆ ಸ್ನೇಹ ಮಾಡುವುದು ಒಳ್ಳೆಯದು; ಆದ್ರೆ ಅವುಗಳಿಗೆ ಆಹಾರ ನೀಡುವ ಮುಖಾಂತರ ಜಂಕ್ ಫುಡ್ ನೀಡುವುದು ಸರಿಯಲ್ಲ. ನಾವು ತಿನ್ನುವ ಆಹಾರ ನಮಗೆ ಮಾತ್ರ ಸರಿ, ಅವುಗಳಿಗೆಲ್ಲ.

ಪ್ರವಾಸಕ್ಕೆ ಹೋದಾಗ ಎರಡು ಅಂಶವನ್ನು ಎಲ್ಲರೂ ಗಮನಿಸಲೇಬೇಕು. ಮೊದಲನೇದಾಗಿ ಆ ಜಾಗಕ್ಕೆ ಹೋದಾಗ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ಅಲ್ಲಿರುವ ಪ್ರಾಣಿಗಳಿಗೆ ಯಾವುದೇ ಆಹಾರವನ್ನು ನೀಡದೆ ಹಾಗೂ ರಕ್ಷಣೆ ಮಾಡಬೇಕು. ನಮ್ಮ ಖುಷಿಗೆ ಬೇರೆಯವರಿಗೆ ಹಾನಿ ಮಾಡುವುದು ಬೇಡ.

ಹೇಗೆ ಹೋಗುವುದು?

ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ೩೦ ಕಿ. ಮೀ. ದೂರದಲ್ಲಿದೆ. ಸಮುದ್ರಮಟ್ಟದಿಂದ 1000 ಅಡಿ ಎತ್ತರದಲ್ಲಿದೆ. ಸುತ್ತಲೂ ಬೆಟ್ಟಗುಡ್ಡಗಳಿಂದ ಕೂಡಿರುವ ಈ ತಾಣ ರಮ್ಯತೆಯಿಂದ ಕೂಡಿದೆ.

ಬಾವಿ ನೀರು ಸೇದುವಂಥ ತೆಂಗು ನಾರಿನಿಂದ ಮಾಡಿದ ‘ಹುರಿ ಹಗ್ಗ’ವನ್ನು ಮಾತ್ರ ಇಲ್ಲಿ ಸಮರ್ಪಿಸಲಾಗುತ್ತದೆ. ಆರೋಗ್ಯ, ಕಚೇರಿ ಕೆಲಸಗಳು ಇಷ್ಟಾರ್ಥದಂತೆ ನೆರವೇರಲೆಂದು ಪ್ರಾರ್ಥಿಸಿ, ಹರಕೆ ರೂಪದಲ್ಲಿ ಈ ಸೇವೆ ಸಲ್ಲಿಸುತ್ತಾರೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button