ದೂರ ತೀರ ಯಾನವಿಂಗಡಿಸದ

ಈ ತಿಂಗಳಲ್ಲಿ ಪ್ರವಾಸ ಹೊರಟಿದ್ದೀರಾ..? ಈ ಸ್ಥಳಗಳು ನಿಮ್ಮ ಲಿಸ್ಟ್‌ನಲ್ಲಿರಲಿ


ನವೆಂಬರ್ ತಿಂಗಳು ಬಂದಾಯ್ತು. ಕಣ್ಮುಚ್ಚಿ ಕಣ್ಣು ತೆರೆಯುವುದರೊಳಗೆ ಒಂದು ವರ್ಷವೇ ಕಳೆಯುತ್ತಾ ಬಂತು. ವರ್ಷ ಮುಗಿತಾ ಬಂದು ಎಲ್ಲಿಗಾದರೂ ಹೋಗಬೇಕು ಎನ್ನುವ ಆಲೋಚನೆ ಕೆಲವರ ಮನಸಿನಲ್ಲಿ ಇರಬಹುದು. ಬಾಕಿ ಇರುವ ರಜೆ ತೆಗೆದುಕೊಂಡು ಪ್ರವಾಸ ಹೋಗುವ ಎಂದು ಮತ್ತೆ ಕೆಲವರ ಮನಸ್ಸಿನಲ್ಲಿ ಇರಬಹುದು. ಚಳಿಗಾಲದ ಚುಮು ಚುಮು ಚಳಿಯನ್ನು ಎಂಜಾಯ್ ಮಾಡುವ ಎಂದು ಮತ್ತೆ ಕೆಲವರಿಗೆ ಅನಿಸಬಹುದು. ಪ್ರವಾಸದ ಬಗ್ಗೆ ಸದಾ ತುಡಿತ ಇರುವವರು ಈ ಜಾಗಗಳಿಗೆ ಹೋಗುವ ಕಡೆ ಮನಸು ಮಾಡಬಹುದು.

ಜೈಸಲ್ಮೇರ್

ರಾಜಸ್ಥಾನ ರಾಜ್ಯದ ಜೈಸಲ್ಮೇರ್ ಗೆ ಪ್ರವಾಸ ಯೋಜಿಸಲು ನವೆಂಬರ್‌ ತಿಂಗಳು ಬೆಸ್ಟ್ ಎಂದೇ ಹೇಳಬಹುದು. ಚಿನ್ನದ ಮರಳು ದಿಬ್ಬಗಳು, ಮರಳುಗಲ್ಲುಗಳಿಂದ ನಿರ್ಮಿಸಲಾದ ಸುಂದರ ಕೋಟೆಗಳಿಂದ ಜೈಸಲ್ಮೇರ್‌ ಕಂಗೊಳಿಸುತ್ತಿದೆ. ಈ ಸ್ಥಳವನ್ನು ಸುವರ್ಣ ನಗರ ಎಂದೇ ಕರೆಯುತ್ತಾರೆ. ಡೆಸಾರ್ಟ್‌ ಸಫಾರಿ ಮಾಡಲು ನಿಮಗೆ ಆಸಕ್ತಿ ಇದ್ದರೆ ತಪ್ಪದೇ ಜೈಸಲ್ಮೇರ್‌ ಅತ್ಯುತ್ತಮ ಆಯ್ಕೆಯಾಗಿದೆ. ಬಿಸಿಲಿನ ಬೇಗೆಯು ಇಲ್ಲಿ ಇರುತ್ತದೆ . ಆದರೆ ಈ ತಾಣದ ಸುತ್ತಮುತ್ತ ನೀವು ಹಲವು ಸ್ಥಳಗಳನ್ನು ನೋಡಬಹುದು.
ಮುನ್ನಾರ್ (Munnar)

ಒಮ್ಮೆಯಾದರೂ ಮುನ್ನಾರ್ ಕಣ್ತುಂಬಿ ಕೊಳ್ಳ ಬೇಕು ಎನ್ನುವುದು ಅದೆಷ್ಟೋ ಪ್ರವಾಸಿಗರ ಆಸೆ ಆಗಿರುತ್ತದೆ. ಅಂತಹವರಿಗೆ ಈ ಸಮಯ ಹೇಳಿ ಮಾಡಿಸಿದ ಕ್ಷಣ. ಮುನ್ನಾರ್‌ ಹಾಗೂ ಕೇರಳದ ಕೆಲವು ಚಹಾತೋಟಗಳ ಊರುಗಳು ನವೆಂಬರ್‌ನಲ್ಲೂ ಹಸಿರುಹಸಿರಾಗಿ ಕಂಗೊಳಿಸುತ್ತವೆ. ಹಿತವಾದ ವಾತಾವರಣವಿರುವ ಕಾಲದಲ್ಲಿ ಕಣ್ಣಿಗೆ ಹಸಿರಿನ ತಂಪೂ ಜೊತೆಗೂಡಿದರೆ ಅದರ ಖುಷಿಯೇ ಬೇರೆ. ಕೇರಳದಲ್ಲಿ ಸದ್ಯಕ್ಕಂತೂ ಮಳೆಗಾಲಕ್ಕೆ ವಿದಾಯ ಹೇಳಿ ಚಳಿಗಾಲವನ್ನು ಸ್ವಾಗತಿಸುವ ಗಳಿಗೆ.

Munnar


ಸುಂದರ್‌ಬನ್‌
ಬಂಗಾಳದ ಹೆಮ್ಮೆ, UNESCO ವಿಶ್ವ ಪರಂಪರೆಯ ತಾಣ, ಸುಂದರಬನ್ಸ್ ಪ್ರತಿ ಉತ್ಸಾಹಿ ಪ್ರವಾಸಿಗರ ಪಟ್ಟಿಯಲ್ಲಿ ಸ್ಥಾನ ಪಡೆದಿರುತ್ತದೆ. ಈ ದಟ್ಟವಾದ ಮ್ಯಾಂಗ್ರೋವ್ ಅರಣ್ಯವು ಬಂಗಾಳ ಹುಲಿಗಳ ಅತಿದೊಡ್ಡ ಮೀಸಲುಗಳಲ್ಲಿ ಒಂದಾಗಿದೆ ಮತ್ತು ಭಾರತದ ಅತ್ಯುತ್ತಮ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದಾಗಿದೆ . ಜಂಗಲ್ ಕ್ಯಾಟ್, ನರಿ, ಕಾಡುಹಂದಿ ಮತ್ತು ಮಚ್ಚೆಯುಳ್ಳ ಜಿಂಕೆಗಳು ಸುಂದರ್ಬನ್ಸ್‌ನಲ್ಲಿ ವಾಸಿಸುವ ಇತರ ಪ್ರಾಣಿಗಳಲ್ಲಿ ಸೇರಿವೆ. ಭಾರತದಲ್ಲಿ ನವೆಂಬರ್‌ನಲ್ಲಿ ಭೇಟಿ ನೀಡಲು ಇದು ಅತ್ಯುತ್ತಮ ವನ್ಯಜೀವಿ ಸ್ಥಳಗಳಲ್ಲಿ ಒಂದಾಗಿದೆ

Sundarbhun

ನೀವು ಇದನ್ನು ಓದಬಹುದು: ನಿಮ್ಮನ್ನು ಮಂತ್ರ ಮುಗ್ಧಗೊಳಿಸುತ್ತದೆ ಭಾರತದ ಈ ಐದು ಜಾಗಗಳು.


ಅಮೃತ್‌ ಸರ್‌
ನವೆಂಬರ್‌ ತಿಂಗಳಲ್ಲಿ ನೀವು ಪಂಜಾಬ್‌ನ ಅಮೃತ್‌ ಸರ್‌ಗೆ ಭೇಟಿ ನೀಡುವುದು ನಿಮ್ಮ ಆಯ್ಕೆಗಳ ಪಟ್ಟಿಯಲ್ಲಿರಲಿ. ಚೋಲೆ ಕುಲ್ಚೇ, ಲಸ್ಸಿ, ಸರ್ಸೋ ಕಿ ರೋಟಿ ಸೇರಿದಂತೆ ಇಲ್ಲಿನ ಆಹಾರ ಸಂಸ್ಕೃತಿಯನ್ನು ಪರಿಚಯ ಮಾಡಿಕೊಳ್ಳಬಹುದು. ಜೊತೆಗೆ ಗೋಲ್ಡನ್‌ ಟೆಂಪಲ್‌ಗೆ ಕೂಡಾ ಭೇಟಿ ನೀಡಬಹುದು.

Amriuthsir

ಜೋಧ್‌ಪುರ್‌
ರಾಯಲ್‌ ಸಿಟಿ ಜೋಧ್‌ಪುರ್‌, ನವೆಂಬರ್‌ ತಿಂಗಳ ಅಟ್ರಾಕ್ಷನ್‌ಗಳಲ್ಲಿ ಒಂದು. ಶಾಪಿಂಗ್‌, ಫುಡ್‌, ಐತಿಹಾಸಕ ಸ್ಥಳಗಳು, ವಾಸ್ತುಶಿಲ್ಪದ ಪರಿಚಯ ಮಾಡಿಕೊಳ್ಳಲು ಈ ಸ್ಥಳ ಹೇಳಿ ಮಾಡಿಸಿದಂತೆ ಇದೆ.

Jodhpur


ವಾರಣಾಸಿ, ಉತ್ತರ ಪ್ರದೇಶ


ಬೇಸಿಗೆಯಲ್ಲಿ ಬೆವರಿಳಿಸುವ ಸೆಖೆ ವಾರಣಾಸಿಯಲ್ಲಿದ್ದರೂ, ಎಲ್ಲ ಕಾಲದಲ್ಲೂ ನೋಡಿ ಬರಬಹುದಾದ ತಾಣ ಆಗಿದ್ದರೂ ಚಳಿಗಾಲದಲ್ಲಿ ಇದನ್ನು ನೋಡುವ ಮಜಾವೇ ಬೇರೆ. ಯಾಕೆಂದರೆ, ಚಳಿಗಾಲದಲ್ಲಿ ಇಲ್ಲಿ ಬೀದಿಗಳು ತೆರೆದುಕೊಳ್ಳುವ ಮಾಯಾಲೋಕವೇ ಬೇರೆ. ಬಗೆಬಗೆಯ ತಿನಿಸುಗಳು, ಬಿಸಿಬಿಸಿ ತಿಂಡಿಗಳನ್ನು ಚಳಿಗಾಲದಲ್ಲಿ ಸವಿಯುವ ಜೊತೆಗೆ ಹಬ್ಬಗಳು ಕಳೆಗಟ್ಟಿ ವಾರಣಾಸಿ ಇನ್ನಷ್ಟು ಮತ್ತಷ್ಟು ಝಗಮಗಿಸುತ್ತಿರುತ್ತದೆ.

Varanasi

ಹಿತವಾದ ಚಳಿಯಲ್ಲಿ ಗಂಗಾರತಿಯನ್ನು ನೋಡುವುದೂ ಕೂಡಾ ದೈವಿಕವಾಗಿ ಆನಂದವನ್ನು ನೀಡುತ್ತದೆ.


ಭಾರತದಲ್ಲಿ ನೋಡಲು ಇನ್ನೂ ಅನೇಕ ಸುಂದರ ಸ್ಥಳಗಳಿವೆ. ಯಾವುದೇ ಜಾಗಗಳಾದರೂ ಚೆನ್ನಾಗಿ ಪ್ಲಾನ್‌ ಮಾಡಿ, ನಿಮ್ಮೊಂದಿಗೆ ಗೊತ್ತಿರುವವರನ್ನು ಕರೆದೊಯ್ದರೆ ನೀವು ಟ್ರಿಪ್‌ ಎಂಜಾಯ್‌ ಮಾಡಬಹುದು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button