ವಿಂಗಡಿಸದಸಂಸ್ಕೃತಿ, ಪರಂಪರೆ

ಬೆಂಗಳೂರು ಕಂಬಳದಲ್ಲಿರಲಿದೆ ಈ ವಿಶೇಷತೆಗಳು

ಕರಾವಳಿ ಕಂಬಳಕ್ಕೆ ಸುಮಾರು 700 ರಿಂದ 800 ವರ್ಷಗಳ ಇತಿಹಾಸವಿದೆ. ಕರಾವಳಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಕಂಬಳ ಈ ಬಾರಿ ರಾಜ್ಯ ರಾಜಧಾನಿಗೆ ಕೂಡ ಕಾಲಿಟ್ಟಿದೆ. ಹತ್ತು ಹಲವು ವಿಶೇಷತೆಗಳಿಂದ ನಡೆಯಲಿದೆ ಬೆಂಗಳೂರಿನಲ್ಲಿ ಕಂಬಳ ಹಬ್ಬ. ಹಾಗಿದ್ರೆ ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳಗಳ ವಿಶೇಷತೆಗಳೇನು ಗೊತ್ತಾ..? ಈ ಕುರಿತಾದ ಮಾಹಿತಿ ನಿಮಗಾಗಿ..

ಲಕ್ಷಾಂತರ ಜನರ ಆಗಮನದ ನಿರೀಕ್ಷೆ


ಇತಿಹಾಸದಲ್ಲೇ ಮೊದಲ ಬಾರಿಗೆ ಕರಾವಳಿ ಬಿಟ್ಟು ಹೊರ ಭಾಗದಲ್ಲಿ ಅಂದರೆ, ಬೆಂಗಳೂರಿನಲ್ಲಿ ಕಂಬಳ ನಡೆಯುತ್ತಿದ್ದು,ಸುಮಾರು 70 ಎಕೆರೆ ಜಾಗದಲ್ಲಿ ನಿರ್ಮಾಣ ಆಗಿದೆ.

Kambala

ಕಂಬಳವನ್ನ ಕಣ್ತುಂಬಿ ಕೊಳ್ಳುವುದಕ್ಕೆ ಕನಿಷ್ಠ 3ರಿಂದ 4 ಲಕ್ಷ ಜನರು ಬರುವ ನಿರೀಕ್ಷೆ ಇಡಲಾಗಿದೆ. ಅಲ್ಲದೆ, ಎಂಟು ಸಾವಿರ ಮಂದಿಗೆ ಕುಳಿತುಕೊಳ್ಳುವ ಆಸನದ ವ್ಯವಸ್ಥೆ ಮಾಡಲಾಗಿದೆ. 2000 ವಿಐಪಿಗಳು ಆಗಮಿಸಲಿದ್ದು, ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ.

ಬೆಂಗಳೂರು ಕಂಬಳ , ನಮ್ಮ ಕಂಬಳ ಎನ್ನುವ ಥೀಮ್ ಅಡಿಯಲ್ಲಿ ಕಂಬಳ ಆಯೋಜನೆಗೊಂಡಿದೆ. ಸ್ಯಾಂಡಲ್ ವುಡ್, ಬಾಲಿವುಡ್ ಸೇರಿದಂತೆ ಕರಾವಳಿ ಮೂಲದ ಹಲವು ಸಿನಿ ತಾರೆಯರು ಪಾಲ್ಗೊಳ್ಳಲ್ಲಿದ್ದಾರೆ. ಸಿಎಂ , ಡಿಸಿಎಂ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

ಟಿಕೆಟ್ ಬುಕ್ಕಿಂಗ್, ಪ್ರವೇಶ ಶುಲ್ಕ


ಬೆಂಗಳೂರು ಕಂಬಳ ವೀಕ್ಷಣೆಗೆ ಟಿಕೆಟ್ ಬುಕ್ಕಿಂಗ್ ಇರಬಹುದು, ಪ್ರವೇಶ ಶುಲ್ಕ ಇರಬಹುದು ಎಂದು ಒಂದಷ್ಟು ಜನರು ಭಾವಿಸಿದ್ದಾರೆ. ಇನ್ನೊಂದಷ್ಟು ಮಂದಿ ಟಿಕೆಟ್ ಬುಕ್ಕಿಂಗ್ ಯಾವಾಗ ಆರಂಭವಾಗುತ್ತದೆ ಎಂದು ಕಾಯುತ್ತಿದ್ದರು. ಆದರೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಮುಂಗಡ ಕಾಯ್ದಿರಿಸುವಿಕೆಯೂ ಇಲ್ಲ. ಸಾರ್ವಜನಿಕರಿಗೆ ಪ್ರವೇಶ ಮುಕ್ತವಾಗಿದೆ.

ನೀವು ಇದನ್ನು ಇಷ್ಟ ಪಡಬಹುದು:ಈ ತಿಂಗಳ 25,26 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಕರಾವಳಿ ಕಂಬಳ

ಬೆಂಗಳೂರು ಕಂಬಳದಲ್ಲಿ ಆಹಾರ ಮೇಳ


ಬೆಂಗಳೂರು ಕಂಬಳ ವೀಕ್ಷಣೆಗೆ ಬರುವವರಿಗೆ ಕೋಣಗಳ ಓಟವನ್ನು ವೀಕ್ಷಿಸುವುದರ ಜೊತೆಗೆ ಬಗೆಬಗೆಯ ಖಾದ್ಯಗಳನ್ನು ಸವಿಯಬಹು. ಕರಾವಳಿ ಭಾಗದಲ್ಲಿ ಪ್ರಸಿದ್ಧವಾಗಿರುವ ಕೋರಿ (ಕೋಳಿ) ರೊಟ್ಟಿ, ಪುಂಡಿ (ಅಕ್ಕಿ ಕಡುಬು) ಗಸಿ, ಪತ್ರೊಡೆ, ಅಕ್ಕಿ ಸೇಮಿಗೆ, ಹಲಸಿನ ಕಾಯಿ, ಹಣ್ಣಿಗೆ ಸಂಬಂದಿಸಿದ ಬಗೆಬಗೆ ತಿನಿಸುಗಳು ಸೇರಿದಂತೆ ವಿವಿಧ ತಿಂಡಿ ತಿನಿಸುಗಳು ಮೇಳದಲ್ಲಿ ಇರಲಿವೆ. ಆಹಾರಕ್ಕೆ ಸಂಬಂಧಿಸಿದ ಸುಮಾರು 100ಕ್ಕೂ ಸ್ಟಾಲ್​ಗಳು ಇರಲಿವೆ.

Bangalore

ವಸ್ತು ಪ್ರದರ್ಶನ
ಬೆಂಗಳೂರು ಕಂಬಳದಲ್ಲಿ ಆಹಾರ ಮೇಳ, ಸಾಂಸ್ಕೃತಿ ಕಾರ್ಯಕ್ರಮಗಳು ಮಾತ್ರವಲ್ಲದೆ, ವಸ್ತು ಪ್ರದರ್ಶನವೂ ಇರಲಿದೆ. ಕರಾವಳಿ ಭಾಗದಲ್ಲಿ ಪ್ರಾಚೀನ ಕಾಲದಲ್ಲಿ ಬಳಸುತ್ತಿದ್ದ ವಿವಿಧ ಸಾಮಾಗ್ರಿಗಳು, ಬುಡಕಟ್ಟು ಜನರು ತಯಾರಿಸುವ ವಿವಿಧ ರೀತಿಯ ವಸ್ತುಗಳು ಸೇರಿದಂತೆ ಅನೇಕ ಅಪರೂಪದ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿದ್ದು,ಯಕ್ಷಗಾನ ,ಹುಲಿ ವೇಷ, ಕಂಗಿಲೋ ಸೇರಿದಂತೆ ಹಲವು ನೃತ್ಯಗಳು ಕಂಬಳದ ಮೆರುಗನ್ನು ಹೆಚ್ಚಿಸಲಿವೆ.

ಬೆಂಗಳೂರು ಕಂಬಳದ ಕುರಿತಾದ ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button