ದೂರ ತೀರ ಯಾನವಿಂಗಡಿಸದಸ್ಫೂರ್ತಿ ಗಾಥೆ

ಉತ್ತರಾಖಂಡ್ ಮುಕ್ತಾ ಟಾಪ್ ಮೇಲೆ ನಿಂತು ಹಿಮ ಮುಟ್ಟಿದ ಗಳಿಗೆ: ನವೀನ್ ಬರೆದ ಕಷ್ಟಕರ ಹಾದಿಯ ಸೊಗಸಾದ ಟ್ರೆಕ್ಕಿಂಗ್ ಕತೆ

ಎಲ್ಲರಿಗೂ ಒಂದಲ್ಲ ಒಂದು ದಿನ ಹಿಮದ ಜತೆ ಆಟವಾಡಬೇಕು, ಸ್ನೋ ಮ್ಯಾನ್ ತಯಾರಿಸಬೇಕು, ಯಾರಿಗಾದರೂ ಹಿಮ ಎಸೆದು ಸಂಭ್ರಮಿಸಬೇಕು ಎಂಬ ಆಸೆ ಇರುತ್ತದೆ. ಅಂಥಾ ಕನಸನ್ನು ಹೊಂದಿ ಇದ್ದಕ್ಕಿದ್ದಂತೆ ಒಂದಿನ ಉತ್ತರಾಖಂಡದ ಹಿಮಚ್ಛಾದಿತ ಮುಕ್ತಾ ಬೆಟ್ಟದ ತುದಿ ಹತ್ತಿ ಕುಣಿದ ಟ್ರೆಕ್ಕಿಂಗ್ ಪ್ರಿಯ ನವೀನ್ ಟಿಕೆ ಬರೆದ ಅದ್ಭುತ ಬರಹ ಇದು. ಇಲ್ಲಿ ಹಿಮವಿದೆ, ಆಸಕ್ತಿ ಹುಟ್ಟಿಸುವ ನಡಿಗೆಯ ಕತೆ ಇದೆ, ಹಿಮದ ತಣ್ಣಗಿನ ಅನುಭವ ಇದೆ. ಒಂದು ಸೊಗಸಾದ ಮಾಹಿತಿಪೂರ್ಣ ಬರಹ.

ಹಿಮದಲ್ಲಿ ಆಟವಾಡುವುದು, ಬೆಳಿಗ್ಗೆ ತಾಜಾ ಹಿಮವನ್ನು ನೋಡಲು ಎಚ್ಚರಗೊಳ್ಳುವುದು ನನ್ನ ಬಾಲ್ಯದ ಕನಸು. ಅದು ನನಸಾಗಿದ್ದು ಫೆಬ್ರವರಿ 2020ಯಲ್ಲಿ. ಮುಕ್ತಾ ಟಾಪ್ ಚಾರಣದಲ್ಲಿ.

ಬೆಂಗಳೂರಿನ ಒಂದು ಕಾಫಿ ಶಾಪ್ ನಲ್ಲಿ  ಕುಳಿತು ಸ್ನೇಹಿತರೊಂದಿಗೆ ಮಾತನಾಡುತಾ  ಇದ್ದೆ. ಹಂಗೆ ನನ್ನ laptopನಲ್ಲಿ India hikes website ತೆರೆದೆ. ಸ್ವಲ್ಪ ಹುಡುಕಾಡಿದ ಮೇಲೆ ನಾನು ಮುಕ್ತಾ top ನೋಡಿದೆ. ಹೆಚ್ಚಿನ ಜನರು ಅಲ್ಲಿಗೆ ಹೋಗಿಲ್ಲ ಹಾಗೂ ಇದು ಇತ್ತೀಚಿನ ವರ್ಷಗಳಲ್ಲಿ ಕಂಡು ಹಿಡಿದ ಹೊಸ trekking ದಾರಿಯಾಗಿತ್ತು. ಇನ್ನಷ್ಟು ವಿವರಗಳನ್ನು ನೋಡದೆ ನಾನು book  ಮಾಡಿದೆ. ನಾನು ಆಯ್ಕೆ ಮಾಡಿದ ದಿನಾಂಕ- 24 Feb.

ಹೊರಡಲು ಇನ್ನು 4 ವಾರಗಳು ಮಾತ್ರ ಇತ್ತು. ವಿಮಾನ ಟಿಕೆಟ್ ಬಗ್ಗೆ ನೋಡಲಿಲ್ಲ, ನನ್ನ ಆಫೀಸ್ ನ ರಜೆ ಎಷ್ಟು ಬಾಕಿ ಇದೆ ಕೂಡ ನೋಡಿಲ್ಲ, ನನ್ನ ಗೆಳೆಯರನ್ನು ಕೂಡ ಕೇಳಿಲ್ಲ, ಸುಮ್ಮನೆ book ಮಾಡಿದೆ. ಈ ಬಾರಿ ನ ಒಬ್ಬನೇ ಇಲ್ಲಿಂದ ಹೋಗಬೇಕು ಅಂತ ತೀರ್ಮಾನಿಸಿ ಬಿಟ್ಟಿದ್ದೆ.   

ಮುಕ್ತ top

ಆಗೋದೆಲ್ಲ ಒಳ್ಳೇದಕ್ಕೆ ಅನ್ನೋ ಹಾಗೆ ವಿಮಾನ book ಅಯ್ತು, ರಜೆಯೂ ಸಿಕ್ಕಿತು. ಚಳಿ ಎಷ್ಟು ಇರುತ್ತೋ ಎನ್ನುವ ಆತಂಕದೊಂದಿಗೇ ಬೆಂಗಳೂರಿಂದ ಡೆಹ್ರಾಡೂನ್ flight ಹತ್ತಿದೆ. Flight ಅಲ್ಲಿ ನನ್ನ ಹಾಗೆ trekking bags ಇರುವ ಎಷ್ಟೋ ಜನರನ್ನೂ ನೋಡಿದೆ. ಡೆಹ್ರಾಡೂನ್ airport ನಿಂದ cityಗೆ ಬರಲು cab ಹಿಡಿದು ನನ್ನ ಹೋಟೆಲ್ ಗೆ ಬಂದೆ. 

Day 0 

ಮುಂಜಾನೆ  5:30ಕ್ಕೆ ಎದ್ದು ರೈಲ್ವೆ ಸ್ಟೇಷನ್ ಗೆ ಹೊರಟೆ. ಅಲ್ಲಿಂದ India Hikes ಅವ್ರು ವ್ಯವಸ್ಥೆ ಮಾಡಿದ್ದ ಜೀಪ್ ಅಲ್ಲಿ ಹೊರಟ್ವಿ. ನನ್ನ ಆಶ್ಚರ್ಯಕ್ಕೆ, ನನ್ನ ಜೀಪಿನಲ್ಲಿದ್ದ ಇತರರು ಸಹ ಬೆಂಗಳೂರಿನವರೇ. ಯೋಗ ಶಿಕ್ಷಕರ ತರಬೇತಿ ಕೋರ್ಸ್ ನಲ್ಲಿ ಗೆಳತಿಯರಾದ ಮೂವರು (ಸುಪ್ರಿಯಾ, ಶುಶ್ಮಿತಾ ಮತ್ತು ಡಾ. ಲಕ್ಷ್ಮಿ). ಒಳ್ಳೆ ಸಂಗಡ ಸಿಕ್ಕಂತೆ ಆಗಿ ನಾವೆಲ್ಲ ಮಾತಾಡುತ್ತ  ಸುಮಾರು 150 ಕಿ.ಮೀ ದೂರದಲ್ಲಿದ್ದ Kuflon ತಲುಪಿದ್ವಿ. ನಮ್ಮ ಬೇಸ್ ಕ್ಯಾಂಪ್ನಲ್ಲಿ ಬಿಸಿ ಬಿಸಿ ಚಹಾ ಮತ್ತು ತಿಂಡಿಗಳೊಂದಿಗೆ ಸ್ವಾಗತಿಸಲಾಯಿತು. ಅಲ್ಲಿ ನಮಗೆ ಎಲ್ಲರ ಪರಿಚಯ ಆದಮೇಲೆ trekನ ವಿವರಗಳನ್ನು trek lead ಆಗಿದ್ದ ಅನುಜ್ ವಿವರಣೆ ಕೊಟ್ಟರು. ಒಳ್ಳೆಯ ಊಟ ಆದ ಮೇಲೆ 8 ಗಂಟೆಗೆಲ್ಲ ನಿದ್ರೆಗೆ ಜಾರಿದೆ. 

Base camp – kuflon

Day-1

11 ಟ್ರೆಕ್ಕರ್ ಗಳು ಮತ್ತು 2 ಟ್ರೆಕ್ ಲೀಡ್ (India hikesನ ಅನುಜ್ ಮತ್ತು ಸ್ಥಳೀಯ ಲೀಡ್ Baldev) ಮತ್ತು ಸುಮಾರು 6 ಮಂದಿ ಸಿಬ್ಬಂದಿ 4 ಹೇಸರಗತ್ತೆಗಳೊಂದಿಗೆ ಎಲ್ಲರೂ ತಯಾರಾದೆವು. 

ಮೊದಮೊದಲ excitement ನಲ್ಲಿ ಎಲ್ಲರೂ ಬೇಗ ಬೇಗ ನಡೆದೆವು. ಹಾಗೆಯೇ ಮೆಲ್ಲ ಮೆಲ್ಲಗೆ ಎಲ್ಲರ ಪರಿಚಯ ಕೂಡ ಆಯಿತು. ಕಾಡು, ನದಿಗಳೇ ದಾರಿಯುದ್ದಕ್ಕೂ ಇತ್ತು. ಸುತ್ತಲೂ Rhododendron ಹೂವುಗಳು ಆಗ ತಾನೇ ಅರಳತೊಡಗಿದ್ದವು. ಕೆಂಪನೆಯ ಹೂವುಗಳು ಈಗ ತಾನೇ ಜಗತ್ತಿಗೆ ತನ್ನ ಸೌಂದರ್ಯ ತೋರಿಸುತಿತ್ತು. 

ನಮ್ಮ ಮುಂದಿನ ಶಿಬಿರ ಶಿಲಾದುಣಿ ಎಂಬ ಜಾಗದಲ್ಲಿತ್ತು. ನಾವು ಸುಮಾರು 4 ಗಂಟೆಗಳಲ್ಲಿ ಅಲ್ಲಿಗೆ ತಲುಪಿದೆವು. ಅಲ್ಲಿಗೆ ತಲುಪುವಾಗ ನಮಗೆ ಬಿಸಿ ಬಿಸಿ tea ಮತ್ತು snacks ತಯಾರು ಮಾಡಿದ್ರು.ತಿಂದ ಮೇಲೆ ಪರಸ್ಪರರನ್ನು ತಿಳಿದುಕೊಳ್ಳುವುದು, ಸ್ವಲ್ಪ ಯೋಗ ಮಾಡುವುದನ್ನು ನೋಡಿ ಸಾಯಂಕಾಲ ಕಳೆದೆ. ರಾತ್ರಿ ಕಸ್ಟರ್ಡ್ ಅನ್ನು ಒಳಗೊಂಡಂತೆ ಸರಳವಾದರೂ ಅದ್ಬುತ ಊಟ ತಯಾರು ಮಾಡಿದ್ದರು. ಅಷ್ಟು ರುಚಿಯಾದ custard ಇಲ್ಲಿಯವರೆಗೂ ನಾನು ತಿಂದಿಲ್ಲ. ರಾತ್ರಿ 8.30ಕ್ಕೆ light off.

ಶಿಲಾದುನಿ

Day-2

ಶಿಲಾದುನಿಯಿಂದ ಬೆಳಿಗ್ಗೆ ನಾಷ್ಟಾ ಮಾಡಿ ಊಟಕ್ಕೆ ಬಾಕ್ಸ್ ಅಲ್ಲಿ ತಗೊಂಡು ಹೊರಟ್ವಿ. ದಾರಿಯಿದ್ದಕ್ಕೂ ಕಲ್ಲುಗಳೋ ಕಲ್ಲುಗಳು. ನಾನು, ಸುಪ್ರಿಯಾ ಹಾಗು ಅರವಿಂದ್ ನಮಗೆ ಗೊತ್ತಿದ್ದ ಹಾಡುಗಳನ್ನು ಒಟ್ಟಾಗಿ ಹಾಡಿ ನಮ್ಮ ಆಯಾಸವನ್ನು ಮರೆಸಿಕೊಂಡೆವು. ದಾಮಿನಿ point ಎಂಬ ಜಾಗದಲ್ಲಿ ಎಲ್ಲರಿಗೂ mobile network ಸಿಗುತಿತ್ತು. ಅಬ್ಬಾ ಅನ್ನಿಸಿತು.

ಅಲ್ಲಿಂದ ಎಲ್ಲರೂ ಮನೆಗೆ ಕರೆ ಮಾಡಿದೆವು. ಅಲ್ಲಿಯೇ ಊಟ ಮುಗಿಸಿದ್ವಿ. ಅಲ್ಲಿಂದ ಸ್ವಲ್ಪ ಮುಂದೆ ಹಿಮ ಬೀಳಲು ಶುರುವಾಯಿತು. ಸುತ್ತಲೂ ನಿಶ್ಯಬ್ದ, ಮೆಲ್ಲಗೆ ಬೀಳುತ್ತಿರುವ ಹಿಮ ಯಾವುದೋ ಮಾಯಾಲೋಕಕ್ಕೆ ಹೋಗುತ್ತಿರುವ ಹಾಗೆ ಇತ್ತು. Chai tattarಗೆ ತಲುಪಿದ ಮೇಲೆ ನಮ್ಮ ಟೆಂಟ್ ಗಳನ್ನು ಹಾಕಿ ಬ್ಯಾಗ್ ಗಳನ್ನು ಇಟ್ಟು ಹಿಮದಲ್ಲಿ ಆಡಲು ಶುರು ಮಾಡಿದೆವು. ಹಲವಾರು snow manಗಳನ್ನು ಮಾಡಿ ಆಟ ಆಡಿದೆವು. ಅದೊಂದು ಖುಷಿ ನನಗೆ. ಸಾಯಂಕಾಲದ ಬಿಸಿ ಬಿಸಿ ಸೂಪ್ ಆಹ್ಲಾದಕರವಾಗಿತ್ತು. ರಾತ್ರಿ ಊಟ ಮಾಡಿ ಬೇಗ ಮಲಗಲು ಟೆಂಟ್ ಸೇರಿಕೊಂಡ್ವಿ. ನಾವು ಮಲಗಿದ್ದು ದಪ್ಪ ಹಿಮ ಇದ್ದ ಜಾಗವಾದ್ದರಿಂದ ನನಗೆ ರಾತ್ರಿಯೆಲ್ಲಾ ನಿದ್ದೆ ಸರಿಯಾಗಿ ಬರಲಿಲ್ಲ.   

ಕನ್ನಡ ಗ್ಯಾಂಗ್: Mr. ಮುಕ್ತ ಜೊತೆ ಸುಪ್ರಿಯಾ, ಲಕ್ಷ್ಮಿ, ಸುಶ್ಮಿತಾ ಹಾಗೂ ಅರವಿಂದ್ 

Day-3: ಶಿಖರ ಏರುವ ದಿನ 

ಹಿಂದಿನ ಕೆಲವು ದಿನಗಳು ತುಂಬ ಹಿಮವಾಗಿದ್ದರಿಂದ ನಾವು ಬೆಳಿಗ್ಗೆ ಬೇಗ ಹೊರಟೆವು ಹಾಗೂ ನಾವು plan ಪ್ರಕಾರ ಮುಕ್ತ ತಾಲ್ ಅಲ್ಲಿ camp ಮಾಡುವ ಬದಲು ಆ ದಿನವೇ ಕೆಳಗೆ ಇಳಿಯುವ ತೀರ್ಮಾನವಾಯಿತು. 

ನಮ್ಮಲ್ಲಿ ಇದ್ದ ಎಲ್ಲಾ ಶಕ್ತಿ ಹಾಗು ಹುಮ್ಮಸ್ಸಿನೊಂದಿಗೆ ಹೊರಟೆವು. ಗುರಿ ತಲುಪುವ ಹುಮ್ಮಸ್ಸು ನಮಗೆ. ಬೆಳಿಗ್ಗೆಯೇ ಮಧ್ಯಾಹ್ನದ ಊಟ ಬಾಕ್ಸ್ ಕಟ್ಟಿಕೊಂಡಿದ್ವಿ. ದಾರಿಯುದ್ದಕ್ಕೂ ಹೊಸತಾಗಿ ಬಿದ್ದ ಹಿಮವಿತ್ತು. ಅದಕ್ಕೆ gaitors ಹಾಗು crampons ಹಾಕ್ಕೊಂಡ್ವಿ. ನಮ್ಮ ಟ್ರೆಕ್ ಲೀಡರ್ ಅನೂಜ್ ನಮಗೆ ದಾರಿ ತೋರಿಸುತ್ತಾ ಮುಂದೆ ಮುಂದೆ ಹೋದರು. ಇಡೀ ದಾರಿಯುದ್ದಕ್ಕೂ ಸುತ್ತಮುತ್ತಲಿನ ಬೆಟ್ಟಗಳು ನಮ್ಮ ಜೊತೆಗೆ ಇದೀವಿ ಅನ್ನೋಹಾಗೆ ನಿಂತಿದ್ದುವು. 

ಶಿಖರದ ತುದಿ ತಲುಪಿದ ಮೇಲೆ ಆದ ನಿರಾಳತೆ ಅದ್ಭುತ. ಸುತ್ತಲೂ ಬಿಳಿ ಹಿಮ, ನೀಲ ಆಕಾಶ ನೋಡಲಾಗುವಷ್ಟು ದೂರಕ್ಕೂ ಹಿಮಾಲಯ, ಎಲ್ಲರ ಮನಸ್ಸನ್ನು ಶಾಂತ ಹಾಗು ನಿರಾಳಗೊಳಿಸಿತು.   

ಮನಸ್ಸು ಹಗುರಾದ ಮೇಲೆ ಹಲವು photoಗಳನ್ನು ತೆಗೆದು ಕೆಳಗೆ ಇಳಿಯಲು ಶುರು ಮಾಡಿದೆವು. ದಾರಿ ಮಧದಲ್ಲಿ ಊಟ ಮಾಡಿದೆವು. ಎಲ್ಲರ ನಡಿಗೆ ನಿಧಾನವಾದರೂ ನಿರಂತರವಾಗಿ ಸಾಗುತ್ತಾ ಬಂದೆವು. ಸಾಯಂಕಾಲ ನಾವು kuari ತಲುಪಿದೆವು. Snacks ಟೀ ತಯಾರಿತ್ತು. ರಾತ್ರಿ ಊಟವಾದ ಮೇಲೆ ಆಚೆ ನಕ್ಷತ್ರಗಳನ್ನು ನೋಡುತ್ತಾ ಎಷ್ಟೋ ಹೊತ್ತು ಕಾಲ ಕಳೆದೆವು.   

Day-4

ಬೆಳಿಗ್ಗೆ ಆರಾಮಾಗಿ ಎದ್ದು ತಿಂಡಿ ಆದಮೇಲೆ ನಾವು ಪ್ರತಿಯೊಬ್ಬರಲ್ಲೂ ನೋಡಿದ ಒಂದ್ ಒಳ್ಳೆಯ ವಿಚಾರಗಳು, ಹೇಗೆ ಇನ್ನು ಉತ್ತಮವಾಗಿ ಚಾರಣ ಮಾಡಬಹುದು ಎಂದು Anuj ಎಲ್ಲರ ಜೊತೆ ಹಂಚಿಕೊಂಡರು. ಅವರಿಗೆ ಈ ಮೊದಲೇ ಆದ ಹಲವಾರು ಅನುಭವವನ್ನು ಹೇಳಿಕೊಂಡರು. Kuariಯಿಂದ ಹೊರಟು ಹಲವು ಗಂಟೆ ಮೆಲ್ಲಗೆ ಇಳಿಯುತ್ತ ಎಲ್ಲರೊಂದಿಗೆ ಮಾತಾಡುತ್ತ base camp ತಲುಪಿದೆವು. ಬರುವ ದಾರಿಯಲ್ಲಿ ಕೆಲವು rhododendron ಗಳನ್ನು ತೆಗೆದುಕೊಂಡು ಬಂದೆವು. Camp owner ಅವರ ಕಥೆಗಳನ್ನು tea ಹಾಗು ಪಕೋಡ ಜೊತೆ ಹಂಚಿಕೊಂಡರು. ಇಲ್ಲಿನ ಕೊನೆಯ ರಾತ್ರಿ ಸವಿಯಾದ ಖೀರ್ ಜೊತೆ ಅಂತ್ಯವಾಯಿತು.

Rhododendron ಹೂವುಗಳು 

Day-5

ಮಾರನೆಯ ದಿನ ಮನಸೆಲ್ಲಾ ಈ ಕೆಲವು ದಿನಗಳ ನೆನಪನ್ನು ಹೊತ್ತು dehradunಗೆ ವಾಪಾಸ್ ಪ್ರಯಾಣ ಆರಂಭಿಸಿದೆವು.

ಈ ಬಾರಿ ದಾರಿ ತುಂಬಾ ದೂರ ಹಾಗೂ ನಾನು ನನ್ನ ದಿನಚರಿಗೆ ಮರಳುತ್ತಾ ಇದೀನಿ ಅನ್ನುವ ಭಾವನೆ ಮನಸ್ಸು ಭಾರ ಮಾಡಿತು. 

________________________________________

(ವಿಶೇಷ ಧನ್ಯವಾದಗಳು: ಅನುಜ್, ಬಲದೇವ್ ಹಾಗೂ Indiahikesನ ಎಲ್ಲಾ ಸಿಬ್ಬಂದಿಯ ನಿರಂತರ ಪ್ರೋತ್ಸಾಹಕ್ಕೆ. ನನ್ನ ಅನುಭವದ ಪಾಲುದಾರದ ರಾಜೀವ್, ಮೋಹಿತ್, ಧನ್ಯ, ಅರವಿಂದ್, ಜಾಗೃಕ್, ಗೌರವ್, ಜಯಂತ್, ಸುಪ್ರಿಯಾ, ಲಕ್ಷ್ಮಿ ಹಾಗೂ ಶುಶ್ಮಿತಾ ಧನ್ಯವಾದಗಳು. ಈ ಬರವಣಿಗೆಗೆ ಸಹಾಯ ಮಾಡಿದ ರಶ್ಮಿಗೆ ಧನ್ಯವಾದಗಳು.)     

ನಮ್ಮ ತಂಡ 

Related Articles

Leave a Reply

Your email address will not be published. Required fields are marked *

Back to top button