ನಡಿಗೆ ನಮ್ಮ ಖುಷಿಗೆಬೆರಗಿನ ಪಯಣಿಗರುವಿಂಗಡಿಸದಸ್ಫೂರ್ತಿ ಗಾಥೆ

ಅಂಟಾರ್ಕ್ಟಿಕದ ಅತಿ ಎತ್ತರದ ಶಿಖರವೇರಿದ ಕೇರಳದ ಹಸನ್ ಖಾನ್

ಕೇರಳದ ಸರ್ಕಾರಿ ಉದ್ಯೋಗಿ 36 ವರ್ಷದ ಶೇಖ್ ಹಸನ್ ಖಾನ್ ಅಂಟಾರ್ಕ್ಟಿಕಾ ಖಂಡದ ಅತಿ ಎತ್ತರದ ಶಿಖರ ಮೌಂಟ್ ವಿನ್ಸನ್ ಅನ್ನು ಏರಿ ಸಾಧನೆಗೈದಿದ್ದಾರೆ. ಇದು ಅವರು ಏರಿದ ಐದನೇ ಅತಿ ಎತ್ತರದ ಶಿಖರವಾಗಿದೆ.

ಉಜ್ವಲಾ ವಿ.ಯು.

ಅಂಟಾರ್ಕ್ಟಿಕ (Antarctica) ಶಿಬಿರದಿಂದ PTI ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ತಾನು ಡಿ.12 ರಂದು ರಾತ್ರಿ 8.40ಕ್ಕೆ ಮೌಂಚ್ ವಿನ್ಸನ್ (Mount Vinson) ಶಿಖರವನ್ನು ತಲುಪಿ, ಭಾರತದ ರಾಷ್ಟ್ರಧ್ವಜವನ್ನು ಹಾರಿಸಿದೆ ಎಂದು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.

Shaikh Hassan Khan

ಅಂಟಾರ್ಕ್ಟಿಕಾದಲ್ಲಿ ಪ್ರಸ್ತುತ ಇರುವ ಹವಾಮಾನ ಬದಲಾವಣೆಯ ಬಗ್ಗೆ ಜಾಗೃತಿಯನ್ನು ಮೂಡಿಸುವುದೇ ಈ ದಂಡಯಾತ್ರೆಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಅವರ ಈ ಪ್ರಯಾಣವು ಹಲವಾರು ಸವಾಲುಗಳಿಂದ ಕೂಡಿತ್ತು. ಆರೋಹಣದ ಸಂದರ್ಭದಲ್ಲಿ ವಿನ್ಸನ್ ನ ತಾಪಮಾನವು ಮೈನಸ್ 40 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿತ್ತು.

ಹಾಗಾಗಿ ಕಡುಚಳಿಯಿಂದಾಗಿ ಖಾನ್ ಅವರ ಎರಡೂ ಕೈ ಮರಗಟ್ಟಿದ್ದು, ಈಗ ಅವರು ಅಂಟಾರ್ಕ್ಟಿಕಾದಲ್ಲಿ ಇರುವ ಯೂನಿಯನ್ ಗ್ಲೇಸಿಯರ್ ಶಿಬಿರ (Union Glacier Camp)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೌಂಟ್ ವಿನ್ಸನ್ ಅಲ್ಲದೆ, ಶೇಖ್ ಹಸನ್ ಖಾನ್ (Shaikh Hassan Khan) ಅವರು ವಿಶ್ವದ ಇತರ ನಾಲ್ಕು ಶಿಖರಗಳಾದ ಮೌಂಟ್ ಎವರೆಸ್ಟ್ (ಏಷ್ಯಾ), ಮೌಂಟ್ ಡೆನಾಲಿ (ಉತ್ತರ ಅಮೆರಿಕ), ಮೌಂಟ್ ಕಿಲಿಮಂಜಾರೊ (ಆಫ್ರಿಕ) ಹಾಗೂ ಮೌಂಟ್ ಎಲ್ಬ್ರಸ್ (ಯುರೋಪ್) ಅನ್ನು ಏರಿ ಸಾಧನೆಗೈದಿದ್ದಾರೆ.

ಎಂತಹ ಕಠಿಣ ಪರಿಸ್ಥಿತಿಗಳಿಗೂ ಜಗ್ಗದ, ಖಾನ್ ಅವರು ಈಗ ತಮ್ಮ ಮುಂದಿನ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ, ಅವರು ಚಿಲಿ ಮತ್ತು ನಂತರ ಅರ್ಜೆಂಟೀನಾಕ್ಕೆ ಪ್ರಯಾಣವನ್ನು ಯೋಜಿಸಿದ್ದಾರೆ. ಅಲ್ಲಿ ಅವರು ಹಿಮಾಲಯದ ಹೊರಗಿನ ಅತ್ಯುನ್ನತ ಶಿಖರವಾದ ಅಕಾನ್‌ಕಾಗುವಾ ಪರ್ವತವನ್ನು ಏರುವ ಗುರಿಯನ್ನು ಹೊಂದಿದ್ದಾರೆ.

ಸರ್ಕಾರಿ ಕೆಲಸದ ರಜೆಯಲ್ಲಿರುವಾಗ ಖಾನ್ ಅವರು ತಮ್ಮ ಸ್ನೇಹಿತರ ಬೆಂಬಲದೊಂದಿಗೆ ಇಂತಹ ಸವಾಲಿನ ಮತ್ತು ವಿಸ್ಮಯಕಾರಿ ದಂಡಯಾತ್ರೆಯ ಯೋಜನೆಯನ್ನು ರೂಪಿಸುತ್ತಾರೆ.

ವಿಶ್ವದ ಅತ್ಯುನ್ನತ ಶಿಖರಗಳನ್ನು ಅನ್ವೇಷಿಸಿ, ಅವುಗಳನ್ನು ಏರುವ ಅವರ ಈ ಸಾಧನೆಯು, ಅವರ ಅದಮ್ಯ ಮನೋಭಾವ ಮತ್ತು ಜಾಗತಿಕ ವೇದಿಕೆಯಲ್ಲಿ ಜನರ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರಬೇಕೆಂಬ ಅವರ ಬದ್ಧತೆಗೆ ಸಾಕ್ಷಿಯಾಗಿವೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button