ದೂರ ತೀರ ಯಾನವಿಂಗಡಿಸದ

ವೀಸಾ ಇಲ್ಲದೆ ಥೈಲ್ಯಾಂಡ್‌ ಹೋಗಲು ಇಲ್ಲಿದೆ ಸುವರ್ಣಾವಕಾಶ

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸಬೇಕು ಅಂತಂದ್ರೆ ನಿಮಗೆ ವೀಸಾ ಅತ್ಯಗತ್ಯ.. ಆದರೆ ನೀವು ವೀಸಾ, ಪಾಸ್‌ಪೋರ್ಟ್‌ ಇಲ್ಲದೆಯೂ ಮತ್ತೊಂದು ದೇಶಕ್ಕೆ ಪ್ರಯಾಣ ಮಾಡಬಹುದು.. ಹೌದು, ಭಾರತೀಯರ ಪಾಲಿಗೆ ಸದ್ಯ ಅಂತಹದ್ದೊಂದು ಅವಕಾಶ ಒದಗಿ ಬಂದಿದೆ.. ಶ್ರೀಲಂಕಾದ ಬಳಿಕ ಮತ್ತೊಂದು ದೇಶ ಭಾರತಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದೆ. ವೀಸಾ ಇಲ್ಲದೆ ಥೈಲ್ಯಾಂಡ್‌ ಸುವರ್ಣಾವಕಾಶ ಒದಗಿ ಬಂದಿದೆ.

ಥೈಲ್ಯಾಂಡ್ (Thailand) ದೇಶಕ್ಕೆ ಪ್ರವಾಸ ಹೋಗ ಬಯಸುವ ಭಾರತೀಯರಿಗೆ ಅಲ್ಲಿನ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇದೇ ವರ್ಷ ನವೆಂಬರ್ 10 ರಿಂದ ಮುಂದಿನ ವರ್ಷ 2024ರ ಮಾರ್ಚ್ 10ರವರೆಗೆ (Free Visa) ಥೈಲ್ಯಾಂಡ್ ದೇಶಕ್ಕೆ ವೀಸಾ ಇಲ್ಲದೆ ಭಾರತೀಯರು ಭೇಟಿ ನೀಡಬಹುದು. 4 ತಿಂಗಳು ಇಂತಹದ್ದೊಂದು ಅವಕಾಶ ನೀಡುವುದು ಮಾತ್ರವಲ್ಲದೇ, 30 ದಿನಗಳ ಕಾಲ ಥೈಲ್ಯಾಂಡ್ ದೇಶದಲ್ಲೇ ಉಳಿದುಕೊಳ್ಳುವ ಅವಕಾಶವೂ ನೀಡಿದೆ ಅಲ್ಲಿನ ಸರ್ಕಾರ. ಥೈಲ್ಯಾಂಡ್ ಸರ್ಕಾರದ ಈ ನಿರ್ಧಾರ ಪ್ರವಾಸೋದ್ಯಮ ಇಲಾಖೆಯನ್ನು ಉತ್ತೇಜಿಸುವುದಕ್ಕೆ ಅಲ್ಲಿನ ಸರ್ಕಾರಕ್ಕೆ ಇದು ನೆರವಾಗಲಿದೆ ಅಂತೆ.

 ಈಗಾಗಲೇ ಹೇಳಿದಂತೆ ಥೈಲ್ಯಾಂಡ್ ದೇಶದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಭಾರತೀಯ ಪ್ರಜೆಗಳು ಮಾತ್ರವಲ್ಲ, ಥೈವಾನ್ ದೇಶದ ಪ್ರಜೆಗಳಿಗೂ ಥೈಲ್ಯಾಂಡ್ ಸರ್ಕಾರ ಈ ಅವಕಾಶ ಕಲ್ಪಿಸಿದೆ.  ಇದೇ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಚೀನಾ ದೇಶದ ಪ್ರಜೆಗಳಿಗೆ ಥೈಲ್ಯಾಂಡ್ ಸರ್ಕಾರ ಈ ಅವಕಾಶ ನೀಡಿತ್ತು.

ಕೋವಿಡ್ ಬಳಿಕ ಭಾರತದ ಪ್ರವಾಸಿಗಳು ಪ್ರವಾಸಕ್ಕೆ ಹೋಗುತ್ತಿರುವುದು ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಥೈಲ್ಯಾಂಡ್‌ ದೇಶಕ್ಕೆ ಭಾರತೀಯರಿಂದ ಅಪಾರ ಆದಾಯ ಸಿಗುತ್ತಿದೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತ ದೇಶದ ಪ್ರಜೆಗಳು ಥೈಲ್ಯಾಂಡ್ ಪ್ರವಾಸೋದ್ಯಮಕ್ಕೆ 4ನೇ ಅತಿ ದೊಡ್ಡ ಆದಾಯದ ಮೂಲವಾಗಿದ್ದಾರೆ. ಮಲೇಷ್ಯಾ, ಚೀನಾ ಹಾಗೂ ದಕ್ಷಿಣ ಕೊರಿಯಾ ನಂತರದ ಸ್ಥಾನವನ್ನು ಭಾರತ ಪಡೆದಿದ್ದು, ಈ ವರ್ಷ ಇಲ್ಲಿಯವರೆಗೆ ಒಟ್ಟು 12 ಲಕ್ಷ ಭಾರತೀಯ ಪ್ರವಾಸಿಗರು ಥೈಲ್ಯಾಂಡ್ ದೇಶಕ್ಕೆ ಭೇಟಿ ನೀಡಿದ್ಧಾರೆ. 

ಹಾಗೆ ನೋಡಿದರೆ ವಿಶ್ವಾದ್ಯಂತ ಪ್ರಯಾಣಿಸುವ ಭಾರತೀಯರಿಗೆ ಇಂಥಾ ಅವಕಾಶ ಇದೇ ವರ್ಷ ಎರಡನೇ ಬಾರಿ ಸಿಕ್ಕಿದೆ. ಅದೂ ಕೂಡಾ ಒಂದೇ ವಾರದ ಅಂತರದಲ್ಲಿ.. ಇತ್ತೀಚೆಗೆ ಶ್ರೀಲಂಕಾ ಕೂಡಾ ಭಾರತೀಯರಿಗೆ ಈ ರೀತಿಯ ಅವಕಾಶ ನೀಡಿತ್ತು. ಭಾರತ, ಚೀನಾ ಹಾಗೂ ರಷ್ಯಾ ಸೇರಿದಂತೆ 7 ದೇಶಗಳ ಪ್ರಜೆಗಳು ಶ್ರೀಲಂಕಾಗೆ ವೀಸಾ ಇಲ್ಲದೆ ಪ್ರವೇಶ ಪಡೆಯುವ ಅವಕಾಶ ಕಲ್ಪಿಸಿತ್ತು. ಈ ಯೋಜನೆಯನ್ನು 2024ರ ಮಾರ್ಚ್ 31ರವರೆಗೆ ಶ್ರೀಲಂಕಾ ಸರ್ಕಾರ ಕಲ್ಪಿಸಿದೆ.

ಇದನ್ನು ಓದಿ : ಭಾರತ ಸೇರಿದಂತೆ 7 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಘೋಷಿಸಿದ ಶ್ರೀಲಂಕಾ

ಭಾರತೀಯ ಪ್ರವಾಸಿಗರು ವಿದೇಶ ಪ್ರವಾಸ ಮಾಡುವ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಲೇ ಇದೆ. ಭಾರತ ಸರ್ಕಾರದ ಬಳಿ ಇರುವ ಅಂಕಿ ಅಂಶಗಳ ಪ್ರಕಾರ 2011ರಲ್ಲಿ ಒಟ್ಟು 1.4 ಕೋಟಿ ಭಾರತೀಯರು ವಿದೇಶಗಳ ಪ್ರವಾಸ ಮಾಡಿದ್ದರು. 2019ರಲ್ಲಿ ಒಟ್ಟು 2.7 ಕೋಟಿ ಭಾರತೀಯರು ವಿದೇಶ ಪ್ರವಾಸ ಮಾಡಿದ್ದರು. ಕೋವಿಡ್ ಸಾಂಕ್ರಾಮಿಕದ ವೇಳೆ ಪ್ರವಾಸೋದ್ಯಮ ಭಾರೀ ಕುಸಿತ ಕಂಡಿತ್ತು. 2022ರಲ್ಲಿ ಒಟ್ಟು 2.1 ಕೋಟಿ ಭಾರತೀಯರ ವಿದೇಶ ಪ್ರವಾಸ ಮಾಡಿದ್ದರು.

ಇದನ್ನೇ ವಿಚಾರಗಳನ್ನು ಗಮನಿಸಿ ಥೈಲ್ಯಾಂಡ್‌ ಇಂತಹದ್ದೊಂದು ನಿರ್ಧಾರವನ್ನು ಭಾರತದ ವಿಚಾರದಲ್ಲಿ ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ಸದ್ಯ ಶ್ರೀಲಂಕಾ ಬಳಿಕ ಥೈಲ್ಯಾಂಡ್‌ ನೀಡಿರೋ ಇಂತಹದ್ದೊಂದು ಸಿಹಿ ಸುದ್ದಿ ಪ್ರವಾಸ ಪ್ರಿಯರಿಗಂತೂ ವಾರದಲ್ಲಿಯೇ ಎರಡೆರಡು ಗುಡ್‌ನ್ಯೂಸ್‌ ಸಿಕ್ಕಿರೋ ಖುಷಿಗೆ ಕಾರಣವಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟ್ರಾವೆಲ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button