Moreವಿಂಗಡಿಸದ

ಮಾ.03 ರಂದು ವಿಶ್ವ ವನ್ಯಜೀವಿಗಳ ದಿನವೆಂದು ಯಾಕೆ ಆಚರಿಸಲಾಗುತ್ತೆ..? ಕಾರಣ ಇಲ್ಲಿದೆ.

ಮಾರ್ಚ್.೦3 ವಿಶ್ವ ವನ್ಯಜೀವಿ ದಿನ(world Wildlife Day). ವನ್ಯಜೀವಿ ,ಸಸ್ಯ ಸಂಕುಲಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಈ ದಿನವನ್ನು ವಿಶ್ವದಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.

Wild animal

ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ(United Nations general Assembly) ಮಾರ್ಚ್‌ 3ನ್ನು ವಿಶ್ವ ವನ್ಯಜೀವಿ ದಿನವನ್ನಾಗಿ ಆಚರಿಸಲು ಡಿಸೆಂಬರ್ (December)20, 2013 ರಲ್ಲಿ ಘೋಷಣೆ ಮಾಡಿತು.

ಅದರ ಮುಂದಿನ ವರ್ಷ ಅಂದರೆ 2014ರ ಮಾರ್ಚ್(March)03 ರಿಂದ ಈ ದಿನವನ್ನು ಆಚರಿಸಲಾಗುತ್ತಿದೆ.

ಪ್ರಾಣಿ ಸಂಕುಲ ಮತ್ತು ಸಸ್ಯ ಸಂಕುಲದ(Fauna and Flora) ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲು ತೀರ್ಮಾನಿಸಲಾಯಿತು.

ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ, ಸಸ್ಯ ಹಾಗೂ ಪ್ರಾಣಿಗಳ ಪಾಮುಖ್ಯತೆಯನ್ನು ತಿಳಿಸುವುದು, ವನ್ಯಜೀವಿ ಸಂಕುಲದ ವಿವಿಧ ಕೊಡುಗೆಗಳನ್ನು ಗೌರವಿಸಲು ಈ ದಿನವನ್ನು ಮೀಸಲಿರಿಸಲಾಗಿದೆ.

ಪ್ರತಿ ವರ್ಷ ಈ ದಿನವನ್ನು ವಿಭಿನ್ನ ಥೀಂ ನಲ್ಲಿ ಆಚರಿಸಲಾಗುತ್ತಿದೆ. ಈ ವರ್ಷವೂ ಒಂದು ಹೊಸ ಥೀಮ್ ನಲ್ಲಿ ಭಾನುವಾರ ಈ ದಿನವನ್ನು ಆಚರಿಸಲಾಗುತ್ತಿದೆ.

World wildlife

ಜನರು ಮತ್ತು ಗ್ರಹವನ್ನು ಸಂಪರ್ಕಿಸುವುದು (Connecting People and Planet), ವನ್ಯಜೀವಿ ಸಂರಕ್ಷಣೆಯಲ್ಲಿ ಡಿಜಿಟಲ್(Digital) ಆವಿಷ್ಕಾರವನ್ನು ಅನ್ವೇಷಿಸುವುದು”, ಸಂರಕ್ಷಣೆಯ ಪ್ರಯತ್ನಗಳನ್ನು ಮುಂದುವರಿಸಲು ತಂತ್ರಜ್ಞಾನದ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ.

ಇಂದಿನ ಡಿಜಿಟಲ್ ಯುಗದಲ್ಲಿ ಈ ಥೀಮ್ ವಿಶೇಷವಾಗಿ ಪ್ರಸ್ತುತವಾಗಿದೆ, ಅಲ್ಲಿ ತಾಂತ್ರಿಕ ಪ್ರಗತಿಗಳು ದೀರ್ಘಕಾಲೀನ ಸಂರಕ್ಷಣೆ ಸವಾಲುಗಳಿಗೆ ಹೊಸ ಪರಿಹಾರಗಳನ್ನು ನೀಡಬಹುದು.

Conservation of wildlife

ವನ್ಯಜೀವಿ ಸಂರಕ್ಷಣೆ (Conservation of world Life) ಸವಾಲುಗಳನ್ನು ಎದುರಿಸಲು ಜನರು ಮತ್ತು ತಂತ್ರಜ್ಞಾನದ ನಡುವಿನ ಸಹಯೋಗದ ಅಗತ್ಯವನ್ನು ಈ ಥೀಮ್ ಒತ್ತಿಹೇಳುತ್ತದೆ.

ಸಂರಕ್ಷಣಾ ಪ್ರಯತ್ನಗಳನ್ನು ಸುಧಾರಿಸಲು ಮತ್ತು ನಮ್ಮ ಗ್ರಹದ ಜೀವವೈವಿಧ್ಯದ ದೀರ್ಘಾವಧಿಯ ಬದುಕುಳಿಯುವಿಕೆಯನ್ನು ಖಚಿತಪಡಿಸಿಕೊಳ್ಳಲು ರಿಮೋಟ್ ಸೆನ್ಸಿಂಗ್, ಕೃತಕ ಬುದ್ಧಿಮತ್ತೆ(Artificial intelligence)ಮತ್ತು ಡೇಟಾ ಅನಾಲಿಟಿಕ್ಸ್‌ನಂತಹ(Data Analytics)ಡಿಜಿಟಲ್ ಉಪಕರಣಗಳ ಪರಿಶೋಧನೆ ಮತ್ತು ಅಳವಡಿಕೆಯನ್ನು ಇದು ಪ್ರೋತ್ಸಾಹಿಸುತ್ತದೆ.

2014ರಿಂದ ಆರಂಭವಾದ ವಿಶ್ವ ವನ್ಯಜೀವಿಗಳ ದಿನ 2024 ರಂದು 10 ವರ್ಷದ ಆಚರಣೆಯನ್ನು ಮಾಡಲಾಗುತ್ತಿದೆ.

ಪರಿಸರ ವ್ಯವಸ್ಥೆಯ ಪ್ರಮುಖ ಭಾಗವಾಗಿರುವ ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ವನ್ಯ ಜೀವಿಗಳ ದಿನದ ಉದ್ದೇಶವಾಗಿದೆ.

ಮಾನವನ ಮಿತಿ ಮೀರಿದ ಚಟುವಟಿಕೆಗಳಿಂದ ಪ್ರಾಣಿ ಜೀವ ಸಂಕುಲವು ಎದುರಿಸುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಾಗಿದೆ.

Wildlife

ಈ ದಿನದಂದು ಶಾಲಾ ಕಾಲೇಜುಗಳಲ್ಲಿ ವಿಶ್ವ ವನ್ಯ ಜೀವಿಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಪ್ರಾಣಿಗಳ ಸಂರಕ್ಷಣೆಯ ಕುರಿತು ಕಾರ್ಯಗಾರಗಳು, ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತದೆ

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button