Moreವಿಂಗಡಿಸದಸಂಸ್ಕೃತಿ, ಪರಂಪರೆ

ಶಿವರಾತ್ರಿ ಆಚರಣೆಯ ಹಿಂದಿನ ಮಹತ್ವವೇನು..?


ಶಿವನನ್ನ ಭೋಲೆನಾಥ್, ಮಹಾದೇವ್, ಶಂಕರ್ ಹೀಗೆ ಅನೇಕ ಹೆಸರುಗಳಿಂದ ಆರಾಧಿಸಲಾಗುತ್ತದೆ. ಭಗವಾನ್ ಶಿವನನ್ನು ದುಷ್ಟ ವಿನಾಶಕ ಮತ್ತು ಸೃಷ್ಟಿಯ ಮಾರ್ಗದರ್ಶಕನಾಗಿದ್ದಾನೆ.

ನಮ್ಮ ದೇಶದಲ್ಲಿ ಪ್ರತಿ ವರ್ಷ ಮಹಾ ಶಿವರಾತ್ರಿಯ ಆಚರಣೆಯನ್ನು ಮಾಡಲಾಗುತ್ತದೆ. ಅದಕ್ಕೂ ಕಾರಣವಿದೆ.

ಹಿಂದೂ ಕ್ಯಾಲೆಂಡರ್‌ ಪ್ರಕಾರ, ಮಹಾ ಶಿವರಾತ್ರಿಯನ್ನು(Maha Shivaratri)ಪ್ರತಿ ವರ್ಷ ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ.

ಈ ವರ್ಷ ಮಹಾ ಶಿವರಾತ್ರಿಯು 2024ರ ಮಾರ್ಚ್8(March )ಶುಕ್ರವಾರ(Friday) ಆಚರಿಸಲಾಗುತ್ತಿದೆ. ಹಿಂದೂಗಳ ನಂಬಿಕೆ ಪ್ರಕಾರ ಮಹಾ ಶಿವರಾತ್ರಿಯನ್ನು ಆಚರಿಸಲು ಸಾಕಷ್ಟು ಕಾರಣಗಳಿವೆ.

ಈ ದಿನ ಶಿವ ಹಾಗೂ ಪಾರ್ವತಿಯ (Parvati)ವಿವಾಹ ನಡೆಯಿತು ಎಂದು ಹೇಳುವವರು ಅನೇಕರಿದ್ದಾರೆ. ಹೀಗಾಗಿ ಶಿವರಾತ್ರಿ ಪ್ರೀತಿ ಹಾಗೂ ಸಾಮರಸ್ಯದ ಸಂಕೇತ ಎಂದು ಹೇಳುತ್ತಾರೆ.

ಮಹಾಶಿವರಾತ್ರಿ ಹಬ್ಬವನ್ನು ದೇಶಾದ್ಯಂತ ಅಪಾರ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ದಿನವನ್ನು ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವನಿಗೆ ಅರ್ಪಿಸಲಾಗಿದೆ.

ಅಲ್ಲದೆ ಮಹಾಶಿವರಾತ್ರಿಯನ್ನು ಶಿವ ಮತ್ತು ಪಾರ್ವತಿ ಮದುವೆಯಾದ ಶುಭ ದಿನ ಎನ್ನಲಾಗುತ್ತದೆ. ಏಕೆಂದರೆ ಮಾಘ ಬಹುಳ ಚತುರ್ದಶಿಯ ರಾತ್ರಿಯೇ ಶಿವ ಪಾರ್ವತಿಯನ್ನು ವರಿಸಿದ್ದನಂತೆ.

ಹೀಗಾಗಿ ಅಂದು ರಾತ್ರಿ ದೇವಾನು ದೇವತೆಗಳೆಲ್ಲರೂ ಜಾಗರಣೆ ಮಾಡುವ ಮೂಲಕ, ಗಿರಿಜಾ ಕಲ್ಯಾಣ ವೀಕ್ಷಿಸಿ, ಶಿವ ಪಾರ್ವತಿ ಯರಿಬ್ಬರನ್ನೂ ಪೂಜಿಸಿದರಂತೆ.

ಹೀಗಾಗಿಯೇ ಈ ದಿನ ಜಾಗರಣೆ ಪದ್ಧತಿ ಆಚರಣೆಗೆ ಬಂದಿದೆ ಎನ್ನಲಾಗುತ್ತದೆ. ಇವೆಲ್ಲಾ ಕಾರಣದಿಂದಾಗಿ ಮಹಾ ಶಿವರಾತ್ರಿಯ ಆಚರಣೆ ತುಂಬಾ ವಿಶೇಷವಾಗಿದ್ದು ಶಿವ ಭಕ್ತರು ಶಿವನನ್ನು ಪೂಜಿಸಲು, ಅಬಿಷೇಕ, ರುದ್ರಾಭಿಷೇಕ ಮಾಡಲು ಮತ್ತು ಭಗವಂತನ ಆಶೀರ್ವಾದ ಪಡೆಯಲು ವಿವಿಧ ಶಿವ ಮಂತ್ರಗಳನ್ನು ಪಠಿಸಲು ರಾತ್ರಿಯಿಡೀ ಎಚ್ಚರವಾಗಿರುತ್ತಾರೆ. ಭಕ್ತರಿಗೆ ಆಧ್ಯಾತ್ಮಿಕ ಜಾಗೃತಿ ಮತ್ತು ಮುಕ್ತಿಯನ್ನು ಪಡೆಯಲು ಇದು ಪರಿಪೂರ್ಣ ದಿನವಾಗಿದೆ.

ಶಿವ ಪುರಾಣದ ಪ್ರಕಾರ ಶಿವರಾತ್ರಿಯಂದು ರಾತ್ರಿಯ ವೇಳೆಯಲ್ಲಿ ಶಿವನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ.

ಹಾಗಾಗಿ ಶಿವರಾತ್ರಿಯು ಸಮಯ ಪೂಜೆಗೆ ಬಹು ಪ್ರಾಶಸ್ತ್ಯವಾದ ಸಮಯವಾಗಿದೆ.

ಅಲ್ಲದೆ ಆ ದಿನ ಈಶ್ವರನ ಆರಾಧನೆ ಮಾಡಿದರೆ ಎಂದೂ ಲಭಿಸದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿದೆ

ಶಿವನ ಗಂಟಲನ್ನು ಒತ್ತಿ ಹಿಡಿದ ಪಾರ್ವತಿಪುರುಷ ಹಾಗೂ ಸ್ತ್ರೀ ಶಕ್ತಿಗಳನ್ನು ಪ್ರತಿನಿಧಿಸುವ ಶಿವ ಹಾಗೂ ಶಕ್ತಿಯು ಒಟ್ಟಾಗಿ ಸೇರಿದ ರಾತ್ರಿಯನ್ನು ಗೌರವಿಸುವುದು ಮಹಾ ಶಿವರಾತ್ರಿಯನ್ನು ಆರಾಧಿಸಲು ಇನ್ನೊಂದು ಕಾರಣ. ಮಹಾಶಿವರಾತ್ರಿಯನ್ನು ಆಚರಿಸಲು ಮತ್ತೊಂದು ಕಾರಣವೂ ಇದೆ.

ಸಾಗರ ಮಂಥನದ ಸಂದರ್ಭದಲ್ಲಿ ಹೊರ ಹೊಮ್ಮಿದ್ದ ವಿಷವನ್ನು ಶಿವನು ಕುಡಿಯುತ್ತಾನೆ.

ಈ ದಿನದ ಧ್ಯೋತಕವಾಗಿ ಕೂಡಾ ಶಿವರಾತ್ರಿಯನ್ನು ಆಚರಿಸಲಾಗುತ್ತದೆ ಎಂದು ಹೇಳುವವರೂ ಇದ್ದಾರೆ. ಶಿವ ಈ ರೀತಿ ಮಾಡಿದ್ದರಿಂದ ಜಗತ್ತು ಅಂಧಕಾರಕ್ಕೆ ಹೋಗುವುದು ತಪ್ಪಿತು.

ಪಾರ್ವತಿಯು ವಿಷವು ಶಿವನ ದೇಹ ತಲುಪುವುದನ್ನು ತಪ್ಪಿಸಲು ಅವನ ಗಂಟಲನ್ನು ಒತ್ತಿ ಹಿಡಿಯುತ್ತಾಳೆ. ಪರಿಣಾಮ ಶಿವನ ಕಂಠವು ನೀಲಿ ಬಣ್ಣಕ್ಕೆ ತಿರುಗುತ್ತದೆ.

ಇದೇ ಕಾರಣಕ್ಕೆ ಶಿವನಿಗೆ ನೀಲಕಂಠ ಎಂಬ ಹೆಸರು ಬಂದಿತು ಅಂತಲೂ ಹೇಳಲಾಗುತ್ತದೆ. ಹೀಗೆ ಶಿವರಾತ್ರಿ ಆಚರಣೆಯ ಹಿಂದೆ ಒಂದೊಂದು ಕಥೆಯನ್ನು ನಂಬಿಕೊಂಡು ಬರಲಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button